ದೇಶದಲ್ಲೇ ಪ್ರತ್ಯೇಕ ವಿಭಾಗ ತೆರೆಯಲು 'ವಾಟ್ಸ್ಆಪ್'ಗೆ ಸೂಚನೆ!

|

ಭಾರತದಲ್ಲಿ ನಡೆಯುತ್ತಿರುವ ದುರ್ಘಟನೆಗಳಿಗೆ ವಾಟ್ಸ್ಆಪ್ ಕಾರಣ ಎಂಬ ಅಭಿಪ್ರಾಯ ಎಲ್ಲರಲ್ಲಿಯೂ ಮೂಡಿದೆ. ಇದಕ್ಕೆ ಸಂಬಂಧಿಸಿದಂತೆ, ವಾಟ್ಸ್ಆಪ್‌ನಲ್ಲಿ ಹರಿದಾಡುವ ಸುಳ್ಳು ಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ಹತ್ತಿಕ್ಕಲು, ಅವುಗಳ ಮೂಲ ಪತ್ತೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕೆಂದು ವಾಟ್ಸ್ಆಪ್ ಸಂಸ್ಥೆಗೆ ಕೇಂದ್ರ ಸರ್ಕಾರ ಮಂಗಳವಾರ ಸೂಚಿಸಿದೆ.

ಪ್ರಚೋದನಕಾರಿ ಸಂದೇಶಗಳನ್ನು ಹತ್ತಿಕ್ಕಲು, ಅವುಗಳ ಮೂಲ ಪತ್ತೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ಸಲುವಾಗಿ ದೇಶದಲ್ಲೇ ವಾಟ್ಸ್ ಆಪ್‌ ಸಂಸ್ಥೆ ಪ್ರತ್ಯೇಕ ವಿಭಾಗ ತೆರೆಯಬೇಕು. ತಂತ್ರಜ್ಞಾನದ ಕುಂದುಕೊರತೆ ಆಲಿಸಲು ಅಧಿಕಾರಿಗಳನ್ನೂ ನೇಮಿಸಬೇಕು. ಸಂದೇಶ ಕಳುಹಿಸುವ ವ್ಯಕ್ತಿಯ ಅಸ್ತಿತ್ವ ಸಾದರಪಡಿಸಿಸುವಂತೆ ಇರಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

ದೇಶದಲ್ಲೇ ಪ್ರತ್ಯೇಕ ವಿಭಾಗ ತೆರೆಯಲು 'ವಾಟ್ಸ್ಆಪ್'ಗೆ ಸೂಚನೆ!

ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ ಸಂಸ್ಥೆ ದೇಶದ ಡಿಜಿಟಲ್ ವ್ಯವಸ್ಥೆಗೆ ನಿಡಿರುವ ಅಪಾರ ಕೊಡುಗೆ ಪ್ರಶಂಸನೀಯ. ಆದರೆ, ಗುಂಪು ಹತ್ಯೆಗೆ ಪ್ರಚೋದನೆ, ಅಶ್ಲೀಲ ಚಿತ್ರ ವಿಡಿಯೊ ಪ್ರಸಾರ ಮಾಡಿ ಪ್ರತೀಕಾರ ತೀರಿಸಿಕೊಳ್ಳುವುದು ದೇಶದ ಕಾನೂನಿಗೆ ವಿರುದ್ಧ. ಹಾಗಾಗಿ, ಇಂತಹ ಕೆಟ್ಟ ಬೆಳವಣಿಗೆಗೆ ವಾಟ್ಸ್ಆಪ್ ನಲ್ಲಿ ವೇದಿಕೆ ಒದಗಿಸದಂತೆ ವಾಟ್ಸ್ಆಪ್ ಸಂಸ್ಥೆಗೆ ಹೇಳಲಾಗಿದೆ.

ವಾಟ್ಸ್ಆಪ್‌ನಲ್ಲಿ ಹರಿದಾಡುವ ನಕಲಿ ಸಂದೇಶಗಳ ಕಡಿವಾಣಕ್ಕೆ ವಾಟ್ಸ್ ಆಪ್‌ ಸಂಸ್ಥೆ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಸಂಸ್ಥೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಾಟ್ಸ್ ಆಪ್‌ ಸಂಸ್ಥೆಯ ಸಿಇಒ ಕ್ರಿಸ್ ಡೇನಿಯಲ್ ಅವರೊಂದಿಗೆ ಸಭೆಯ ಬಳಿಕ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.

ದೇಶದಲ್ಲೇ ಪ್ರತ್ಯೇಕ ವಿಭಾಗ ತೆರೆಯಲು 'ವಾಟ್ಸ್ಆಪ್'ಗೆ ಸೂಚನೆ!

ಇನ್ನು ಕೇಂದ್ರ ಸರ್ಕಾರ ನೀಡಿರುವ ಸಲಹೆ ಮತ್ತು ಎಚ್ಚರಿಕೆಗಳನ್ನು ವಾಟ್ಸ್ಆಪ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಕ್ರಿಸ್ ಡೇನಿಯಲ್ ಒಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರ ನೀಡಿರುವ ಎಲ್ಲಾ ಸೂಚನೆಗಳ ಅನುಸಾರ ಕ್ರಮ ವಹಿಸುವುದಾಗಿ ವಾಟ್ಸ್ ಆಪ್‌ ಸಿಇಒ ಕ್ರಿಸ್ ಡೇನಿಯಲ್ ಭರವಸೆ ನೀಡಿದ್ದಾರೆಂದು ಸಚಿವರು ಮಾಧ್ಯಮಗಳಿಗೆ ಹೇಳಿದ್ದಾರೆ.

ಓದಿರಿ: ಕೇರಳ ಸಂತ್ರಸ್ತರಿಗೆ 'ಪೇಟಿಎಂ' ಬಳಕೆದಾರರು ದೇಣಿಗೆ ನೀಡಿದ ಹಣ ಎಷ್ಟು?

Best Mobiles in India

English summary
Information and technology minister Ravi Shankar Prasad also told the Facebook-owned company's CEO. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X