ಭಾರತ v/s ಪಾಕಿಸ್ತಾನ ಟಿ20: ಟಿವಿ ಶೋನಲ್ಲಿ ಅಖ್ತರ್‌ ಕೋಪಗೊಂಡದ್ದು ಏಕೆ?

By Suneel
|

ಮೀಡಿಯಾ v/s ಕ್ರಿಕೆಟ್‌ v/s ಜೋಕ್‌. ಏನಿದು? ಅಂತಿರಾ. ಶನಿವಾರ (ಮಾರ್ಚ್‌ 19) ರಂದು ಟಿ20 ವರ್ಲ್ಡ್‌ಕಪ್‌ ಕ್ರಿಕೆಟ್‌ ಭಾರತ ಮತ್ತು ಪಾಕಿಸ್ತಾನ ವಿರುದ್ಧ ನಡೆದದ್ದು ಗೊತ್ತೇ ಇದೆ ಅಲ್ವಾ. ಕ್ರಿಕೆಟ್‌ ಪಂದ್ಯ ನಡೆಯುವ ವೇಳೆ "ಸ್ಟಾರ್ ಸ್ಪೋರ್ಟ್" ಲೈವ್‌ನಲ್ಲಿ ಹಾಗೆ ಒಂದು ಲೈವ್‌ ಶೋ ಅನ್ನು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಹಾಗೂ ವೇಗದ ಬೌಲರ್‌ ಆದ ಶೋಯಿಬ್ ಅಖ್ತರ್ ಮತ್ತು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪೀಲ್‌ ದೇವ್‌ ಅವರನ್ನು ಕೂರಿಸಿ ಮಾತನಾಡಿಸಲಾಗುತ್ತಿದ್ದು. ಈ ವೇಳೆ ಪ್ರಾರಂಭದಲ್ಲಿಯೇ ಶೋಯಿಬ್‌ ಅಖ್ತರ್‌ತಮ್ಮ ತಾಳ್ಮೆ ಕಳೆದುಕೊಳ್ಳುವಂತೆ ಕಾರ್ಯಕ್ರಮ ನಿರೂಪಕರಾದ ಜಟಿನ್‌ ಸಪ್ರು ಮಾತನಾಡಿದ್ದಾರೆ.

ಇದು ಕಾರ್ಯಕ್ರಮದಲ್ಲಾದ ಹಾಸ್ಯನೋ ಅಥವಾ ಗಂಭೀರ ವಿಷಯನೋ ಆದ್ರೆ ಶೋಯಿಬ್ ಅಖ್ತರ್'ರವರ ಮುಖದಲ್ಲಿ ಕೋಪ ಬಂದದಂತು ನಿಜ. ಅದನ್ನ ನೀವು ಲೇಖನದ ಕೊನೆ ಸ್ಲೈಡರ್‌ನಲ್ಲಿ ವೀಡಿಯೋವನ್ನು ಖಂಡಿತಾ ನೋಡಬಹುದು. ಆದ್ರೆ ನಿರೂಪಕರು ಶೋಯಿಬ್‌ ಆಖ್ತರ್‌'ರವರು ಕೋಪಗೊಳ್ಳುವಂತೆ ಮಾತನಾಡಿದ್ದಾದ್ರು ಏನು? ಕಾರ್ಯಕ್ರಮದ ವೇಳೆ ನಡೆದದ್ದಾದ್ರು ಏನು ಎಂದು ಈ ಲೇಖನದಲ್ಲಿ ತಿಳಿಯಿರಿ.

ಭಾರತದ ಮತ್ತು ಪಾಕಿಸ್ತಾನ ಟಿ20

ಭಾರತದ ಮತ್ತು ಪಾಕಿಸ್ತಾನ ಟಿ20

ಕೊಲ್ಕತ್ತದ ಈಡೆನ್‌ ಗಾರ್ಡೆನ್‌ನಲ್ಲಿ ವಿರಾಟ್‌ ಕೋಹ್ಲಿ'ರವರು 37 ಎಸೆತಗಳಿಗೆ 55 ರನ್‌ಗಳನ್ನು ಪಾಕಿಸ್ತಾನದ ವಿರುದ್ಧ ಕಲೆಹಾಕಿದರು. ಮಹೇಂದ್ರ ಸಿಂಗ್‌ ಧೋನಿ ಪಡೆ ಮತ್ತೊಮ್ಮೆ ಸುಲಭವಾಗಿ ಪಾಕಿಸ್ತಾನ ಪಡೆಯನ್ನು ಪಂದ್ಯದಲ್ಲಿ ಥಳಿಸಿತು.
ಚಿತ್ರ ಕೃಪೆ; Star Sports Live

ಭಾರತದ ಮತ್ತು ಪಾಕಿಸ್ತಾನ ಟಿ20

ಭಾರತದ ಮತ್ತು ಪಾಕಿಸ್ತಾನ ಟಿ20

ಪಾಕಿಸ್ತಾನದ ವಿರುದ್ಧ ಭಾರತ ವಿಶ್ವ ಟಿ20 ಕಪ್‌ನಲ್ಲಿ 7ನೇ ಜಯವನ್ನು 11-0 ಲೀಡ್‌ನಲ್ಲಿ ದಾಖಲಿಸಿದೆ.
ಚಿತ್ರ ಕೃಪೆ; Star Sports Live

ಭಾರತದ ಮತ್ತು ಪಾಕಿಸ್ತಾನ ಟಿ20

ಭಾರತದ ಮತ್ತು ಪಾಕಿಸ್ತಾನ ಟಿ20

ಅಂದಹಾಗೆ ಭಾರತದ ಜಯದಿಂದ ಪಾಕಿಸ್ತಾನ ಕ್ರಿಕೆಟ್‌ ತಂಡ ಮಾತ್ರ ಪೇಚಾಟಕ್ಕೆ ಸಿಲುಕಿದೆ ಅಂದು ಕೊಳ್ಳುವ ಹಾಗಿಲ್ಲ. ಯಾಕಂದ್ರೆ ಪೋಸ್ಟ್ ಮ್ಯಾಚ್‌ ಶೋ ವೇಳೆ 'ಸ್ಟಾರ್‌ ಸ್ಪೋರ್ಟ್" ಟಿವಿ ನಿರೂಪಕ ಜಟಿನ್‌ ಸಪ್ರು ಭಾಗಶಃ ಅಪಹಾಸ್ಯ ಮಾಡಿ ಪಾಕಿಸ್ತಾನ ವೇಗದ ಬೌಲರ್‌ ಶೋಯಿಬ್‌ ಅಖ್ತರ್‌ ತಮ್ಮ ತಾಳ್ಮೆ ಕಳೆದುಕೊಂಡರು.

ಭಾರತದ ಮತ್ತು ಪಾಕಿಸ್ತಾನ ಟಿ20

ಭಾರತದ ಮತ್ತು ಪಾಕಿಸ್ತಾನ ಟಿ20

ಕಾರ್ಯಕ್ರಮದ ಆರಂಭದಲ್ಲಿಯೇ ಜಟಿನ್‌ ಸಪ್ರು'ರವರ ಮುಖದಲ್ಲಿ ನಗು ಬಂದಿತು. ಸಪ್ರು'ರವರ ಈ ನಗೆಯೇ ಶೋಯಿಬ್‌'ರವರು ಕೋಪಗೊಂಡು "Why are you laughing" ಎಂದು ಪ್ರಶ್ನೆ ಕೇಳಲು ಕಾರಣವಾಯಿತು. ಆದ್ರೆ ನಿರೂಪಕರು "Mauka Mauka" ಜಾಹಿರಾತು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ಲೇ ಆಗಲು ಎಂದು ಉತ್ತರಿಸಿ ಶೋಯಿಬ್‌ರ ಕೋಪ ತಣ್ಣಗೆ ಮಾಡಲು ಪ್ರಯತ್ನಿಸಿದರು.

ಭಾರತದ ಮತ್ತು ಪಾಕಿಸ್ತಾನ ಟಿ20

ನಿರೂಪಕ ಸಪ್ರು ಅಖ್ತರ್‌'ರವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು ಸಹ 'ನನ್ನನ್ನು ಇಲ್ಲಿ ಕರೆದಿರುವುದು ಪಂದ್ಯದ ವಿಶ್ಲೇಷಣೆಗಾಗಿ ಅದನ್ನು ಮಾತ್ರ ಮಾಡಿ. ಅದನ್ನು ಬಿಟ್ಟು ಅಪಹಾಸ್ಯ ಮಾಡಬೇಡಿ" ಎಂದರು ಅಖ್ತರ್‌. "ನೀವಿಲ್ಲಿ ಕುಳಿತಿರುವುದು ನನ್ನ ಅಭಿಪ್ರಾಯ ಕೇಳಲೋ ಅಥವಾ ನನಗೆ ಅಪಹಾಸ್ಯ ಮಾಡಲೋ? ನನ್ನನ್ನು ಅಪಹಾಸ್ಯ ಮಾಡಲು ಸ್ಟುಡಿಯೋಗೆ ಕರೆಯುವ ಅಗತ್ಯವಿರಲಿಲ್ಲ" ಎಂದು ಸಹ ಹೇಳಿದರು.
ವೀಡಿಯೋ ಕೃಪೆ :Pakistan News

ಭಾರತದ ಮತ್ತು ಪಾಕಿಸ್ತಾನ ಟಿ20

ಲೈವ್‌ ಶೋ'ನಲ್ಲಿ ಶೋಯಿಬ್ ಅಖ್ತರ್‌ ಹತ್ತಿರದಲ್ಲೇ ಕುಳಿತಿದ್ದ ಕಪೀಲ್‌ ದೇವ್'ರವರು ಹಾಗೆ ಕೋಪವನ್ನು ಮರೆಮಾಚಲು ನಿರೂಪಕರೊಂದಿಗೆ ಅವರೇ ಪಂದ್ಯದ ಬಗ್ಗೆ ಮಾತನಾಡಲು ಪ್ರಾರಂಭಿಸಿ ಅವರು ಸಮಾಧಾನವಾಗಲು ಸಮಯ ಕೊಡಿ ಎಂದು ಸಪ್ರು'ಗೆ ಹೇಳಿದರು.
ವೀಡಿಯೋ ಕೃಪೆ :Pinch n Punch

ಗಿಜ್‌ಬಾಟ್‌

ಗಿಜ್‌ಬಾಟ್‌

ಆಪಲ್‌ ಗೋಲ್ಡ್‌ ವಾಚ್‌ನಲ್ಲಿ ಗೋಲ್ಡ್‌ ಇದೆಯೋ ಇಲ್ವೋ?ಆಪಲ್‌ ಗೋಲ್ಡ್‌ ವಾಚ್‌ನಲ್ಲಿ ಗೋಲ್ಡ್‌ ಇದೆಯೋ ಇಲ್ವೋ?

ಉತ್ತರ ಕೊರಿಯಾದಲ್ಲಿ ಗುಟ್ಟಾಗಿ ಸೆರೆಹಿಡಿದ ಫೋಟೋ: ನೋಡುವಂತಿಲ್ಲಾ ಏಕೆ?ಉತ್ತರ ಕೊರಿಯಾದಲ್ಲಿ ಗುಟ್ಟಾಗಿ ಸೆರೆಹಿಡಿದ ಫೋಟೋ: ನೋಡುವಂತಿಲ್ಲಾ ಏಕೆ?

Best Mobiles in India

English summary
India v/s pakistan T20: Shoaib Akhtar Indian TV show video viral in social Media

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X