ಸ್ನ್ಯಾಪ್‌ಚಾಟ್‌ ಪ್ಲಾಟ್‌ಫಾರ್ಮ್‌ ಸೇರಿದ ಅಚ್ಚರಿಯ ಫೀಚರ್ಸ್‌! ವಿಶೇಷತೆ ಏನ್‌ ಗೊತ್ತಾ?

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ನ್ಯಾಪ್‌ಚಾಟ್‌ ಕೂಡ ಒಂದಾಗಿದೆ. ಸ್ಯಾಪ್‌ಚಾಟ್‌ ವಿಭಿನ್ನ ಮಾದರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಆಗಿದ್ದು ಬಳಕೆದಾರರ ನೆಚ್ಚಿನ ಅಪ್ಲಿಕೇಶನ್‌ಗಳಲ್ಲಿ ಒಂದೆನಿಸಿಕೊಂಡಿದೆ. ಇನ್ನು ಸ್ನ್ಯಾಪ್‌ಚಾಟ್‌ ತನ್ನ ಬಳಕೆದಾರರಿಗಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ "ಶೇರ್ಡ್‌ ಸ್ಟೋರೀಸ್‌" ಎಂಬ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಸ್ನ್ಯಾಪ್‌ಚಾಟ್‌

ಹೌದು, ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ "ಶೇರ್ಡ್‌ ಸ್ಟೋರೀಸ್" ಎನ್ನುವ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಹೊಸ ಫೀಚರ್ಸ್‌ ಮೂಲಕ ಸ್ನ್ಯಾಪ್‌ಚಾಟರ್‌ಗಳು ಸ್ಟೋರೀಸ್‌ ಅನ್ನು ಕ್ರಿಯೆಟ್‌ ಮಾಡಬಹುದು. ಅಲ್ಲದೆ ನಿಮ್ಮ ಸ್ಟೋರೀಸ್‌ಗಳನ್ನು ಆಡ್‌ ಮಾಡಲು ನಿಮ್ಮ ಸ್ನೇಹಿತರನ್ನು ಇನ್ವೈಟ್‌ ಕೂಡ ಮಾಡಬಹುದು. ಹಾಗೆಯೇ ನಿರ್ದಿಷ್ಟವಾಗಿ ಶೇರ್‌ ಮಾಡಿದ ಸ್ಟೋರೀಸ್‌ ಅನ್ನು ಸೇರಿಸಲು ಅವಕಾಶ ನೀಡಲಿದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ನ್ಯಾಪ್‌ಚಾಟ್‌

ಸ್ನ್ಯಾಪ್‌ಚಾಟ್‌ ಶೇರ್ಡ್‌ ಸ್ಟೋರೀಸ್‌ ಫೀಚರ್ಸ್‌ ನಿಮ್ಮ ಸ್ನೇಹಿತರನ್ನು ಒಂದೇ ವೆದಿಕೆಗೆ ತರುವುದಕ್ಕೆ ಸಹಾಯ ಮಾಡಲಿದೆ. ಇದರಲ್ಲಿ ಸ್ಟೋರೀಸ್‌ ಆಡ್‌ ಮಾಡುವುದಕ್ಕೆ ನಿಮ್ಮ ಸ್ನೇಹಿತರನ್ನು ಇನ್ವೈಟ್‌ ಮಾಡಬಹುದಾಗಿದೆ. ಸ್ನ್ಯಾಪ್‌ಚಾಟ್‌ ಶೇರ್‌ ಅನ್ನು ಮೆಮೊರಿಸ್‌ ಆಗಿ ಪರಿವರ್ತಿಸಲು ಈ ಫೀಚರ್ಸ್‌ ಬಳಕೆದಾರರಿಗೆ ಅನುಮತಿಸುತ್ತದೆ. ಇನ್ನು ಕಸ್ಟಮ್ ಸ್ಟೋರಿಗಳಂತೆಯೇ, ನಿಮ್ಮ ಸ್ನೇಹಿತರನ್ನು ಸ್ಟೋರೀಸ್‌ಗೆ ಇನ್ವೈಟ್‌ ಮಾಡಲು ಇದು ನಿಮಗೆ ಅನುಮತಿಸುತ್ತದೆ. ಇದಲ್ಲದೆ ನಿಮ್ಮ ಸ್ನೇಹಿತರು ನಿಮ್ಮ ಇತರ ಸ್ನೇಹಿತರನ್ನು ಸ್ಟೋರೀಸ್‌ಗೆ ಯಾವುದಾದರೂ ಕೊಡುಗೆ ನೀಡಲು ಮತ್ತು ಶೇರ್‌ ಮಾಡುವುದಕ್ಕೆ ಇನ್ವೈಟ್‌ ಮಾಡಬಹುದಾಗಿದೆ.

ಸ್ನ್ಯಾಪ್‌ಚಾಟ್‌

ಸ್ನ್ಯಾಪ್‌ಚಾಟ್‌ನಲ್ಲಿ ಶೇರ್ಡ್‌ ಸ್ಟೋರೀಸ್‌ ಕೂಡ 24 ಗಂಟೆಗಳ ಕಾಲ ಉಳಿಯುತ್ತದೆ, ನಂತರ ಕಣ್ಮರೆಯಾಗುತ್ತದೆ. ಇದು ನಮ್ಮ ಹೊಸ ಮತ್ತು ಸುಧಾರಿತ ಶೇರ್ಡ್‌ ಸ್ಟೋರೀಸ್‌ ಮೂಲಕ, ಗ್ರೂಪ್‌ಗೆ ಸೇರಿಸಲಾದ ಸ್ನ್ಯಾಪ್‌ಚಾಟರ್‌ಗಳು ತಮ್ಮ ಸ್ನೇಹಿತರನ್ನೂ ಸೇರಿಸಬಹುದು. ಇದರಿಂದ ಕ್ಯಾಂಪ್ ಸ್ಕ್ವಾಡ್ ಅಥವಾ ಹೊಸ ಸಹೋದ್ಯೋಗಿಗಳ ಗುಂಪಿಗೆ ಮೋಜಿನಲ್ಲಿ ಪ್ರವೇಶಿಸಲು ಸುಲಭವಾಗುತ್ತದೆ ಎಂದು ಸ್ನಾಪ್‌ಚಾಟ್‌ ಕಂಪನಿಯು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ. ನೀವು ಸ್ನ್ಯಾಪ್‌ಚಾಟ್‌ನಲ್ಲಿ ನಿರ್ಬಂಧಿಸಿದ ಯಾರೊಂದಿಗಾದರೂ ಶೇರ್‌ ಮಾಡಿದ ಸ್ಟೋರಿಯಲ್ಲಿ ನೀವು ಸೇರಿಕೊಂಡಿದ್ದರೆ, ಅದರ ಬಗ್ಗೆ ಸ್ನ್ಯಾಪ್‌ಚಾಟ್ ನಿಮಗೆ ತಿಳಿಸುತ್ತದೆ.

ಸ್ನ್ಯಾಪ್‌ಚಾಟ್‌ ಶೇರ್ಡ್‌ ಸ್ಟೋರೀಸ್‌ ಫೀಚರ್ಸ್‌ ಅನ್ನು ಬಳಸುವುದು ಹೇಗೆ?

ಸ್ನ್ಯಾಪ್‌ಚಾಟ್‌ ಶೇರ್ಡ್‌ ಸ್ಟೋರೀಸ್‌ ಫೀಚರ್ಸ್‌ ಅನ್ನು ಬಳಸುವುದು ಹೇಗೆ?

ಹಂತ:1 ಮೊದಲಿಗೆ ಸ್ಯ್ನಾಪ್‌ಚಾಟ್‌ ತೆರೆಯಿರಿ ಮತ್ತು ಮೇಲಿನ ಎಡಭಾಗದಲ್ಲಿರುವ ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ:2 ಇದರಲ್ಲಿ ಮೈ ಸ್ಟೋರೀಸ್‌ ಹೆಡರ್ ಪಕ್ಕದಲ್ಲಿರುವ "+ನ್ಯೂ ಸ್ಟೋರೀಸ್‌" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದೀಗ ಆಯ್ಕೆಗಳ ಪಟ್ಟಿಯಿಂದ ಶೇರ್ಡ್‌ ಸ್ಟೋರೀಸ್‌ಗಳನ್ನು ಆಯ್ಕೆಮಾಡಬಹುದಾಗಿದೆ.

ಸ್ನ್ಯಾಪ್‌ಚಾಟ್‌

ಇದಲ್ಲದೆ ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ಇತ್ತೀಚಿಗೆ ತನ್ನ ಬಳಕೆದಾರರಿಗೆ ಡೈನಾಮಿಕ್‌ ಸ್ಟೋರೀಸ್‌ ಫೀಚರ್ಸ್‌ ಪರಿಚಯಿಸಿದೆ. ಈ ಫೀಡ್ ಆಯ್ಕೆಯು ಬಳಕೆದಾರರಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಪಂಚದ ಇತ್ತೀಚಿನ ಸುದ್ದಿಯನ್ನು ವೀಕ್ಷಿಸಲು ಅನುವು ಮಾಡಿಕೊಡಲಿದೆ. ಇದಲ್ಲದೆ ವೆಬ್‌ನಲ್ಲಿ ವೆರಿಫೈ ಮಾಡಿದ ಮೀಡಿಯಾ ಪಬ್ಲಿಷರ್ಸ್‌ ಮತ್ತು ಕಂಟೆಂಟ್‌ ಕ್ರಿಯೆಟರ್ಸ್‌ ಕ್ರಿಯೆಟ್‌ ಮಾಡಿದ ಕಂಟೆಂಟ್‌ನಿಂದ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಸ್ಟೋರೀಸ್‌ ಕ್ರಿಯೆಟ್‌ ಮಾಡಲಿದೆ.

ಸ್ನ್ಯಾಪ್‌ಚಾಟ್‌ ಪರಿಯಿಸಿರುವ ಡೈನಾಮಿಕ್‌ ಸ್ಟೋರೀಸ್‌ ಫೀಚರ್ಸ್‌ ಇತ್ತೀಚಿನ ಸುದ್ದಿ ಹಾಗೂ ವೆರಿಫೈ ಮಾಡಿದ ಸುದ್ದಿಯನ್ನು ಮಾತ್ರ ಹೈಲೈಟ್‌ ಮಾಡಲಿದೆ. ಇದರಿಂದ ಬಳಕೆದಾರರು ಪ್ರಪಂಚದ ಯಾವುದೇ ಪ್ರಚಲಿತ ಸುದ್ದಿಯನ್ನು ತಕ್ಷಣವೇ ತಿಳಿಯಲು ಸಾಧ್ಯವಾಗಲಿದೆ. ಅಲ್ಲದೆ ನಂಬಲಾರ್ಹ ಸುದ್ದಿಯನ್ನು ಮಾತ್ರ ನೋಡುವುದಕ್ಕೆ ಸಾಧ್ಯವಾಗಲಿದೆ. ಸದ್ಯ ಡೈನಾಮಿಕ್‌ ಸ್ಟೋರೀಸ್‌ ಫೀಚರ್ಸ್‌ ಅನ್ನು ಭಾರತ, ಫ್ರಾನ್ಸ್, ಯುಎಸ್ ಮತ್ತು ಯುಕೆಗಳಲ್ಲಿ ಪರೀಕ್ಷಿಸಲಾಗುತ್ತಿದೆ.

Most Read Articles
Best Mobiles in India

English summary
Snapchat has announced a new Shared Stories feature to the platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X