ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?

|

ಕ್ಯಾಮೆರಾ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ ಸೋನಿ ಕಂಪೆನಿ ಹೊಸದೊಂದು ಕ್ಯಾಮೆರಾ ಬಿಡುಗಡೆ ಮಾಡಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ಈ ಕ್ಯಾಮೆರಾವನ್ನು ಸೋನಿ ILME-FR7 ಎಂದು ಹೆಸರಿಸಲಾಗಿದೆ. ಇನ್ನು ಈ ಕ್ಯಾಮೆರಾ ಸಿನಿಮಾ ಲೈನ್ FR7 ಇಂಟೆರ್ ಚೇಂಜೇಬಲ್ ಲೆನ್ಸ್‌ ಅನ್ನು ಒಳಗೊಂಡಿದೆ. ಇದು ಇನ್‌ಬಿಲ್ಟ್‌ ಪ್ಯಾನ್,ಟಿಲ್ಟ್, ಜೂಮ್ ನಂತಹ ಫೀಚರ್ಸ್‌ಗಳನ್ನು ಹೊಂದಿದೆ. ಜೊತೆಗೆ ಈ ಕ್ಯಾಮೆರಾ ಸೋನಿಯ ಇ-ಮೌಂಟ್ ಲೆನ್ಸ್ ಅನ್ನು ಹೊಂದಿದೆ.

ಸೋನಿ

ಹೌದು, ಸೋನಿ ಕಂಪೆನಿ ಹೊಸ ಸೋನಿ ILME-FR7 ಕ್ಯಾಮೆರಾವನ್ನು ಪರಿಚಯಿಸಿದೆ. ಇದು ವಿಶ್ವದಲೇ ಮೊದಲ PTZ ಕ್ಯಾಮೆರಾ ಇದಾಗಿದೆ. ಇದರಲ್ಲಿರುವ ಫೀಚರ್ಸ್‌ ನಿಮಗೆ ಸಿನೀಮಿಯ ಅನುಭವವನ್ನು ನೀಡಲಿದೆ. ಈ ಕ್ಯಾಮೆರಾ ಇಲ್ಯುಮಿನೇಟೆಡ್ 35mm ಫುಲ್‌ ಫ್ರೇಮ್‌ CMOS ಇಮೇಜ್‌ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ ಕ್ಯಾಮೆರಾದಲ್ಲಿ ಇಂಟಿಗ್ರೇಟೆಡ್‌ BIONZ XR ಇಂಜಿನ್ ಪಿನ್‌ಪಾಯಿಂಟ್ ಸಹ ನೀಡಲಾಗಿದೆ. ಇನ್ನುಳಿದಂತೆ ಈ ಕ್ಯಾಮೆರಾ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ILME-FR7 ಕ್ಯಾಮೆರಾ

ಸೋನಿ ILME-FR7 ಕ್ಯಾಮೆರಾ ಅತ್ಯಾಕರ್ಷಕ ಫೀಚರ್ಸ್‌ಗಳಿಂದ ಕೂಡಿದ ವಿಶ್ವದ ಮೊದಲ PTZ ಕ್ಯಾಮೆರಾ ಎನಿಸಿಕೊಂಡಿದೆ. ಇದು ಸೋನಿಯ ಇ-ಮೌಂಟ್ ಲೆನ್ಸ್ ಅನ್ನು ಹೊಂದಿದ್ದು, ಜಿ ಮಾಸ್ಟರ್ ಸರಣಿಯಂತಹ ಇತರ ಇ-ಮೌಂಟ್ ಲೆನ್ಸ್‌ಗಳೊಂದಿಗೆ ಕೆಲಸ ಮಾಡುವುದಕ್ಕೆ ಕೂಡ ಅವಕಾಶ ನೀಡಿದೆ. ಇನ್ನುಳಿದಂತೆ ಈ ಕ್ಯಾಮೆರಾ 10.3MP ಯೊಂದಿಗೆ, ಕ್ಯಾಮರಾ ವಿಶಾಲ 15+ ಸ್ಟಾಪ್ ಅಕ್ಷಾಂಶವನ್ನು ಹೊಂದಿದೆ. ಆದರಿಂದ ಈ ಕ್ಯಾಮೆರಾದಲ್ಲಿ ಪ್ಯಾನ್/ಟಿಲ್ಟ್/ಜೂಮ್ ಫಂಕ್ಷನ್‌ ಅನ್ನು ದೂರದಿಂದಲೇ ನಿರ್ವಹಿಸಬಹುದಾಗಿದೆ.

ಸೋನಿ

ಇನ್ನು ಸೋನಿಯ ಈ ಕ್ಯಾಮೆರಾ ಸೋನಿಯ RM-IP500 ರಿಮೋಟ್ ಕಂಟ್ರೋಲರ್‌ಗೆ ಸೆಟ್‌ ಆಗಲಿದೆ. ಇದರಲ್ಲಿರುವ ಪ್ಯಾನ್ ಮತ್ತು ಟಿಲ್ಟ್ ಚಲನೆಗಳು ಕೂಡ ಬದಲಾಗಲಿವೆ. ಇದರೊಂದಿಗೆ ಈ ಕ್ಯಾಮೆರಾ ಡೈರೆಕ್ಷನ್‌, ಜೂಮ್, ಫೋಕಸ್ ಸೇರಿದಂತೆ 100ಕ್ಕೂ ಹೆಚ್ಚಯ ಕ್ಯಾಮೆರಾ ಪ್ಲೇ ಪ್ರಿವ್ಯೂಗಳನ್ನು ಬೆಂಬಲಿಸಲಿದೆ. ಇದರಲ್ಲಿರುವ ರಿಯಲ್‌ ಟೈಂ ಐ ಎಎಫ್ ಮತ್ತು ಟ್ರ್ಯಾಕಿಂಗ್‌ ಬಳಕೆದಾರರಿಗೆ ಸಾಕಷ್ಟು ಉಪಯುಕ್ತ ಎನಿಸಲಿದೆ. ಹಾಗೆಯೇ ಈ ಕ್ಯಾಮೆರಾದಲ್ಲಿ ಇಂಟಿಗ್ರೇಟೆಡ್ BIONZ XR ಇಂಜಿನ್ ಪಿನ್‌ಪಾಯಿಂಟ್ ನೀಡಲಾಗಿದ್ದು, ಐ ಫೋಕಸ್‌ ಡಿಟೆಕ್ಷನ್‌ನಲ್ಲಿ ಸಹಾಯ ಮಾಡಲಿದೆ.

ಸೋನಿ FR7

ಸೋನಿ FR7 ಕ್ಯಾಮೆರಾ S-ಸಿನಿಟೋನ್ ಪ್ರಿಸೆಟ್‌, 4K 120p 6 ಸ್ಲೋ ಮೋಷನ್‌, Cine EI ಮೋಡ್ ಫೀಚರ್ಸ್‌ಗಳನ್ನು ಬೆಂಬಲಿಸಲಿದೆ. ಇದಲ್ಲದೆ ಇನ್‌ಬಿಲ್ಟ್‌ ವೆಬ್ ಅಪ್ಲಿಕೇಶನ್ ಕಂಪ್ಯೂಟರ್ ಮೂಲಕ ಕಂಟ್ರೋಲ್‌ ಮಾಡುವುದಕ್ಕೆ ಅವಕಾಶವನ್ನ ಸಹ ನೀಡಲಿದೆ. ಇದು ಮಲ್ಟಿ ಕ್ಯಾಮೆರಾ ಮಾನಿಟರಿಂಗ್‌ಗೆ ಬೆಂಬಲಿಸಲಿದೆ. ಇನ್ನು ಕ್ಯಾಮೆರಾದಲ್ಲಿ HDMI ಟೈಪ್ A ಮತ್ತು 12G-SDI ಕನೆಕ್ಟರ್‌ಗಳನ್ನು ನೀಡಲಾಗಿದೆ. ಇವುಗಳ ಜೊತೆಗೆ RTSP, SRT, ಮತ್ತು NDI |HX 10 ಸ್ಟ್ರೀಮಿಂಗ್ ಪ್ರೋಟೋಕಾಲ್‌ಗಳಿಗೆ ಬೆಂಬಲಿಸುವ ಅವಕಾಶ ಕಲ್ಪಿಸಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿ ಕಂಪೆನಿಯ ಈ ಹೊಸ ಕ್ಯಾಮೆರಾ ಇದೇ ಜನವರಿ 31 ರಿಂದ ಖರೀದಿಗೆ ಲಭ್ಯವಾಗಲಿದೆ. ಪ್ರಸ್ತುತ ಈ ಕ್ಯಾಮೆರಾದ ಬೆಲೆ ಎಷ್ಟಿರಲಿದೆ ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ. ಸೇಲ್‌ ಡೇಟ್‌ ಹತ್ತಿರವಾಗ್ತಿದ್ದ ಹಾಗೇ ಇದರ ಬೆಲೆ ವಿವರ ಬಹಿರಂಗವಾಗಲಿದೆ ಎಂದು ಹೇಳಲಾಗಿದೆ.

ಸೋನಿ

ಇದಲ್ಲದೆ ಸೋನಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಸೋನಿ SRS-XV900 ಪಾರ್ಟಿ ಸ್ಪೀಕರ್ ಲಾಂಚ್‌ ಮಾಡಿದೆ. ಈ ಸ್ಪೀಕರ್‌ ಒಮ್ನಿ ಡೈರೆಕ್ಷನಲ್‌ ಸೌಂಡ್‌ ಅನ್ನು ಒದಗಿಸಲಿದೆ. ಜೊತೆಗೆ ಡೀಪ್‌ ಮತ್ತು ಪಂಚಿಯರ್‌ ಬಾಸ್‌ ಔಟ್‌ಪುಟ್‌ ಅನ್ನು ಆಕ್ಟಿವ್‌ ಮಾಡಲು ವೃತ್ತಾಕಾರದ ಡಾಯಾಫ್ರಾಮ್‌ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಪೀಕರ್‌ನಲ್ಲಿ ಮಿಡ್‌ರೇಂಜ್‌ ಡ್ರೈವರ್‌ಗಳು ಮತ್ತು ಟ್ವಿಟರ್‌ಗಳನ್ನು ಸಹ ನೀಡಲಾಗಿದೆ.

Best Mobiles in India

English summary
Sony Introduces World’s First PTZ Camera in India.know more details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X