ಶಿಯೋಮಿ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ..! ಖರೀದಿಸಲು ಇದೇ ಬೆಸ್ಟ್‌ ಟೈಮ್‌..!

By Gizbot Bureau
|

ಸ್ಮಾರ್ಟ್‌ಫೋನ್‌ ಲೋಕದಲ್ಲಿ ಕ್ರಾಂತಿಯೆಬ್ಬಿಸಿದ ಶಿಯೋಮಿ ಕಂಪನಿಯ ಬಜೆಟ್ ಅಥವಾ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದುಕೊಂಡಿದ್ದೀರಾ..? ಹಾಗಾದರೆ, ಇಲ್ಲಿ ಒಳ್ಳೆಯ ಸುದ್ದಿ ಇದೆ. ಕಂಪನಿಯು ತನ್ನ ಇತ್ತೀಚಿನ ಆರು ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಬೆಲೆ ಕಡಿತ ಘೋಷಿಸಿದೆ. ಆಶ್ಚರ್ಯ ಏನೆಂದರೆ, ತನ್ನ ಪ್ರತಿಸ್ಪರ್ಧಿ ರಿಯಲ್‌ಮಿ ತನ್ನ ಎಲ್ಲ ಹೊಸ ರಿಯಲ್‌ಮಿ 5 ಸರಣಿ ಸ್ಮಾರ್ಟ್‌ಫೋನ್‌ ಘೋಷಿಸಿದ ದಿನವೇ ಶಿಯೋಮಿ ಬೆಲೆ ಕಡಿತ ಘೋಷಿಸಿದೆ.

ಶಿಯೋಮಿ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ..! ಖರೀದಿಸಲು ಇದೇ ಬೆಸ್ಟ್‌ ಟೈಮ್

ರಿಯಲ್‌ಮಿ ಕಂಪನಿ ರಿಯಲ್‌ಮಿ 5 ಮತ್ತು ರಿಯಲ್‌ಮಿ 5 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ರಿಯಲ್‌ಮಿ 5 ರ ಬೆಲೆ 9,999 ರೂ. ಇದ್ದರೆ, ರಿಯಲ್‌ಮಿ 5 ಪ್ರೊ ಬೆಲೆ 13,999 ರೂ. ಇದೆ. ಎರಡೂ ಫೋನ್‌ಗಳು ಕ್ವಾಡ್-ಕ್ಯಾಮೆರಾ ಸೆಟಪ್ ಹೊಂದಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ. ಇನ್ನು, ಶಿಯೋಮಿಯಲ್ಲಿ ನೋಡುವುದಾದರೆ, ಬೆಲೆ ಕಡಿತಗೊಂಡ ಎಲ್ಲಾ ಸ್ಮಾರ್ಟ್‌ಫೋನ್‌ಗಳು 2019ರಲ್ಲಿ ಲಾಂಚ್‌ ಆಗಿವೆ ಎಂಬುದು ವಿಶೇಷ. ಆ ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡಿ.

ಶಿಯೋಮಿ ರೆಡ್‌ಮಿ ನೋಟ್‌ 7 ಪ್ರೋ

ಶಿಯೋಮಿ ರೆಡ್‌ಮಿ ನೋಟ್‌ 7 ಪ್ರೋ

6GB+64GB ಮೆಮೊರಿ ಸಾಮರ್ಥ್ಯ ಹೊಂದಿರುವ ಶಿಯೋಮಿ ರೆಡ್‌ಮಿ ನೋಟ್‌ 7 ಪ್ರೋ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 1 ಸಾವಿರ ರೂ. ಕಡಿತವಾಗಿದೆ. 15,999 ರೂ.ಗೆ ಲಭ್ಯವಿದ್ದ ಸ್ಮಾರ್ಟ್‌ಫೋನ್‌ ಸದ್ಯ 14,999 ರೂ.ಗೆ ಲಭ್ಯವಿದೆ. 1080x1920 ಪಿಕ್ಸೆಲ್ ರೆಸಲ್ಯೂಶನ್‌ನ 6.3 ಇಂಚಿನ ಸಂಪೂರ್ಣ ಎಚ್‌ಡಿ+ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 675 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಸೋನಿ ಐಎಂಎಕ್ಸ್ 586 ಸೆನ್ಸಾರ್‌ ಹೊಂದಿರುವ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದಂತಹ ಪ್ರಮುಖ ಫೀಚರ್‌ ಹೊಂದಿದೆ.

ಶಿಯೋಮಿ ರೆಡ್‌ಮಿ ನೋಟ್‌ 7S (4GB+64GB)

ಶಿಯೋಮಿ ರೆಡ್‌ಮಿ ನೋಟ್‌ 7S (4GB+64GB)

ಶಿಯೋಮಿ ರೆಡ್‌ಮಿ ನೋಟ್‌ 7S ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 1 ಸಾವಿರ ರೂ. ಕಡಿತವಾಗಿದ್ದು, 12,999 ರೂ.ಗೆ ಲಭ್ಯವಿದ್ದ ಸ್ಮಾರ್ಟ್‌ಫೋನ್‌ ಸದ್ಯ 11,999 ರೂ.ಗೆ ಲಭ್ಯವಿದೆ. 4GB+64GB ಮೆಮೊರಿ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಫೋನ್‌ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಜೊತೆಗೆ 6.3 ಇಂಚಿನ ಸಂಪೂರ್ಣ ಎಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಹಿಂಬದಿಯಲ್ಲಿ 48MP ಮತ್ತು 5MP ಸೆನ್ಸಾರ್‌ಗಳ ಡ್ಯುಯಲ್‌ ಲೆನ್ಸ್‌ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

ಶಿಯೋಮಿ ರೆಡ್‌ಮಿ ನೋಟ್‌ 7S (3GB+32GB)

ಶಿಯೋಮಿ ರೆಡ್‌ಮಿ ನೋಟ್‌ 7S (3GB+32GB)

ಶಿಯೋಮಿ ರೆಡ್‌ಮಿ ನೋಟ್‌ 7S ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 1 ಸಾವಿರ ರೂ. ಕಡಿತವಾಗಿದೆ. 10,999 ರೂ.ಗೆ ಲಭ್ಯವಿದ್ದ ಸ್ಮಾರ್ಟ್‌ಫೋನ್‌ ಸದ್ಯ 9,999 ರೂ.ಗೆ ಲಭ್ಯವಿದ್ದು, 3GB+64GB ಮೆಮೊರಿ ಸಾಮರ್ಥ್ಯ ಹೊಂದಿದೆ. ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 660 ಪ್ರೊಸೆಸರ್‌ ಬೆಂಬಲದೊಂದಿಗೆ ಆಂಡ್ರಾಯ್ಡ್‌ ಪೈ ಆಧಾರಿತ MIUI ಆಪರೇಟಿಂಗ್‌ ಸಿಸ್ಟಮ್‌ನಿಂದ ಕಾರ್ಯನಿರ್ವಹಿಸುತ್ತಿದೆ. ಸೆಲ್ಫೀ ಕ್ಯಾಮೆರಾ 13MP ಸೆನ್ಸಾರ್‌ ಹೊಂದಿದ್ದು, 4000 mAh ಬ್ಯಾಟರಿ ಸಾಮರ್ಥ್ಯ ಇದೆ.

ಶಿಯೋಮಿ ರೆಡ್‌ಮಿ Y3 (3GB+32GB)

ಶಿಯೋಮಿ ರೆಡ್‌ಮಿ Y3 (3GB+32GB)

ಶಿಯೋಮಿ ರೆಡ್‌ಮಿ Y3 ಸ್ಮಾರ್ಟ್‌ಫೋನ್‌ ಬೆಲೆಯಲ್ಲೂ ಕೂಡ 1 ಸಾವಿರ ರೂ. ಕಡಿತವಾಗಿದ್ದು, 9,999 ರೂ.ಗೆ ಲಭ್ಯವಿದ್ದ ಸ್ಮಾರ್ಟ್‌ಫೋನ್‌ ಸದ್ಯ 8,999 ರೂ.ಗೆ ಲಭ್ಯವಿದೆ. ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 632 ಒಕ್ಟಾ ಕೋರ್‌ ಚಿಪ್‌ಸೆಟ್‌ನಿಂದ ಬೆಂಬಲಿತವಾಗಿದೆ. ಪ್ರಮುಖ ಫೀಚರ್‌ ನೋಡುವುದಾದರೆ 32MP ಸೆಲ್ಫೀ ಕ್ಯಾಮೆರಾ ಇದ್ದು, 80 ಡಿಗ್ರಿ ಫೀಲ್ಟ್‌ ಆಫ್‌ ವೀವ್‌ ಹೊಂದಿದ್ದು, ಸಂಪೂರ್ಣ ಹೆಚ್‌ಡಿ ಸೆಲ್ಫೀ ವಿಡಿಯೋ ರೆಕಾರ್ಡ್‌ ಮಾಡಬಹುದಾಗಿದೆ. ಇನ್ನು, 6.26 ಇಂಚ್‌ HD+ IPS LCD ಡಿಸ್‌ಪ್ಲೇ ಹೊಂದಿದೆ.

ಶಿಯೋಮಿ ರೆಡ್‌ಮಿ 7 (2GB+32GB)

ಶಿಯೋಮಿ ರೆಡ್‌ಮಿ 7 (2GB+32GB)

ಶಿಯೋಮಿ ರೆಡ್‌ಮಿ 7 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 500 ರೂ. ಕಡಿತವಾಗಿದ್ದು, 7,999 ರೂ.ಗೆ ಲಭ್ಯವಿದ್ದ ಸ್ಮಾರ್ಟ್‌ಫೋನ್‌ ಸದ್ಯ 7,499 ರೂ.ಗೆ ಲಭ್ಯವಿದೆ. ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 632 ಒಕ್ಟಾ ಕೋರ್‌ ಪ್ರೊಸೆಸರ್‌ ಹೊಂದಿದ್ದು, 4G ನೆಟ್‌ವರ್ಕ್‌ ಬೆಂಬಲಿತ ಡ್ಯುಯಲ್‌ ಸಿಮ್‌ ವ್ಯವಸ್ಥೆ ಹೊಂದಿದೆ.

ಶಿಯೋಮಿ ರೆಡ್‌ಮಿ 7 (3GB+32GB)

ಶಿಯೋಮಿ ರೆಡ್‌ಮಿ 7 (3GB+32GB)

ಶಿಯೋಮಿ ರೆಡ್‌ಮಿ 7 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 500 ರೂ. ಕಡಿತವಾಗಿದ್ದು, 8,999 ರೂ.ಗೆ ಲಭ್ಯವಿದ್ದ ಸ್ಮಾರ್ಟ್‌ಫೋನ್‌ ಸದ್ಯ 8,499 ರೂ.ಗೆ ಲಭ್ಯವಿದೆ. 4000 mAh ಬ್ಯಾಟರಿ ಸಾಮರ್ಥ್ಯದ ರೆಡ್‌ಮಿ 7 19:9 ಆಸ್ಪೆಕ್ಟ್‌ ರೇಷಿಯೋದ 6.26 ಇಂಚಿನ ಡಿಸ್‌ಪ್ಲೇ ಹೊಂದಿದೆ. 12MP + 2MP ಸೆನ್ಸಾರ್‌ನ ಡ್ಯುಯಲ್‌ ಕ್ಯಾಮೆರಾ ವ್ಯವಸ್ಥೆಯನ್ನು ಸ್ಮಾರ್ಟ್‌ಫೋನ್‌ ಹೊಂದಿದ್ದು, 8MP ಸೆಲ್ಫೀ ಕ್ಯಾಮೆರಾ ಹೊಂದಿದೆ.

Best Mobiles in India

Read more about:
English summary
Six Xiaomi Phones Receives A Permanent Price Cut

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X