ಸೋನಿ ದೀಪಾವಳಿ ಆಫರ್‌: ಹೆಡ್‌ಫೋನ್‌, ಸ್ಪೀಕರ್ಸ್‌, ಸೌಂಡ್‌ಬಾರ್‌ಗಳಿಗೆ ಭಾರೀ ರಿಯಾಯಿತಿ!

|

ಹಬ್ಬಗಳ ಸೀಸನ್‌ ಹಿನ್ನೆಲೆ ಈಗಾಗಲೇ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಆಕರ್ಷಕ ಕೊಡುಗೆಗಳನ್ನು ನೀಡಿವೆ. ಹಾಗೆಯೇ ಜನಪ್ರಿಯ ಆಡಿಯೋ ಕಂಪೆನಿ ಸೋನಿ ಸಹ ತನ್ನ ಉತ್ಪನ್ನಗಳಿಗೆ ವಿಶೇಷ ರಿಯಾಯಿತಿ ಘೋಷಿಸಿದೆ. ಈ ಕೊಡುಗೆಯಲ್ಲಿ ಸೋನಿ ಕಂಪೆನಿಯ ಹೆಡ್‌ಫೋನ್‌, ಸ್ಪೀಕರ್ಸ್‌, ಸೌಂಡ್‌ಬಾರ್ ಸೇರಿದಂತೆ ಇನ್ನಿತರ ಪ್ರಮುಖ ಡಿವೈಸ್‌ಗಳಿಗೆ ಆಫರ್‌ ನೀಡಿದೆ.

ಸೋನಿ

ಹೌದು, ಭಾರತದಲ್ಲಿ ಸೋನಿ ಕಂಪೆನಿಯು ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಸೇಲ್‌ ಆರಂಭಿಸಿದೆ. ಈ ಆಫರ್‌ ಅಕ್ಟೋಬರ್‌ 5 ರ ವರೆಗೆ ಇರಲಿದೆ. ಈ ಕೊಡುಗೆಯಲ್ಲಿ ಆಕರ್ಷಕ ಕ್ಯಾಶ್‌ಬ್ಯಾಕ್‌ ಆಫರ್‌ ಲಭ್ಯವಾಗಲಿದೆ. ಜೊತೆಗೆ 6 ತಿಂಗಳ ಲೋ ಕಾಸ್ಟ್‌ ಇಎಂಐ ಸೌಲಭ್ಯ ನೀಡಲಾಗಿದೆ. ಗ್ರಾಹಕರು ಸೋನಿ ಆಡಿಯೋ ಡಿವೈಸ್‌ಗಳನ್ನು ಆಫ್‌ಲೈನ್‌ ಹಾಗೂ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ.

ಸೋನಿ WH-1000XM5 ವಾಯರ್‌ಲೆಸ್‌ ಹೆಡ್‌ಪೋನ್‌

ಸೋನಿ WH-1000XM5 ವಾಯರ್‌ಲೆಸ್‌ ಹೆಡ್‌ಪೋನ್‌

ಈ ವಾಯರ್‌ಲೆಸ್‌ ಹೆಡ್‌ಫೋನ್‌ನ್ನು ಸೋನಿ ತುಂಬಾ ಕಡಮೆ ಬೆಲೆಗೆ ನೀಡುತ್ತಿದೆ. ಇದರ ಮೂಲ ಬೆಲೆ 34,990 ರೂ. ಇದ್ದು, ಇದನ್ನು ನೀವು 26,990 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. DSEE ಎಕ್ಸ್‌ಟ್ರೀಮ್ ಮತ್ತು ಹೈ-ರೆಸ್ ಆಡಿಯೊ ಬೆಂಬಲವನ್ನು ನೀಡುವ ಇದು ಇನ್‌ಬಿಲ್ಟ್‌ ಮೈಕ್ರೊಫೋನ್‌ ಆಯ್ಕೆ ಪಡೆದಿದ್ದು, ನಾಯ್ಸ್ ಕ್ಯಾನ್ಸಲೇಶನ್‌ ಫೀಚರ್‌ ಒಳಗೊಂಡಿದೆ. ಜೊತೆಗೆ 30 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಕೇವಲ 3 ನಿಮಿಷದ ಚಾರ್ಜ್‌ನಲ್ಲಿ ಗಂಟೆಗಳ ಪ್ಲೇಬ್ಯಾಕ್ ನೀಡಲಿದೆ.

ಸೋನಿ  WH-CH510 ಹೆಡ್‌‌ಫೋನ್‌

ಸೋನಿ WH-CH510 ಹೆಡ್‌‌ಫೋನ್‌

WH-CH510 ಹೆಡ್‌ಫೋನ್‌ ಅನ್ನು ನೀವು ಕೇವಲ 2,299 ರೂ.ಗಳಿಗೆ ಖರೀದಿ ಮಾಡಬಹುದು. ಇದರ ಮೂಲ ಬೆಲೆ 4,990 ರೂ.ಗಳಾಗಿದೆ. 30 ಎಂಎಂ ಡ್ರೈವರ್, ಬ್ಲೂಟೂತ್‌ ಆವೃತ್ತಿ 5.0 ಆಯ್ಕೆ ಪಡೆದಿರುವ ಈ ಹೆಡ್‌ಫೋನ್‌ 35 ಗಂಟೆಗಳವರೆಗೆ ಪ್ಲೇಟೈಮ್ ನೀಡಲಿದೆ. ಇದು ಲೈಟ್‌ವೈಟ್ ಆಗಿದ್ದು, ಟೈಪ್-ಸಿ ಕೇಬಲ್‌ ಬೆಂಬಲದ ಜೊತೆಗೆ ಪ್ಲೇ/ಪಾಸ್ ಕಂಟ್ರೋಲ್ ಬಟನ್‌ಗಳನ್ನು ಒಳಗೊಂಡಿದೆ.

ಸೋನಿ Inzone H9 ಗೇಮಿಂಗ್‌ ಹೆಡ್‌ಫೋನ್‌

ಸೋನಿ Inzone H9 ಗೇಮಿಂಗ್‌ ಹೆಡ್‌ಫೋನ್‌

ಸೋನಿ Inzone H9 ಹೆಡ್‌ಫೋನ್‌ನ ಸಾಮಾನ್ಯ ದರ 27,990 ರೂ. ಇದ್ದು, ಇದನ್ನು ಸೋನಿ 21,990 ರೂ.ಗಳಿಗೆ ನೀಡಲಿದೆ. ಡ್ಯುಯಲ್ ಸೆನ್ಸರ್ ನಾಯ್ಸ್ ಕ್ಯಾನ್ಸೆಲಿಂಗ್ ತಂತ್ರಜ್ಞಾನ ಇದರಲ್ಲಿದ್ದು, ಮೃದುವಾದ ಹೆಡ್‌ಬ್ಯಾಂಡ್ ಕುಶನ್ ಮತ್ತು ಸಿಂಥೆಟಿಕ್ ಲೆದರ್ ಇಯರ್ ಪ್ಯಾಡ್‌ಗಳು ಇದರಲ್ಲಿದೆ. ಒಮ್ಮೆ ಚಾರ್ಜ್‌ ಮಾಡಿದರೆ 32 ಗಂಟೆಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದು.

ಸೋನಿ SRS-XB13 ಬ್ಲೂಟೂತ್ ಸ್ಪೀಕರ್

ಸೋನಿ SRS-XB13 ಬ್ಲೂಟೂತ್ ಸ್ಪೀಕರ್

ಈ ಡಿವೈಸ್‌ 4,990 ರೂ. ಗಳ ಸಾಮಾನ್ಯ ದರ ಹೊಂದಿದ್ದು, ಇದನ್ನು ನೀವು 3,299 ರೂ.ಗಳಿಗೆ ಖರೀದಿ ಮಾಡಬಹುದು. ಎಕ್ಸ್‌ಟ್ರಾ ಬೇಸ್‌ ಪೋರ್ಟಬಲ್ ಕಾಂಪ್ಯಾಕ್ಟ್ ಬ್ಲೂಟೂತ್ ಸ್ಪೀಕರ್ ಜೊತೆಗೆ 16 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಇದು ವಾಟರ್ ಪ್ರೂಫ್ ಮತ್ತು ಡಸ್ಟ್ ಪ್ರೂಫ್ ಡಿವೈಸ್‌ ಆಗಿದ್ದು, ಬಿಲ್ಟ್-ಇನ್ ಮೈಕ್ ಮೂಲಕ ನೇರವಾಗಿ ಹ್ಯಾಂಡ್ಸ್-ಫ್ರೀ ಕರೆ ಮಾಡಬಹುದಾಗಿದೆ. ಒಂದೇ ಟ್ಯಾಪ್‌ನಲ್ಲಿ ಆಂಡ್ರಾಯ್ಡ್‌ ಸಾಧನದೊಂದಿಗೆ ತ್ವರಿತವಾಗಿ ಸಂಪರ್ಕಗೊಳ್ಳುತ್ತದೆ.

ಸೋನಿ HT-S40R ಸೌಂಡ್‌ಬಾರ್

ಸೋನಿ HT-S40R ಸೌಂಡ್‌ಬಾರ್

ಈ ಡಿವೈಸ್‌ನ್ನು 24,990 ರೂ. ನೀಡಿ ಖರೀದಿಸಬಹುದು. ಇದರ ಮೂಲ ಬೆಲೆ 34,990 ರೂ. ಗಳಾಗಿದೆ. ಡಾಲ್ಬಿ ಆಡಿಯೋ ಸೌಲಭ್ಯದೊಂದಿಗೆ ಸಬ್ ವೂಫರ್ ಮತ್ತು ವೈರ್‌ಲೆಸ್ ರಿಯರ್ ಸ್ಪೀಕರ್‌ ಆಯ್ಕೆ ಪಡೆದಿದೆ. ಇದು 5.1ch ಹೋಮ್ ಥಿಯೇಟರ್ ಸಿಸ್ಟಮ್ ಆಯ್ಕೆಯ ಜೊತೆಗೆ ಬ್ಲೂಟೂತ್ ಮತ್ತು USB, HDMI ಕನೆಕ್ಟಿವಿಟಿ ಫೀಚರ್ಸ್‌ ಪಡೆದಿದೆ.

ಸೋನಿ WF-1000XM3 ವೈರ್‌ಲೆಸ್ ಇಯರ್‌ಬಡ್ಸ್

ಸೋನಿ WF-1000XM3 ವೈರ್‌ಲೆಸ್ ಇಯರ್‌ಬಡ್ಸ್

ಸೋನಿ ಇಯರ್‌ಬಡ್ಸ್ WF-1000XM3 ಅನ್ನು 7,990 ರೂ.ಗಳಿಗೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಇದರ ಮೂಲ ದರ 19,990 ರೂ.ಗಳಾಗಿದೆ. ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಆಯ್ಕೆಯ ಜೊತೆಗೆ ಬ್ಲೂಟೂತ್ 5.0 ಆವೃತ್ತಿಯ ಆಯ್ಕೆ ಪಡೆದಿದೆ. ಇದು ಅಲೆಕ್ಸಾ ವಾಯ್ಸ್ ಕಂಟ್ರೋಲ್ ಸೌಲಭ್ಯದ ಜೊತೆಗೆ 32 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ.

Best Mobiles in India

English summary
Sony India Company has given a great deal to their leading devices. Here we describe some device price and specs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X