ಸೋನಿ ದೀಪಾವಳಿ ಸೇಲ್‌: ಈ ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್

|

ದೀಪಾವಳಿ ಹಬ್ಬ ಇನ್ನೇನು ಹತ್ತಿರದಲ್ಲಿದ್ದು, ಇದಕ್ಕೆ ಅನುಗುಣವಾಗಿ ಹಲವಾರು ಇ- ಕಾಮರ್ಸ್‌ ತಾಣಗಳು ಸ್ಮಾರ್ಟ್‌ಗ್ಯಾಜೆಟ್‌ಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿವೆ. ಅದರಲ್ಲೂ ಫ್ಲಿಪ್‌ಕಾರ್ಟ್‌, ಅಮೆಜಾನ್‌, ರಿಯಲ್‌ಮಿ ಹಾಗೂ ರಿಲಯನ್ಸ್‌ ಸೇರಿದಂತೆ ಇನ್ನಿತರೆ ಪ್ರಮುಖ ಕಂಪೆನಿಗಳು ತಮ್ಮ ಡಿವೈಸ್‌ಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿವೆ. ಇದೇ ರೀತಿ ಆಡಿಯೋ ವಿಭಾಗದಲ್ಲಿ ಜನಪ್ರಿಯಗೊಂಡಿರುವ ಸೋನಿ ಸಹ ದೀಪಾವಳಿ ಹಿನ್ನೆಲೆ ಆಫರ್‌ ಘೋಷಣೆ ಮಾಡಿದೆ.

 ದೀಪಾವಳಿ ಆಫರ್‌

ಹೌದು, ಸೋನಿಯ ದೀಪಾವಳಿ ಆಫರ್‌ ಸೇಲ್‌ನಲ್ಲಿ ಕೇವಲ ಆಡಿಯೋ ಡಿವೈಸ್‌ಗಳಿಗಷ್ಟೇ ಅಲ್ಲದೆ ಕ್ಯಾಮೆರಾಗಳಿಗೂ ಈ ಆಫರ್‌ ಅನ್ವಯ ಆಗಲಿದೆ. ಜೊತೆಗೆ ಕೆಲವು ಬ್ಯಾಂಕ್‌ ಕಾರ್ಡ್‌ಗಳಲ್ಲಿ ಖರೀದಿ ಮಾಡಿದರೆ ರಿಯಾಯಿತಿ ಹಾಗೂ ಕ್ಯಾಶ್‌ಬ್ಯಾಕ್‌ ಸಹ ನೀಡಲಾಗುತ್ತದೆ. ಪ್ರೊಡಕ್ಟ್‌ಗಳಿಗೆ ಇಎಂಐ ಆಯ್ಕೆ ಸಹ ನೀಡಲಾಗಿದ್ದು, ಸೋನಿ ಡಿವೈಸ್‌ಗಳನ್ನು ಕೊಂಡುಕೊಳ್ಳಲು ಇದು ಸೂಕ್ತ ಸಮಯವಾಗಿದೆ. ಈ ಸೇಲ್‌ನಲ್ಲಿ ಪ್ರಮುಖವಾಗಿ ಸೋನಿ ಕಂಪೆನಿಯ ಕೆಲವು ಆಯ್ದ ಕ್ಯಾಮೆರಾ ಲೆನ್ಸ್‌ ಹಾಗೂ ಕ್ಯಾಮೆರಾಗಳ ಮೇಲೆ ರಿಯಾಯಿತಿ ಜೊತೆಗೆ ಸಾವಿರಾರು ಮೌಲ್ಯದ ಇತರೆ ಗ್ಯಾಜೆಟ್‌ಗಳನ್ನು ಸಹ ಉಚಿತವಾಗಿ ನೀಡಲಿದೆ. ಹಾಗಿದ್ರೆ ಯಾವ ಪ್ರೊಡಕ್ಟ್‌ಗಳಿಗೆ ಎಷ್ಟು ಬೆಲೆ?, ಯಾವ ಪ್ರೊಡಕ್ಟ್‌ ಕೊಂಡರೆ ಯಾವುದು ಉಚಿತವಾಗಿ ಸಿಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬ್ರಾವಿಯಾ ಟಿವಿಗಳಿಗೆ ಡಿಸ್ಕೌಂಟ್‌

ಬ್ರಾವಿಯಾ ಟಿವಿಗಳಿಗೆ ಡಿಸ್ಕೌಂಟ್‌

ಸೋನಿ ಕಂಪೆನಿಯು ತನ್ನ ಬ್ರಾವಿಯಾ ಸರಣಿ ಸ್ಮಾರ್ಟ್‌ಟಿವಿಗಳ ಮೇಲೆ 30% ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಈ ಸ್ಮಾರ್ಟ್‌ಟಿವಿಗಳು 4K ಹಾಗೂ 120 fps ಡಿಸ್‌ಪ್ಲೇ ಪಡೆದಿವೆ. ಜೊತೆಗೆ ಈ ಸ್ಮಾರ್ಟ್‌ಟಿವಿಗಳು ಗೂಗಲ್‌ ಟಿವಿ ಬೆಂಬಲದ ಜೊತೆಗೆ ಡಾಲ್ಬಿ ಅಡ್ಮಾಸ್‌ ಹಾಗೂ ಡಾಲ್ಬಿ ವಿಷನ್‌ನಂತಹ ಆಯ್ಕೆಗಳನ್ನು ಈ ಪಡೆದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ಖರೀದಿಯಲ್ಲಿ ಬರೋಬ್ಬರಿ 25,000ರೂ. ಗಳ ವೆರೆಗೂ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಇಷ್ಟೇ ಅಲ್ಲದೆ, ಉಚಿತ ಇಎಂಐ ಆಯ್ಕೆಯನ್ನೂ ಸಹ ಈ ಸ್ಮಾರ್ಟ್‌ ಟಿವಿಗಳಿಗೆ ನೀಡಲಾಗಿದೆ.

ಹೆಡ್‌ಫೋನ್‌, ಇಯರ್‌ ಬಡ್ಸ್‌ಗಳಿಗೆ ರಿಯಾಯಿತಿ

ಹೆಡ್‌ಫೋನ್‌, ಇಯರ್‌ ಬಡ್ಸ್‌ಗಳಿಗೆ ರಿಯಾಯಿತಿ

ಸೋನಿ ಕಂಪೆನಿ ಪ್ರಮುಖವಾಗಿ ಆಡಿಯೋ ವಿಭಾಗದಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿದೆ. ಈ ದೀಪಾವಳಿ ಆಫರ್‌ನಲ್ಲಿ ನೀವು ಭರ್ಜರಿ ಡಿಸ್ಕೌಂಟ್‌ ಜೊತೆಗೆ ಆಡಿಯೋ ಡಿವೈಸ್‌ಗಳನ್ನು ಕೊಂಡುಕೊಳ್ಳಬಹುದಾಗಿದೆ. ಈ ಸೇಲ್‌ನಲ್ಲಿ ಸೌಂಡ್‌ಬಾರ್‌, ಹೆಡ್‌ಫೋನ್‌, ಬ್ಲೂಟೂತ್‌ ಸ್ಪೀಕರ್‌ ಹಾಗೂ ಇಯರ್‌ ಬಡ್‌ಗಳು ರಿಯಾಯಿತಿ ನೀಡಲಾಗಿದೆ. ಇದರಲ್ಲಿ ಪ್ರಮುಖ ಆಡಿಯೋ ಡಿವೈಸ್‌ಗಳು ಬರೋಬ್ಬರಿ 54,990ರೂ. ಗಳ ರಿಯಾಯಿತಿ ಪಡೆದುಕೊಂಡಿವೆ.

ಹೆಡ್‌ಫೋನ್‌

ಇನ್ನುಳಿದಂತೆ ಹೆಡ್‌ಫೋನ್‌ ಹಾಗೂ ಇಯರ್‌ಬಡ್ಸ್‌ಗಳಿಗೂ ವಿಶೇಷ ರಿಯಾಯಿತಿ ನೀಡಲಾಗಿದೆ. ನಾಯ್ಸ್‌ ಕ್ಯಾನ್ಸಲೇಶನ್‌ ಆಯ್ಕೆ ಇರುವ ಸ್ಮಾರ್ಟ್‌‌ ಡಿವೈಸ್‌ಗಳಿಗೆ ಆಕರ್ಷಕ ಕೊಡುಗೆ ನೀಡಲಾಗಿದೆ. ಅದರಲ್ಲೂ ಸೋನಿ WH-100XM5 ಹೆಡ್‌ಫೋನ್‌ನ್ನು 26,990ರೂ. ಗಳಿಗೆ ಮಾರಾಟ ಮಾಡುತ್ತಿದೆ. ಹಾಗೆಯೇ SRS-XG300 ಬ್ಲೂಟೂತ್ ಸ್ಪೀಕರ್‌ಗಳನ್ನು 27,990ರೂ. ಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಕ್ಯಾಮೆರಾಗಳಿಗೆ ಕೊಡುಗೆ

ಕ್ಯಾಮೆರಾಗಳಿಗೆ ಕೊಡುಗೆ

ಇನ್ನು ಕ್ಯಾಮೆರಾ ವಿಭಾಗದಲ್ಲೂ ಸೋನಿ ಕಂಪೆನಿ ಅದ್ಭುತ ಆಫರ್‌ ನೀಡಿದೆ. ಆಲ್ಪಾ 7SIII ಮತ್ತು ಆಲ್ಪಾ7C ನಂತಹ ಪೂರ್ಣ-ಫ್ರೇಮ್ ಕ್ಯಾಮೆರಾಗಳನ್ನು ಖರೀದಿ ಮಾಡಿದರೆ ಗ್ರಾಹಕರು ಬರೋಬ್ಬರಿ 14,990ರೂ. ಮೌಲ್ಯದ ಪ್ರೀಮಿಯಂ ನಾಯ್ಸ್‌ ಕ್ಯಾನ್ಸಲೇಶನ್‌ ಆಯ್ಕೆ ಇರುವ ಹೆಡ್‌ಫೋನ್‌ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಆಲ್ಪಾ 7SIII

ಇಷ್ಟೇ ಅಲ್ಲದೆ, ಗ್ರಾಹಕರು ಆಲ್ಪಾ 7SIII ಕ್ಯಾಮೆರಾ ಜೊತೆಗೆ ಇನ್ನೂ ಹೆಚ್ಚಿನ ಕೊಡುಗೆಗಳನ್ನು ಪಡೆಯಬಹುದಾಗಿದೆ. ಅದರಲ್ಲಿ 9,990ರೂ. ಮೌಲ್ಯದ ಪ್ರೊ ಸ್ಟೈಲ್‌ ಕ್ಯಾಮೆರಾ ಬ್ಯಾಕ್‌ಅಪ್‌ನ್ನು ಈ ಆಲ್ಪಾ 7SIII ಕ್ಯಾಮೆರಾ ಕ್ಯಾಮೆರಾ ಖರೀದಿಸಿದರೆ ಉಚಿತವಾಗಿ ನೀಡಲಾಗುತ್ತಿದೆ. ಇದರೊಂದಿಗೆ ಆಯ್ದ ಲೆನ್ಸ್‌ಗಳ ಮೇಲೂ ಸೋನಿ 41,000ರೂ. ಗಳವರೆಗೂ ಡಿಸ್ಕೌಂಟ್‌ ಘೋಷಿಸಿದೆ.

Best Mobiles in India

English summary
Sony company has announced an offer in the background of Diwali festival. If you buy some Sony devices, you can get free some devices worth thousands of rupees.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X