ಭಾರತದಲ್ಲಿ ಹೊಸ ಪಾರ್ಟಿ ಸ್ಪೀಕರ್‌ ಲಾಂಚ್‌ ಮಾಡಿದ ಸೋನಿ! ಬೆಲೆ ಎಷ್ಟು?

|

ಸೋನಿ ಕಂಪೆನಿ ತನ್ನ ಗುಣಮಟ್ಟದ ಸ್ಪೀಕರ್‌ಗಳಿಗೆ ಹೆಸರುವಾಸಿಯಾಗಿದೆ. ಭಿನ್ನ ಮಾದರಿಯ ಹಲವು ಸ್ಪೀಕರ್‌ಗಳನ್ನು ಭಾರತದಲ್ಲಿ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ X ಸರಣಿಯಲ್ಲಿ ಹೊಸ SRS-XV900 ಪಾರ್ಟಿ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ. ಇದಕ್ಕೆ 'ಮೋಸ್ಟ್‌ ಪವರ್‌ಫುಲ್‌ ಆಂಡ್‌ ಲೌಂಡೆಸ್ಟ್‌ ಎಂದು ಕೂಡ ಹೆಸರಿಸಲಾಗಿದೆ. ಇನ್ನು ಈ ಸ್ಪೀಕರ್‌ 25 ಗಂಟೆಗಳ ಬ್ಯಾಟರಿ ಬಾಳಿಕೆ ಮತ್ತು ಟಿವಿ ಸೌಂಡ್ ಬೂಸ್ಟರ್ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಸೋನಿ

ಹೌದು, ಸೋನಿ ಕಂಪೆನಿ ಭಾರತದಲ್ಲಿ ಹೊಸ ಸೋನಿ SRS-XV900 ಪಾರ್ಟಿ ಸ್ಪೀಕರ್ ಲಾಂಚ್‌ ಮಾಡಿದೆ. ಈ ಸ್ಪೀಕರ್‌ ಒಮ್ನಿ ಡೈರೆಕ್ಷನಲ್‌ ಸೌಂಡ್‌ ಅನ್ನು ಒದಗಿಸಲಿದೆ. ಜೊತೆಗೆ ಡೀಪ್‌ ಮತ್ತು ಪಂಚಿಯರ್‌ ಬಾಸ್‌ ಔಟ್‌ಪುಟ್‌ ಅನ್ನು ಆಕ್ಟಿವ್‌ ಮಾಡಲು ವೃತ್ತಾಕಾರದ ಡಾಯಾಫ್ರಾಮ್‌ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಪೀಕರ್‌ನಲ್ಲಿ ಮಿಡ್‌ರೇಂಜ್‌ ಡ್ರೈವರ್‌ಗಳು ಮತ್ತು ಟ್ವಿಟರ್‌ಗಳನ್ನು ಸಹ ನೀಡಲಾಗಿದೆ. ಹಾಗಾದ್ರೆ ಈ ಹೊಸ ಸೋನಿ SRS-XV900 ಪಾರ್ಟಿ ಸ್ಪೀಕರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ SRS-XV900 ಪಾರ್ಟಿ ಸ್ಪೀಕರ್ ಫೀಚರ್ಸ್‌ ಹೇಗಿದೆ?

ಸೋನಿ SRS-XV900 ಪಾರ್ಟಿ ಸ್ಪೀಕರ್ ಫೀಚರ್ಸ್‌ ಹೇಗಿದೆ?

ಸೋನಿ SRS-XV900 ಪಾರ್ಟಿ ಸ್ಪೀಕರ್ ಮೆಗಾ ಬಾಸ್ ಫೀಚರ್ಸ್‌ ಅನ್ನು ಬೆಂಬಲಿಸಲಿದೆ. ಮೋಸ್ಟ್‌ ಪವರ್‌ಫುಲ್‌ ಆಂಡ್‌ ಲೌಂಡೆಸ್ಟ್‌ ಎಂಬ ಹೆಸರಿಗೆ ತಕ್ಕಂತೆ ಅತ್ಯುತ್ತಮ ಸೌಂಡ್‌ ಸಿಸ್ಟಂ ಅನ್ನು ನೀಡಲಿದೆ. ನಿಮ್ಮ ಮನೆಯಲ್ಲಿ ಲೈವ್‌ ಮ್ಯೂಸಿಕ್‌ ಅನುಭವಕ್ಕಾಗಿ ಇದರಲ್ಲಿ ಲೈವ್ ಸೌಂಡ್ ಮೋಡ್‌ನೊಂದಿಗೆ ವರ್ಧಿತ ಔಟ್‌ಪುಟ್‌ಗಾಗಿ ಬಾಸ್ ಅನ್ನು ಟ್ಯೂನ್ ಮಾಡಲು ಅವಕಾಶ ನೀಡಲಿದೆ. ಜೊತೆಗೆ ಈ ಸ್ಪೀಕರ್‌ ಟಿವಿ ಸೌಂಡ್ ಬೂಸ್ಟರ್ ಫೀಚರ್ಸ್‌ ಕೂಡ ಹೊಂದಿದ್ದು, ಸ್ಪೀಕರ್ ಟಿವಿಗೆ ಕನೆಕ್ಟ್‌ ಆಗಿದ್ದಾಗ ಆಡಿಯೊ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡಲಿದೆ.

ಆಪ್ಟಿಕಲ್

ಈ ಸ್ಪೀಕರ್‌ ಅನ್ನು ನೀವು ಸ್ಮಾರ್ಟ್‌ಟಿವಿಗೆ ಆಪ್ಟಿಕಲ್ ಕೇಬಲ್ ಮೂಲಕ ಸಂಪರ್ಕಿಸಬೇಕಾಗುತ್ತದೆ. ಅಲ್ಲದೆ ಟಿವಿ ಸೌಂಡ್ ಬೂಸ್ಟರ್ ಮೋಡ್ ಅನ್ನು ಉತ್ತಮ ಆಡಿಯೊ ಅನುಭವಕ್ಕಾಗಿ ಸಕ್ರಿಯಗೊಳಿಸಬಹುದಾಗಿದೆ. ಇದರೊಂದಿಗೆ ಈ ಸ್ಪೀಕರ್‌ ಓಮ್ನಿಡೈರೆಕ್ಷನಲ್ ಸೌಂಡ್‌ ಅನ್ನು ನೀಡಲಿದೆ. ಜೊತೆಗೆ ಡೀಪ್‌ ಮತ್ತು ಪಂಚಿಯರ್ ಬಾಸ್ ಔಟ್‌ಪುಟ್ ಅನ್ನು ಆಕ್ಟಿವ್‌ ಮಾಡಲು ವೃತ್ತಾಕಾರದ ಡಯಾಫ್ರಾಮ್ ಅನ್ನು ಹೊಂದಿದೆ.

ಸೋನಿ

ಇನ್ನು ಸೋನಿ SRS-XV900 ಪಾರ್ಟಿ ಸ್ಪೀಕರ್‌ ಕನೆಕ್ಟ್ ಫೀಚರ್ಸ್‌ ಅನ್ನು ಕೂಡ ಒಳಗೊಂಡಿದೆ. ಇದರಿಂದ ಬ್ಲೂಟೂತ್ ಮೂಲಕ 100 ಸೋನಿ ಸ್ಪೀಕರ್‌ಗಳನ್ನು ಕನೆಕ್ಟ್‌ ಮಾಡಲು 'ಲೈಟ್ ಮತ್ತು ಸೌಂಡ್ ಶೋ' ಫೀಲ್ಸ್, USB ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಅಲ್ಲದೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಕೂಡ ಇದರಲ್ಲಿ ಚಾರ್ಜ್ ಮಾಡಬಹುದಾಗಿದೆ. ಹೆಚ್ಚುವರಿಯಾಗಿ, ಈ ಸ್ಪೀಕರ್‌ನಲ್ಲಿ ಗಾಲಿಗಳು ಮತ್ತು ಅನುಕೂಲಕರ ಹ್ಯಾಂಡಲ್ ಅನ್ನು ಕೂಡ ನೀಡಲಾಗಿದೆ. ಇದರಿಂದ ಸ್ಪೀಕರ್‌ ಅನ್ನು ಸುಲಭವಾಗಿ ಸಾಗಿಸಬಹುದಾಗಿದೆ.

ಸೋನಿ

ಇದಲ್ಲದೆ ಸೋನಿ SRS-XV900 ಸ್ಪೀಕರ್‌ ವೇಗದ ಚಾರ್ಜಿಂಗ್‌ ಬೆಂಬಲವನ್ನು ಪಡೆದಿದೆ. ಇದರಿಂದ ಸ್ಪೀಕರ್‌ ಅನ್ನು ನೀವು ಕೇವಲ 10 ನಿಮಿಷ ಚಾರ್ಜ್‌ ಮಾಡಿದರೆ 3 ಗಂಟೆಗಳವರೆಗೆ ಪ್ಲೇಬ್ಯಾಕ್ ಟೈಂ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಬ್ಯಾಟರಿ ಕೇರ್ ಮೋಡ್ ಫೀಚರ್ಸ್‌ ಅನ್ನು ಸಹ ನೀಡಲಾಗಿದೆ. ಜಾಮಿಂಗ್ ಸೆಷನ್‌ಗಳಿಗಾಗಿ ಸ್ಪೀಕರ್ ಅನ್ನು ಮೈಕ್ ಮತ್ತು ಗಿಟಾರ್‌ನೊಂದಿಗೆ ಜೋಡಿಸಬಹುದು. ಇದು ಸೋನಿ ಮ್ಯೂಸಿಕ್ ಸೆಂಟರ್ ಮತ್ತು ಫಿಸ್ಟೆಬಲ್ ಅಪ್ಲಿಕೇಶನ್‌ಗಳೆರಡಕ್ಕೂ ಕೂಡ ಸೆಟ್‌ ಆಗಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿ SRS-XV900 ಸ್ಪೀಕರ್ ಭಾರತದಲ್ಲಿ 79,900ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದು ಭಾರತದ ಸೋನಿ ಸೆಂಟರ್‌ಗಳು ಮತ್ತು ಪ್ರಮುಖ ಎಲೆಕ್ಟ್ರಾನಿಕ್ಸ್‌ ಸ್ಟೋರ್‌ಗಳು, ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ.

Best Mobiles in India

Read more about:
English summary
Sony has introduced a new SRS-XV900 party speaker in india

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X