Subscribe to Gizbot

ಮುಂದಿನ ವರ್ಷದಲ್ಲಿ ಒಟ್ಟು ಆರು ಸ್ಮಾರ್ಟ್ ಫೋನ್ ಲಾಂಚ್ ಮಾಡಲಿರುವ ಮೀಜು

Written By: Lekhaka

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ವೀಜು ಸ್ಮಾರ್ಟ್ ಫೋನ್ ಗಳನ್ನು ಕಾಣಬಹುದಾಗಿದೆ. ಆದರೆ ಇವುಗಳ ಸಂಖ್ಯೆಯೂ ಭಾರೀ ಕಡಿಮೆ ಇದೆ. ಈ ಹಿನ್ನಲೆಯಲ್ಲಿ ಮೀಜು ಭಾರತೀಯ ಮಾರುಕಟ್ಟೆಗೆ ಹಲವು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಲಿದೆ. ಮುಂದಿನ ವರ್ಷದ ಮೊದಲಾರ್ಧದಲ್ಲೇ 6 ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಲಿದೆ.

ಮುಂದಿನ ವರ್ಷದಲ್ಲಿ ಒಟ್ಟು ಆರು ಸ್ಮಾರ್ಟ್ ಫೋನ್ ಲಾಂಚ್ ಮಾಡಲಿರುವ ಮೀಜು

ಚೀನಾ ಮೂಲದ ಸ್ಮಾರ್ಟ್ ಫೋನ್ ಕಂಪನಿ ಮೀಜು, ಈಗಾಗಲೇ ಮೀಡಿಯಾ ಟೆಕ್ ಚಿಪ್ ಸೆಟ್ ತಯಾರಕರೊಂದಿಗೆ ಒಪ್ಪಂದವನ್ನು ಮುರಿದು ಕೊಂಡಿದ್ದು, ಹೊಸದಾಗಿ ಸ್ನಾಪ್ ಡ್ರಾಗನ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಮುಂದಿನ ವರ್ಷದಲ್ಲಿ ಬಿಡುಗಡೆಯಾಗುವ ಮೀಜು ಸ್ಮಾರ್ಟ್ ಫೋನ್ ಗಳಲ್ಲಿ ಸ್ನಾಪ್ ಡ್ರಾಗನ್ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ.

ಮುಂದಿನ ವರ್ಷ ಮೀಜು 15ನೇ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳಿದ್ದು, ಈ ಹಿನ್ನಲೆಯಲ್ಲಿ ಮುಂದಿನ ಒಂದು ವರ್ಷದಲ್ಲಿಯೇ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳು ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೇ 15ನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಆವೃತ್ತಿಯ ಸ್ಮಾರ್ಟ್ ಫೋನ್ ಲಾಂಚ್ ಆಗುವ ಸಾಧ್ಯತೆ ಇದೆ.

ಸೈಲೆಂಟಾಗಿ ಐಡಿಯಾದಿಂದ ಹೊಸ 8 ಪ್ಲಾನ್‌ ಘೋಷಣೆ: ಏರ್‌ಟೆಲ್‌-ವೊಡಾ ಆಫರ್‌ಗಳಿಗೆ ಕೌಂಟರ್...!

ಇದಲ್ಲದೇ ಇವುಗಳಲ್ಲಿ ಬಜೆಜ್ ಬೆಲೆಯಲ್ಲಿ, ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಮತ್ತು ಟಾಪ್ ಎಂಡ್ ಆವೃತ್ತಿಯ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಲಿದೆ. ಫುಲ್ ಸ್ಕ್ರಿನ್ ಡಿಸ್ ಪ್ಲೇ, ಬ್ರಜಿಲ್ ಲೈಸ್ ವಿನ್ಯಾಸ ಸೇರಿದಂತೆ ಹಲವು ವಿಶೇಷತೆಗಳನ್ನು ಈ ಸ್ಮಾರ್ಟ್ ಫೋನ್ ಗಳು ಹೊಂದಿರಲಿದೆ.

ಈ ಬಾರಿ ಮೀಜು ಟಾಪ್ ಎಂಡ್ ಆವೃತ್ತಿಯ ಸ್ಮಾರ್ಟ್ ಫೋನ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮೀಜು ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಗೆ ಸರಿಹೊಂದುವ ಸ್ಮಾರ್ಟ್ ಫೋನ್ ಗಳನ್ನು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡಲಿದೆ.

English summary
Meizu is rumored to launch six smartphones in the first half of the next year. One of these phones is said to be a special edition model.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot