ಕರಾಳ ತಾಣದಲ್ಲಿದೆ ನಿಮ್ಮನ್ನು ತಲ್ಲಣಗೊಳಿಸುವ ಸಂಗತಿಗಳು

Written By:

ಗೂಗಲ್ ನಿಮಗೆ ಬೇಕಾದ್ದನ್ನೆಲ್ಲಾ ಒದಗಿಸಿಕೊಡುತ್ತಿರುವ ಮಾಯಾ ಪೆಟ್ಟಿಗೆ ಎಂದೇ ಹೆಸರುವಾಸಿಯಾಗಿದ್ದು ನೀವು ಇಲ್ಲಿ ಎಂತಹ ವಿಷಯಗಳನ್ನು ಬೇಕಾದರೂ ನೋಡಬಹುದು ಎಂಬುದು ನಿಮ್ಮ ಊಹೆಯಾಗಿದ್ದರೆ ಅದು ತಪ್ಪು ಎಂದೇ ನಾವು ಹೇಳುತ್ತೇವೆ. ನಿಮಗೆ ಪ್ರವೇಶವಿರದ ಸಾಕಷ್ಟು ವಿಷಯಗಳು ಗೂಗಲ್‌ನಲ್ಲಿದ್ದು ಇದನ್ನು ಅಷ್ಟು ಸುಲಭವಾಗಿ ನೋಡುವುದು ಸಾಧ್ಯವಿಲ್ಲ.

ಓದಿರಿ: ಅಂಬಾನಿ ಮನೆಯ ಸೊಗಸು ಇಂಟರ್ನೆಟ್‌ನಲ್ಲಿ ಈಗ ಹೆಚ್ಚು ಚರ್ಚಿತ

ತೋರ್ ಬ್ರೌಸರ್‌ನಂತಹ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ಈ ವಿಷಯಗಳನ್ನು ನಿಮಗೆ ಪ್ರವೇಶಿಸಬಹುದಾಗಿದ್ದು, ಇದರಲ್ಲಿ ಬರಿಯ ಕಾನೂನು ಬಾಹಿರ ಮತ್ತು ಪರಿಶೀಲನೆ ಮಾಡದೇ ಇರುವ ಸಂಗತಿಗಳೇ ತುಂಬಿಕೊಂಡಿದೆ. ಇದನ್ನೇ ಜಾಲತಾಣದ ಕರಾಳ ಮುಖ ಎಂದು ಬಣ್ಣಿಸಲಾಗಿದೆ. ಈ ಕರಾಳ ಮುಖವು ತುಂಬಾ ವಿಕೃತವಾಗಿದ್ದು ಗೂಗಲ್ ಜಗತ್ತಿನ ಇನ್ನೊಂದು ಮುಖವನ್ನು ನಮಗೆ ತೋರಲಿದೆ. ಬನ್ನಿ ಆ ವಿಷಯಗಳೇನು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಳಕೆಯಾಗುತ್ತಿರುವ ಕರೆನ್ಸಿ

#1

ಬಿಟ್ ಕಾಯಿನ್ ಎಂಬುದಾಗಿ ಈ ಕರೆನ್ಸಿಯನ್ನು ಕರೆಯಲಾಗಿದ್ದು ಡಾರ್ಕ್ ವೆಬ್‌ನಲ್ಲಿ ಇದು ಚಾಲನೆಯಲ್ಲಿದೆ. ನೀವು ಇದುವರೆಗೆ ಇದನ್ನು ಕೇಳಿಲ್ಲ ಎಂದಾದಲ್ಲಿ, ಇದು ಡಿಜಿಟಲ್ ಕರೆನ್ಸಿಯಾಗಿದ್ದು ವೆಬ್‌ನಲ್ಲಿ ಬಹುಕೆಲಸಗಳಿಗೆ ಬಳಕೆಯಾಗುತ್ತಿದೆ. ಬಿಟ್‌ ಕಾಯಿನ್ ಅನ್ನು ನೋಟುಗಳಾಗಿ ಕೂಡ ನಿಮಗೆ ಪರಿವರ್ತಿಸಿಕೊಳ್ಳಬಹುದಾಗಿದೆ.

ಪೋರ್ನ್

#2

ಜಾಲತಾಣದಲ್ಲಿ ಪೋರ್ನ್ ಬಹಳಷ್ಟು ಸ್ಥಳವನ್ನು ಅತಿಕ್ರಮಿಸಿದೆ. ಮಕ್ಕಳ ಅಶ್ಲೀಲತೆಯಿಂದ ಹಿಡಿದು ಇನ್ನಷ್ಟು ಬಹಳಷ್ಟು ಅಂಶಗಳನ್ನು ನಿಮಗಿಲ್ಲಿ ಕಂಡುಕೊಳ್ಳಬಹುದಾಗಿದೆ. ಆದರೆ ವೆಬ್‌ನಲ್ಲಿ ಈ ಅಂಶಗಳನ್ನು ನಿಮಗೆ ಹುಡುಕಾಡಲು ಆಗುವುದಿಲ್ಲ. ಇವುಗಳು ನಿಷಿದ್ಧವಾಗಿದೆ.

ಹ್ಯಾಕಿಂಗ್

#3

ಈ ಜಗತ್ತಿನಲ್ಲಿ ಹ್ಯಾಕ್ ಮಾಡಲು ನೀವು ಹ್ಯಾಕರ್‌ಗಳನ್ನು ನಿಯೋಜಿಸಬಹುದಾಗಿದೆ. ಯಾವ ಹ್ಯಾಕರ್ ಬೇಕಾದರೂ ಈ ಜಗತ್ತಿನಲ್ಲಿ ತನ್ನ ಆಳ್ವಿಕೆಯನ್ನು ಸ್ಥಾಪಿಸಬಹುದಾಗಿದೆ. ಹ್ಯಾಕರ್‌ಗಳಿಗೆ ಈ ಜಾಗ ಹೆಚ್ಚು ಸುರಕ್ಷಿತವಾಗಿದ್ದು ಇವರ ಕುತಂತ್ರ ಯಾರಿಗೂ ತಿಳಿಯುವುದೇ ಇಲ್ಲ.

ಕಾನೂನು ಬಾಹಿರ ಬೆಟ್ಟಿಂಗ್

#4

ಕ್ರಿಕೆಟ್, ಫುಟ್‌ಬಾಲ್ ಹೀಗೆ ಇತರೆ ಕ್ರೀಡೆಗಳಲ್ಲಿ ಸಾಮಾನ್ಯವಾಗಿರುವ ಬೆಟ್ಟಿಂಗ್‌ಗೆ ಕೂಡ ಈ ಕರಾಳ ತಾಣವೇ ಬೇಕು. ಇಲ್ಲಿ ನಡೆಯುವ ಬೆಟ್ಟಿಂಗ್ ಸಂಗತಿಗಳು ಯಾರಿಗೆ ತಿಳಿಯುವುದೇ ಇಲ್ಲವೆಂದೇ ಹೇಳಬಹುದು.

ಆಯುಧಗಳ ಕಾನೂನು ಬಾಹಿರ ಖರೀದಿ

#5

ಈ ಕರಾಳ ಲೋಕದಲ್ಲಿ ಬೇರೆ ಬೇರೆ ಪ್ರಕಾರಗಳ ಆಯುಧಗಳನ್ನು ನಿಮಗೆ ಖರೀದಿಸಬಹುದಾಗಿದೆ. ಇದು ಕಾನೂನು ಬಾಹಿರ ಕ್ರಿಯೆಯಾಗಿದ್ದರೂ, ಇಲ್ಲಿ ಎಂತಹ ಆಯುಧಗಳ ಖರೀದಿಯನ್ನು ಕೂಡ ನಡೆಸಬಹುದಾಗಿದೆ.

ಹಿಟ್‌ಮ್ಯಾನ್

#6

ಚಲನಚಿತ್ರಗಳಲ್ಲಿ ನಡೆಯುವಂತೆಯೇ ಫ್ರಿಲ್ಯಾನ್ಸ್ ಹಿಟ್‌ಮ್ಯಾನ್ ಅನ್ನು ನಿಯೋಜಿಸಿ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ. ಕೊಲೆಯಂತಹ ಪೈಶಾಚಿಕ ಕೃತ್ಯಗಳಿಗೂ ಡಾರ್ಕ್ ವೆಬ್ ಆವಾಸ ಸ್ಥಾನವಾಗಿದೆ. ಇದಕ್ಕೆ ಬೇಕಾಗಿರುವುದು ಸಾಕಷ್ಟು ಧನವಾಗಿದೆ.

ಡಾಕ್ಯುಮೆಂಟ್ಸ್

#7

ಪಿತೂರಿಯಿಂದ ಕೂಡಿರುವ ದಾಖಲೆಗಳನ್ನು ಹೊಂದಿರುವ ಫೈಲ್‌ಗಳು, ಸರಕಾರಿ ದಾಖಲೆಗಳು, ಹೀಗೆ ಪ್ರತಿಯೊಂದನ್ನು ದುಡ್ಡಿದ್ದರೆ ಈ ಕರಾಳ ತಾಣದಲ್ಲಿ ನಿಮಗೆ ಪಡೆದುಕೊಳ್ಳಬಹುದಾಗಿದೆ.

ಡ್ರಗ್ಸ್

#8

ಈ ತಾಣವು ಅನೂಹ್ಯ ಡ್ರಗ್ ಮಾರುಕಟ್ಟೆಗೆ ತಳಪಾಯವಾಗಿದ್ದು ಇಂಜೆಕ್ಶನ್, ಕ್ಯಾನಬೀಸ್ ಮೊದಲಾದ ಡ್ರಗ್ಸ್‌ಗಳನ್ನು ಯಾವುದೇ ತೊಂದರೆಯಿಲ್ಲದೆ ನಿಮಗಿಲ್ಲಿ ಪಡೆದುಕೊಳ್ಳಬಹುದಾಗಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಕನ್ನಡ ಲೇಖನಗಳು

ಭೂಮಿಯ ಅಡಿಯಲ್ಲಿದೆ ನೀವರಿಯದ ಕೌತುಕಮಯ ಜಗತ್ತು
ರಿಯಲ್‌ ಟೈಮ್‌ ಗ್ರಹಗಳ ಚಲನೆಯನ್ನು ತೋರಿಸುವ ಟೆಕ್‌ "ವಾಚ್‌"
ಮಂಗಳ ಗ್ರಹದಲ್ಲಿ ಪತ್ತೆಯಾದ ಗುರುತಿಸಲಾಗದ ವಸ್ತುಗಳು

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you thing Google represents the gateway to all the contents available in the web, than I must say you are absolutely wrong. here are some of the hard-hitting facts about the dark web.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot