PS5ಗಾಗಿ ಸೋನಿಯಿಂದ ಡ್ಯುಯಲ್ ಸೆನ್ಸ್ ಎಡ್ಜ್ ವಾಯರ್‌ಲೆಸ್‌ ಕಂಟ್ರೋಲರ್‌ ಅನಾವರಣ!

|

ಸೋನಿ ತನ್ನದೇ ಆದ ಆಡಿಯೋ, ವಿಡಿಯೋ ಹಾಗೂ ಗೇಮಿಂಗ್‌ ಗ್ಯಾಜೆಟ್‌ಗಳನ್ನು ಪರಿಚಯಿಸಿ ಖ್ಯಾತಿ ಪಡೆದಿದೆ. ಕಾಲಕಾಲಕ್ಕೆ ತಕ್ಕಂತೆ ಸುಧಾರಿತ ತಂತ್ರಜ್ಞಾನ ಬಳಕೆ ಮಾಡಿಕೊಂಡು ಅತ್ಯುತ್ತಮ ಅನುಭವ ನೀಡುವ ಗ್ಯಾಜೆಟ್‌ಗಳನ್ನು ನೀಡುವಲ್ಲಿ ಸೋನಿ ಪ್ರಮುಖವಾಗಿದೆ. ಇದರ ನಡುವೆ ಮುಂದಿನ ವರ್ಷದಲ್ಲಿ ಲಭ್ಯವಾಗುವ PS5 ಗಾಗಿ ಡ್ಯುಯಲ್ ಸೆನ್ಸ್ ಎಡ್ಜ್ ವಾಯರ್‌ಲೆಸ್‌ ಕಂಟ್ರೋಲರ್‌ ಬಗೆಗಿನ ಮಾಹಿತಿಯನ್ನು ಸೋನಿ ಕಂಪೆನಿ ಬಹಿರಂಗಪಡಿಸಿದೆ.

ಡ್ಯುಯಲ್ ಸೆನ್ಸ್ ಎಡ್ಜ್ ವಾಯರ್‌ಲೆಸ್‌

ಹೌದು, ಮುಂದಿನ ವರ್ಷದ ಆರಂಭದಲ್ಲಿ ಲಭ್ಯವಾಗಲಿರುವ PS5 ಗಾಗಿ ಡ್ಯುಯಲ್ ಸೆನ್ಸ್ ಎಡ್ಜ್ ವಾಯರ್‌ಲೆಸ್‌ ಕಂಟ್ರೋಲರ್ ಫೀಚರ್ಸ್‌ ಬಗ್ಗೆ ಸೋನಿ ಮಾಹಿತಿ ತಿಳಿಸಿದೆ. ಈ ಡಿವೈಸ್‌ ಗೇಮರ್‌ಗಳಿಗೆ ಮೆಚ್ಚಿನ ಗ್ಯಾಜೆಟ್‌ ಆಗಲಿದೆ. ಇನ್ನು ಕಂಟ್ರೋಲರ್ ಕಸ್ಟಮೈಸ್‌ ಮಾಡಿಕೊಳ್ಳಬಹುದಾದ ಪ್ರಮುಖ ಫೀಚರ್ಸ್‌ಗಳನ್ನು ಹೊಂದಿದ್ದು, ಇದರಲ್ಲಿ ಬಟನ್ ರೀ ಮ್ಯಾಪಿಂಗ್, ಸ್ಟಿಕ್ ಸೆನ್ಸಿಟಿವಿಟಿ ಮತ್ತು ಟ್ರಿಗ್ಗರ್‌ಗಳನ್ನು ಉತ್ತಮಗೊಳಿಸುವ ಸಾಮರ್ಥ್ಯ ಹೊಂದಿದೆ. ಹಾಗಿದ್ರೆ ಇದರ ಇನ್ನಿತರೆ ಫೀಚರ್ಸ್‌ಗಳನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌ ಏನು?

ಪ್ರಮುಖ ಫೀಚರ್ಸ್‌ ಏನು?

ಸೋನಿ ಡ್ಯುಯಲ್ ಸೆನ್ಸ್ ಎಡ್ಜ್ ವಾಯರ್‌ಲೆಸ್‌ ಕಂಟ್ರೋಲರ್ ಡಿವೈಸ್‌ ಅವಶ್ಯಕತೆಗೆ ಅನುಗುಣವಾಗಿ ಕಸ್ಟಮೈಸ್ ಮಾಡಿಕೊಳ್ಳುವ ಫೀಚರ್ಸ್‌ ಪಡೆದಿದೆ. ಇದರೊಂದಿಗೆ ಕ್ವಿಕ್‌ ಆಕ್ಸೆಸ್‌ ಪ್ರೋಫೈಲ್‌ ಸೆಟ್ಟಿಂಗ್‌ ಮೆನುವಿಗೆ ತಲುಪಲು Fn ಬಟನ್ ಮತ್ತು ಇನ್ನಿತರೆ ಆಯ್ಕೆಗಳ ಬಟನ್ ಅನ್ನು ನೀಡಲಾಗಿದ್ದು, ಗೇಮ್‌ ಆಡುವಾಗ ಅದನ್ನು ಸ್ಕಿಪ್‌ ಮಾಡದೆಯೇ ಮಾನಿಟರ್‌ನಲ್ಲಿ ಬೇರೆ ಕೆಲಸ ಮಾಡಬಹುದಾಗಿದೆ.

ರೀ ಮ್ಯಾಪ್ ಆಯ್ಕೆ

ರೀ ಮ್ಯಾಪ್ ಆಯ್ಕೆ

ಇನ್ನು ರೀ ಮ್ಯಾಪ್ ಮಾಡಬಹುದಾದ ಬಟನ್‌ಗಳು ಇದರಲ್ಲಿದ್ದು, ಯಾವ ಬಟನ್‌ ಯಾವ ಕೆಲಸ ಮಾಡಿದರೆ ಇಷ್ಟ ಎಂಬುದನ್ನು ಬಳಕೆದಾರರೇ ಮ್ಯಾಪ್‌ ಮಾಡಿಕೊಳ್ಳಬಹುದಾಗಿದೆ. ಇದು ನಿಮ್ಮದೇ ಆದ ವಿನ್ಯಾಶವನ್ನು ರಚಿಸಿಕೊಳ್ಳಲು ಅನುವು ಮಾಡಿಕೊಡುವುದರಿಂದ ಅತ್ಯುತ್ತಮವಾಗಿ ಗೇಮ್‌ನಲ್ಲಿ ತಲ್ಲೀನರಾಗಬಹುದು. ಈ ಕಸ್ಟಮೈಸ್‌ ಆಯ್ಕೆಯನ್ನು ಯಾವುದೇ ಆಟಗಳಿಗೂ ಸಹ ಅನ್ವಯ ಮಾಡಿಕೊಳ್ಳಬಹುದಾಗಿದೆ.

ಡ್ಯುಯಲ್

ಇದಿಷ್ಟೇ ಅಲ್ಲದೆ, ಡ್ಯುಯಲ್ ಸೆನ್ಸ್ ಎಡ್ಜ್ ವಾಯರ್‌ಲೆಸ್‌ ಕಂಟ್ರೋಲರ್‌ನಲ್ಲಿ ಟ್ರಿಗ್ಗರ್‌ಗಳು, ಸ್ಟಿಕ್ ಸೆನ್ಸಿಟಿವಿಟಿ ಮತ್ತು ವೈಬ್ರೇಷನ್ ಆಯ್ಕೆ ಸಹ ಇದ್ದು, ನಿಮಗೆ ಹೇಗೆ ಅನುಕೂಲವಾಗಲಿದೆಯೇ ಅದೇ ರೀತಿ ಸೆಟ್‌ ಮಾಡಿಕೊಳ್ಳಬಹುದಾಗಿದೆ. ಮತ್ತು ವೈಬ್ರೇಷನ್ ತೀವ್ರತೆ ಎಷ್ಟಿರಬೇಕು ಎಂಬುದನ್ನು ಕಸ್ಟಮೈಸ್‌ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಈ ಡಿವೈಸ್‌ನಲ್ಲಿ ಮೂರು ಬದಲಾಯಿಸಬಹುದಾದ ಸ್ಟಿಕ್ ಕ್ಯಾಪ್‌ಗಳು ಹಾಗೂ ಎರಡು ಬದಲಾಯಿಸಬಹುದಾದ ಬ್ಯಾಕ್ ಬಟನ್‌ಗಳನ್ನು ಹೊಂದಿದೆ. ಇದನ್ನು ಯುಎಸ್‌ಬಿ ಕನೆಕ್ಟಿವಿಟಿ ಮೂಲಕ ಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನೂ ನೀಡಲಾಗಿದೆ.

ಬೆಲೆ ಹಾಗೂ ಇನ್ನಿತರೆ ವಿವರ

ಬೆಲೆ ಹಾಗೂ ಇನ್ನಿತರೆ ವಿವರ

ಡ್ಯುಯಲ್ ಸೆನ್ಸ್ ಎಡ್ಜ್ ವಾಯರ್‌ಲೆಸ್‌ ಕಂಟ್ರೋಲರ್‌ ಅನ್ನು ಮುಂದಿನ ವರ್ಷದ ಜನವರಿ 26 ರಂದು ಜಾಗತಿಕವಾಗಿ ಬಿಡುಗಡೆ ಮಾಡಲಾಗುತ್ತದಂತೆ. ಹಾಗೆಯೇ ಇದಕ್ಕೆ ಯುಎಸ್‌ನಲ್ಲಿ $199.99 ಬೆಲೆ ನಿಗದಿ ಮಾಡಲಾಗಿದ್ದು, ಇದರ ಭಾರತೀಯ ಬೆಲೆ ಅಂದಾಜು 16,500ರೂ. ಗಳಾಗಬಹುದು ಎನ್ನಲಾಗಿದೆ. ಇದರ ಜೊತೆಗೆ ಬದಲಾಯಿಸಬಹುದಾದ ಸ್ಟಿಕ್ ಮಾಡ್ಯೂಲ್‌ಗಳನ್ನು ಸಹ ಬಿಡುಗಡೆ ಮಾಡಲಿದ್ದು, $19.99 ನಿಗದಿ ಮಾಡಲಾಗಿದೆ. ಇದರ ಭಾರತೀಯ ಬೆಲೆ ಅಂದಾಜು 1,650ರೂ. ಗಳಾಗಿರಲಿದೆ ಎನ್ನಲಾಗಿದೆ.

ಪ್ರಿ ಬುಕ್ಕಿಂಗ್

ಪ್ರಿ ಬುಕ್ಕಿಂಗ್

ಬದಲಾಯಿಸಬಹುದಾದ ಸ್ಟಿಕ್ ಮಾಡ್ಯೂಲ್‌ ಹಾಗೂ ಡ್ಯುಯಲ್ ಸೆನ್ಸ್ ಎಡ್ಜ್ ವಾಯರ್‌ಲೆಸ್‌ ಕಂಟ್ರೋಲರ್‌ ಅನ್ನು ಈ ತಿಂಗಳ 25 ರಿಂದ (ಅಕ್ಟೋಬರ್ 25) ಪ್ರಿ ಬುಕ್ಕಿಂಗ್ ಮಾಡಬಹುದಾಗಿದೆ. ಆದರೆ, ಈ ಆಯ್ಕೆ ಯುಸ್‌, ಯುಕೆ, ಫ್ರಾನ್ಸ್, ಜರ್ಮನಿ, ನೆದರ್‌ಲ್ಯಾಂಡ್ಸ್, ಬೆಲ್ಜಿಯಂ ಹಾಗೂ ಲಕ್ಸೆಂಬರ್ಗ್‌ನ ಗ್ರಾಹಕರು ಮಾತ್ರ ಲಭ್ಯವಿರಲಿದೆ. ಇನ್ನುಳಿದಂತೆ direct.playstation.com ಮೂಲಕವೂ ಬುಕ್ಕಿಂಗ್‌ ಮಾಡಬಹುದಾಗಿದ್ದು, ಮುಂದಿನ ವರ್ಷದ ಫೆಬ್ರವರಿ 23 ರಿಂದ ಅಧಿಕೃತ ರಿಟೇಲ್‌ ಸ್ಟೋರ್‌ಗಳಲ್ಲಿಯೂ ಮಾರಾಟಕ್ಕೆ ಲಭ್ಯವಾಗಲಿದೆ.

Best Mobiles in India

English summary
Sony is famous for introducing its own audio, video and gaming gadgets. Now DualSense Edge has given information about the wireless controller.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X