ಡೇಟಿಂಗ್ ಆಪ್ಲಿಕೇಶನ್‌ ಬಂಬಲ್‌ನಲ್ಲಿ ದೋಷ ಪತ್ತೆ?

|

ಪ್ರಸ್ತುತ ದಿನಗಳಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳು ಯುವಜನತೆಯ ಹಾಟ್‌ಫೇವರಿಟ್‌ ಆಯ್ಕೆಯಾಗಿವೆ. ತಮ್ಮ ಏಕಾಂತತೆಯನ್ನು ಕಳೆಯಲು ಹೆಚ್ಚಿನ ಯುವಜನತೆ ಡೇಟಿಂಗ್‌ ಅಪ್ಲಿಕೇಶನ್‌ಗಳ ಮೊರ ಹೋಗುತ್ತಿದ್ದಾರೆ. ಇದೇ ಕಾರಣಕ್ಕೆ ಹಲವು ಡೇಟಿಂಗ್‌ ಅಪ್ಲಿಕೇಶನ್‌ಗಳು ಸಾಕಷ್ಟು ಸೌಂಡ್‌ ಮಾಡ್ತಿವೆ. ಇವುಗಳಲ್ಲಿ ಡೇಟಿಂಗ್‌ ಆಪ್‌ ಬಂಬಲ್‌ ಕೂಡ ಒಂದಾಗಿದೆ. ತನ್ನ ಆಕರ್ಷಕ ಫೀಚರ್ಸ್‌ ಮತ್ತು ವಿಶೇಷ ಸೇವೆಗಳಿಂದ ಆಸಕ್ತರನ್ನು ಗಮನ ಸೆಳೆದಿದೆ. ಆದರೆ ಇದೀಗ ಬಂಬಲ್‌ ಅಪ್ಲಿಕೇಶನ್‌ನಲ್ಲಿ ಗೌಪ್ಯತೆಗೆ ದಕ್ಕೆ ತರುವ ವಿಷಯವೊಂದು ಬಹಿರಂಗವಾಗಿದೆ.

ಬಂಬಲ್‌

ಹೌದು, ಭದ್ರತಾ ಸಂಶೋಧಕರು ಜನಪ್ರಿಯ ಡೇಟಿಂಗ್ ಆಪ್ ಬಂಬಲ್‌ನಲ್ಲಿ ಒಂದು ದುರ್ಬಲತೆಯನ್ನು ಕಂಡುಹಿಡಿದಿದ್ದಾರೆ. ಇದು ಸೇವೆಯ ಇತರ ಬಳಕೆದಾರರ ನಿಖರವಾದ ಸ್ಥಳವನ್ನು ಗುರುತಿಸಲು ದಾಳಿಕೋರರಿಗೆ ಅವಕಾಶ ನೀಡಬಹುದು. ಇದರಿಂದ ಡೇಟಿಂಗ್‌ ಮಾಡಲು ಬಯಸುವವರು ಹ್ಯಾಕರ್‌ಗಳ ದಾಳಿಗೆ ಸುಲಭವಾಗಿ ಸಿಕ್ಕಿ ಬೀಳಲಿದ್ದಾರೆ. ಅಲ್ಲದೆ ತಮ್ಮ ಗೌಪ್ಯ ಮಾಹಿತಿ ಇತರರಿಗೆ ಸೋರಿಕೆಯಾಗುವ ಸಾಧ್ಯತೆ ಕೂಡ ಇದೆ. ಹಾಗಾದ್ರೆ ಬಂಬಲ್‌ನಲ್ಲಿ ದೋಷವನ್ನು ಪತ್ತೆ ಹಚ್ಚಿದ್ದು ಯಾರು? ಇದನ್ನು ಸರಿಪಡಿಸಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌

ಬಂಬಲ್‌ ಅಪ್ಲಿಕೇಶನ್‌ನಲ್ಲಿ ಸೆಕ್ಯೂರಿಟಿ ಹೋಲ್‌ ಅನ್ನು ಪತ್ತೆ ಹಚ್ಚುವವಲ್ಲಿ ರಾಬರ್ಟ್‌ ಹೀಟನ್‌ ಎಂಬಾತ ಯಶಸ್ವಿಯಾಗಿದ್ದಾನೆ. ಈತ ಪಾವತಿ ಕಂಪನಿ ಸ್ಟ್ರೈಪ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಇವರು ಡೇಟಿಂಗ್ ಆಪ್‌ ಬಂಬಲ್‌ನಲ್ಲಿನ ದುರ್ಬಲತೆಯನ್ನು ಪತ್ತೆಹಚ್ಚಿದರು ಮತ್ತು ನಂತರ ಹೊಸ ಬ್ಲಾಗ್ ಪೋಸ್ಟ್‌ನಲ್ಲಿ ವಿವರಿಸಿರುವ ಅವರ ಸಂಶೋಧನೆಗಳನ್ನು ಪರೀಕ್ಷಿಸಲು 'ಟ್ರೈಲೇಟರೇಶನ್' ದಾಳಿಯನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಮುಂದಾಗಿದ್ದಾರೆ.

ಬಂಬಲ್‌

ಇನ್ನು ಹೀಟನ್ ಕಂಡುಹಿಡಿದ ದುರ್ಬಲತೆಯನ್ನು ಆಕ್ರಮಣಕಾರರು ಬಳಸಿಕೊಂಡರೆ, ಅವರು ಬಂಬಲ್‌ ಆಪ್ ಮತ್ತು ಸೇವೆಯನ್ನು ಬಳಸಿ ಸಂತ್ರಸ್ತರ ಮನೆಯ ವಿಳಾಸವನ್ನು ಪತ್ತೆ ಮಾಡುವುದು ಸುಲಭವಾಗಲಿದೆ. ಅಲ್ಲದೆ ಇದೆಲ್ಲವನ್ನೂ ನೈಜ ಜಗತ್ತಿನಲ್ಲಿ ಅವರ ಚಲನೆಯನ್ನು ಸ್ವಲ್ಪ ಮಟ್ಟಿಗೆ ಟ್ರ್ಯಾಕ್ ಮಾಡಬಹುದು. ಆದಾಗ್ಯೂ, ಬಂಬಲ್ ತನ್ನ ಬಳಕೆದಾರರ ಸ್ಥಳವನ್ನು ತನ್ನ ಆಪ್‌ನಲ್ಲಿ ಆಗಾಗ್ಗೆ ಅಪ್‌ಡೇಟ್ ಮಾಡದ ಕಾರಣ, ಇದು ಬಳಕೆದಾರರ ಸ್ಥಳದ ಲೈವ್ ಫೀಡ್‌ನೊಂದಿಗೆ ಆಕ್ರಮಣಕಾರರಿಗೆ ಒದಗಿಸುವುದಿಲ್ಲ ಎನ್ನಬಹುದು. ಆದರೂ ಈ ಒಂದು ದೋಷದಿಂದ ಬಳಕೆದಾರರಿಗೆ ಕಷ್ಟವಾಗುವುದು ತಪ್ಪಿದ್ದಲ್ಲ.

ಬಂಬಲ್‌

ಹೀಟನ್ ತನ್ನ ಸಂಶೋಧನೆಗಳ ಮೂಲಕ ಬಂಬಲ್‌ನಲ್ಲಿನ ದೋಷ ಪತ್ತೆ ಬಚ್ಚಿದ ನಂತರ ಬಂಬಲ್‌ ಅದನ್ನು ಸರಿಪಡಿಸಿದೆ. ಅಷ್ಟೇ ಅಲ್ಲ ಹೀಟನ್ $ 2,000 ಮೊತ್ತದ ಬಗ್ ಬೌಂಟಿ ಪಾವತಿಯನ್ನು ಪಡೆದಿದ್ದಾರೆ. ಇನ್ನು ಬಂಬಲ್‌ನಲ್ಲಿ ಸ್ಥಳದ ಟ್ರ್ಯಾಕಿಂಗ್‌ಗೆ ಸಂಬಂಧಿಸಿದ ತನ್ನ ಸಂಶೋಧನೆಯ ಸಮಯದಲ್ಲಿ, ಹೀಟನ್ ಸ್ವಯಂಚಾಲಿತ ಸ್ಕ್ರಿಪ್ಟ್ ಅನ್ನು ಕ್ರಿಯೆಟ್‌ ಮಾಡಿದ್ದ, ಇದು ಕಂಪನಿಯ ಸರ್ವರ್‌ಗಳಿಗೆ ರಿಕ್ವೆಸ್ಟ್‌ ಅನುಕ್ರಮವನ್ನು ಕಳುಹಿಸಿತು. ಬಲಿಪಶು ದೂರವನ್ನು ವಿನಂತಿಸುವ ಮೊದಲು ಈ ವಿನಂತಿಗಳು ಪದೇ ಪದೇ 'ಆಕ್ರಮಣಕಾರ'ರನ್ನು ಸ್ಥಳಾಂತರಿಸಿದವು.

ಬಂಬಲ್

ಹೀಟನ್ ಪ್ರಕಾರ, ದಾಳಿಕೋರರು ಮತ್ತೊಂದು ಬಂಬಲ್ ಬಳಕೆದಾರನ ವರದಿ ಮಾಡಿದ ದೂರವನ್ನು 3 ಮೈಲಿಗಳಿಂದ 4 ಮೈಲಿಗಳಿಗೆ ತಿರುಗಿಸುವ ಸ್ಥಳವನ್ನು ಕಂಡುಕೊಂಡರೆ, ಅವರು ತಮ್ಮ ಬಲಿಪಶು ಅವರಿಂದ ನಿಖರವಾಗಿ 3.5 ಮೈಲಿ ದೂರದಲ್ಲಿರುವ ಸ್ಥಳ ಎಂದು ಅವರು ಊಹಿಸಬಹುದು. "ಫ್ಲಿಪ್ಪಿಂಗ್ ಪಾಯಿಂಟ್ಸ್" ಎಂದು ಕರೆಯಲ್ಪಡುವ ಈ ದಾಳಿಕೋರರು ತಮ್ಮ ಬಲಿಪಶುವಿಗೆ ಮೂರು ನಿಖರವಾದ ಅಂತರವನ್ನು ಹೊಂದಿದ್ದು ಅದು ನಿಖರವಾದ ತ್ರಿಕೋನೀಕರಣವನ್ನು ಸಾಧ್ಯವಾಗಿಸುತ್ತದೆ. ಸದ್ಯ ಆನ್‌ಲೈನ್ ಡೇಟಿಂಗ್ ಆಪ್‌ಗಳನ್ನು ಆಗಾಗ್ಗೆ ಬಳಸುವ ಒಂಟಿ ಜನರು ಆನ್‌ಲೈನ್‌ನಲ್ಲಿ ಅನಗತ್ಯ ಟ್ರ್ಯಾಕಿಂಗ್ ಅನ್ನು ತಪ್ಪಿಸಲು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ VPN ಅನ್ನು ಸ್ಥಾಪಿಸುವುದನ್ನು ಪರಿಗಣಿಸಬೇಕು.

Most Read Articles
Best Mobiles in India

Read more about:
English summary
Security researcher used triangulation to discover other users' locations on the app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X