ವಿಕಲಾಂಗರಿಗಾಗಿ ಅತಿ ವಿಶೇಷ ಫೋನ್ ಸೆಸಮೆ

Posted By:

ವಿಕಲಾಂಗ ಬಳಕೆದಾರರು ತಮ್ಮ ಕೈಗಳ ಚಲನೆಯಿಂದಲೇ ಡಿವೈಸ್ ಅನ್ನು ನಿಯಂತ್ರಿಸುವ ಹ್ಯಾಂಡ್ಸ್ - ಫ್ರಿ ಸ್ಮಾರ್ಟ್‌ಫೋನ್ ಅನ್ನು ಇಸ್ರೇಲಿ ಕಂಪೆನಿ ಅಭಿವೃದ್ಧಿಪಡಿಸಿದ್ದು ಈ ಫೋನ್ ಬೆನ್ನುಹುರಿ ಗಾಯಗಳಿಂದ ಬಳಲುತ್ತಿರುವವರಿಗೆ, ಸೆರೆಬ್ರಲ್ ಪಾಲ್ಸ್ ನ್ಯೂನತೆ ಇರುವವರಿಗೆ ವರದಾನವಾಗಿ ಪರಿಣಮಿಸಲಿದೆ.

ಇದನ್ನೂ ಓದಿ: ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ವಿಕಲಾಂಗರಿಗಾಗಿ ಅತಿ ವಿಶೇಷ ಫೋನ್ ಸೆಸಮೆ

ಇದರ ಹೆಸರು ಸೆಸಮೆ ಎಂದಾಗಿದ್ದು ಆಂಡ್ರಾಯ್ಡ್ ಡಿವೈಸ್ ಆಗಿದೆ. ಇದು ಕಂಪ್ಯೂಟರ್ ವಿಶನ್ ಆಲ್ಗಾರಿದಮ್ ಅನ್ನು ಒಳಗೊಂಡಿದ್ದು ಮುಂಭಾಗದಲ್ಲಿರುವ ಕ್ಯಾಮೆರಾ ಬಳಕೆದಾರರ ತಲೆಯ ಚಲನೆಗಳನ್ನು ಇದು ಟ್ರ್ಯಾಕ್ ಮಾಡುತ್ತದೆ ಹಾಗೂ ಪರದೆಯಲ್ಲಿ ಕರ್ಸರ್ ನಿಯಂತ್ರಿಸಲು ಅನುಮತಿಸುತ್ತದೆ. ತಮ್ಮ ದೈನಂದಿನ ಫೋನ್‌ನಲ್ಲಿ ಇತರ ಬಳಕೆದಾರರು ಮಾಡುವಂತೆಯೇ ವಿಕಲಚೇತನ ಬಳಕೆದಾರರು ಈ ಫೋನ್ ಅನ್ನು ಬಳಸಬಹುದಾಗಿದೆ.

30 ಸೆಸಮೆ ಸ್ಮಾರ್ಟ್‌ಫೋನ್‌ಗಳನ್ನು ಬಳಕೆದಾರರಿಗೆ ಒದಗಿಸುವ ಯೋಜನೆಯಲ್ಲಿ ಕಂಪೆನಿ ಇದ್ದು ವಿಕಲಚೇತನರಿಗೆ ಫೋನ್ ಬಳಸಲು ಆದಷ್ಟು ನೆರವಾಗುವುದು ಯೋಜನೆಯ ಹಿಂದಿರುವ ಉದ್ದೇಶವಾಗಿದೆ.

English summary
This article tells about Sesame Enable is the world’s first hands-free smartphone for disabled.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot