ಸೋನಿಯಿಂದ ಹೊಸ ಕ್ಯಾಮೆರಾ ಬಿಡುಗಡೆ! ಹೊಸ ಫೀಚರ್ಸ್‌ಗಳು ಏನಿವೆ?

|

ಕ್ಯಾಮೆರಾ ಮಾರುಕಟ್ಟೆಯಲ್ಲಿ ಸೋನಿ ಕಂಪೆನಿಯ ಡಿವೈಸ್‌ಗಳಿಗೆ ಭಾರಿ ಬೇಡಿಕೆಯಿದೆ. ಸೋನಿ ಕಂಪೆನಿ ವಿವಿಧ ಬೆಲೆ ಶ್ರೇಣಿಯಲ್ಲಿ ಹಲವು ಕ್ಯಾಮೆರಾಗಳನ್ನು ಈಗಾಗಲೇ ಪರಿಚಯಿಸಿದೆ. ಇದೀಗ ಮುಂದುವರೆದು ತನ್ನ ZV ಸರಣಿಯಲ್ಲಿ ಹೊಸ ಸೋನಿ ZV-1F ಕ್ಯಾಮೆರಾ ಲಾಂಚ್‌ ಮಾಡಿದೆ. ಈ ಕ್ಯಾಮೆರಾ ವ್ಲೋಗರ್ ಸ್ನೇಹಿ ಕ್ಯಾಮೆರಾವಾಗಿದ್ದು, ಕಂಟೆಂಟ್‌ ಕ್ರಿಯೆಟರ್ಸ್‌ಗಳಿಗೆ ಸೂಕ್ತವಾಗಿದೆ. ಇನ್ನು ಈ ಕ್ಯಾಮೆರಾ ವೈಡೆಸ್ಟ್‌ ಪೋಕಲ್‌ ಲೆಂತ್‌ಗಿಂತಲೂ ದೊಡ್ಡದಾದ ಫೀಲ್ಡ್‌ ಆಫ್‌ ವ್ಯೂ ಹೊಂದಿದೆ.

ಸೋನಿ

ಹೌದು, ಸೋನಿ ಕಂಪೆನಿ ಹೊಸ ಸೋನಿ ZV-1F ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ. ಈ ಕ್ಯಾಮೆರಾ ವೀಡಿಯೋ ಕ್ರಿಯೆಟರ್ಸ್‌ಗಳಿಗೆ, ವ್ಲೋಗರ್‌ಗಳಿಗೆ ಸೂಕ್ತವಾದ ವಿನ್ಯಾಸವನ್ನು ಹೊಂದಿದೆ. ಇದನ್ನು ಕ್ಯಾರಿ ಮಾಡುವುದು ತುಂಬಾ ಸುಲಭವಾಗಿದೆ. ನೀವು ಎಲ್ಲಿಯೇ ಹೋದರು ಕೂಡ ಅಲ್ಲಿಯ ವಿಶ್ಯುಯಲ್ಸ್‌ಗಳನ್ನು ಸೆರೆಹಿಡಿಯುವುದಕ್ಕೆ ಇದು ಸೂಕ್ತವಾಗಿದೆ. ಇನ್ನು ಈ ಕ್ಯಾಮೆರಾ ಹ್ಯಾಂಡ್-ಹೆಲ್ಡ್ ವ್ಲೋಗಿಂಗ್ ಸನ್ನಿವೇಶಗಳಿಗೆ ಹೊಂದಿಕೊಳ್ಳಲಿದೆ. ಹಾಗಾದ್ರೆ ಸೋನಿಯ ಈ ಹೊಸ ಕ್ಯಾಮೆರಾದ ವಿಶೇಷತೆ ಏನು? ಫೀಚರ್ಸ್‌ ಹೇಗಿದೆ? ಇದರ ಬೆಲೆ ಎಷ್ಟು? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ZV-1F

ಸೋನಿ ZV-1F ಕ್ಯಾಮೆರಾ ವೇರಿಯಬಲ್ ಜೂಮ್ ಲೆನ್ಸ್ ಬದಲಿಗೆ, ZV-1F 20mm f2.0 ಫಿಕ್ಸ್ಡ್‌ ಪ್ರೈಮ್ ಲೆನ್ಸ್ ಅನ್ನು ಹೊಂದಿದೆ. ಈ ಕ್ಯಾಮೆರಾ ಸೋನಿಯ ZV-1 ಕ್ಯಾಮೆರಾದಲ್ಲಿದ್ದ ವೈಡೆಸ್ಟ್‌ ಫೋಕಲ್ ಲೆಂತ್‌ಗಿಂತಲೂ ದೊಡ್ಡದಾದ ಫಿಲ್ಡ್‌ ಆಫ್‌ ವ್ಯೂ ಅನ್ನು ನೀಡಲಿದೆ. ಇದು ಹ್ಯಾಂಡ್-ಹೆಲ್ಡ್ ವ್ಲೋಗಿಂಗ್ ಸನ್ನಿವೇಶಗಳಿಗೆ ಸೂಕ್ತವಾಗಿದ್ದು, ಸ್ಟ್ರೀಟ್‌ ಫೋಟೋಗ್ರಫಿಗೆ ಹೆಚ್ಚು ಇಂಟರೆಸ್ಟಿಂಗ್‌ ಫೋಕಲ್‌ ಲೆಂತ್‌ ಅನ್ನು ಒದಗಿಸಲಿದೆ.

ಸೋನಿ

ಇದು ಸೋನಿ ಕಂಪೆನಿಯ S-Log2, S-Log3 ಮತ್ತು HLG ಸೇರಿದಂತೆ ವಿವಿಧ ಇಮೇಜ್‌ ಪ್ರೊಫೈಲ್‌ಗಳನ್ನು ಹೊಂದಿದೆ. ಸೋನಿ ZV-1F ಕ್ಯಾಮೆರಾ 30fps ವರೆಗೆ 4K ವೀಡಿಯೊವನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈ ಕ್ಯಾಮೆರಾದಲ್ಲಿ ZV-1F 8-ಬಿಟ್ 4:2:0 ನಲ್ಲಿ ಮಾತ್ರ ರೆಕಾರ್ಡ್ ಮಾಡಲು ಸಾಧ್ಯವಾಗಲಿದೆ. ಈ ಕ್ಯಾಮೆರಾದಲ್ಲಿ ನೀವು ವಾಯರ್‌ಲೆಸ್‌ ಸ್ಮಾರ್ಟ್‌ಫೋನ್‌ ಕನೆಕ್ಟಿವಿಟಿಯನ್ನು ಕೂಡ ಬಳಸಿಕೊಳ್ಳಬಹುದು. ಇದರ ಮೂಲಕ ರೆಕಾರ್ಡ್‌ ಮಾಡುವ ಮತ್ತು ಅಪ್‌ಲೋಡ್‌ ಮಾಡುವುದಕ್ಕೆ ಇದು ಅವಕಾಶ ನೀಡಲಿದೆ.

ಕ್ಯಾಮೆರಾ

ಸೋನಿ ZV-1F ಕ್ಯಾಮೆರಾದಲ್ಲಿ ವರ್ಟಿಕಲ್ ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡಬಹುದು. ಇದು ಇನ್‌ಸ್ಟಾಗ್ರಾಮ್‌, ಟಿಕ್‌ಟಾಕ್‌, ಅಥವಾ ಯೂಟ್ಯೂಬ್‌ ಶಾರ್ಟ್‌ ಮೂವಿಗಳಿಗೆ ಸೂಕ್ತವಾದ ಕ್ಯಾಮೆರಾ ಆಗಿದೆ. ಇದರಲ್ಲಿ ಬಂಡಲ್ ವಿಂಡ್‌ಸ್ಕ್ರೀನ್‌ನೊಂದಿಗೆ ಇಂಟರ್‌ಬಿಲ್ಟ್‌ ಡೈರೆಕ್ಷನಲ್ 3-ಕ್ಯಾಪ್ಸುಲ್ ಮೈಕ್ರೊಫೋನ್ ಅನ್ನು ಸಹ ನೀಡಲಾಗಿದೆ. ಅಲ್ಲದೆ ನೀವು ಈ ಕ್ಯಾಮೆರಾ ದಲ್ಲಿ 3.5mm ಮೈಕ್ ಜ್ಯಾಕ್ ಮೂಲಕ ಬಾಹ್ಯ ಮೈಕ್ರೊಫೋನ್ ಅನ್ನು ಕೂಡ ಕನೆಕ್ಟ್‌ ಮಾಡಬಹುದಾಗಿದೆ. ಆದರೆ ಇದರ ಮೂಲಕ ಯಾವುದೇ ಹಾಟ್‌ಶೂ ನಡೆಸಲು ಆಗುವುದಿಲ್ಲ.

ಕ್ಯಾಮೆರಾ

ಇನ್ನು ಈ ಕ್ಯಾಮೆರಾದಲ್ಲಿ ಮೈಕ್ರೋ HDMI ಪೋರ್ಟ್‌ ಅನ್ನು ನೀಡಲಾಗಿದೆ. ಇದಲ್ಲದೆ ಸ್ಟೇಡಿಶಾಟ್‌, ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್ ಫೀಚರ್ಸ್‌ ಅನ್ನು ಸಹ ಪಡೆದಿದೆ. ಜೊತೆಗೆ ಈ ಕ್ಯಾಮೆರಾದಲ್ಲಿ Eye AF, ಆಬ್ಜೆಕ್ಟ್ ಟ್ರ್ಯಾಕಿಂಗ್, ನಿಮ್ಮ ಮುಖ ಮತ್ತು ನಿಮ್ಮ ಕೈಯಲ್ಲಿರುವ ವಸ್ತುವಿನ ನಡುವೆ ತ್ವರಿತವಾಗಿ ಮತ್ತು ಸ್ವಯಂಚಾಲಿತವಾಗಿ ಗಮನವನ್ನು ಬದಲಾಯಿಸಲು ಪ್ರಾಡಕ್ಟ್‌ ಶೋಕೇಸ್ ಮೋಡ್, ಸಾಫ್ಟ್ ಸ್ಕಿನ್ ಎಫೆಕ್ಟ್‌ನಂತಹ ಫೀಚರ್‌ಗಳನ್ನು ನೀಡಲಾಗಿದೆ.

ಕ್ಯಾಮೆರಾ

ಸೋನಿ ZV-1F ಕ್ಯಾಮೆರಾ ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಇದರ ಬೆಲೆ $500 (ಅಂದಾಜು 41,185ರೂ)ಗಳಿಗೆ ಲಭ್ಯವಾಗಲಿದೆ. ಇನ್ನು ಈ ಕ್ಯಾಮೆರಾ ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದು ಭಾರತದ ಮಾರುಕಟ್ಟೆಗೆ ಯಾವಾಗ ಎಂಟ್ರಿ ನೀಡಲಿದೆ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
Sony has launched its vlogger friendly camera in its ZV series

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X