ಸ್ನ್ಯಾಪ್‌ಡೀಲ್‌ನಲ್ಲಿ 6 ಕೋಟಿಗೆ ವೈಭವೋಪೇತ ಮನೆ ಮಾರಾಟ

Written By:

ಆನ್‌ಲೈನ್ ಮಾರುಕಟ್ಟೆ ಸ್ಥಳವಾದ ಸ್ನ್ಯಾಪ್‌ಡೀಲ್ ಬೆಂಗಳೂರಿನಲ್ಲಿರುವ ವೈಭವೋಪೇತ ನಿವಾಸಗಳನ್ನು 6 ಕೋಟಿಗೆ ಮಾರಾಟ ಮಾಡುತ್ತಿದ್ದು ದೇಶದಲ್ಲೇ ಅತಿದೊಡ್ಡ ಆನ್‌ಲೈನ್ ನಿವಾಸ ಮಾರಾಟ ಡೀಲ್ ಇದಾಗಿದೆ. ನವ ದೆಹಲಿ ಆಧಾರಿತ ಈ ಕಂಪೆನಿ ಟಾಟಾ ಹೌಸಿಂಗ್‌ನ ನಿವಾಸವನ್ನು 1.1 ಕೋಟಿಗೆ ಮಾರಿದಾಗ ಈ ಸುದ್ದಿ ಹೊರಬಿದ್ದಿದೆ.

ಸ್ನ್ಯಾಪ್‌ಡೀಲ್‌ನಲ್ಲಿ 6 ಕೋಟಿಗೆ ವೈಭವೋಪೇತ ಮನೆ ಮಾರಾಟ

ಓದಿರಿ: ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಸ್ಮಾರ್ಟ್‌ಫೋನ್ ಮತ್ತು ಟಿವಿ ಮಾರಾಟ ವಿಭಾಗದಲ್ಲಿ ಸ್ನ್ಯಾಪ್‌ಡೀಲ್ ಪ್ರಖ್ಯಾತಿಯನ್ನು ಗಳಿಸಿದ್ದು, ಹಣಕಾಸು ಸೇವೆ, ಆಟೊಮೊಬೈಲ್ಸ್ ಮತ್ತು ನಿವಾಸ ಮೊದಲಾದ ಕ್ಷೇತ್ರಗಳಲ್ಲಿ ತನ್ನ ಚಾಪನ್ನು ಮೂಡಿಸುತ್ತಿದೆ. ನಿವಾಸ ಮಾರಾಟಗಳಂತಹ ದೊಡ್ಡ ಉದ್ಯಮಕ್ಕೆ ಇದು ತನ್ನನ್ನು ತೊಡಗಿಸಿಕೊಂಡಿದ್ದು, ಪ್ರಖ್ಯಾತ ಬಡಾವಣೆಗಳಲ್ಲಿ ನಿವಾಸ ಮಾರಾಟವನ್ನು ಉತ್ತಮ ಬೆಲೆಯಲ್ಲಿ ಸ್ನ್ಯಾಪ್‌ಡೀಲ್ ನಿರ್ವಹಿಸುತ್ತಿದೆ.

ಸ್ನ್ಯಾಪ್‌ಡೀಲ್‌ನಲ್ಲಿ 6 ಕೋಟಿಗೆ ವೈಭವೋಪೇತ ಮನೆ ಮಾರಾಟ

ಓದಿರಿ: ಈ ವೀಡಿಯೋಗಳನ್ನು ನೋಡಲು ಗುಂಡಿಗೆ ಗಟ್ಟಿಮಾಡಿಕೊಳ್ಳಿ

ಸ್ನ್ಯಾಪ್‌ಡೀಲ್ ಲಾಂಚ್ ಆದಂದಿನಿಂದ 400% ಪ್ರಗತಿಯನ್ನು ಕಾಣುತ್ತಿದ್ದು ಆನ್‌ಲೈನ್ ಉದ್ಯಮದಲ್ಲಿ ಇದು ಟಾಪ್ ಸ್ಥಾನವನ್ನು ಪಡೆದುಕೊಳ್ಳುವ ತವಕದಲ್ಲಿದೆ. ಫ್ಲಿಪ್‌ಕಾರ್ಟ್‌ ಸಮಾನವಾಗಿ ಆನ್‌ಲೈನ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನ್ಯಾಪ್‌ಡೀಲ್ ಟಾಪ್ ಆನ್‌ಲೈನ್ ತಾಣಗಳಲ್ಲಿ ಒಂದಾಗಿದೆ.

English summary
Online marketplace Snapdeal has sold a luxury penthouse located in Bengaluru for Rs 6 crore, making this, perhaps, one of the highest online residential property sale in the country.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot