ಈ ಡಿವೈಸ್‌ ಇದ್ರೆ, ಕಾರು ಡ್ರೈವ್‌ ಮಾಡುವಾಗ ನಿದ್ರೆ ಬರೋದಿಲ್ಲ ಬಿಡಿ!

|

ಸಾಮಾನ್ಯವಾಗಿ ಜನರು ಹೊಸ ಕಾರು ಖರೀದಿಸುವಾಗ ಹಲವು ಅನುಕೂಲಕತೆಗಳನ್ನು ಗಮನಿಸುತ್ತಾರೆ. ಹಾಗೆಯೇ ಜನರು ಕಾರಿನ ಸುರಕ್ಷತೆಯ ಅಂಶಗಳ ಬಗ್ಗೆಯು ಹೆಚ್ಚಿನ ಗಮನ ನೀಡುವುದನ್ನು ಮರೆಯುವುದಿಲ್ಲ. ಅದಾಗ್ಯೂ, ಚಾಲಕರ ಕೆಲವು ಸಣ್ಣ ಪುಟ್ಟ ತಪ್ಪುಗಳು ಕೆಲವೊಮ್ಮೆ ಅಪಘಾತಕ್ಕೆ ಕಾರಣವಾಗುತ್ತವೆ. ಹೀಗಾಗಿ ಚಾಲಕರು ಎಚ್ಚರಿಕೆಯಿಂದ ಕಾರು ಚಲಾಯಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಚಾಲಕರನ್ನು ಎಚ್ಚರಿಸುವ ಡಿವೈಸ್‌ವೊಂದು ಹೆಚ್ಚು ಗಮನ ಸೆಳೆದಿದೆ.

ಅಧಿಕವಾಗಿರುತ್ತವೆ

ಹೌದು, ಚಾಲಕರು ಕಾರು ಚಾಲನೆ ಮಾಡುವಾಗ ಕೆಲವು ಸಂದರ್ಭಗಳಲ್ಲಿ ನಿದ್ದೆಯ ಮಂಪರು ಬರುತ್ತದೆ. ತಡ ರಾತ್ರಿ ಅಥವಾ ನಸುಕಿನ ವೇಳೆ ವಾಹನ ಚಾಲಕರಿಗೆ ಹೆಚ್ಚಾಗಿ ನಿದ್ರೆ ಬರುವ ಸಾಧ್ಯತೆಗಳು ಅಧಿಕವಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಚಾಲಕರು ಸ್ವಲ್ಪವೇ ಎಚ್ಚರ ತಪ್ಪಿದರೂ ದೊಡ್ಡ ಅನಾಹುತವೇ ಸಂಭವಿಸುತ್ತದೆ. ಚಾಲಕ ನಿದ್ರೆಗೆ ಜಾರದಂತೆ ಎಚ್ಚರವಹಿಸಲು Anti drowsy Alarm (ಆಂಟಿ ಸ್ಲೀಪ್ ಅಲಾರ್ಮ್ ಸಿಸ್ಟಮ್) ಡಿವೈಸ್‌ ಹೆಚ್ಚು ಉಪಯುಕ್ತ ಎನಿಸುತ್ತದೆ.

ಮಾಡುವಾಗ

ಆಂಟಿ ಸ್ಲೀಪ್ ಅಲಾರ್ಮ್ ಸಿಸ್ಟಮ್ (Anti drowsy Alarm) ಡಿವೈಸ್‌ ಅನ್ನು ಚಾಲಕರು ಕಿವಿಗೆ ಧರಿಸಿ ಕಾರು ಚಾಲನೆ ಮಾಡಬೇಕು. ಕಾರು ಚಾಲನೆ ಮಾಡುವಾಗ ನಿದ್ರೆ ಬಂದರೆ, ಈ ಸಾಧನವು ಚಾಲಕರನ್ನು ಎಚ್ಚರಿಸುತ್ತದೆ. ಹೀಗಾಗಿ ಈ ಡಿವೈಸ್‌ ಧರಿಸಿದರೆ, ಇನ್ನು ಮುಂದೆ ಡ್ರೈವಿಂಗ್ ಮಾಡುವಾಗ ಚಾಲಕರಿಗೆ ನಿದ್ರೆ ಬರುವುದಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಇದು ಸಾಧನ ಬಹಳ ಮುಖ್ಯ. ಹಾಗಾದರೇ ಈ ಡಿವೈಸ್‌ನ ಬೆಲೆ ಎಷ್ಟು? ಹಾಗೂ ಇದರ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಸುರಕ್ಷತಾ ಫೀಚರ್ಸ್‌ಗಳು

ಸುರಕ್ಷತಾ ಫೀಚರ್ಸ್‌ಗಳು

ಇಂದಿನ ಬಹುತೇಕ ಕಾರಿನಲ್ಲಿ ಅನೇಕ ಸುಧಾರಿತ ಸುರಕ್ಷತಾ ಫೀಚರ್ಸ್‌ಗಳ ಆಯ್ಕೆ ಕಾಣಬಹುದಾಗಿದೆ. ಇದರಲ್ಲಿ, ನಿಮಗೆ ಸೀಟ್ ಬೆಲ್ಟ್ ಅಲಾರಂಗೆ 6 ಏರ್‌ಬ್ಯಾಗ್‌ಗಳು ಮತ್ತು ಹಲವು ರೀತಿಯ ಸಂವೇದಕಗಳಂತಹ ಫೀಚರ್ಸ್‌ಗಳನ್ನು ನೀಡಲಾಗಿದೆ. ಕೆಲವು ಕಾರುಗಳು ADAS ಆಯ್ಕೆಯನ್ನು ಪಡೆಯಲಾರಂಭಿಸಿವೆ. ಈ ಫೀಚರ್ಸ್‌ಗಳು ಕಾರು ಅಪಘಾತದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಕೆಲವೊಮ್ಮೆ

ಇಂದಿನ ಕಾರುಗಳು ಸಾಕಷ್ಟು ಅಡ್ವಾನ್ಸ್‌ ಫೀಚರ್ಸ್‌ಗಳೊಂದಿಗೆ ಗಮನ ಸೆಳೆದಿದ್ದು, ಅತ್ಯುತ್ತಮ ಸುರಕ್ಷತಾ ಆಯ್ಕೆಗಳನ್ನು ಒಳಗೊಂಡಿವೆ. ಅದಾಗ್ಯೂ, ಇಂದಿನ ಕಾರಿನಲ್ಲಿ ಇಷ್ಟೆಲ್ಲಾ ಸುರಕ್ಷತೆಯ ಇದ್ದಾಗಲೂ ಕೆಲವೊಮ್ಮೆ ಕಾರನ್ನು ಚಾಲನೆ ಮಾಡುವಾಗ ಚಾಲಕರಿಗೆ ನಿದ್ರೆ ಬಂದರೆ, ಚಾಲನೆ ಕಷ್ಟ ಹಾಗೂ ಅಪಘಾತವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಸಾಧನವು

ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆಂಟಿ ಸ್ಲೀಪ್ ಅಲಾರ್ಮ್ ಸಿಸ್ಟಮ್ ಸಾಧನ ಖರೀದಿಗೆ ಲಭ್ಯವಿದೆ. ಈ ಸಾಧನವು ಕಾರು ಚಾಲನೆ ಮಾಡುವ ಸಂದರ್ಭದಲ್ಲಿ ಚಾಲಕನು ನಿದ್ದೆ ಮಾಡುವಾಗ ಎಚ್ಚರಿಸುತ್ತದೆ. ಈ ಡಿವೈಸ್‌ನ ಬೆಲೆ ಕೇವಲ 499 ರೂ. ಆಗಿದೆ. ಈ ಸಾಧನವನ್ನು ಅಮೆಜಾನ್ (Amazon) ಮತ್ತು ಫ್ಲಿಪ್‌ಕಾರ್ಟ್‌ (Flipkart) ತಾಣಗಳಲ್ಲಿ ಕಾಣಬಹುದು. ಈ ಡಿವೈಸ್‌ ಅನ್ನು ಚಾಲಕರು ಕಿವಿಯ ಮೇಲೆ ಧರಿಸಬೇಕು, ಇದು ನಿದ್ದೆ ಮಾಡುವಾಗ ಚಾಲಕನನ್ನು ಎಚ್ಚರವಾಗಿರಿಸುತ್ತದೆ.

ಸಾಧನವು

ಆಂಟಿ ಸ್ಲೀಪ್ ಅಲಾರ್ಮ್ ಸಿಸ್ಟಮ್ ಸಾಧನವು ದಣಿದ ತಕ್ಷಣ ಅದನ್ನು ಧರಿಸುವವರಿಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ನಿರ್ದಿಷ್ಟ ಕೋನದ ನಂತರ ನಿಮ್ಮ ತಲೆಯನ್ನು ಓರೆಯಾದ ತಕ್ಷಣ ಈ ಸಾಧನವು ಚಾಲಕರನ್ನು ಎಚ್ಚರಗೊಳಿಸುತ್ತದೆ. ಹಾಗೆಯೇ ಇದು ಸ್ವಿಚ್ ಆಫ್ ಮಾಡಲು ಬಟನ್ ಪಡೆದಿದೆ.

ಖರೀದಿಗೂ ಮುನ್ನ ಡಿವೈಸ್‌ ಬಗ್ಗೆ ತಿಳಿಯಿರಿ

ಖರೀದಿಗೂ ಮುನ್ನ ಡಿವೈಸ್‌ ಬಗ್ಗೆ ತಿಳಿಯಿರಿ

ಮಾರುಕಟ್ಟೆಯಲ್ಲಿ ಸಿಗುವ ಇಂತಹ ಯಾವುದೇ ಉತ್ಪನ್ನವನ್ನು ಖರೀದಿಸುವ ಮೊದಲು, ಗ್ರಾಹಕರು ಆ ಡಿವೈಸ್‌ ಗಳ ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ತಿಳಿಯುವುದು ಉತ್ತಮ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಡಿವೈಸ್‌ ಬಳಕೆ ಮಾಡುವ ಬಳಕೆದಾರರು, ವಿಮರ್ಶೆಗಳನ್ನು ನೀಡಿದ್ದಾರೆ. ಖರೀದಿ ಮಾಡುವಾಗ ಬಳಕೆದಾರರ ವಿಮರ್ಶೆಗಳನ್ನು ಒಮ್ಮೆ ಗಮನಿಸಬಹುದು. ಆ ಬಳಿಕ ನೀವು ನಿರ್ಧರ ತೆಗೆದುಕೊಳ್ಳಬಹುದು.

Best Mobiles in India

Read more about:
English summary
Sleep will No longer come while driving; This Device price is Rs. 499.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X