ಮಕ್ಕಳು ಸ್ಮಾರ್ಟ್‌ಫೋನ್ ಬಳಸಿದರೆ ಅವರ ಬುದ್ದಿಶಕ್ತಿ ಹೆಚ್ಚುತ್ತದೆ!!

ಎಲ್ಲಾ ಪೋಷಕರಿಗೆ ಮಕ್ಕಳು ಎಲ್ಲಿ ಸ್ಮಾರ್ಟ್‌ಫೋನ್ ಹಿಡಿದು ಹಾಳಾಗುತ್ತಾರೊ ಎಂಬ ಭಯ.!

|

ಸ್ಮಾರ್ಟ್‌ಫೋನ್‌ಗಳನ್ನು ಕಂಡರೆ ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಮೋಜು ಎನ್ನಬಹುದು. ಸ್ಮಾರ್ಟ್‌ಫೋನಿನ ಮೇಲೆ ಮಕ್ಕಳಿಗೆ ಇರುವ ವಿಸ್ಮಯ, ಫೋನಿನಲ್ಲಿ ಕಾಣುವ ಬಣ್ಣ ಬಣ್ಣದ ಚಿತ್ರಗಳು, ಅದರಲ್ಲಿನ ಕುತೋಹಲಗಳು ಮತ್ತು ಆಟವಾಡಲು ಇರುವ ನೂರಾರು ಗೇಮ್‌ಗಳು ಮಕ್ಕಳನ್ನು ಸ್ಮಾರ್ಟ್‌ಫೋನಿನತ್ತ ಹೆಚ್ಚು ಸೆಳೆಯುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.

ಆದರೆ, ಈ ಸತ್ಯ ಗೊತ್ತಿರುವ ಎಲ್ಲಾ ಪೋಷಕರಿಗೆ ಮಕ್ಕಳು ಎಲ್ಲಿ ಸ್ಮಾರ್ಟ್‌ಫೋನ್ ಹಿಡಿದು ಹಾಳಾಗುತ್ತಾರೊ ಎಂಬ ಭಯ.! ಆದರೆ, ನಿಮಗೆ ಗೊತ್ತಾ? ಮಕ್ಕಳ ಮಾನಸಿಕ ಮತ್ತು ಬೌದ್ದಿಕ ಬೆಳವಣಿಗೆ ಸ್ಮಾರ್ಟ್‌ಫೋನ್ ಕೂಡ ಕಾರಣವಾಗಬಲ್ಲದು. ಸ್ಮಾರ್ಟ್‌ಫೋನ್ ಮೂಲಕ ಅವರಿಗೆ ನಾವು ಕುತೋಹಲವನ್ನು ಮೂಡಿಸಿದರೆ ಅವರು ಮತ್ತಷ್ಟು ಮೇಧಾವಿಗಳಾಗಬಲ್ಲರು.!

ಮಕ್ಕಳು ಸ್ಮಾರ್ಟ್‌ಫೋನ್ ಬಳಸಿದರೆ ಅವರ ಬುದ್ದಿಶಕ್ತಿ ಹೆಚ್ಚುತ್ತದೆ!!

ಹೌದು, ಸ್ಮಾರ್ಟ್‌ಫೋನ್ ಮೇಲೆ ಅವಲಂಬಿತರಾಗುವ ಮಕ್ಕಳಿಗೆ ಸ್ಮಾರ್ಟ್‌ಫೋನ್ ಮೂಲಕವೇ ಪಾಠವನ್ನು ಹೇಳಿಕೊಡುವ ಆಪ್‌ಗಳು ಮತ್ತು ಗೇಮ್‌ಗಳ ಮೂಲಕ ಭೌದ್ದಿಕ ಬೆಳವಣಿಗೆ ಮತ್ತು ಸೃಜನಶೀಲತೆಯನ್ನು ಹೆಚ್ಚು ಪಡೆದುಕೊಳ್ಳುತ್ತಾರೆ. ಆಧುನಿಕ ಜೀವನದ ಪಾಠಗಳನ್ನು ಸುಲಭವಾಗಿ ಸ್ಮಾರ್ಟ್‌ಫೋನ್‌ಗಳು ಕಲಿಸಿಕೊಡುತ್ತಿವೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಉಪಯುಕ್ತ ಆಪ್‌ಗಳು ಮತ್ತು ಗೇಮ್‌ಗಳನ್ನು ಡೌನ್‌ಲೋಡ್ ಮಾಡಿ ಮಕ್ಕಳಿಗೆ ಒಮ್ಮೆ ಕುತೋಹಲ ಮೂಡಿಸಿದರೆ ಸಾಕು, ಆ ಆಪ್‌ಗಳು ಮತ್ತು ಆ ಗೇಮ್‌ಗಳು ಅವರಿಗೆ ಮತ್ತಷ್ಟು ಕುತೋಹಲವನ್ನು ಹೆಚ್ಚುವಂತೆ ಮಾಡುತ್ತವಂತೆ. ನೀವು ಉಂಟು ಮಾಡಿದ ಕುತೋಹಲ ಮಕ್ಕಳಿಗೆ ಆ ಬಗ್ಗೆ ಹೆಚ್ಚು ಯೋಚಿಸುವಂತೆ ಮಾಡಿ ಬೌದ್ದಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆಯಂತೆ.

ಮಕ್ಕಳು ಸ್ಮಾರ್ಟ್‌ಫೋನ್ ಬಳಸಿದರೆ ಅವರ ಬುದ್ದಿಶಕ್ತಿ ಹೆಚ್ಚುತ್ತದೆ!!

ಹಾಗಾಗಿ, ಮಕ್ಕಳಿಗೆ ಸ್ಮಾರ್ಟ್‌ಪೋನ್ ಕೊಟ್ಟರೂ ಅದರಲ್ಲಿ ಸ್ಮಾರ್ಟ್‌ಫೋನ್ ಮೂಲಕವೇ ಪಾಠವನ್ನು ಹೇಳಿಕೊಡುವ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಡಿ. ಆಂಡ್ರೊಬೇಬಿ(Androbaby), ಆಪ್ ಕ್ವಿಜ್ಹ್ ಬೇಬಿ ಗೇಮ್ಸ್, ಫಿಶರ್ ಪ್ರೈಸ್ ಬೇಬಿ ಗೇಮ್ಸ್ (Fisher-Price baby game) ಹೀಗೆ ಹಲವು ಉತ್ತಮ ಮಕ್ಕಳ ಆಪ್‌ಗಳು ಮತ್ತು ಗೇಮ್‌ಗಳು ಆಪ್‌ಸ್ಟೋರ್‌ನಲ್ಲಿ ಬಿಡುಬಿಟ್ಟಿವೆ.

ಓದಿರಿ: ಪ್ರಸ್ತುತ ಏರ್‌ಟೆಲ್ ನೀಡಿರುವ 6 ಬೆಸ್ಟ್ ಪ್ರಿಪೇಯ್ಡ್ ಆಫರ್‌ಗಳ ಲೀಸ್ಟ್!!

Best Mobiles in India

English summary
smartphones are used widely as educational tools to promote various activities among kids. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X