Subscribe to Gizbot

ಫೇಸ್‌ಬುಕ್ ಅನ್ನು ಡಿಲೀಟ್ ಮಾಡಿ ಎನ್ನುತ್ತಿದ್ದಾರೆ ವಾಟ್ಸ್ಆಪ್ ಸಂಸ್ಥಾಪಕ!!

Written By:

ನೆನ್ನೆಯಷ್ಟೆ ಭಾರೀ ನಷ್ಟಕ್ಕೆ ಗುರಿಯಾಗಿದ್ದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಮತ್ತೊಂದು ಗಂಭೀರ ಸಮಸ್ಯೆ ಎದುರಾಗಿದೆ.! ಲಕ್ಷಾಂತರ ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್‌ ಅಕ್ರಮವಾಗಿ ಬಳಕೆ ಮಾಡಿಕೊಂಡಿದೆ ಎಂಬ ವಿವಾದ ಶುರುವಾದ ನಂತರ ವಾಟ್ಸ್‌ಆಪ್‌ನ ಸಹ ಸಂಸ್ಥಾಪಕ "ಫೇಸ್‌ಬುಕ್ ಅನ್ನು ಅಳಿಸಲು ಇದು ಸಮಯ" ಎಂದು ಹೇಳಿದ್ದಾರೆ.!!

ಹೌದು, ಜನಪ್ರಿಯ ಇನ್‌ಸ್ಟೆಂಟ್ ಮೆಸೇಜಿಂಗ್ ಆಪ್ ಸೃಷ್ಟಿಕರ್ತರು ಮತ್ತು ಸಂಸ್ಥಾಪಕರಲ್ಲಿ ಒಬ್ಬರಾದ ಬ್ರಿಯಾನ್ ಆಕ್ಟನ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ "ಫೇಸ್‌ಬುಕ್ ಅನ್ನು ಡಿಲೀಟ್ ಮಾಡಲು ಇದು ಸಮಯ" ಎಂದು ಹೇಳುವ ಮೂಲಕ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಬ್ರಿಯಾನ್ ಆಕ್ಟನ್ ಅವರು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ ಸಂದೇಶ ಕೆಲವೇ ಕ್ಷಣಗಳಲ್ಲಿ ಭಾರೀ ವೈರೆಲ್ ಆಗಿದೆ.!!

ಫೇಸ್‌ಬುಕ್ ಅನ್ನು ಡಿಲೀಟ್ ಮಾಡಿ ಎನ್ನುತ್ತಿದ್ದಾರೆ ವಾಟ್ಸ್ಆಪ್ ಸಂಸ್ಥಾಪಕ!!

ಬ್ರಿಯಾನ್ ಆಕ್ಟನ್ ಅವರು ತಮ್ಮ ಟ್ವಿಟ್‌ನಲ್ಲಿ it is time #deletefacebook ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿರುವುದು ಭಾರೀ ವೃರೆಲ್ ಆಗಲು ಕಾರಣವಾಗಿದೆ. ಫೇಸ್‌ಬುಕ್‌ ಅನ್ನು ಡಿಲೀಟ್ ಮಾಡಿ ಎಂದು ಬ್ರಿಯಾನ್ ಆಕ್ಟನ್ ಅವರು ಏಕೆ ಹೇಳಿದರು ಎಂಬುದು ಇನ್ನು ಕುತೋಹಲವಾಗಿಯೇ ಉಳಿದಿದ್ದರೂ, ಲಕ್ಷಾಂತರ ಬಳಕೆದಾರರ ಡೇಟಾ ಅಕ್ರಮ ಬಳಕೆ ವಿವಾವದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.!

ಫೇಸ್‌ಬುಕ್ ಅನ್ನು ಡಿಲೀಟ್ ಮಾಡಿ ಎನ್ನುತ್ತಿದ್ದಾರೆ ವಾಟ್ಸ್ಆಪ್ ಸಂಸ್ಥಾಪಕ!!

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ಒಡೆಯ ಮಾರ್ಕ್ ಜುಕರ್‌ಬರ್ಗ್‌ಗೆ ನೆನ್ನೆಯೂ ಸಂಕಷ್ಟ ಎದುರಾಗಿತ್ತು. 50 ಮಿಲಿಯನ್ ಜನರ ಡೇಟಾವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದ ತಕ್ಷಣವೇ ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ಸಂಸ್ಥೆಯ ಶೇರುಗಳು ಪಾತಾಳಕ್ಕಿಳಿದಿದ್ದವು.!!

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಕಳೆದ ವಾರ 5ನೇ ಸ್ಥಾನದಲ್ಲಿದ್ದ ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕೇವಲ ಒಂದೇ ದಿನದಲ್ಲಿ 10ನೇ ಸ್ಥಾನಕ್ಕೆ ಕುಸಿದಿದ್ದರು. ಜನರ ಡೇಟಾವನ್ನು ದುರ್ಬಳಕೆ ಮಾಡಿರುವ ಬಗ್ಗೆ ತನಿಖೆ ಶುರುವಾದ ನಂತರ ಜುಕರ್‌ಬರ್ಗ್ ಆಸ್ತಿ ಮೌಲ್ಯ ಒಂದೇ ದಿನದಲ್ಲಿ 5.1 ಬಿಲಿಯನ್‌ನಷ್ಟು ಕುಸಿಗೊಂಡಿದೆ ಎಂದು ತಿಳಿದುಬಂದಿತ್ತು!!

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಓದಿರಿಫೇಸ್‌ಬುಕ್ ಒಡೆಯನಿಗೆ ಭಾರೀ ಸಂಕಷ್ಟ!..ಕೇವಲ ಒಂದೇ ದಿನದಲ್ಲಿ ಕಳೆದುಕೊಂಡ ಸಂಪತ್ತು ಇಷ್ಟು!!

English summary
Brian Acton has posted a message on his Twitter simply by saying “it’s time” to “#deletefacebook”. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot