ದೀಪಾವಳಿಗೆ ಗಿಫ್ಟ್ಸ್ ಖರೀದಿಸಬೇಕೆ: ಅಮೆಜಾನ್‌ನಲ್ಲಿ ಸಿಗಲಿವೆ ಆಕರ್ಷಕ ಗ್ಯಾಜೆಟ್!

|

ದೀಪಾವಳಿ ಸಂಭ್ರಮಕ್ಕೆ ಕ್ಷಣಗಣನೆ ಆರಂಭ ಆಗಿದ್ದು, ಪ್ರೀತಿಪಾತ್ರರಿಗೆ ಉಡುಗೊರೆ ಕೊಡುವುದು ಸಾಮಾನ್ಯ. ಈ ಕಾರಣಕ್ಕಾಗಿಯೇ ಪ್ರಮುಖ ಇ- ಕಾಮರ್ಸ್‌ ತಾಣವಾದ ಅಮೆಜಾನ್‌ನಲ್ಲಿನ ಫೆಸ್ಟಿವಲ್‌ ಸೇಲ್‌ನಲ್ಲಿ ಪ್ರಮುಖ ಗ್ಯಾಜೆಟ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡಲಾಗಿದೆ. ಈ ಆಫರ್‌ ಅಕ್ಟೋಬರ್ 23 ರಂದು ಕೊನೆಗೊಳ್ಳಲಿದ್ದು, ಇದಕ್ಕೂ ಮೊದಲು ಪ್ರಮುಖ ಕಂಪೆನಿಗಳ ಡಿವೈಸ್‌ಗಳಾದ ಕಿಂಡಲ್ ಪೇಪರ್ ವೈಟ್, ಎಕೋ ಬಡ್ಸ್ ಸೇರಿದಂತೆ ಇನ್ನಿತರೆ ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ನ ಈ ಫೆಸ್ಟಿವಲ್‌ ಸೇಲ್‌ನಲ್ಲಿ ಹಲವು ಗ್ಯಾಜೆಟ್‌ಗಳು ಭಾರೀ ಡಿಸ್ಕೌಂಟ್‌ ಪಡೆದುಕೊಂಡಿವೆ. ಅದರಲ್ಲೂ 15,000 ರೂ. ಒಳಗಿನ ಸ್ಮಾರ್ಟ್ ಗ್ಯಾಜೆಟ್‌ಗಳನ್ನು ಉಡುಗೊರೆ ರೂಪದಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೆ ಮತ್ಯಾಕೆ ತಡ ಈ ಲೇಖನದಲ್ಲಿ ಯಾವ ಗ್ಯಾಜೆಟ್‌ಗಳು ಎಷ್ಟು ಬೆಲೆ ಪಡೆದಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಕಿಂಡಲ್ ಪೇಪರ್ ವೈಟ್

ಕಿಂಡಲ್ ಪೇಪರ್ ವೈಟ್

ಕಿಂಡಲ್ ಪೇಪರ್ ವೈಟ್ 12,099ರೂ. ಗಳ ಆಫರ್‌ ಬೆಲೆಯಲ್ಲಿ ಲಭ್ಯವಿದೆ. ಈ ಡಿವೈಸ್ 6.8 ಇಂಚಿನ ಡಿಸ್‌ಪ್ಲೇ ಹಾಗೂ ತೆಳುವಾದ ಅಂಚುಗಳನ್ನು ಹೊಂದಿದೆ. ಹಾಗೆಯೇ ಪ್ರಕಾಶಮಾನವಾದ ಡಿಸ್‌ಪ್ಲೇ ಬೆಳಕನ್ನು ಹೊಂದಿದ್ದು, ಅಗತ್ಯಕ್ಕೆ ಅನುಗುಣವಾಗಿ ಅಡ್ಜೆಸ್ಟ್‌ ಮಾಡುವ ಆಯ್ಕೆ ಪಡೆದಿದೆ. ಜೊತೆಗೆ 10 ವಾರಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ.

ಎಕೋ 4ನೇ ಜೆನ್ 2020

ಎಕೋ 4ನೇ ಜೆನ್ 2020

ಎಕೋ 4ನೇ ಜೆನ್ 2020 6,999ರೂ. ಗಳ ಆಫರ್‌ ಬೆಲೆಗೆ ಕೊಂಡುಕೊಳ್ಳಬಹುದಾಗಿದೆ. ಪ್ರೀಮಿಯಂ ಸೌಂಡ್‌ ಜೊತೆಗೆ ಹ್ಯಾಂಡ್ಸ್-ಫ್ರೀ ಮ್ಯೂಸಿಕ್‌ ಕಂಟ್ರೋಲ್‌ ಮಾಡಬಹುದಾಗಿದ್ದು, ನಾಲ್ಕು ಮೈಕ್ರೊಫೋನ್‌ಗಳೊಂದಿಗೆ ಪ್ಯಾಕ್‌ ಆಗಿದೆ.

ಎಕೋ ಬಡ್ಸ್ (2ನೇ ಜನ್)

ಎಕೋ ಬಡ್ಸ್ (2ನೇ ಜನ್)

ಎಕೋ ಬಡ್ಸ್ (2ನೇ ಜನ್) ಡಿವೈಸ್ 5,499ರೂ. ಗಳಲ್ಲಿ ಲಭ್ಯವಾಗಲಿದೆ. ಇದು ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಜೊತೆಗೆ ಮೂರು ಮೈಕ್ರೊಫೋನ್‌ಗಳನ್ನು ಹೊಂದಿದೆ. ಹಾಗೆಯೇ ಹ್ಯಾಂಡ್ಸ್ ಫ್ರೀ ಅಲೆಕ್ಸಾ ಫೀಚರ್ಸ್‌ ಇದರಲ್ಲಿದ್ದು, ಆಂಡ್ರಾಯ್ಡ್ ಹಾಗೂ ಐಓಎಸ್ ಎರಡಕ್ಕೂ ಹೊಂದಿಕೊಳ್ಳುತ್ತದೆ.

ಎಕೋ ಶೋ 8 ಸ್ಟೀಕರ್

ಎಕೋ ಶೋ 8 ಸ್ಟೀಕರ್

ಎಕೋ ಶೋ 8 (2ನೇ ಜನ್, 2021) ಡಿವೈಸ್‌ 7,499ರೂ. ಗಳಿಗೆ ಲಭ್ಯವಿದೆ. ಈ ಡಿವೈಸ್‌ 8 ಇಂಚಿನ ಹೆಚ್‌ಡಿ ಸ್ಕ್ರೀನ್, ಸ್ಟೀರಿಯೋ ಸೌಂಡ್‌ ಆಯ್ಕೆ ಹೊಂದಿದ್ದು, ಹ್ಯಾಂಡ್ಸ್-ಫ್ರೀ ಕಂಟ್ರೋಲ್ ಫೀಚರ್ಸ್‌ ಪಡೆದಿದೆ. ಹಾಗೆಯೇ 13 MP ಕ್ಯಾಮೆರಾ ಸಹ ಇದರಲ್ಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 11,799ರೂ. ಗಳಿಗೆ ಲಭ್ಯವಿದ್ದು, ಇದು 360x360 ಪಿಕ್ಸೆಲ್‌ ರೆಸಲ್ಯೂಶನ್‌ ಇರುವ ವೃತ್ತಾಕಾರದ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು ಆಂಡ್ರಾಯ್ಡ್‌ ಹಾಗೂ ಐಓಎಸ್‌ ಡಿವೈಸ್‌ಗಳಿಗೆ ಹೊಂದಿಕೊಳ್ಳಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಪ್ರೊ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಪ್ರೊ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಪ್ರೊ11,990ರೂ. ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಈ ಬಡ್ಸ್‌ಗಳು ಇಂಟೆಲಿಜೆಂಟ್ ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್‌ ಪಡೆದಿದ್ದು, ಮೂರು ಇನ್‌ಬಿಲ್ಟ್‌ ಮೈಕ್ರೊಫೋನ್ ಹೊಂದಿದೆ.

ಆಪಲ್‌ ಏರ್ ಟ್ಯಾಗ್

ಆಪಲ್‌ ಏರ್ ಟ್ಯಾಗ್

ಆಪಲ್‌ ಏರ್ ಟ್ಯಾಗ್‌ ಅನ್ನು ನೀವು ಕೇವಲ 2,990ರೂ. ಗಳಿಗೆ ಖರೀದಿ ಮಾಡಬಹುದು. ಈ ಏರ್ ಟ್ಯಾಗ್ ಐಫೋನ್ 11, ಐಫೋನ್ 11 ಪ್ರೊ, ಐಫೋನ್ 11 ಪ್ರೊ ಮ್ಯಾಕ್ಸ್, ಐಫೋನ್ 12, ಐಫೋನ್ 12 ಮಿನಿ, ಐಫೋನ್ 12 ಪ್ರೊ ಹಾಗೂ ಐಫೋನ್ 12 ಪ್ರೊ ಮ್ಯಾಕ್ಸ್ ನೊಂದಿಗೆ ಹೊಂದಿಕೊಳ್ಳುತ್ತದೆ.

ಫಿಟ್‌ಬಿಟ್ 2

ಫಿಟ್‌ಬಿಟ್ 2

ಫಿಟ್‌ಬಿಟ್ 2 ಸ್ಮಾರ್ಟ್‌ವಾಚ್‌ಗೆ 13,450 ರೂ. ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್ ಹೃದಯ ಬಡಿತದ ಮೇಲ್ವಿಚಾರಣೆ, ಮ್ಯೂಸಿಕ್, ಅಲೆಕ್ಸಾ ಸೇರಿದಂತೆ ಇನ್ನಿತರೆ ಫೀಚರ್ಸ್‌ ಪಡೆದಿದೆ. ಹಾಗೆಯೇ ಐದು ದಿನಗಳಿಗೂ ಅಧಿಕ ಬ್ಯಾಟರಿ ಬ್ಯಾಕ್‌ಅಪ್ ನೀಡುತ್ತದೆ.

ಫಿಲಿಪ್ಸ್ ಡಿಜಿಟಲ್ ಏರ್ ಫ್ರೈಯರ್

ಫಿಲಿಪ್ಸ್ ಡಿಜಿಟಲ್ ಏರ್ ಫ್ರೈಯರ್

ಫಿಲಿಪ್ಸ್ ಡಿಜಿಟಲ್ ಏರ್ ಫ್ರೈಯರ್ 8,499ರೂ. ಗಳಲ್ಲಿ ಲಭ್ಯವಿದೆ. ಇದು ರಾಪಿಡ್ ಏರ್ ತಂತ್ರಜ್ಞಾನ ಪಡೆದಿದ್ದು, 7 ಪೂರ್ವ ನಿಗದಿಗಳೊಂದಿಗೆ ಟಚ್ ಸ್ಕ್ರೀನ್ ಮೂಲಕ ನಿಯಂತ್ರಣ ಮಾಡಬಹುದಾಗಿದೆ.

ಫೈರ್ ಟಿವಿ ಸ್ಟಿಕ್ 4K

ಫೈರ್ ಟಿವಿ ಸ್ಟಿಕ್ 4K

ಫೈರ್ ಟಿವಿ ಸ್ಟಿಕ್ 4K ಡಿವೈಸ್‌ಗೆ 2,999ರೂ. ನಿಗದಿ ಮಾಡಲಾಗಿದೆ. ಇದು ಡಾಲ್ಬಿ ವಿಷನ್, ಹೆಚ್‌ಡಿಆರ್ ಮತ್ತು ಹೆಚ್‌ಡಿಆರ್10+ ಅನ್ನು ಬೆಂಬಲಿಸಲಿದ್ದು, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಸೋನಿ ಎಲ್‌ಐವಿ, ಆಪಲ್ ಟಿವಿ ಸೇರಿದಂತೆ ಇತರೆ ಓಟಿಟಿ ಅಪ್ಲಿಕೇಶನ್‌ಗಳನ್ನು ಪಡೆದಿದೆ.

Best Mobiles in India

English summary
The countdown to Diwali celebrations has begun. Meanwhile, Amazon has given a great offer on gadgets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X