ಭಾರತದಲ್ಲಿ ಸೋನಿ ಸಂಸ್ಥೆಯಿಂದ ದುಬಾರಿ ಬೆಲೆಯ ಸ್ಮಾರ್ಟ್‌ಟಿವಿ ಬಿಡುಗಡೆ!

|

ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಸೋನಿ ಕಂಪೆನಿ ತನ್ನದೇ ಆದ ಜನಪ್ರಿಯತೆಯನ್ನು ಹೊಂದಿದೆ. ವಿಭಿನ್ನ ಗಾತ್ರದ ಆಯ್ಕೆಯಲ್ಲಿ ಹಲವು ಆಕರ್ಷಕ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಸೋನಿ ಕಂಪೆನಿ ಭಾರತದಲ್ಲಿ ತನ್ನ ಹೊಸ ಸೋನಿ ಬ್ರಾವಿಯಾ XR OLED A80K ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯ ಟಿವಿಗಳು ಮೂರು ವಿಭಿನ್ನ ಗಾತ್ರದ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಇದರಲ್ಲಿ 55 ಇಂಚು, 65 ಇಂಚು, 77 ಇಂಚು ಆಯ್ಕೆಗಳು ಸೇರಿವೆ.

ಸೋನಿ

ಹೌದು, ಸೋನಿ ಕಂಪೆನಿ ಭಾರತದಲ್ಲಿ ಹೊಸ ಸೋನಿ ಬ್ರಾವಿಯಾ XR OLED A80K ಟಿವಿ ಸರಣಿ ಪರಿಚಯಿಸಿದೆ. ಸೋನಿ ಕಂಪೆನಿಯ ಅಲ್ಟ್ರಾ-ಹೆಚ್‌ಡಿ ಒಎಲ್‌ಇಡಿ ಟಿವಿಗಳು ಕಾಗ್ನಿಟಿವ್ ಪ್ರೊಸೆಸರ್ XR ನಿಂದ ರನ್‌ ಆಗಲಿವೆ. ಆದರಿಂದ ಭಾರತದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಮತ್ತು ತಾಂತ್ರಿಕವಾಗಿ ಮುಂದುವರಿದ ಸ್ಮಾರ್ಟ್‌ಟಿವಿಗಳು ಎನಿಸಿಕೊಂಡಿವೆ. ಇದಲ್ಲದೆ ಡಾಲ್ಬಿ ಅಟ್ಮಾಸ್ ಆಡಿಯೊಗೆ ಬೆಂಬಲವನ್ನು ನೀಡಲಿದ್ದು, ಡಾಲ್ಬಿ ವಿಷನ್ ಫಾರ್ಮ್ಯಾಟ್‌ನವರೆಗೆ HDR ಅನ್ನು ಬೆಂಬಲಿಸಲಿದೆ.

ಸೋನಿ

ಇನ್ನು ಸೋನಿ ಬ್ರಾವಿಯಾ XR OLED A80K ಸ್ಮಾರ್ಟ್‌ಟಿವಿ ಗೂಗಲ್‌ ಟಿವಿ ಯೂಸರ್‌ ಇಂಟರ್‌ಫೇಸ್‌ ಹೊಂದಿದ್ದು, ಆಂಡ್ರಾಯ್ಡ್‌ ಟಿವಿ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಸರಣಿಯ ಸ್ಮಾರ್ಟ್‌ಟಿವಿಗಳು ಅಕೌಸ್ಟಿಕ್ ಸರ್ಫೇಸ್ ಆಡಿಯೋ ಮತ್ತು XR ಸರೌಂಡ್ ತಂತ್ರಜ್ಞಾನವನ್ನು ಹೊಂದಿವೆ. ಜೊತೆಗೆ IMAX ವರ್ಧಿತ ಮತ್ತು ನೆಟ್‌ಫ್ಲಿಕ್ಸ್ ಅಡಾಪ್ಟಿವ್ ಕ್ಯಾಲಿಬ್ರೇಟೆಡ್ ಮೋಡ್‌ ಫೀಚರ್ಸ್‌ಗಳನ್ನು ಕೂಡ ನೀಡಲಾಗಿದೆ. ಇನ್ನುಳಿದಂತೆ ಸೋನಿ ಬ್ರಾವಿಯಾ XR OLED A80K ಸ್ಮಾರ್ಟ್‌ಟಿವಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಬ್ರಾವಿಯಾ XR OLED A80K ಸ್ಮಾರ್ಟ್‌ಟಿವಿ ವಿಶೇಷತೆ ಏನು?

ಸೋನಿ ಬ್ರಾವಿಯಾ XR OLED A80K ಸ್ಮಾರ್ಟ್‌ಟಿವಿ ವಿಶೇಷತೆ ಏನು?

ಸೋನಿ XR OLED A80K ಸ್ಮಾರ್ಟ್‌ಟಿವಿ 3840x2160 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಸರಣಿಯ ಸ್ಮಾರ್ಟ್‌ಟಿವಿಗಳು 55 ಇಂಚು, 65 ಇಂಚು, 77 ಇಂಚಿನ ಆಯ್ಕೆಯ ಡಿಸ್‌ಪ್ಲೇ ಗಾತ್ರದ ಆಯ್ಕೆಯಲ್ಲಿ ದೊರೆಯಲಿವೆ. ಇನ್ನು ಈ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್, HDR10 ಮತ್ತು HLG ಫಾರ್ಮ್ಯಾಟ್‌ಗಳೊಂದಿಗೆ ಹೆಚ್ಚಿನ ಡೈನಾಮಿಕ್ ಶ್ರೇಣಿಯ ವಿಷಯಕ್ಕೆ ಬೆಂಬಲವನ್ನು ನೀಡಲಿದೆ. ಈ ಹೊಸ ಸ್ಮಾರ್ಟ್‌ಟಿವಿ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ನೊಂದಿಗೆ HDMI 2.1 ಬೆಂಬಲಿತವಾಗಿದೆ.

ಕಾರ್ಯವೈಖರಿ ಹೇಗಿರಲಿದೆ?

ಕಾರ್ಯವೈಖರಿ ಹೇಗಿರಲಿದೆ?

ಸೋನಿ ಬ್ರಾವಿಯಾ XR OLED A80K ಸರಣಿಯು ಕಾಗ್ನಿಟಿವ್ ಪ್ರೊಸೆಸರ್ XR ನಿಂದ ರನ್‌ ಆಗಲಿದೆ. ಇದು ಆಂಡ್ರಾಯ್ಡ್‌ ಟಿವಿ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರಿಂದ ಸ್ಮಾರ್ಟ್‌ಟಿವಿ ವಿಷಯ ಮತ್ತು ವೀಕ್ಷಣಾ ಪರಿಸ್ಥಿತಿಗಳ ಆಧಾರದ ಮೇಲೆ ಉತ್ತಮ ಮತ್ತು ಹೆಚ್ಚು ಹೊಂದಾಣಿಕೆಯ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಪ್ರೊಸೆಸರ್ ಪಿಕ್ಚರ್ ಕ್ವಾಲಿಟಿ ನೈಜತೆಯಿಂದ ಕೂಡಿದ ಗುಣಮಟ್ಟವನ್ನು ನೀಡುತ್ತದೆ. ಅಲ್ಲದೆ XR ಟ್ರೈಲುಮಿನೋಸ್ ಪ್ರೊ ತಂತ್ರಜ್ಞಾನವನ್ನು ಬಳಸಿಕೊಂಡು ಒಂದು ತಲ್ಲೀನಗೊಳಿಸುವ ಅನುಭವವನ್ನು ನೀಡುವ ನ್ಯಾಚುರಲ್‌ ಕಲರ್‌ ಪ್ರಿಪ್ರೊಡಕ್ಷನ್‌ ಮಾಡಲಿದೆ.

ಬ್ರಾವಿಯಾ

ಇನ್ನು ಬ್ರಾವಿಯಾ XR OLED A80K ಟಿವಿಗಳಲ್ಲಿ IMAX ವರ್ಧಿತ ಮತ್ತು ನೆಟ್‌ಫ್ಲಿಕ್ಸ್ ಅಡಾಪ್ಟಿವ್ ಕ್ಯಾಲಿಬ್ರೇಟೆಡ್ ಮೋಡ್‌ನಂತಹ ಫೀಚರ್ಸ್‌ಗಳನ್ನು ನೀಡಲಾಗಿದೆ. ಇದಲ್ಲದೆ ಡಾಲ್ಬಿ ಅಟ್ಮೋಸ್‌ ಮತ್ತು ಡಿಟಿಎಸ್‌ ಫಾರ್ಮ್ಯಾಟ್‌ಗಳಿಗೆ ಸಹ ಬೆಂಬಲವನ್ನು ನೀಡಲಿದೆ. ಇನ್ನು ಸೋನಿ XR OLED A80K ಸರಣಿಯು ಅಕೌಸ್ಟಿಕ್ ಸರ್ಫೇಸ್ ಆಡಿಯೋ ಮತ್ತು XR ಸರೌಂಡ್ ತಂತ್ರಜ್ಞಾನಗಳನ್ನು ಹೊಂದಿದೆ. ಇದರಲ್ಲಿ 55 ಇಂಚಿನ ಮತ್ತು 65 ಇಂಚಿನ ರೂಪಾಂತರದ ಸ್ಮಾರ್ಟ್‌ಟಿವಿಗಳು 50W ಸೌಂಡ್‌ ಔಟ್‌ಪುಟ್‌ ನೀಡಲಿವೆ. ಆದರೆ 77 ಇಂಚಿನ ಸ್ಮಾರ್ಟ್‌ಟಿವಿ 60W ರೇಟ್ ಔಟ್‌ಪುಟ್‌ ನೀಡಲಿದೆ.

ಸ್ಮಾರ್ಟ್‌ಟಿವಿ

ಈ ಸ್ಮಾರ್ಟ್‌ಟಿವಿ ಆಟೋ ಲೋ-ಲೇಟೆನ್ಸಿ ಮೋಡ್ (ALLM), ವೇರಿಯಬಲ್ ರಿಫ್ರೆಶ್ ರೇಟ್ (VRR) ಮತ್ತು ಆಟೋ ಗೇಮ್ ಮೋಡ್‌ನಂತಹ ಗೇಮಿಂಗ್-ಕೇಂದ್ರಿತ ಫೀಚರ್ಸ್‌ಗಳನ್ನು ಕೂಡ ಒಳಗೊಂಡಿದೆ. ಇದರೊಂದಿಗೆ ಸೋನಿ XR OLED A80K ಸ್ಮಾರ್ಟ್‌ಟಿವಿ ಪ್ರಮುಖ ಸ್ಟ್ರೀಮಿಂಗ್ ಸೇವೆಗಳಾದ ನೆಟ್‌ಫ್ಲಿಕ್ಸ್‌, ಯುಟ್ಯೂಬ್‌, ಅಮೆಜಾನ್‌ ಪ್ರೈಮ್‌ ವೀಡಿಯೊ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸೇರಿದಂತೆ ಹಲವು ಪ್ರಮುಖ ಅಪ್ಲಿಕೇಶನ್‌ಗಳನ್ನು ಬೆಂಬಲಿಸಲಿದೆ. ಇವುಗಳನ್ನು ಸ್ಮಾರ್ಟ್‌ಟಿವಿಯಲ್ಲಿ ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಕಂಟೆಂಟ್‌ ಅನ್ನು ಸ್ಮಾರ್ಟ್‌ಟಿವಿಯಲ್ಲಿ ಪ್ಲೇ ಮಾಡಲು ಇಂಟರ್‌ಬಿಲ್ಟ್‌ ಗೂಗಲ್‌ ಕ್ರೋಮಾಕಾಸ್ಟ್‌ ಅನ್ನು ಹೊಂದಿದೆ.

ಬ್ರಾವಿಯಾ

ಸೋನಿ ಬ್ರಾವಿಯಾ XR OLED A80K ಸ್ಮಾರ್ಟ್‌ಟಿವಿ ಆಪಲ್‌ ಏರ್‌ಪ್ಲೇ 2 ಮತ್ತು ಬಾಹ್ಯ ಸಾಧನಗಳೊಂದಿಗೆ ಕನೆಕ್ಟ್‌ ಮಾಡುವುದಕ್ಕೆ ಹೋಮ್‌ಕಿಟ್‌ ಬೆಂಬಲವನ್ನು ಪಡೆದಿದೆ. ಅಲ್ಲದೆ ಸ್ಮಾರ್ಟ್‌ಟಿವಿಯನ್ನು ಗೂಗಲ್‌ ಅಸಿಸ್ಟೆಂಟ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸುವುದಕ್ಕೆ ಅವಕಾಶವಿದೆ. ಹಾಗೆಯೇ ಡಾಲ್ಬಿ ಅಟ್ಮಾಸ್ ಆಡಿಯೊಗೆ ಬೆಂಬಲವನ್ನು ನೀಡಲಿದ್ದು, ಡಾಲ್ಬಿ ವಿಷನ್ ಫಾರ್ಮ್ಯಾಟ್‌ನವರೆಗೆ HDR ಅನ್ನು ಬೆಂಬಲಿಸಲಿದೆ. ಆದರಿಂದ ಭಾರತದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಸ್ಮಾರ್ಟ್‌ಟಿವಿ ಎನಿಸಿಕೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಸೋನಿ ಬ್ರಾವಿಯಾ XR OLED A80K ಟಿವಿ ಸರಣಿಯನ್ನು ಮೂರು ಗಾತ್ರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮೊದಲನೆಯ ಆಯ್ಕೆಯಾದ 55 ಇಂಚಿನ ಸ್ಮಾರ್ಟ್‌ಟಿವಿಯ ಬೆಲೆ ಭಾರತದಲ್ಲಿ ಇನ್ನು ನಿಗದಿಯಾಗಿಲ್ಲ. ಆದರೆ 65 ಇಂಚಿನ ಸ್ಮಾರ್ಟ್‌ಟಿವಿ ಆಯ್ಕೆಯ ಬೆಲೆ 2,79,990ರೂ.ಆಗಿದೆ. ಹಾಗೆಯೇ 77 ಇಂಚಿನ ಆಯ್ಕೆಯ ಸ್ಮಾರ್ಟ್‌ಟಿವಿ ಭಾರತದಲ್ಲಿ 6,99,900ರೂ.ಬೆಲೆಯನ್ನು ಪಡೆದುಕೊಂಡಿದೆ.

ಸೋನಿ

ಈ ಸ್ಮಾರ್ಟ್‌ಟಿವಿಗಳು ಭಾರತದಲ್ಲಿ ಸೋನಿ ಸೆಂಟರ್ ಸ್ಟೋರ್‌ಗಳು, ಎಲೆಕ್ಟ್ರಾನಿಕ್ಸ್ ಸ್ಟೋರ್‌ಗಳು ಮತ್ತು ಪ್ರಮುಖ ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಖರೀದಿಸಲು ಲಭ್ಯವಿದೆ. ಇನ್ನು ಮೊದಲನೇ ಆಯ್ಕೆಯಾದ 55 ಇಂಚಿನ ರೂಪಾಂತರದ ಟಿವಿಯನ್ನು ಭಾರತದಲ್ಲಿ ಶೀಘ್ರದಲ್ಲೇ ಮಾರಾಟ ಮಾಡಲಾಗುವುದು ಎಂದು ಸೋನಿ ಕಂಪೆನಿ ಹೇಳಿದೆ. ಈ ಸ್ಮಾರ್ಟ್‌ಟಿವಿಗಳು ಎಲ್‌ಜಿ, ಸ್ಯಾಮ್‌ಸಂಗ್‌ ಕಂಪೆನಿಯ ಟಿವಿಗಳೊಂದಿಗೆ ಪೈಪೋಟಿ ನಡೆಸಲಿವೆ. ಲಾಂಚ್‌ ಆಫರ್‌ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
Sony Bravia XR OLED A80K series Smart Tv Range launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X