ಯೋಧರನ್ನು ಸ್ಮಾರ್ಟ್ ಫೋನ್ ಬಳಸದಂತೆ ನಿರ್ಬಂಧಿಸಬಾರದು..!

By Lekhaka
|

ಯೋಧರು ಸಹ ಸ್ಮಾರ್ಟ್ ಫೋನ್ ಬಳಕೆ ಮಾಡಲು ಅವಕಾಶ ನೀಡಬೇಕು ಆದರೆ ಅದನ್ನು ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಭಾರತಿಯ ಸೇನೆ ಮುಖ್ಯಸ್ಥ ಬಿಪಿನ್ ರಾವತ್ ಅಭಿಪ್ರಾಯಪಟ್ಟಿದ್ದಾರೆ. ಸೇನೆಯ ಮುಖ್ಯಸ್ಥರಾಗಿದ್ದರೂ ಸಹ ಬಿಪಿನ್ ರಾವತ್ ಸೆಲ್ ಫೋನ್ ಬಳಕೆ ಮಾಡುತ್ತಿಲ್ಲ ಎನ್ನಲಾಗಿದೆ. ಇದಲ್ಲದೇ ಸೋಶಿಯಲ್ ಮೀಡಿಯಾ ಬಳಕೆ ಮಾಡುವುದರಿಂದಲೂ ಯೋಧರನ್ನು ನಿರ್ಬಂಧಿಸಬಾರದು ಎನ್ನಲಾಗಿದೆ.

ಯೋಧರನ್ನು ಸ್ಮಾರ್ಟ್ ಫೋನ್ ಬಳಸದಂತೆ ನಿರ್ಬಂಧಿಸಬಾರದು..!

ಯೋಧರು ಸೋಶಿಯಲ್ ಮೀಡಿಯಾ ಮತ್ತು ಸ್ಮಾರ್ಟ್ ಫೋನ್ ಬಳಕೆ ಮಾಡುವುದಕ್ಕೆ ನಿರ್ಬಂಧ ವಿಧಿಸುವ ಬದಲು ನಿಯಂತ್ರಿತವಾಗಿ ಸೋಶಿಯಲ್ ಮೀಡಿಯಾ ಮತ್ತು ಸ್ಮಾರ್ಟ್ ಫೋನ್ ಬಳಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಬೇಕು ಎಂದು ಅವರು ತಿಳಿಸಿದ್ದಾರೆ. ಯೋಧರು ಸಹ ಆಧುನೀಕ ಸಂವಹನದ ಲಾಭವನ್ನು ಪಡೆಯಲು ಅವಕಾಶ ನೀಡಬೇಕು ಎಂದಿದ್ದಾರೆ.

ಇಂದಿನ ದಿನದಲ್ಲಿ ಸೋಶಿಯಲ್ ಮೀಡಿಯಾ ವೇಗವಾಗಿ ಬೆಳೆಯುತ್ತಿದೆ. ಇದನ್ನು ನಾವು ಅಳವಡಿಸಿಕೊಳ್ಳದೆ ಹೋದರೆ ತೀರಾ ಹಿಂದೆ ಉಳಿಯುತ್ತೆವೆ ಎಂದಿರುವ ಅವರು, ನಾವು ವೇಗವಾಗಿ ಅಭಿವೃದ್ಧಿ ಹೊಂದಬೇಕಾದರೆ ಇವುಗಳ ಬಗ್ಗೆ ಮಾಹಿತಿಯನ್ನು ಹೊಂದಿರ ಬೇಕಾಗುತ್ತದೆ. ಯೋಧರಿಗೂ ಇವುಗಳ ಅವಶ್ಯಕತೆ ಇದೆ ಎಂದಿದ್ದಾರೆ.

ದೇಶ ಕಾಯುವ ಯೋಧರು ಸ್ಮಾರ್ಟ್ ಫೋನ್ ಬಳಕೆಯನ್ನು ಮಾಡಬೇಕು. ಕುಟುಂಬ ಮತ್ತು ಸ್ನೇಹಹಿತರನ್ನು ಬಿಟ್ಟು ದೂರ ಇರುತ್ತಾರೆ. ಆದರೆ ಸ್ಮಾರ್ಟ್ ಫೋನ್ ಅವರನ್ನು ಒಂದು ಗೂಡಿಸುತ್ತದೆ. ಇದರಿಂದಾಗಿ ಅವರು ಸೋಶಿಯಲ್ ಮೀಡಿಯಾ ಮತ್ತು ಸ್ಮಾರ್ಟ್ ಫೋನ್ ಬಳಕೆ ಮಾಡಲು ಅವಕಾಶ ನೀಡಬೇಕು, ಆದರೆ ಇದಕ್ಕೆ ಮಿತಿಯನ್ನು ವಿಧಿಸಬೇಕು ಎಂದು ಅಭಿಪ್ರಾಯವನ್ನು ಪಟ್ಟಿದ್ದಾರೆ.

ಯೋಧರು ಸಾಮಾನ್ಯರಂತೆ ಆಪ್ಡೇಟ್ ಆಗಿರುವ ಸಲುವಾಗಿ ಸೋಶಿಯಲ್ ಮೀಡಿಯಾ ಮತ್ತು ಸ್ಮಾರ್ಟ್ ಫೋನ್ ಅಗತ್ಯ ಎಂದಿರುವ ಸೇನಾ ಮುಖ್ಯಸ್ಥರು. ಇವುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಎನ್ನುವ ಬದಲು ಅವರು ಮಿತಿಯಲ್ಲಿ ಬಳಕೆ ಮಾಡಿದರೆ ಎಲ್ಲಾ ಮಾದರಿಯಲ್ಲಿಯೂ ಉಪಯೋಗವಾಗಲಿದ.

ಇಂದಿನ ಆಧುನೀಕ ಯುಗದಲ್ಲಿ ಮಾಹಿತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಸೈನಿಕರು ಸೋಶಿಯಲ್ ಮೀಡಿಯಾ ಮತ್ತು ಸ್ಮಾರ್ಟ್ ಫೋನ್ ಪಡೆದುಕೊಳ್ಳುವ ಮೂಲಕ ಅವರು ಮಾಹಿತಿಯನ್ನು ಪಡೆದುಕೊಂಡು ಆಪ್ ಡೇಟ್ ಆಗಬಹುದಾಗಿದೆ.

ಇದಲ್ಲದೇ ಯೋಧರ ಸೋಶಿಯಲ್ ಮೀಡಿಯಾ ಮತ್ತು ಸ್ಮಾರ್ಟ್ ಫೋನ್ ಬಳಕೆ ಮಾಡುವುದಕ್ಕಾಗಿಯೇ ಹೊಸದೊಂದು ನಿಯಮವನ್ನು ಜಾರಿಗೆ ತರಬೇಕು ಎಂದು ಸೇನೆ ಮುಖ್ಯಸ್ಥ ಬಿಪಿನ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.

Best Mobiles in India

English summary
Soldiers should be allowed to use smartphones, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X