ನೀವು ಡಿಜಿಟಲ್‌ ಡಿವೈಸ್‌ಗಳ ಬಳಕೆದಾರರೆ?...ಹಾಗಿದ್ರೆ ಮುಂದಿನ ವರ್ಷ ಎಚ್ಚರಿಕೆಯಿಂದಿರಿ!

|

ಕಳೆದ ಎರಡು ಮೂರು ವರ್ಷ ಕೊರೊನಾ ಎಂಬ ಮಹಾಮಾರಿ ಇಡೀ ಜಗತ್ತನ್ನೇ ಅಲ್ಲಾಡಿಸಿತ್ತು. ಅದೇಕೋ ಏನೋ ಕೊರೊನಾಗಿಂತಲೂ ದೊಡ್ಡ ಮಟ್ಟದಲ್ಲಿ ಟೆಕ್‌ ವಲಯದಲ್ಲಿ ಕೆಟ್ಟ ಬೆಳವಣಿಗೆಗಳು ಕಂಡುಬಂದಿವೆ. ಇದು ಇಡೀ ಟೆಕ್‌ ಉದ್ಯಮದ ಬುಡವನ್ನೇ ಅಲ್ಲಾಡಿಸುತ್ತಿದೆ. ಅದರಲ್ಲೂ ಈ ವರ್ಷ ಇನ್ನೇನು ಮುಗಿಯುವ ಹಂತದಲ್ಲಿದ್ದು, ಹಲವಾರು ಕಂಪೆನಿಗಳ ಹಾಗೂ ಸಾರ್ವಜನಿಕರು ಹೆಚ್ಚಿನ ಭದ್ರತಾ ಅಪಾಯಗಳನ್ನು ಎದುರಿಸಿದ್ದಾರೆ ಹಾಗೂ ಎದುರಿಸಲಿದ್ದಾರೆ.

ಡಿಜಿಟಲ್

ಹೌದು, ಈ 2022 ಡಿಜಿಟಲ್ ಜಗತ್ತಿಗೆ ನಿರ್ಣಾಯಕ ವರ್ಷವಾಗಿದೆ ಎಂದೇ ಹೇಳಬಹುದು. ಒಂದೆಡೆ ಸೈಬರ್ ದಾಳಿ ಪ್ರಕರಣಗಳ ಹೆಚ್ಚಳ, ಮತ್ತೊಂದೆಡೆ ಮಾಲ್‌ವೇರ್‌ಗಳ ಆರ್ಭಟ, ಇನ್ನೂ ಒಂದು ಕಡೆ ಟೆಕ್‌ ಉದ್ಯಮದ ಉದ್ಯೋಗಿಗಳ ವಜಾ, ಜೊತೆಗೆ ಮುಂದೆ ಎದುರಾಗುವ ದೊಡ್ಡ ಆರ್ಥಿಕ ಸಂಕಷ್ಟ. ಈ ಎಲ್ಲಾ ಬೆಳವಣಿಗೆ ಈ ವರ್ಷದಲ್ಲಿ ಹಲವರನ್ನು ಸಂಕಷ್ಟಕ್ಕೆ ದೂಡಿವೆ. ಅದರಂತೆ ಡಿಜಿಟಲ್‌ ವಿಭಾಗದಲ್ಲಿ ಈಗ ಉಂಟಾಗಿರುವ ಅವ್ಯವಸ್ಥೆಯ ಜೊತೆಗೆ ಮುಂದಿನ ವರ್ಷ ಸಾರ್ವಜನಿಕರಿಗೆ ಹಾಗೂ ಕಂಪೆನಿಗಳಿಗೆ ಎದುರಾಗುವ ಕೆಲವು ಸಮಸ್ಯೆಗಳ ವಿವರವನ್ನು ನಾವಿಲ್ಲಿ ನೀಡಿದ್ದೇವೆ ಓದಿರಿ.

ಮಾಲ್‌ವೇರ್‌ ಬೇರೆಯದೇ ರೂಪ ಪಡೆಯಬಹುದು

ಮಾಲ್‌ವೇರ್‌ ಬೇರೆಯದೇ ರೂಪ ಪಡೆಯಬಹುದು

ಇನ್ಮುಂದೆ ಫೈಲ್‌ ಲೆಸ್ ಮಾಲ್‌ವೇರ್ ಆಕ್ರಮಣ ಹೆಚ್ಚಾಗಲಿದೆ ಎನ್ನಲಾಗಿದೆ. ಅಂದರೆ ಈ ಹಿಂದೆ ಫೈಲ್ ಮೂಲಕ ಮಾಲ್‌ವೇರ್‌ ದಾಳಿ ನಡೆಯುತ್ತಿದ್ದವು. ಆದರೆ ಇನ್ಮುಂದೆ ಯಾವುದೇ ಫೈಲ್‌ ಅವಶ್ಯಕತೆ ಇಲ್ಲದೆ ಬಳಕೆದಾರರಿಗೆ ಗಂಭೀರವಾದ ಸೈಬರ್ ಸುರಕ್ಷತೆ ಬೆದರಿಕೆಯನ್ನು ಉಂಟುಮಾಡಬಹುದು. ಫೈಲ್‌ಲೆಸ್ ಮಾಲ್‌ವೇರ್ ಅನ್ನು ರಚಿಸುವುದು ಕಷ್ಟವಾಗಿದ್ದರೂ, ಇದನ್ನು ಯಾರಾದರೂ ರಚಿಸಲು ಯಶಸ್ವಿಯಾದರೆ ಮಾಲ್‌ವೇರ್ ಸಿಸ್ಟಮ್‌ಗೆ ಗಂಭೀರ ಹಾನಿಯನ್ನುಂಟುಮಾಡುವುದರಲ್ಲಿ ಎರಡು ಮಾತಿಲ್ಲ.

ಲಾಜಿಸ್ಟಿಕ್ಸ್, ಕಚ್ಚಾ ವಸ್ತುಗಳ ಕಂಪೆನಿಗಳು ಹೆಚ್ಚು ಅಪಾಯ ಎದುರಿಸುತ್ತವೆ

ಲಾಜಿಸ್ಟಿಕ್ಸ್, ಕಚ್ಚಾ ವಸ್ತುಗಳ ಕಂಪೆನಿಗಳು ಹೆಚ್ಚು ಅಪಾಯ ಎದುರಿಸುತ್ತವೆ

ಲಾಜಿಸ್ಟಿಕ್ಸ್ ಮತ್ತು ಕಚ್ಚಾ ವಸ್ತುಗಳ ಕಂಪೆನಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಅಪಾಯದಲ್ಲಿರಬಹುದು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೇ ಏನೋ ಈಗಾಗಲೇ ಅಮೆಜಾನ್‌ ತನ್ನ ಲಾಜಿಸ್ಟಿಕ್ಸ್ ಸೇವೆಯನ್ನು ಹಂತಹಂತವಾಗಿ ಸ್ಥಗಿತಗೊಳಿಸುತ್ತಾ ಬರುತ್ತಿದೆ. ಇನ್ನು ಕೆಲವರ ಕೆಟ್ಟ ಬೇಡಿಕೆಗಳನ್ನು ಪೂರೈಸಲು ಕಂಪೆನಿಗಳ ಮೇಲೆ ಒತ್ತಡ ಹೆಚ್ಚಾಗಲಿದೆ. ಇದು ಸಂಪೂರ್ಣ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸುವುದಲ್ಲದ ಕಾರ್ಪೊರೇಟ್‌ಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದಂತೆ.

ಪರಿಣಾಮಕಾರಿ Ransomware

ಪರಿಣಾಮಕಾರಿ Ransomware

ಇನ್ನು Ransomware ಇನ್ಮುಂದೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ. ದುರುದ್ದೇಶಪೂರಿತ ಲಿಂಕ್ ಅನ್ನು ಯಾರಾದರೂ ಸಹ ಕ್ಲಿಕ್ ಮಾಡುತ್ತಾರೆ ಎಂಬ ಆಶಯದೊಂದಿಗೆ ಸಾಮೂಹಿಕ ಮಾರ್ಗವನ್ನು ಕಿಡಿಗೇಡಿಗಳು ಆರಿಸಿಕೊಂಡಿದ್ದಾರೆ. ಹಾಗೆಯೇ ಇವರು ಹೆಚ್ಚು ಉದ್ದೇಶಿತ ವಿಧಾನವನ್ನು ಬಳಸಲು ಮುಂದಾಗಿದ್ದು, ಬಹುಪಾಲು ಜನರಿಗೆ ಇದರಿಂದ ತೊಂದರೆ ಕಟ್ಟಿಟ್ಟಬುತ್ತಿ.

ಕಾರ್ಪೊರೇಟ್ ಹ್ಯಾಕಿಂಗ್

ಕಾರ್ಪೊರೇಟ್ ಹ್ಯಾಕಿಂಗ್

ಸದ್ಯಕ್ಕೆ ಕಾರ್ಪೊರೇಟ್ ವಿಭಾಗದಲ್ಲಿ ಮಾನವರೇ ಮೊದಲ ದುರ್ಬಲ ಲಿಂಕ್ ಆಗಿದ್ದಾರೆ. ಹೀಗಾಗಿ ಸುಮಾರು 80% ಹ್ಯಾಕಿಂಗ್ ಸಂಭವಿಸುತ್ತದೆ ಎನ್ನಲಾಗಿದೆ. ಕಂಪೆನಿಗಳು ಇದರಿಂದ ಸಂಕಷ್ಟ ಎದುರಿಸಬಹುದು ಹಾಗೂ ಇದು ಇನ್ನೂ ಸಹ ಮುಂದುವರೆಯಬಹುದು ಎಂದು ತಿಳಿದುಬಂದಿದೆ.

ಯುರೋಪಿಯನ್ ಕಮಿಷನ್‌ಗೆ ಮತ್ತಷ್ಟು ತಲೆನೋವು

ಯುರೋಪಿಯನ್ ಕಮಿಷನ್‌ಗೆ ಮತ್ತಷ್ಟು ತಲೆನೋವು

ಯುರೋಪಿಯನ್ ಕಮಿಷನ್ ಆನ್‌ಲೈನ್ ಅಪರಾಧ ಪ್ರಕರಣಗಳನ್ನು ನಿಗ್ರಹ ಮಾಡುವ ಉದ್ದೇಶದಿಂದ ಎನ್‌ಕ್ರಿಪ್ಶನ್ ಕಾನೂನುಗಳನ್ನು ಬಲಪಡಿಸಲು ಪ್ರಸ್ತಾಪಿಸಿದೆ. ಈ ಕಾನೂನು ಜಾರಿಗೆ ಬಂದರೆ, ಕಳುಹಿಸಲಾದ ಪ್ರತಿಯೊಂದು ಸಂದೇಶ ಅಥವಾ ಫೈಲ್ ಅನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಸ್ಕ್ಯಾನ್ ಮಾಡಲು ಮುಂದಾಗುತ್ತವೆ. ದುರಂತ ಎಂದರೆ ಯಾವುದೇ ಮಾಹಿತಿ ಸದುದ್ದೇಶದಿಂದ ಕೂಡಿದ್ದರೂ, ಇದು ಬಳಕೆದಾರರ ಗೌಪ್ಯತೆಗೆ ಧಕ್ಕೆ ತರುತ್ತದೆ.

ಸೈಬರ್ ಭದ್ರತೆಗೆ ಖರ್ಚು ಕಡಿಮೆ ಮಾಡಿದ್ರೆ ಅಪಾಯ ಹೆಚ್ಚು!

ಸೈಬರ್ ಭದ್ರತೆಗೆ ಖರ್ಚು ಕಡಿಮೆ ಮಾಡಿದ್ರೆ ಅಪಾಯ ಹೆಚ್ಚು!

ಇನ್ನು ಮುಂಬರುವ ಆರ್ಥಿಕ ಹಿಂಜರಿತದೊಂದಿಗೆ ಕಂಪೆನಿಗಳು ಹಣ ಉಳಿಕೆ ಮಾಡುವ ಉದ್ದೇಶಕ್ಕೆ ಮುಂದಾಗಿ ಸೈಬರ್ ಭದ್ರತೆಗಾಗಿ ತಮ್ಮ ಖರ್ಚುಗಳನ್ನು ಮರುಚಿಂತನೆ ಮಾಡಲು ಮುಂದಾದರೆ, ಕಿಡಿಗೇಡಿಗಳು ಸಿಸ್ಟಮ್‌ಗಳ ಮೇಲೆ ಯಶಸ್ವಿಯಾಗಿ ದಾಳಿ ಮಾಡಲು ಸುಲಭವಾದ ಮಾರ್ಗ ಕಂಡುಕೊಳ್ಳುತ್ತಾರೆ.

ಕ್ಲೌಡ್ ಸ್ಟೋರೇಜ್‌ಗೂ ಬೆದರಿಕೆ

ಕ್ಲೌಡ್ ಸ್ಟೋರೇಜ್‌ಗೂ ಬೆದರಿಕೆ

ಕ್ಲೌಡ್ ಸ್ಟೋರೇಜ್‌ ಆಯ್ಕೆಯು ಬಳಕೆದಾರರಿಗೆ ಹಾಗೂ ಕಂಪೆನಿಗಳಿಗೆ ಒಂದು ವರದಾನವಾಗಿದೆಯಾದರೂ ಹೆಚ್ಚಿನ ಭದ್ರತಾ ಮಾರ್ಗಸೂಚಿಗಳನ್ನು ಅನುಸರಿಸದಿದ್ದಲ್ಲಿ ತುಂಬಾ ಸಂಕಷ್ಟ ಎದುರಿಸಬಹುದು. ಈಗಾಗಲೇ ಕ್ಲೌಡ್ ಮೂಲಸೌಕರ್ಯದ ದುರ್ಬಲತೆಗಳನ್ನು ಬಳಸಿಕೊಳ್ಳಲು ಹ್ಯಾಕರ್‌ಗಳು ಮುಂದಾಗಿದ್ದಾರೆ.

Best Mobiles in India

English summary
Security dangers of 2023 for users and companies.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X