ಭಾರತದಲ್ಲಿ ಸೋನಿ ಬ್ರಾವಿಯಾ XR X90K ಟಿವಿ ಸರಣಿ ಅನಾವರಣ! ಬೆಲೆ ಎಷ್ಟು?

|

ಸೋನಿ ಕಂಪೆನಿ ತನ್ನ ಗುಣಮಟ್ಟದ ಸ್ಮಾರ್ಟ್‌ಟಿವಿಗಳಿಗೆ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇದೀಗ ತನ್ನ ಹೊಸ ಸೋನಿ ಬ್ರಾವಿಯಾ XR X90K ಟಿವಿ ಸರಣಿಯನ್ನು ಅನಾವರಣಗೊಳಿಸಿದೆ. ಈ ಸರಣಿಯು 75-ಇಂಚಿನ, 65-ಇಂಚಿನ ಮತ್ತು 55-ಇಂಚಿನ ಡಿಸ್‌ಪ್ಲೇ ಗಾತ್ರದಲ್ಲಿ ಮೂರು ಮಾದರಿಗಳನ್ನು ಒಳಗೊಂಡಿದೆ. ಈ ಮಾಡೆಲ್‌ಗಳು 4K ಅಪ್‌ಸ್ಕೇಲಿಂಗ್ ತಂತ್ರಜ್ಞಾನವನ್ನು ಬೆಂಬಲಿಸುವ ಕಾಗ್ನಿಟಿವ್ ಪ್ರೊಸೆಸರ್ ಎಕ್ಸ್‌ಆರ್‌ ಅನ್ನು ಒಳಗೊಂಡಿವೆ.

ಸೋನಿ

ಹೌದು, ಸೋನಿ ಕಂಪೆನಿ ಹೊಸದಾಗಿ ಸೋನಿ ಬ್ರಾವಿಯಾ XR X90K ಟಿವಿ ಸರಣಿಯನ್ನು ಪರಿಚಯಿಸಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು ಲೈಫ್‌ಲೈಕ್ ಕಾಂಟ್ರಾಸ್ಟ್ ಅನ್ನು ತಲುಪಿಸಲು XR ಟ್ರೈಲುಮಿನೋಸ್ ಪ್ರೊ ತಂತ್ರಜ್ಞಾನದೊಂದಿಗೆ ಫುಲ್ ಅರೇ ಎಲ್‌ಇಡಿ ಪ್ಯಾನೆಲ್ ಅನ್ನು ಒಳಗೊಂಡಿವೆ. ಇದಲ್ಲದೆ ಡಾಲ್ಬಿ ಅಟ್ಮಾಸ್, ಅಕೌಸ್ಟಿಕ್ ಮಲ್ಟಿ-ಆಡಿಯೋ ಮತ್ತು 3D ಸರೌಂಡ್ ಅಪ್‌ಸ್ಕೇಲಿಂಗ್ ತಂತ್ರಜ್ಞಾನವನ್ನು ಒಳಗೊಂಡಿವೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೋನಿ ಬ್ರಾವಿಯಾ XR X90K ಸರಣಿ

ಸೋನಿ ಬ್ರಾವಿಯಾ XR X90K ಸರಣಿಯ ಸ್ಮಾರ್ಟ್ ಟಿವಿಗಳು ಒಂದೇ ರೀತಿಯ ಫೀಚರ್ಸ್‌ಗಳನ್ನು ಒಳಗೊಂಡಿವೆ. ಈ ಸ್ಮಾರ್ಟ್‌ಟಿವಿಗಳ ಫುಲ್ ಅರೇ LED ಸ್ಕ್ರೀನ್‌ಗಳು 3,840x2,160 ಪಿಕ್ಸೆಲ್‌ ರೆಸಲ್ಯೂಶನ್ ಅನ್ನು ಹೊಂದಿವೆ. ಅಲ್ಲದೆ 100Hz ನ ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸುತ್ತವೆ. ಇದಲ್ಲದೆ ಕಾಗ್ನಿಟಿವ್ ಪ್ರೊಸೆಸರ್ XR ಅನ್ನು ಒಳಗೊಂಡಿದ್ದು, ಸ್ಪಷ್ಟ ಮತ್ತು ಬ್ರೈಟ್‌ನೆಸ್‌ ವಿಶ್ಯುಯಲ್‌ಗಳಿಗಾಗಿ XR 4K ಅಪ್‌ಸ್ಕೇಲಿಂಗ್ ಮತ್ತು XR ಮೋಷನ್ ಕ್ಲಾರಿಟಿ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

ಸ್ಮಾರ್ಟ್‌ಟಿವಿಗಳಲ್ಲಿ

ಇನ್ನು ಈ ಸ್ಮಾರ್ಟ್‌ಟಿವಿಗಳಲ್ಲಿ ಗೇಮಿಂಗ್‌ ಅನುಭವಕ್ಕಾಗಿ 120 fps, ವೇರಿಯಬಲ್ ರಿಫ್ರೆಶ್ ರೇಟ್ ಮತ್ತು ಆಟೋ ಲೋ ಲೇಟೆನ್ಸಿ ಮೋಡ್ ನಲ್ಲಿ 4K ವೀಡಿಯೊಗಳನ್ನು ಬೆಂಬಲಿಸಲು HDMI 2.1 ಗೆ ಸೆಟ್‌ ಮಾಡಲಾಗಿದೆ. ಇದಲ್ಲದೆ, ಆಟೋಮ್ಯಾಟಿಕ್‌ ಆಂಬಿಯೆಂಟ್‌ ಆಪ್ಟಿಮೈಸೇಶನ್ಗಾಗಿ ಲೈಟ್‌ ಸೆನ್ಸಾರ್‌ನೊಂದಿಗೆ ಕೂಡ ಅಳವಡಿಸಲಾಗಿದೆ. ಈ ಟಿವಿಗಳಲ್ಲಿ ಎರಡು ಫುಲ್‌ ರೇಂಜ್‌ ಬಾಸ್-ರಿಫ್ಲೆಕ್ಸ್ ಸ್ಪೀಕರ್‌ಗಳು ಮತ್ತು 40W ನ ಸಂಯೋಜಿತ ಆಡಿಯೊ ಔಟ್‌ಪುಟ್ ಅನ್ನು ನೀಡುವ ಎರಡು ಟ್ವೀಟರ್‌ಗಳನ್ನು ಅಳವಡಿಸಲಾಗಿದೆ. ಹಾಗೆಯೇ X90K ಸರಣಿಯ ಆಡಿಯೋ ಕಾರ್ಯಕ್ಷಮತೆಯನ್ನು ಡಾಲ್ಬಿ ಅಟ್ಮಾಸ್, XR ಸೌಂಡ್ ಪೊಸಿಷನ್, ಅಕೌಸ್ಟಿಕ್ ಮಲ್ಟಿ-ಆಡಿಯೋ ಮತ್ತು 3D ಸರೌಂಡ್ ಅಪ್‌ಸ್ಕೇಲಿಂಗ್‌ನಂತಹ ತಂತ್ರಜ್ಞಾನಗಳಿಂದ ವರ್ಧಿಸಲಾಗಿದೆ.

ಗೂಗಲ್‌

ಇದಲ್ಲದೆ ಬ್ರಾವಿಯಾ XR X90K ಸರಣಿಯು ಗೂಗಲ್‌ ಟಿವಿಯಲ್ಲಿ ರನ್‌ ಆಗಲಿದೆ. ಇದು ಗೂಗಲ್‌ ಪ್ಲೇ ನಿಂದ ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಅಲ್ಲದೆ ಐಪ್ಯಾಡ್‌ಗಳು ಮತ್ತು ಐಫೋನ್‌ಗಳನ್ನು ಕನೆಕ್ಟ್‌ ಮಾಡುವುದಕ್ಕಾಗಿ ಆಪಲ್‌ ಹೋಮ್‌ಕಿಟ್‌ ಮತ್ತು ಏರ್‌ಪ್ಲೇಯನ್ನು ಸಹ ಬೆಂಬಲಿಸುತ್ತವೆ. ಹಾಗೆಯೇ 12 ತಿಂಗಳ ಸ್ಟ್ರೀಮಿಂಗ್ ಚಂದಾದಾರಿಕೆಯೊಂದಿಗೆ 5 ಪ್ರಸ್ತುತ ಅಥವಾ ಕ್ಲಾಸಿಕ್ ಚಲನಚಿತ್ರಗಳನ್ನು ರಿಡೀಮ್ ಮಾಡಲು ಗ್ರಾಹಕರಿಗೆ ಅನುಮತಿಸುವ ಬ್ರಾವಿಯಾ ಕೋರ್ ಅಪ್ಲಿಕೇಶನ್ ಅನ್ನು ಕೂಡ ನೀಡಲಾಗಿದೆ.

ಸೋನಿ

ಪ್ರಸ್ತುತ ಭಾರತದಲ್ಲಿ ಸೋನಿ ಬ್ರಾವಿಯಾ XR-55X90K ಸ್ಮಾರ್ಟ್‌ಟಿವಿ ಸೋನಿ ShopAtSC ಆನ್‌ಲೈನ್ ಸ್ಟೋರ್‌ನಲ್ಲಿ 1,23,490ರೂ.ಬೆಲೆ ಹೊಂದಿದೆ. ಅಲ್ಲದೆ, ಬ್ರಾವಿಯಾ XR-65X90K ಸ್ಮಾರ್ಟ್‌ಟಿವಿ ShopAtSC ಸೈಟ್‌ನಲ್ಲಿ 1,70,990ರೂ.ಬೆಲೆಗೆ ದೊರೆಯಲಿದೆ. ಇನ್ನು ಬ್ರಾವಿಯಾ XR-75X90K ಸ್ಮಾರ್ಟ್‌ಟಿವಿ ಬೆಲೆಯ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಈ ಸ್ಮಾರ್ಟ್ ಟಿವಿಗಳು ಭಾರತದ ಎಲ್ಲಾ ಸೋನಿ ಸೆಂಟರ್‌ಗಳು, ಪ್ರಮುಖ ಚಿಲ್ಲರೆ ಅಂಗಡಿಗಳು ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಲಭ್ಯವಿರುತ್ತವೆ.

Best Mobiles in India

Read more about:
English summary
Sony Bravia XR X90K Smart TV Series Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X