ಸೋನಿಯ ಹೊಸ ಹೆಡ್‌ಸೆಟ್‌ಗಳ ಬೆಲೆ ಬಹಿರಂಗ:.. 6,990 ರೂ. ಗಳಿಂದ ಆರಂಭ!

|

ಭಾರತದ ಮಾರುಕಟ್ಟೆಯಲ್ಲಿ ಸೋನಿ ಕಂಪೆನಿ ತನ್ನದೇ ಆದ ಜನಪ್ರಿಯತೆ ಪಡೆದುಕೊಂಡಿದೆ. ಇದಕ್ಕೆ ಕಾರಣ ಉತ್ತಮವಾದ ಅಡಿಯೋ ಪರಿಕರಗಳ ಜೊತೆಗೆ ಇನ್ನಿತರೆ ಆಡಿಯೋ ಡಿವೈಸ್‌ಗಳನ್ನು ಗ್ರಾಹಕರಿಗೆ ಇಷ್ಟವಾಗುವ ಹಾಗೆ ತಯಾರು ಮಾಡಿ ನೀಡುತ್ತಿದೆ. ಇನ್ನು ಸೋನಿ ಕಂಪನಿಯ ಆಡಿಯೋ ಡಿವೈಸ್‌ಗಳ ಶ್ರೇಣಿಯು ಬಜೆಟ್‌ ಬೆಲೆಯಿಂದ ಹಿಡಿದು ದುಬಾರಿ ಬೆಲೆಗೂ ಲಭ್ಯ ಇವೆ. ಇದರ ಬೆನ್ನಲ್ಲೇ ಈಗ ಸೋನಿ ಕಂಪೆನಿ ಭಾರತದಲ್ಲಿ ಇಂಝೋನ್ (Inzone) ಸರಣಿಯ ಉತ್ತಮ ಕ್ವಾಲಿಟಿ ಇರುವ ಹೆಡ್‌ಸೆಟ್‌ಗಳ ಬೆಲೆಯನ್ನು ಬಹಿರಂಗಪಡಿಸಿದೆ.

ಸೋನಿ

ಹೌದು, ಸೋನಿ ಕಂಪೆನಿಯು ಸೋನಿ ಇಂಝೋನ್ H3, ಇಂಝೋನ್ H7 ಮತ್ತು ಇಂಝೋನ್ H9 ಬೆಲೆಯನ್ನು ಭಾರತದಲ್ಲಿ ಬಹಿರಂಗಪಡಿಸಿದೆ. ಈ ಹೆಡ್‌ಸೆಟ್‌ಗಳು ಭಾರತದಲ್ಲಿ 6,990 ರೂ. ಬೆಲೆಯಿಂದ ಪ್ರಾರಂಭವಾಗುತ್ತವೆ. ಈ ವರ್ಷದ ಜೂನ್‌ನಲ್ಲಿ ಪ್ಲೇಸ್ಟೇಷನ್ ಕನ್ಸೋಲ್‌ಗಳು ಹಾಗೂ ಪಿಸಿಗಾಗಿ ತನ್ನ ಹೊಸ ಇಂಝೋನ್‌ ಶ್ರೇಣಿಯ ಹೆಡ್‌ಸೆಟ್‌ಗಳ ಬಗ್ಗೆ ಘೋಷಣೆ ಮಾಡಿತ್ತು. ಈ ಹೆಡ್‌ಸೆಟ್‌ಗಳು ಮೂರು ಮಾದರಿಯನ್ನು ಒಳಗೊಂಡಿವೆ. ಹಾಗಿದ್ರೆ ಇದರ ಫೀಚರ್ಸ್‌ಗಳೇನು ಈ ಹೆಡ್‌ಸೆಟ್‌ಗಳನ್ನು ಎಲ್ಲಿ ಕೊಂಡುಕೊಳ್ಳಬಹುದು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಫೀಚರ್ಸ್‌ಗಳೇನು?

ಫೀಚರ್ಸ್‌ಗಳೇನು?

ಇಂಝೋನ್ H3 ಪ್ಲೇಸ್ಟೇಷನ್ ಗೇಮರ್‌ಗಳಿಗಾಗಿ ತಯಾರು ಮಾಡಲಾದ ಹೆಡ್‌ಸೆಟ್ ಆಗಿದೆ. ಇದರಲ್ಲಿನ ಮೈಕ್ ಆರ್ಮ್ ಅನ್ನು ತಿರುಗಿಸುವ ಮೂಲಕ ಮ್ಯೂಟ್ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಬೂಮ್ ಮೈಕ್ ಅನ್ನು ಹೊಂದಿದೆ. H3 360 ಕ್ಯಾಪಿಟಲ್ ಸೌಂಡ್‌ ಸಪೋರ್ಟ್‌ ಆಯ್ಕೆ ಪಡೆದಿದ್ದು, ಈ ಹೆಡ್‌ಸೆಟ್‌ನ್ನು ಪಿಸಿ ಹಾಗೂ ಪ್ಲೇಸ್ಟೇಷನ್ 5 ನಲ್ಲಿ ಬಳಸಬಹುದಾಗಿದೆ.

ಇಂಝೋನ್

ಇನ್ನುಳಿದಂತೆ ಈ ಇಂಝೋನ್ H7 ಮತ್ತು ಇಂಝೋನ್‌ H9 ವೈರ್‌ಲೆಸ್ ಹೆಡ್‌ಸೆಟ್‌ಗಳು ಬ್ಲೂಟೂತ್ 5.0 ಜೊತೆಗೆ H9 40mm ಡ್ರೈವರ್‌ ಆಯ್ಕೆ ಪಡೆದಿವೆ. ಇವನ್ನು ಯುಎಸ್‌ಬಿ ಟ್ರಾನ್ಸ್‌ಸಿವರ್ ಮೂಲಕ ಸಂಪರ್ಕಿಸಿಕೊಳ್ಳಬಹುದಾಗಿದೆ. ಇವು 2.4GHz ವೈರ್‌ಲೆಸ್ ಸಂಪರ್ಕವನ್ನು ನೀಡುತ್ತದೆ. ಇಂಝೋನ್‌ H9 ನಲ್ಲಿ ನಾಯ್ಸ್ ಕ್ಯಾನ್ಸಲೇಶನ್‌ ಆಯ್ಕೆ ಇದ್ದು, ಉತ್ತಮ ಗೇಮಿಂಗ್‌ ಅನುಭವ ನೀಡಲಿದೆ. ಈ ಆಯ್ಕೆ ಇರುವ ಹೆಡ್‌ಫೋನ್ 20 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಹಾಗೆಯೇ ನಾಯ್ಸ್ ಕ್ಯಾನ್ಸಲೇಶಸನ್‌ ಆಫ್‌ ಮಾಡಿದರೆ ಬರೋಬ್ಬರಿ 32 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡುತ್ತದೆ. ಇದು ಆಂಬಿಯೆಂಟ್ ಸೌಂಡ್ ಮೋಡ್ ಅನ್ನು ಸಹ ಹೊಂದಿದೆ.

ವೈರ್‌ಲೆಸ್

ಇಂಝೋನ್‌ H7 ಬರೋಬ್ಬರಿ 40 ಗಂಟೆಗಳ ವೈರ್‌ಲೆಸ್ ಪ್ಲೇಬ್ಯಾಕ್ ಆಯ್ಕೆ ಪಡೆದಿದ್ದು, ಇದರಲ್ಲಿ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್‌ ಇಲ್ಲ. ಹೆಡ್‌ಸೆಟ್‌ಗಳು SBC ಮತ್ತು AAC ಆಡಿಯೊ ಕೊಡೆಕ್‌ಗಳನ್ನು ಬೆಂಬಲಿಸುತ್ತವೆ ಹಾಗೆಯೇ ಆಡಿಯೊವನ್ನು ನಿಯಂತ್ರಿಸಲು ವಾಲ್ಯೂಮ್ ವೀಲ್ ಅನ್ನು ಹೊಂದಿವೆ. ಇದರ ಜೊತೆಗೆ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿರುವ ಇಂಝೋನ್ H3 ಸಹ ಆಡಿಯೋ ನಿಯಂತ್ರಣಕ್ಕಾಗಿ ಕಂಟ್ರೋಲರ್ ಅನ್ನು ಹೊಂದಿದೆ.

ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಸೋನಿ ಇಂಝೋನ್‌ ಸರಣಿಯ ಈ ಹೆಡ್‌ಸೆಟ್‌ಗಳಿಗೆ ಬೆಲೆ ನಿಗದಿ ಮಾಡಲಾಗಿದ್ದು, ಸೋನಿ ಇಂಝೋನ್ H3 ವೈರ್ಡ್ ಗೇಮಿಂಗ್ ಹೆಡ್‌ಸೆಟ್ ಬೆಲೆ 6,990 ರೂ.ಅಗಿದ್ದು, ಇಂಝೋನ್‌ H7 ಬೆಲೆ 15,990 ರೂ. ಇದೆ. ಹಾಗೆಯೇ ಇಂಝೋನ್‌ H9 ಬೆಲೆ 21,990 ರೂ.ಗಳಾಗಿದೆ. ಇವು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯ ಇವೆ. ವಿನ್ಯಾಸದಲ್ಲೂ ಸ್ವಲ್ಪ ಮಟ್ಟಿಗೆ ಭಿನ್ನತೆಯಿಂದ ಕೂಡಿವೆ. ಈ ಹೆಡ್‌ಸೆಟ್‌ಗಳನ್ನು ಅಮೆಜಾನ್‌ ಹಾಗೂ ಶಾಪ್‌AtSC (Shop at Sony Centre) ನಿಂದ ಖರೀದಿ ಮಾಡಬಹುದಾಗಿದೆ.

Best Mobiles in India

English summary
Sony company has gained its own popularity in the Indian market. company has also revealed the price of the newly launched Inzone series of headsets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X