ಸ್ನ್ಯಾಪ್‌ಚಾಟ್‌ನಿಂದ ಹೊಸ ಡೈನಾಮಿಕ್‌ ಸ್ಟೋರೀಸ್‌ ಫೀಚರ್ಸ್‌ ಬಿಡುಗಡೆ!

|

ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಆದರೆ ಸೊಶೀಯಲ್‌ ಮೀಡಿಯಾಗಳಿಗಿಂತ ಭಿನ್ನವಾದ ಫೀಚರ್ಸ್‌ಗಳ ಮೂಲಕ ಬಳಕೆದಾರರ ಗಮನ ಸೆಳೆದಿದೆ. ಇನ್ನು ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಬಳಕೆದಾರರಿಗೆ ಸುದ್ದಿ ಮತ್ತು ಮಾಹಿತಿಯನ್ನು ಹೈಲೈಟ್ ಮಾಡಲು ತನ್ನ ಡಿಸ್ಕವರ್ ಫೀಡ್‌ನಲ್ಲಿ ಹೊಸ ಡೈನಾಮಿಕ್ ಸ್ಟೋರೀಸ್ ಫೀಚರ್ಸ್‌ ಅನ್ನು ಘೋಷಿಸಿದೆ.

ಸ್ನ್ಯಾಪ್‌ಚಾಟ್‌

ಹೌದು, ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ಬಳಕೆದಾರರಿಗೆ ಡೈನಾಮಿಕ್‌ ಸ್ಟೋರೀಸ್‌ ಫೀಚರ್ಸ್‌ ಪರಿಚಯಿಸಿದೆ. ಈ ಫೀಡ್ ಆಯ್ಕೆಯು ಬಳಕೆದಾರರಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಪಂಚದ ಇತ್ತೀಚಿನ ಸುದ್ದಿಯನ್ನು ವೀಕ್ಷಿಸಲು ಅನುವು ಮಾಡಿಕೊಡಲಿದೆ. ಇದಲ್ಲದೆ ವೆಬ್‌ನಲ್ಲಿ ವೆರಿಫೈ ಮಾಡಿದ ಮೀಡಿಯಾ ಪಬ್ಲಿಷರ್ಸ್‌ ಮತ್ತು ಕಂಟೆಂಟ್‌ ಕ್ರಿಯೆಟರ್ಸ್‌ ಕ್ರಿಯೆಟ್‌ ಮಾಡಿದ ಕಂಟೆಂಟ್‌ನಿಂದ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಸ್ಟೋರೀಸ್‌ ಕ್ರಿಯೆಟ್‌ ಮಾಡಲಿದೆ. ಹಾಗಾದ್ರೆ ಸ್ನ್ಯಾಪ್‌ಚಾಟ್‌ ಹೊಸದಾಗಿ ಪರಿಚಯಿಸಿದ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೈನಾಮಿಕ್‌ ಸ್ಟೋರೀಸ್‌ ಫೀಚರ್ಸ್‌

ಸ್ನ್ಯಾಪ್‌ಚಾಟ್‌ ಪರಿಯಿಸಿರುವ ಡೈನಾಮಿಕ್‌ ಸ್ಟೋರೀಸ್‌ ಫೀಚರ್ಸ್‌ ಇತ್ತೀಚಿನ ಸುದ್ದಿ ಹಾಗೂ ವೆರಿಫೈ ಮಾಡಿದ ಸುದ್ದಿಯನ್ನು ಮಾತ್ರ ಹೈಲೈಟ್‌ ಮಾಡಲಿದೆ. ಇದರಿಂದ ಬಳಕೆದಾರರು ಪ್ರಪಂಚದ ಯಾವುದೇ ಪ್ರಚಲಿತ ಸುದ್ದಿಯನ್ನು ತಕ್ಷಣವೇ ತಿಳಿಯಲು ಸಾಧ್ಯವಾಗಲಿದೆ. ಅಲ್ಲದೆ ನಂಬಲಾರ್ಹ ಸುದ್ದಿಯನ್ನು ಮಾತ್ರ ನೋಡುವುದಕ್ಕೆ ಸಾಧ್ಯವಾಗಲಿದೆ. ಸದ್ಯ ಡೈನಾಮಿಕ್‌ ಸ್ಟೋರೀಸ್‌ ಫೀಚರ್ಸ್‌ ಅನ್ನು ಭಾರತ, ಫ್ರಾನ್ಸ್, ಯುಎಸ್ ಮತ್ತು ಯುಕೆಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಇನ್ನು ಭಾರತದಲ್ಲಿ, ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಸ್ನ್ಯಾಪ್‌ಚಾಟ್‌ ಕಮ್ಯೂನಿಟಿ ಆಟೋಮ್ಯಾಟಿಕ್‌ ಸ್ಟೋರೀಸ್‌ ಕ್ರಿಯೆಟ್‌ ಮಾಡಲು ಸ್ನ್ಯಾಪ್‌ಚಾಟ್‌ ಮೀಡಿಯಾ ಪಾಟ್ನರ್‌ RSS ಫೀಡ್‌ಗಳನ್ನು ಬಳಸುತ್ತದೆ.

ಸ್ನ್ಯಾಪ್‌ಚಾಟ್

ಇನ್ನು ಸ್ನ್ಯಾಪ್‌ಚಾಟ್ ಸದಸ್ಯರು ಇಂದಿನಿಂದಲೇ ತಮ್ಮ ಸ್ನ್ಯಾಪ್‌ಚಾಟ್‌ ಅಕೌಂಟ್‌ಗಳ ಡಿಸ್ಕವರ್‌ ಫೀಡ್‌ನಲ್ಲಿ ರಿಯಲ್‌ ಟೈಂನಲ್ಲಿ ಸ್ಟೋರೀಸ್‌ ಅಪ್ಡೇಟ್‌ ನೋಡಬಹುದಾಗಿದೆ. ಪಬ್ಲಿಷರ್ಸ್‌ ಈಗಾಗಲೇ ವೆಬ್‌ನಲ್ಲಿ ಕ್ರಿಯೆಟ್‌ ಮಾಡಿದ ಕಂಟೆಂಟ್‌ನಿಂದ ಸ್ಟೋರಿಗಳನ್ನು ಕ್ರಿಯೆಟ್‌ ಮಾಡಲು ಡೈನಾಮಿಕ್‌ ಸ್ಟೋರೀಸ್‌ RSS ಫೀಡ್‌ಗಳನ್ನು ಬಳಸಲಿದೆ. ಸದ್ಯ ಭಾರತದಲ್ಲಿ, ಡೈನಾಮಿಕ್ ಸ್ಟೋರೀಸ್ ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ವಿಷಯವನ್ನು ಪ್ರದರ್ಶಿಸಲಿದೆ. ಮುಂದಿನ ದಿನಗಳಲ್ಲಿ ಇತರ ಭಾಷೆಗಳಲ್ಲಿಯೂ ಕೂಡ ವಿವಿಧ ಪಾಲುದಾರರನ್ನು ಆನ್‌ಬೋರ್ಡ್ ಮಾಡಲು ಪ್ಲಾನ್‌ ಮಾಡಿದೆ.

ಸ್ನ್ಯಾಪ್‌ಚಾಟ್

ಸ್ನ್ಯಾಪ್‌ಚಾಟ್ ಭಾರತದಲ್ಲಿ ಡೈನಾಮಿಕ್‌ ಸ್ಟೋರೀಸ್‌ನಲ್ಲಿ GQ ಇಂಡಿಯಾ, ಮಿಸ್ಮಾಲಿನಿ, ಪಿಂಕ್ವಿಲ್ಲಾ, ಸ್ಪೋರ್ಟ್ಸ್ಕೀಡಾ, ದಿ ಕ್ವಿಂಟ್, ಟೈಮ್ಸ್ ನೌ ಮತ್ತು ವೋಗ್ ಇಂಡಿಯಾದಂತಹ ಪಬ್ಲಿಷರ್ಸ್‌ ವಿಷಯವನ್ನು ಒಳಗೊಂಡಿರುತ್ತದೆ. ಆದರೆ ಯುಎಸ್‌ನಲ್ಲಿ, ಸ್ನ್ಯಾಪ್‌ಚಾಟ್ ಆಕ್ಸಿಯೋಸ್, ಬ್ಲೂಮ್‌ಬರ್ಗ್, ಸಿಎನ್‌ಎನ್, ಕಾಂಪ್ಲೆಕ್ಸ್ ನೆಟ್‌ವರ್ಕ್ಸ್, ಕಾಂಡೆ ನಾಸ್ಟ್ (ಸೆಲ್ಫ್, ವೋಗ್), ಇಎಸ್‌ಪಿಎನ್, ಇನ್‌ಸೈಡರ್, ನ್ಯೂಯಾರ್ಕ್ ಪೋಸ್ಟ್, ಪೇಜ್ ಸಿಕ್ಸ್, ಸೆಲ್ಫ್, ದಿ ವಾಲ್ ಸ್ಟ್ರೀಟ್ ಜರ್ನಲ್, ದಿ ವಾಷಿಂಗ್ಟನ್ ಪೋಸ್ಟ್, ಟಿಎಮ್‌ಝಡ್, ವೈಸ್, ಪಬ್ಲಿಷರ್‌ ವಿಷಯವನ್ನು ಒಳಗೊಂಡಿರಲಿದೆ.

ಸ್ನ್ಯಾಪ್‌ಚಾಟ್‌

ಇದಲ್ಲದೆ ಸ್ನ್ಯಾಪ್‌ಚಾಟ್‌ ಇತ್ತೀಚಿನ ದಿನಗಳಲ್ಲಿ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಈ ತಿಂಗಳ ಆರಂಭದಲ್ಲಿ, ಯುಟ್ಯೂಬ್‌ ಅಪ್ಲಿಕೇಶನ್‌ನಿಂದ ಸ್ನ್ಯಾಪ್‌ಚಾಟ್‌ನ್ಲಲಿ ವೀಡಿಯೋಗಳನ್ನು ಡೈರೆಕ್ಟ್‌ ಆಗಿ ಶೇರ್‌ ಮಾಡಲು ಅವಕಾಸ ನೀಡುವ ಫೀಚರ್ಸ್‌ ಅನಾವರಣಗೊಳಿಸಿದೆ. ಇದಲ್ಲದೆ 13 ಮತ್ತು 17 ವರ್ಷದೊಳಗಿನ ಬಳಕೆದಾರರನ್ನು ಪ್ರೊಟೆಕ್ಟ್‌ ಮಾಡುವ ಉದ್ದೇಶದಿಂದ ನ್ಯೂ ಪೆರೆಂಟ್‌ ಕಂಟ್ರೋಲ್‌ ಗ್ರೂಪ್‌ ಅನ್ನು ಕೂಡ ಪರಿಚಯಿಸಿದೆ. ಈ ಮೂಲಕ ಬಳಕೆದಾರರ ರಕ್ಷಣೆಗೂ ಕೂಡ ಹೆಚ್ಚಿನ ಒತ್ತನ್ನು ಸ್ನ್ಯಾಪ್‌ಚಾಟ್‌ ನೀಡುತ್ತಾ ಬಂದಿದೆ.

Most Read Articles
Best Mobiles in India

English summary
Snapchat has announced a new Dynamic Stories feature within its Discover feed to highlight news and information for users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X