Subscribe to Gizbot

ಭಾರತದಲ್ಲಿ ಸ್ಮಾರ್ಟ್‌ಫೋನ್ ಕಳೆದುಕೊಳ್ಳುವವರ ಸಂಖ್ಯೆ ಎಷ್ಟು ಗೊತ್ತಾ?..ಶಾಕ್ ಆಗ್ತೀರಾ!!

Written By:

ಜಾಗತಿಕವಾಗಿ ಆನ್‌ಲೈನ್‌ ಸಮೀಕ್ಷೆ ಹಾಗೂ ವಿಶ್ಲೇಷಣಾ ವರದಿಗಳನ್ನು ತಯಾರಿಸುವ 'ಕೆಪಿಎಂಜಿ' ಎಂಬ ಸಂಸ್ಥೆ, ಅಮೆರಿಕ, ಬ್ರಿಟನ್, ಚೀನಾ ಹಾಗೂ ಭಾರತ ಸೇರಿದಂತೆ ಹಲವು ದೇಶಗಳ ಹತ್ತು ಸಾವಿರಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಅಧ್ಯಯನಕ್ಕೆ ಒಳಪಡಿಸಿ ನೂತನ ಸಮೀಕ್ಷೆಯೊಂದನ್ನು ಪ್ರಕಟಿಸಿದೆ.!!

ಈ ಸಮೀಕ್ಷೆಗೆ ಕೆಪಿಎಂಜಿ ಸಂಸ್ಥೆ 'ನಾನು, ನನ್ನ ಜೀವನ, ನನ್ನ ವ್ಯಾಲೆಟ್' ಎಂಬ ಶೀರ್ಷಿಕೆ ನೀಡಿದ್ದು, ಸಮೀಕ್ಷಾ ವರದಿಯಲ್ಲಿ ಸ್ಮಾರ್ಟ್‌ಫೋನ್ ಹೊಂದಿರುವವರ ಪ್ರಮಾಣ, ಸ್ಮಾರ್ಟ್‌ಫೋನ್ ಉಪಯೋಗದ ಪ್ರಮಾಣ ಹಾಗೂ ಸ್ಮಾರ್ಟ್‌ಫೋನ್ ಕಳೆದುಕೊಳ್ಳುವವರ ಬಗ್ಗೆ ಕತೋಹಲ ಅಂಶಗಳನ್ನು ನೀಡಿದೆ.!! ಹಾಗಾದರೆ, ಕೆಪಿಎಂಜಿ' ಸಮೀಕ್ಷೆಯಿಂದ ಹೊರಬಿದ್ದಿರುವ ಕುತೋಹಲ ಅಂಶಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಳ.!!

ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಳ.!!

ಭಾರತದಲ್ಲಿ ಡಿಜಿಟಲ್ ಕ್ರಾಂತಿ ಆರಂಭವಾದಾಗಿನಿಂದ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಕಳೆದ ಐದು ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಪ್ರಮಾಣ ಶೇ 40 ರಷ್ಟು ವೃದ್ಧಿಸಿದೆ ಎಂದು ‘ಕೆಪಿಎಂಜಿ' ಸಮೀಕ್ಷೆ ಹೇಳಿದೆ. ಸ್ಮಾರ್ಟ್‌ಫೋನ್‌ ಇಂದು ದೈನಂದಿನ ಜೀವನದ ಒಂದು ಭಾಗವಾಗಿದೆ ಎಂದು ತಿಳಿಸಿದೆ.!!

ಪ್ರತಿ 10 ನಿಮಿಷಕ್ಕೆ ಸ್ಮಾರ್ಟ್‌ಫೋನ್ ವೀಕ್ಷಣೆ!!

ಪ್ರತಿ 10 ನಿಮಿಷಕ್ಕೆ ಸ್ಮಾರ್ಟ್‌ಫೋನ್ ವೀಕ್ಷಣೆ!!

ಬಳಕೆದಾರರು ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ‘ಕೆಪಿಎಂಜಿ' ಸಮೀಕ್ಷೆ ತಿಳಿಸಿದ್ದು, ಯಾವುದೇ ನೋಟಿಫಿಕೇಷನ್ ಅಥವಾ ಕರೆ ಬರದಿದ್ದರೂ ಪ್ರತಿ ಹತ್ತು ನಿಮಿಷಕ್ಕೆ ದೇಶದಲ್ಲಿನ ಶೇ 51 ರಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ಪ್ರತಿ 10 ನಿಮಿಷಕ್ಕೆ ಒಮ್ಮೆ ಸ್ಮಾರ್ಟ್‌ಫೋನ್‌ ನೋಡುತ್ತಾರೆ ಎಂದು ಈ ಅಧ್ಯಯನ ಹೇಳಿದೆ.

ಪರ್ಸ್‌ಗಿಂತ ಮೊಬೈಲ್ ಕಳೆಯುವುದು ಹೆಚ್ಚು!!

ಪರ್ಸ್‌ಗಿಂತ ಮೊಬೈಲ್ ಕಳೆಯುವುದು ಹೆಚ್ಚು!!

ಜಾಗತಿಕವಾಗಿ ಸಾಕಷ್ಟು ಜನರು ತಮ್ಮ ವ್ಯಾಲೆಟ್ ಕಳೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಮೊಬೈಲ್ ಫೋನ್‌ ಕಳೆದು ಕೊಳ್ಳುತ್ತಾರೆ ಎಂದು ಈ ಸಮೀಕ್ಷೆ ತಿಳಿಸಿದೆ. ಶೇ 57 ರಷ್ಟು ಭಾರತೀಯರು ಶೇ 61 ರಷ್ಟು ಬ್ರಿಟನ್ನರು, ಶೇ 74 ಅಮೆರಿಕನ್ನರು ಹಾಗೂ ಶೇ 29 ರಷ್ಟು ಚೀನಿಯರು ಮೊಬೈಲ್‌ಗಳನ್ನು ಕಳೆದುಕೊಳ್ಳುತ್ತಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ವಾಟ್ಸ್‌ಆಪ್ ಪ್ರಾಬಲ್ಯ!!

ವಾಟ್ಸ್‌ಆಪ್ ಪ್ರಾಬಲ್ಯ!!

ಡಿಜಿಟಲ್ ವ್ಯವಹಾರದ ಫಲವಾಗಿ ದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಪ್ರಮಾಣ ಹೆಚ್ಚಾಗಿದೆಎನ್ನಬಹುದಾದರೂ, ಭಾರತದಲ್ಲಿ ವಾಟ್ಸ್‌ಆಪ್ ಬಳಸುವವರ ಪ್ರಮಾಣ ಹೆಚ್ಚಿದೆ ಎಂದು ಸಮೀಕ್ಷೆ ತಿಳಿಸಿದೆ. ದೇಶದಲ್ಲಿನ ಒಟ್ಟಾರೆ ಸ್ಮಾರ್ಟ್‌ಫೋನ್‌ ಬಳಕೆದಾರರ ಪ್ರಮಾಣದಲ್ಲಿ ಶೇ 88 ರಷ್ಟು ಜನರು ವಾಟ್ಸ್‌ಆಪ್ ಬಳಸುತ್ತಿದ್ದಾರೆ.!!

ಮಾಹಿತಿಗೆ ತಂತ್ರಜ್ಞಾನ!!

ಮಾಹಿತಿಗೆ ತಂತ್ರಜ್ಞಾನ!!

ಸ್ಮಾರ್ಟ್ಫೋನ್ ಬಳಕೆದಾರರಲ್ಲಿ ರೆ. ಶೇ 80 ರಷ್ಟು ಜನರು ಆಪ್ ಮತ್ತು ತಂತ್ರಜ್ಞಾನದ ಮಾಹಿತಿಗಳನ್ನು ಆನ್‌ಲೈನ್‌ ಮೂಲಕ ಪಡೆಯುತ್ತಾರೆ. ಹಾಗೂ ಶೇ 41 ರಷ್ಟು ಬಳಕೆದಾರರು ಆನ್‌ಲೈನ್‌ ಹಾಗೂ ಸಾಮಾಜಿಕ ಜಾಲತಾಣಗಳನ್ನು ನಂಬುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.!!

ಓದಿರಿ:ಕೆಂಪು ಬಣ್ಣದ ಶಿಯೋಮಿ "ಎಂಐ ಎ1" ರೀಲೀಸ್!..ಕಡಿಮೆ ಬೆಲೆಗೆ 'ದಿ ಬೆಸ್ಟ್ ಫೋನ್'!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
India's internet enabled smartphone growth is expected to reach 435 million by 2019.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot