ಸ್ಮಾರ್ಟ್‌ಟಿವಿ ವಿಭಾಗಕ್ಕೆ ಕಾಲಿಟ್ಟ ಸೆನ್ಸ್‌; ಏಳು 'ಮೇಡ್ ಇನ್ ಇಂಡಿಯಾ' ಟಿವಿಗಳ ಬಗ್ಗೆ ತಿಳಿಯಿರಿ

|

ಸೆನ್ಸ್‌(SENS) ಕಂಪೆನಿಯು ಭಾರತದ ಸ್ಮಾರ್ಟ್‌ ಗ್ಯಾಜೆಟ್‌ ತಯಾರಿಕಾ ಸಂಸ್ಥೆಗಳಲ್ಲಿ ಇತ್ತೀಚೆಗೆ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಕಂಪೆನಿಯಲ್ಲಿ ಒಂದಾಗಿದೆ. ಈ ಹಿಂದೆ ಸ್ಮಾರ್ಟ್‌ವಾಚ್‌, ಇಯರ್‌ಬಡ್ಸ್‌ ಸೇರಿದಂತೆ ಇನ್ನಿತರೆ ಧರಿಸಬಹುದಾದ ಗ್ಯಾಜೆಟ್‌ಗಳನ್ನು ಪರಿಚಯಿಸಿ ಜನಮನ್ನಣೆ ಪಡೆದಿದ್ದು, ಇದೀಗ ಸ್ಮಾರ್ಟ್‌ಟಿವಿ ವಿಭಾಗಕ್ಕೆ ಕಾಲಿರಿಸಿದೆ. ಅದರಂತೆ ಭಾರತದಲ್ಲಿ ವಿವಿಧ ಫೀಚರ್ಸ್‌ ಒಳಗೊಂಡ ಏಳು ವೇರಿಯಂಟ್‌ನ ಟಿವಿಗಳನ್ನು ಪರಿಚಯಿಸಲಾಗಿದೆ.

ಫ್ಲೋರೋಸೆನ್ಸ್

ಹೌದು, ಭಾರತದಲ್ಲಿ ಸೆನ್ಸ್‌ ಹೊಸ ಟಿವಿಗಳನ್ನು ಪರಿಚಯಿಸಲಾಗಿದ್ದು, ಇವು 100% 'ಮೇಡ್ ಇನ್ ಇಂಡಿಯಾ' ಪ್ರೊಡಕ್ಟ್‌ಗಳಾಗಿವೆ. ಈ ಟಿವಿಗಳು ಗೂಗಲ್‌ ಟಿವಿ, ಡಾಲ್ಬಿ ಆಡಿಯೋ ಸೇರಿದಂತೆ ಇನ್ನಿತರೆ ಫೀಚರ್ಸ್‌ ಅನ್ನು ಪಡೆದುಕೊಂಡಿವೆ. ಹಾಗೆಯೇ ಲುಮಿಸೆನ್ಸ್ ಮತ್ತು ಫ್ಲೋರೋಸೆನ್ಸ್ ಎಂಬ ಎರಡು ರೀತಿಯ ಡಿಸ್‌ಪ್ಲೇ ಪ್ಯಾನೆಲ್‌ಗಳೊಂದಿಗೆ ಬರಲಿದ್ದು, 32 ಇಂಚುಗಳಿಂದ 65 ಇಂಚುಗಳವರೆಗಿನ ಡಿಸ್‌ಪ್ಲೇ ಗಾತ್ರವನ್ನು ಹೊಂದಿವೆ. ಹಾಗಿದ್ರೆ ಏನೆಲ್ಲಾ ಪ್ರಮುಖ ಫೀಚರ್ಸ್‌ಗಳು ಈ ಭಾರತೀಯ ಕಂಪೆನಿಯ ಸ್ಮಾರ್ಟ್‌ಟಿವಿಯಲ್ಲಿ ಇವೆ?, ಎಷ್ಟು ಇಂಚಿನ ಸ್ಮಾರ್ಟ್‌ಟಿವಿ ಯಾವ ಬೆಲೆಗೆ ಲಭ್ಯ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಪಿಕಾಸೊ UHD ಆಂಡ್ರಾಯ್ಡ್‌ ಟಿವಿ

ಪಿಕಾಸೊ UHD ಆಂಡ್ರಾಯ್ಡ್‌ ಟಿವಿ

ಪಿಕಾಸೊ UHD ಆಂಡ್ರಾಯ್ಡ್‌ ಟಿವಿ ಶ್ರೇಣಿಯು 50 ರಿಂದ 55 ಇಂಚಿನ ವೇರಿಯಂಟ್‌ಗಳನ್ನು ಹೊಂದಿದ್ದು, ಈ LED ಟಿವಿಗಳು ಫ್ಲೋರೋಸೆನ್ಸ್ ಪ್ಯಾನೆಲ್ ಮತ್ತು HDR10 ನೊಂದಿಗೆ ಪ್ಯಾಕ್‌ ಆಗಿವೆ. ಹಾಗೆಯೇ ಈ ಟಿವಿಗಳು ಕ್ವಾಡ್-ಕೋರ್ A53 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 2GB RAM ಮತ್ತು 16GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿವೆ. ಜೊತೆಗೆ ಗೂಗಲ್‌ ಅಸಿಸ್ಟೆಂಟ್ ಮತ್ತು ಗೂಗಲ್‌ ಪ್ಲೇ ಸ್ಟೋರ್‌ನಂತಹ ಸೇವೆಗಳು ಈ ಟಿವಿಯಲ್ಲಿ ಲಭ್ಯ.

ಡಾಲ್ಬಿ

ಇದರೊಂದಿಗೆ ಡಾಲ್ಬಿ ಆಡಿಯೋ ಮತ್ತು ಡಿಟಿಎಸ್, ರಿಮೋಟ್ ಕಂಟ್ರೋಲ್‌ನೊಂದಿಗೆ 20W ಸ್ಪೀಕರ್‌ ಆಯ್ಕೆ ಹೊಂದಿದ್ದು, 3 HDMI ಪೋರ್ಟ್‌ಗಳು, 2 ಯುಎಸ್‌ಬಿ ಪೋರ್ಟ್‌ಗಳು, 1 ಎತರ್ನೆಟ್ (RJ45) ಪೋರ್ಟ್ ಮತ್ತು 1 ಆಪ್ಟಿಕಲ್ ಪೋರ್ಟ್‌ಗೆ ಬೆಂಬಲ ನೀಡಲಿವೆ.

Dwinci QLED ಟಿವಿ ಸರಣಿ

Dwinci QLED ಟಿವಿ ಸರಣಿ

ಇದೇ ಕಂಪೆನಿಯ Dwinci QLED ಟಿವಿ ಸರಣಿ ಟಿವಿಗಳು 55 ರಿಂದ 65 ಇಂಚಿನ ಡಿಸ್‌ಪ್ಲೇ ವೇರಿಯಂಟ್‌ನಲ್ಲಿ ಲಭ್ಯ ಇವೆ. ಈ ಟಿವಿ ಲುಮಿಸೆನ್ಸ್ ಪ್ಯಾನೆಲ್ ಆಯ್ಕೆ ಹೊಂದಿದ್ದು, ಡಾಲ್ಬಿ ವಿಷನ್ ಅನ್ನು ಬೆಂಬಲಿಸಲಿವೆ. ಹಾಗೆಯೇ ಬೆಜೆಲ್-ಲೆಸ್ 4K ಡಿಸ್‌ಪ್ಲೇ ಈ ಟಿವಿಯಲ್ಲಿರುವುದು ಆಕರ್ಷಣೀಯ.

ಗೂಗಲ್‌

ಇನ್ನುಳಿದಂತೆ ಈ ಟಿವಿಗಳು ಗೂಗಲ್‌ ಟಿವಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಸೇರಿದಂತೆ ಸಾವಿರಾರು ಅಪ್ಲಿಕೇಶನ್‌ಗಳು ಮತ್ತು ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಮುಕ್ತ ಅವಕಾಶ ನೀಡುತ್ತವೆ. ಜೊತೆಗೆ ಡಾಲ್ಬಿ ಅಟ್ಮಾಸ್‌ನೊಂದಿಗೆ 20W ಸ್ಪೀಕರ್‌ ಆಯ್ಕೆ ಈ ಟಿವಿಗಳಲ್ಲಿ ಇದೆ. ಈ ಟಿವಿಗಳು ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 2GB RAM ಮತ್ತು 16GB ಇಂಟರ್ನಲ್‌ಸ್ಟೋರೇಜ್‌ ಆಯ್ಕೆ ಹೊಂದಿವೆ. ಕನೆಕ್ಟಿವಿಟಿ ವಿಚಾರದಲ್ಲಿ 3 HDMI ಪೋರ್ಟ್‌ಗಳು, 2 USB ಪೋರ್ಟ್‌, 1 ಎತರ್ನೆಟ್ (RJ45) ಪೋರ್ಟ್ ಮತ್ತು 1 ಆಪ್ಟಿಕಲ್ ಪೋರ್ಟ್‌ನೊಂದಿಗೆ ಇದು ಪ್ಯಾಕ್‌ ಆಗಿದೆ.

ಸೆನ್ಸ್‌

ಇದರೊಂದಿಗೆ ಸೆನ್ಸ್‌ 32 ಇಂಚಿನ ಹೆಚ್‌ಡಿ ಟಿವಿ ಮತ್ತು 43 ಇಂಚಿನ ಟಿವಿಯನ್ನು ಫುಲ್‌ ಹೆಚ್‌ಡಿ ಮತ್ತು ಯುಹೆಚ್‌ಡಿ ಆಯ್ಕೆಗಳಲ್ಲಿ ಪರಿಚಯಿಸಿದ್ದು, ಆಂಡ್ರಾಯ್ಡ್‌ ಟಿವಿ ರನ್ ಮಾಡುತ್ತವೆ. ಜೊತೆಗೆ ಈ ಟಿವಿಗಳು ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಡಾಲ್ಬಿ ಆಡಿಯೋ ಹಾಗೂ ಡಿಟಿಎಸ್‌ ಜೊತೆಗೆ 20W ಸ್ಪೀಕರ್‌ ಆಯ್ಕೆ ಹೊಂದಿವೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಇನ್ನು Dwinci ಟಿವಿ ಸರಣಿಯಲ್ಲಿ 55 ಇಂಚಿನ ಟಿವಿಗೆ 33,999ರೂ. ಗಳು ಹಾಗೂ 65 ಇಂಚಿನ ಟಿವಿಗೆ 42,999 ರೂ. ನಿಗದಿ ಮಾಡಲಾಗಿದ್ದು, ಪಿಕಾಸೊ ಟಿವಿ ವೇರಿಯಂಟ್‌ನಲ್ಲಿ 50 ಇಂಚಿನ ಟಿವಿಗೆ 24,999 ರೂ. ಹಾಗೂ 55 ಇಂಚಿನ ಟಿವಿಗೆ 29,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಜೊತೆಗೆ 32 ಇಂಚಿನ ಟಿವಿಗೆ 9,999 ರೂ. ಗಳು ಹಾಗೂ 43 ಇಂಚಿನ ಟಿವಿಗೆ 16,99ರೂ. ನಿಗದಿ ಮಾಡಲಾಗಿದೆ. ಹಾಗೆಯೇ UHD ಡಿಸ್‌ಪ್ಲೇ ಆಯ್ಕೆಯ ಟಿವಿಗೆ 20,999 ರೂ. ಬೆಲೆ ಇದೆ. ಇನ್ನು ಈ ಟಿವಿಗಳನ್ನು ಫ್ಲಿಪ್‌ಕಾರ್ಟ್‌ನ ಬಿಗ್‌ ಸೇವಿಂಗ್‌ ಡೇ ಸೇಲ್‌ನಲ್ಲಿ ಆಫರ್ ಬೆಲೆಗೆ ಖರೀದಿಸಬಹುದಾಗಿದೆ.

Best Mobiles in India

English summary
SENS company Introduces seven Made in India TVs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X