ಐಫೋನ್‌ನಲ್ಲಿ ಸರ್ಕಾರದ ಈ ಆಪ್‌ಗಳನ್ನು ಬಳಸಲು ಸಾಧ್ಯವಿಲ್ಲ; ಯಾವುವು ಅವು?

|

ಇತ್ತೀಚಿನ ಕೆಲವು ವರ್ಷಗಳಲ್ಲಿ ಯಾವುದೇ ಆಪ್‌ಗಳೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಬಳಕೆದಾರರಿಗೆ ಅನುಕೂಲ ಆಗುತ್ತಿವೆ. ಅದರಲ್ಲೂ ಪ್ರಯಾಣ ಮಾಡಲು ವಾಹನವನ್ನು ಬುಕ್‌ ಮಾಡಿಕೊಳ್ಳಲು, ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿ ಮಾಡಲು, ಬ್ಯಾಂಕಿಂಗ್‌ ಸಂಬಂಧಿತ ಸೇವೆಯನ್ನು ಪಡೆಯಲು ಇವು ತುಂಬಾನೆ ಅವಶ್ಯಕ. ಆದರೆ, ಭಾರತ ಸರ್ಕಾರ ಮಾತ್ರ ಈ ಕೆಲವು ಆಪ್‌ಗಳಿಗೆ ಐಫೋನ್ ಪ್ರವೇಶವನ್ನು ನಿರ್ಬಂಧಿಸಿದೆ.

ಐಫೋನ್‌

ಹೌದು, ಸಾಮಾನ್ಯವಾಗಿ ಐಫೋನ್‌ ಇದ್ದರೆ ಎಲ್ಲವೂ ಸಾಧ್ಯ ಎಂಬ ಭಾವನೆ ಎಲ್ಲರಲ್ಲೂ ಇರುತ್ತದೆ. ಆದರೆ, ನಿಮ್ಮ ಬಳಿ ಐಫೋನ್‌ ಇದ್ದರೂ ಸಹ ನಿಮ್ಮ ಸ್ಮೇಹಿತರಿಂದ ಆಂಡ್ರಾಯ್ಡ್‌ ಫೋನ್‌ ಕೇಳಿ ಪಡೆದು ಈ ಸೇವೆ ಪಡೆಯಬೇಕಾಗಿದೆ. ಯಾಕೆಂದರೆ ಭಾರತ ಸರ್ಕಾರದ ಈ ಆಪ್‌ಗಳು ಐಫೋನ್‌ ಬಳಕೆದಾರರಿಗೆ ಲಭ್ಯವಿಲ್ಲ. ಹಾಗಿದ್ರೆ ಆ ಆಪ್‌ಗಳು ಯಾವುವು ಎಂಬುದನ್ನು ಇಲ್ಲಿ ವಿವರಿಸಿದ್ದೇವೆ ನೋಡಿ.

ಸರ್ಕಾರಿ

ಇನ್ನು ಈ ಕೆಳಗೆ ವಿವರಿಸಲಾದ ಸರ್ಕಾರಿ ಆಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಆಪಲ್‌ನ ಆಪ್‌ ಸ್ಟೋರ್‌ನಲ್ಲಿ ಮಾತ್ರ ಲಭ್ಯವಿರುವುದಿಲ್ಲ.ಇದರರ್ಥ ಆಪಲ್‌ ಡಿವೈಸ್‌ ಬಳಕೆದಾರರು ಈ ಆಪ್‌ಗಳನ್ನು ಬಳಕೆ ಮಾಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದರ್ಥ.

MyGrievance

MyGrievance

ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ಸಹಯೋಗದೊಂದಿಗೆ ರಾಷ್ಟ್ರೀಯ ಮಾಹಿತಿ ಕೇಂದ್ರವು MyGrievance ಆಪ್‌ ಅನ್ನು ನಿರ್ವಹಣೆ ಮಾಡುತ್ತಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು, ಬಳಕೆದಾರರು ತಮ್ಮ ಕುಂದುಕೊರತೆಗಳ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಇದು ಸಹಕಾರಿಯಾಗಲಿದೆ.

myCGHS

myCGHS

ಈ ಆಪ್‌ ಕೇವಲ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿದೆ. ಇದರಲ್ಲಿ ವೈದ್ಯರು ಮತ್ತು ಕ್ಷೇಮ ಕೇಂದ್ರಗಳಿಗೆ ಪೂರ್ವ ನೋಂದಣಿ ಮಾಡಿಕೊಳ್ಳಬಹುದಾದ ಅವಕಾಶ ನೀಡಲಾಗಿದೆ. ಹಾಗೆಯೇ ಈ ಆಪ್‌ ಮೂಲಕ ಚಿಕಿತ್ಸೆಗಾಗಿ ಪ್ಯಾನೆಲ್‌ನಲ್ಲಿ ಲಭ್ಯವಿರುವ ಆಸ್ಪತ್ರೆಗಳು ಮತ್ತು ಲ್ಯಾಬ್‌ಗಳನ್ನು ಪರಿಶೀಲಿಸಿಕೊಳ್ಳಬಹುದು.

ಜೀವನ್ ಪ್ರಮಾಣ್

ಜೀವನ್ ಪ್ರಮಾಣ್

ಈ ಜೀವನ್ ಪ್ರಮಾಣ್ ಆಪ್‌ ಪಿಂಚಣಿದಾರರಿಗೆ ಬಯೋಮೆಟ್ರಿಕ್ ಸಕ್ರಿಯಗೊಳಿಸಿದ ಆಧಾರ್ ಆಧಾರಿತ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಒದಗಿಸುತ್ತದೆ. ಈ ಜೀವನ್ ಪ್ರಮಾಣ್ ಐಡಿ ಸಹಾಯದಿಂದ ಬಳಕೆದಾರರು PDF ನಕಲನ್ನು ಆಪ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಡಿಎನ್‌ಡಿ

ಡಿಎನ್‌ಡಿ

TRAI ನ DND (ಡು ನಾಟ್‌ ಡಿಸ್ಟರ್ಬ್) ಆಪ್‌ ಮೂಲಕ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡರೆ ಅಪೇಕ್ಷಿಸದ ವಾಣಿಜ್ಯ ಸಂವಹನ (UCC)/ ಟೆಲಿ ಮಾರ್ಕೆಟಿಂಗ್ ಕರೆಗಳು ಹಾಗೂ ಎಸ್ಎಂಎಸ್‌ ಅನ್ನು ತಪ್ಪಿಸಲು ಸಹಾಯಕವಾಗಲಿದೆ.

ರಿಜಿಸ್ಟ್ರೇಶನ್‌ ಆಂಡ್‌ ಸ್ಟಾಂಪ್‌ ಡ್ಯೂಟಿ

ರಿಜಿಸ್ಟ್ರೇಶನ್‌ ಆಂಡ್‌ ಸ್ಟಾಂಪ್‌ ಡ್ಯೂಟಿ

ರಿಜಿಸ್ಟ್ರೇಶನ್‌ ಆಂಡ್‌ ಸ್ಟಾಂಪ್‌ ಡ್ಯೂಟಿ ಆಪ್‌ ಅನ್ನು ಕೇವಲ ಮೇಘಾಲಯದ ನಾಗರಿಕರು ಬಳಕೆ ಮಾಡಬಹುದು. ಈ ಆಪ್‌ ಮೂಲಕ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಉಪ-ರಿಜಿಸ್ಟ್ರಾರ್ ವ್ಯಾಪ್ತಿಯೊಳಗೆ ಬರುವ ಭೂಮಿ ನೋಂದಣಿಗೆ ಬೇಕಾಗಿರುವ ಅಂದಾಜು ಸ್ಟ್ಯಾಂಪ್ ಡ್ಯೂಟಿ ಮೊತ್ತ ಹಾಗೂ ನೋಂದಣಿ ಶುಲ್ಕವನ್ನು ತಿಳಿಯಲು ಇದು ಸಹಾಯ ಮಾಡುತ್ತದೆ.

PMO ಇಂಡಿಯಾ

PMO ಇಂಡಿಯಾ

PMO ಇಂಡಿಯಾ ಪ್ರಧಾನ ಮಂತ್ರಿಗಳ ಕಚೇರಿಯ ಅಧಿಕೃತ ಆಪ್‌ ಆಗಿದ್ದು, ಈ ಮೂಲಕ ಇತ್ತೀಚಿನ ಎಲ್ಲಾ ಮಾಹಿತಿ, ಸುದ್ದಿ ಮತ್ತು ಪ್ರಧಾನ ಮಂತ್ರಿ ಕಚೇರಿಗೆ ಸಂಬಂಧಿಸಿದ ವಿಷಯಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಈ ಆಪ್‌ 13 ಭಾಷೆಗಳಲ್ಲಿ ಲಭ್ಯವಿದ್ದು, 'ಮನ್ ಕಿ ಬಾತ್' ನ ಆಡಿಯೋ ರೆಕಾರ್ಡಿಂಗ್ ಮತ್ತು ವಿಡಿಯೋಗಳನ್ನು ಇದರಲ್ಲಿ ವೀಕ್ಷಿಸಬಹುದು.

ಭಾಷಿಣಿ

ಭಾಷಿಣಿ

ಭಾಷಿಣಿ ಆಪ್‌ ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ದೇಶದ ನಾಗರೀಕರಿಗೆ ಸೇವೆಗಳು ಮತ್ತು ಉತ್ಪನ್ನಗಳನ್ನು ನೀಡಲು ಭಾಷೆಗಳಿಗೆ ರಾಷ್ಟ್ರೀಯ ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ ಅನ್ನು ಒದಗಿಸುತ್ತದೆ.

ಯೋಗ್ಯತಾ

ಯೋಗ್ಯತಾ

ಯೋಗ್ಯತಾ ಆಪ್‌ ಆನ್‌ಲೈನ್ ಕಲಿಕೆಯ ಪ್ಲಾಟ್‌ಫಾರ್ಮ್‌ ಆಗಿದೆ. ಬಳಕೆದಾರರು ಹೊಸ ಕೌಶಲ್ಯಗಳನ್ನು ಕಲಿಯುವಂತೆ ಹಾಗೂ ಮುಂದಿನ ಉದ್ಯೋಗಗಳಿಗೆ ಅರ್ಹರಾಗುವಂತೆ ಇದು ಮಾಡುತ್ತದೆ.

ಕಿಸಾನ್ ಸುವಿಧಾ

ಕಿಸಾನ್ ಸುವಿಧಾ

ಕಿಸಾನ್ ಸುವಿಧಾ ಆಪ್‌ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ನ್ಯಾಯಯುತ ಬೆಲೆಗೆ ಮಾರಾಟ ಮಾಡಲು ಸಹಾಯ ಆಗುತ್ತದೆ. ಈ ಆಪ್‌ ಮೂಲಕ ರೈತರು ಯಾವುದೇ ಮಾರ್ಕೆಟಿಂಗ್ ಯಾರ್ಡ್‌ನ ಯಾವುದೇ ಸರಕುಗಳ ನೇರ ಹರಾಜುಗಳನ್ನು ಟ್ರ್ಯಾಕ್ ಮಾಡಬಹುದು. ಹಾಗೆಯೇ ಖರೀದಿಸಿದ ಮತ್ತು ಮಾರಾಟವಾದ ಸರಕುಗಳನ್ನು ಪರಿಶೀಲಿಸಲು ದಲ್ಲಾಳಿಗಳಿಗೆ ಆಪ್‌ ಸಹಾಯ ಮಾಡುತ್ತದೆ.

Best Mobiles in India

Read more about:
English summary
service of these government apps is not available on iPhone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X