ಲ್ಯಾಪ್‌ಟಾಪ್‌ ಚಟುವಟಿಕೆಯನ್ನು ಸ್ಕ್ರೀನ್‌ ರೆಕಾರ್ಡ್‌ ಮಾಡಿಕೊಳ್ಳಬೇಕೆ?... ಈ ಹೊಸ ಸೌಲಭ್ಯ ನಿಮಗಾಗಿ!

|

ಸ್ನಿಪ್ಪಿಂಗ್ ಟೂಲ್ ಅನ್ನು ಮೈಕ್ರೋಸಾಫ್ಟ್ ವಿಂಡೋಸ್‌ನಲ್ಲಿ ಸ್ಕ್ರೀನ್‌ಶಾಟ್‌ಗಾಗಿ ಬಳಕೆ ಮಾಡಕೊಳ್ಳಲಾಗುತ್ತಿದ್ದು, ಇದು ತೆಗೆದ ಫೋಟೋಗಳನ್ನು ಇಮೇಜ್‌ ಹಾಗೂ MHTML ಆಯ್ಕೆಯಲ್ಲಿ ಸ್ಟೋರ್‌ ಮಾಡಿಕೊಳ್ಳಬಹುದಾಗಿದೆ. ಈ ಸ್ನಿಪ್ಪಿಂಗ್ ಟೂಲ್ ಪಿಸಿ ಹಾಗೂ ಲ್ಯಾಪ್‌ಟಾಪ್‌ ಬಳಕೆದಾರರಿಗೆ ಅಗತ್ಯವಾದ ಸೌಲಭ್ಯವಾಗಿದ್ದು, ಹೆಚ್ಚು ಬಳಕೆಯಲ್ಲಿದೆ. ಇದರ ನಡುವೆ ಈಗ ಮತ್ತೊಂದು ಹೊಸ ಸೌಲಭ್ಯವನ್ನು ಇದರಲ್ಲಿ ನೀಡಲಾಗಿದೆ.

ಸ್ನಿಪ್ಪಿಂಗ್ ಟೂಲ್‌

ಹೌದು, ಸ್ನಿಪ್ಪಿಂಗ್ ಟೂಲ್‌ ಮೂಲಕ ಇನ್ಮುಂದೆ ಸ್ಕ್ರೀನ್‌ಶಾಟ್ ಅಷ್ಟೇ ಅಲ್ಲದೆ, ಸ್ಕ್ರೀನ್ ರೆಕಾರ್ಡಿಂಗ್ ಮಾಡಲು ಸಹ ಬಳಕೆ ಮಾಡಿಕೊಳ್ಳಬಹುದಾಗಿದೆ. ಇತ್ತೀಚಿನ ವಿಂಡೋಸ್‌ 11 ನಲ್ಲಿ( 11.2211.35.0 )ಈ ಫೀಚರ್ಸ್‌ ಲಭ್ಯವಿರಲಿದ್ದು, ಚಟುವಟಿಕೆಯನ್ನು ವಿಡಿಯೋ ಕ್ಲಿಪ್‌ಗಳಾಗಿ ರಚಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಈ ಆಯ್ಕೆಯಿಂದಾಗಿ ಇನ್ಮುಂದೆ ಸ್ಕ್ರೀನ್‌ ರೆಕಾರ್ಡ್‌ ಮಾಡಲು ಯಾವುದೇ ಥರ್ಡ್‌ ಪಾರ್ಟ್‌ ಅಪ್ಲಿಕೇಶನ್‌ಗೆ ಮೊರೆಹೋಗಬೇಕಿಲ್ಲ.

ಈ ಫೀಚರ್ಸ್‌ ಬಳಕೆ ಹೇಗೆ?

ಈ ಫೀಚರ್ಸ್‌ ಬಳಕೆ ಹೇಗೆ?

ಬಳಕೆದಾರರು ಸ್ನಿಪ್ಪಿಂಗ್ ಟೂಲ್ ಅನ್ನು ಓಪನ್‌ ಮಾಡಿದ ನಂತರ ವಿಂಡೋದ ಮೇಲ್ಭಾಗದಲ್ಲಿ ಸ್ನಿಪ್‌ ಎಂಬ ಆಯ್ಕೆಯ ಮುಂದೆ ರೆಕಾರ್ಡ್ ಎಂಬ ಟ್ಯಾಬ್ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಸಂಪೂರ್ಣ ಡಿಸ್‌ಪ್ಲೇಯನ್ನು ರೆಕಾರ್ಡ್ ಮಾಡಲು ಬಯಸದ ಬಳಕೆದಾರರು ಯಾವ ವಿಭಾಗ ರೆಕಾರ್ಡ್‌ ಆಗಬೇಕೋ ಆ ವಿಭಾಗವನ್ನು ಹೈಲೈಟ್‌ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಈ ವಿಡಿಯೋ ಕ್ಲಿಪ್‌ ಅನ್ನು ಶೇರ್‌ ಅಥವಾ ಎಡಿಟ್‌ ಮಾಡಿಕೊಳ್ಳುವ ಮುನ್ನ ವೀಕ್ಷಣೆ ಮಾಡಲು ಸಹ ಅನುಕೂಲ ಕಲ್ಪಿಸಲಾಗಿದೆ.

ಡಿವೈಸ್‌ ನಿಧಾನವಾಗುತ್ತದೆಯೇ?

ಡಿವೈಸ್‌ ನಿಧಾನವಾಗುತ್ತದೆಯೇ?

ಈ ಸೌಲಭ್ಯದ ಮೂಲಕ ವಿಡಿಯೋ ರೆಕಾರ್ಡ್‌ ಮಾಡಿಕೊಳ್ಳಲು ಮುಂದಾದರೆ ಡಿವೈಸ್‌ ನಿಧಾನವಾಗುವ ಸಂಭವ ಹೆಚ್ಚಿಗೆ ಇರುತ್ತದೆ ಅಥವಾ ಸಿಸ್ಟಂ ರೀಸ್ಟಾರ್ಟ್‌ ಆಗಬಹುದು ಎನ್ನುವುದು ಬಹುಪಾಲು ಜನರ ಅನಿಸಿಕೆ. ಈ ಕಾರಣಕ್ಕೆ ಈ ದೋಷ ಕಂಡು ಬರಬಾರದು ಹಾಗೂ ಇದನ್ನು ನಿವಾರಿಸಬೇಕು ಎಂದುಕೊಂಡಿರುವ ಮೈಕ್ರೋಸಾಫ್ಟ್‌, ಫೀಡ್‌ಬ್ಯಾಕ್‌ ಹಬ್ ಮೂಲಕ ಸಂಸ್ಥೆಗೆ ಮಾಹಿತಿ ನೀಡಲು ಕೋರಿದೆ. ಇದರಿಂದ ಈ ಸಮಸ್ಯೆಗೆ ಅವರು ಪ್ರತಿಕ್ರಿಯಿಸಿ ಪರಿಹಾರ ಮಾರ್ಗವನ್ನು ನೀಡಲು ಮುಂದಾಗಲಿದ್ದಾರೆ.

ಈ ಮೊದಲು ಥರ್ಡ್‌ ಪಾರ್ಟಿ ಆಪ್‌ ಬಳಸಬೇಕಿತ್ತು

ಈ ಮೊದಲು ಥರ್ಡ್‌ ಪಾರ್ಟಿ ಆಪ್‌ ಬಳಸಬೇಕಿತ್ತು

ವಿಂಡೋಸ್‌ಗೆ ಸ್ಥಳೀಯವಾಗಿ ಸ್ಕ್ರೀನ್ ರೆಕಾರ್ಡಿಂಗ್ ಫೀಚರ್ಸ್‌ ನೀಡಲಾಗಿದ್ದು, ಮೈಕ್ರೋಸಾಫ್ಟ್‌ನ ಈ ನಿರ್ಧಾರವನ್ನು ಹಲವರು ಸ್ವಾಗತಿಸುತ್ತಾರೆ. ಯಾಕೆಂದರೆ ಹಲವಾರು ಬಳಕೆದಾರರು ಈ ಸೇವೆ ಪಡೆಯಲು ಕ್ಯಾಮ್‌ ಸ್ಟುಡಿಯೋ ಅಥವಾ ಕ್ಯಾಮ್ಟಾಸಿಯಾ ಸ್ಟುಡಿಯೋ ನಂತಹ ಥರ್ಡ್‌ ಪಾರ್ಟಿ ಆಪ್‌ಗಳನ್ನು ಬಳಕೆ ಮಾಡಿಕೊಂಡು ರೆಕಾರ್ಡ್‌ ಮಾಡಲು ಮುಂದಾಗುತ್ತಿದ್ದರು. ಆದರೆ ಇನ್ಮುಂದೆ ಇವುಗಳ ಬಳಕೆ ಕಡಿಮೆಯಾಗಲಿದೆ.

ಎಕ್ಸ್ ಬಾಕ್ಸ್ ಗೇಮ್ ಬಾರ್

ಅದರಂತೆ ಎಕ್ಸ್ ಬಾಕ್ಸ್ ಗೇಮ್ ಬಾರ್ ಸಹ ಇದೇ ರೀತಿಯ ಸೇವೆ ನೀಡುತ್ತಿದೆಯಾದರೂ ಇದು ಆಟಗಳನ್ನು ರೆಕಾರ್ಡ್ ಮಾಡಲು ಮಾತ್ರ ವಿನ್ಯಾಸಗೊಳಿಸಲಾಗಿದೆ. ಆದರೆ, ಸ್ನಿಪ್ಪಿಂಗ್ ಟೂಲ್‌ನಲ್ಲಿನ ಹೊಸ ಸೌಲಭ್ಯ ವಿಡಿಯೋಗಳನ್ನು ಅಥವಾ ಇನ್ಯಾವುದೇ ಮಾಹಿತಿಯನ್ನು ರೆಕಾರ್ಡ್‌ ಮಾಡಿಕೊಳ್ಳಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಆಧುನಿಕ

ನಾಲ್ಕು ವರ್ಷಗಳ ಹಿಂದೆ ಸ್ನಿಪ್ಪಿಂಗ್ ಟೂಲ್‌ ಗೆ ಆಧುನಿಕ ರೂಪ ನೀಡಲಾಗಿದ್ದು, ಇದಾದ ನಂತರ ಮೈಕ್ರೋಸಾಫ್ಟ್ ನಿರಂತರವಾಗಿ ನವೀಕರಿಸಿಕೊಂಡು ಬರುತ್ತಿದೆ. ಅದರಲ್ಲೂ ಕಳೆದ ವರ್ಷ ಸ್ನಿಪ್ಪಿಂಗ್ ಟೂಲ್ ಮತ್ತು ಸ್ನಿಪ್ & ಸ್ಕೆಚ್ ಅಪ್ಲಿಕೇಶನ್‌ಗಳನ್ನು ಒಂದುಗೂಡಿಸಲಾಗಿತ್ತು. ಈ ಹೊಸ ನವೀಕರಣಗಳು ಅಸ್ತಿತ್ವದಲ್ಲಿರುವ ವಿಂಡೋಸ್‌ 11 ಗೆ ಉತ್ತಮವಾಗಿದೆಯಾದರೂ ವಿಶ್ವಾದ್ಯಂತ ವಿಂಡೋಸ್‌ 11 ಅನ್ನು 15 ರಿಂದ 25 ಪ್ರತಿಶತದಷ್ಟು ಮಾತ್ರ ಬಳಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ನವೆಂಬರ್ 2022 ಸಮೀಕ್ಷೆಯಲ್ಲಿ ಬಳಕೆದಾರರ ಹಂಚಿಕೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದರೂ ಸಹ ಈ ಬೆಳವಣಿಗೆಯು ವಿಂಡೋಸ್‌ 10 ಗಿಂತ ತುಂಬಾ ನಿಧಾನವಾಗಿದೆ ಎಂದು ಹೇಳಲಾಗುತ್ತಿದೆ.

Best Mobiles in India

English summary
Snipping tool to receive screen recording function in Windows 11.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X