ಸೋನಿಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌; ಯಾವೆಲ್ಲ ಫೀಚರ್ಸ್‌ ಇವೆ ಗೊತ್ತಾ?

|

ಭಾರತದಲ್ಲಿ ಜನಪ್ರಿಯವಾಗಿರುವ ಆಡಿಯೋ ಬ್ರ್ಯಾಂಡ್ ಸೋನಿ ಕಾಲಕಾಲಕ್ಕೆ ತಕ್ಕಂತೆ ತನ್ನ ಗ್ಯಾಜೆಟ್‌ಗಳ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಾ ಬರುತ್ತಿದೆ. ಇದರ ನಡುವೆ ಕೆಲವು ವಾರಗಳ ಹಿಂದೆ WH-1000XM5 ಎಂಬ ಹೆಡ್‌ಫೋನ್‌ ಅನ್ನು ಅವಾವರಣ ಮಾಡಿತ್ತು. ಇದೀಗ ಆಡಿಯೋ ವಿಭಾಗದಲ್ಲಿ ಮತ್ತೆ ಹೊಸ ಇಯರ್‌ಬಡ್ಸ್‌ ಸೋನಿ ಲಿಂಕ್‌ಬಡ್ಸ್‌ S WF-LS900N (Sony LinkBuds S WF-LS900N) ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಇಯರ್‌ಬಡ್ಸ್‌ 20 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ.

ಕಂಪೆನಿ

ಹೌದು, ಸೋನಿ ಕಂಪೆನಿಯಿಂದ ಸೋನಿ ಲಿಂಕ್‌ಬಡ್ಸ್‌ S WF-LS900N ಅನ್ನು ಅನಾವರಣ ಮಾಡಲಾಗಿದ್ದು, ಇದಕ್ಕೆ ಸೋನಿ ಲಿಂಕ್‌ಬಡ್ಸ್‌ S ಎಂದೂ ಸಹ ಹೆಸರಿಸಲಾಗಿದೆ. ಪ್ರಮುಖ ವಿಷಯ ಎಂದರೆ ಸೋನಿಯಿಂದ ಈವರೆಗೆ ಲಾಂಚ್‌ ಆದ ಇಯರ್‌ಬಡ್ಸ್‌ಗಳಲ್ಲಿ ಇದು ಅತಿ ಚಿಕ್ಕ ಮತ್ತು ಹಗುರವಾದ, ನಾಯ್ಸ್‌ ಕ್ಯಾನ್ಸಲಿಂಗ್‌, ಹೈ-ರೆಸ್ ಟ್ರೂಲಿ ವೈರ್‌ಲೆಸ್ ಇಯರ್‌ಬಡ್‌ಗಳಾಗಿದೆ ಎಂದು ಕಂಪೆನಿ ಘೊಷಿಸಿದೆ. ಇದು ಅಡಾಪ್ಟಿವ್ ಸೌಂಡ್ ಕಂಟ್ರೋಲ್‌ ಆಯ್ಕೆ ಹೊಂದಿದ್ದು, ಇದರ ಇತರೆ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಸೋನಿ WF-LS900N ಇಯರ್‌ಬಡ್ಸ್‌ ಪ್ರಮುಖವಾಗಿ ಮರುಬಳಕೆಯ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಇದು 4.8 ಗ್ರಾಂ ತೂಕ ಹೊಂದಿದ್ದು, ನಿಮ್ಮ ಕಿವಿಯಲ್ಲಿ ಸರಿಯಾಗಿ ಕೂರುವ ರಚನೆಯನ್ನು ಬಡ್ಸ್‌ಗಳು ಪಡೆದುಕೊಂಡಿವೆ. ಹಾಗೆಯೇ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಹೊಂದಿದ್ದು, ಇದರ ಜೊತೆಗೆ ಸೂಪರ್‌ಲೇಟಿವ್ ನಾಯ್ಸ್‌ ಕ್ಯಾನ್ಸಲಿಂಗ್‌ ಆಯ್ಕೆ ಸಹ ಇದರಲ್ಲಿದೆ.

ನಾಯ್ಸ್ ಆಫ್

ಈ ಫೀಚರ್ಸ್‌ ನಿಮ್ಮ ಸುತ್ತಮುತ್ತಲಿನ ಶಬ್ದ ಮತ್ತು ಸುತ್ತುವರಿದ ಧ್ವನಿಯನ್ನು ಕಡಿಮೆ ಮಾಡುತ್ತದೆ. ಇನ್ನು ಸ್ವಯಂಚಾಲಿತವಾಗಿ ಮೋಡ್‌ ಬದಲಾಯಿಸುವ ಆಯ್ಕೆಯನ್ನೂ ಸಹ ನೀಡಲಾಗಿದ್ದು, 'ನಾಯ್ಸ್ ಆಫ್' ಫೀಚರ್ಸ್‌ ಅನ್ನು ಸಹ ಇದು ಪಡೆದು ಕೊಂಡಿದೆ. ಹಾಗೆಯೇ ಬೇಕಾದಾಗ ಇದರಲ್ಲಿ ಆಟೋಮ್ಯಾಟಿಕ್‌ ಆಗಿ 'ಆಂಬಿಯೆಂಟ್ ಮೋಡ್' ಅನ್ನು ಆಕ್ಟಿವ್‌ ಮಾಡಿಕೊಳ್ಳಬಹುದಾಗಿದೆ.

ವೇಗದ ಕನೆಕ್ಟಿವಿಟಿ ಆಯ್ಕೆ

ವೇಗದ ಕನೆಕ್ಟಿವಿಟಿ ಆಯ್ಕೆ

ಈ ಇಯರ್‌ಬಡ್ಸ್‌ ಬ್ಲೂಟೂತ್ ಆವೃತ್ತಿ 5.2 ನೊಂದಿಗೆ ಕಾರ್ಯನಿರ್ವಹಿಸಲಿದ್ದು, ತುಂಬಾ ವೇಗದ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದುಕೊಂಡಿವೆ. ಹಾಗೆಯೇ ಇದರಲ್ಲಿ V1 ಪ್ರೊಸೆಸರ್ ಇದ್ದು, ಉತ್ತಮ ನಾಯ್ಸ್‌ ಕ್ಯಾನ್ಸಲಿಂಗ್, ಉತ್ತಮ ಧ್ವನಿ ಗುಣಮಟ್ಟ ಹಾಗೂ ಧ್ವನಿಯ ಅಸ್ಪಷ್ಟತೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ ಎಂದು ಕಂಪೆನಿ ಸ್ಪಷ್ಟನೆ ನೀಡಿದೆ. ಇದೆಲ್ಲದರ ಜೊತೆಗೆ ಬಟನ್ ಸ್ಪರ್ಶದಿಂದ ಸುಲಭವಾಗಿ ಕಂಟ್ರೋಲ್‌ ಮಾಡಬಹುದಾಗಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಸೋನಿ WF-LS900N ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ನಲ್ಲಿ ಆರು ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡಲಿದ್ದು, ನಾಯ್ಸ್ ಕ್ಯಾನ್ಸಲಿಂಗ್‌ ಆಪ್‌ ಮಾಡಿದರೆ 14 ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ. ಹಾಗೆಯೇ ಬಡ್ಸ್‌ಗಳು ತ್ವರಿತ ಚಾರ್ಜಿಂಗ್ ಅನ್ನು ಬೆಂಬಲವಿದ್ದು, ಐದು ನಿಮಿಷಗಳ ಚಾರ್ಜಿಂಗ್‌ನಲ್ಲಿ ಒಂದು ಗಂಟೆಯ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಇನ್ನು ಪೂರ್ಣ ಚಾರ್ಜ್‌ಗಾಗಿ ನೀವು ಈ ಚಾರ್ಜಿಂಗ್‌ ಕೇಸ್‌ಗೆ ಎರಡು ಗಂಟೆ ನೀಡಬೇಕಿದೆ. ಇನ್ನು ಒಟ್ಟಾರೆಯಾಗಿ ಒಂದು ಪೂರ್ಣ ಚಾರ್ಜ್‌ನಲ್ಲಿ 20 ಗಂಟೆಗಳ ವರೆಗೆ ಬಳಕೆ ಮಾಡಬಹುದಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಸೋನಿ ಭಾರತದಲ್ಲಿ WF-LS900N ಅನ್ನು 16,990 ರೂ. ಗಳ ಆರಂಭಿಕ ಕೊಡುಗೆ ಬೆಲೆಗೆ ನೀಡುತ್ತಿದೆ. ಇದರ ಹೊರತಾಗಿಯೂ ಆಯ್ದ ಬ್ಯಾಂಕ್‌ಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ 3,000 ರೂ. ಗಳ ವರೆಗೂ ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಈ 3,000 ರೂ. ಕ್ಯಾಶ್‌ಬ್ಯಾಕ್ ಕೊಡುಗೆಯು ನವೆಂಬರ್ 21 ರಿಂದ ನವೆಂಬರ್ 30 ರವರೆಗೆ ಮಾನ್ಯವಾಗಿರುತ್ತದೆ.

ಸೋನಿ

ಈ ಇಯರ್‌ಬಡ್ಸ್‌ ಭಾರತದ ಎಲ್ಲಾ ಸೋನಿ ಸೆಂಟರ್‌ಗಳು, ಪ್ರಮುಖ ಎಲೆಕ್ಟ್ರಾನಿಕ್ ಸ್ಟೋರ್‌ಗಳು ಮತ್ತು ಇ-ಕಾಮರ್ಸ್ ಸೈಟ್‌ಗಳಲ್ಲಿ ಲಭ್ಯವಿರುತ್ತವೆ. ಇನ್ನುಳಿದಂತೆ ಈ ಸೋನಿ WF-LS900N ಇಯರ್‌ಬಡ್ಸ್‌ ಬ್ಲಾಕ್‌, ವೈಟ್‌ ಮತ್ತು ಬೀಜ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಕಂಡುಬರುತ್ತದೆ.

Best Mobiles in India

Read more about:
English summary
Sony LinkBuds S WF-LS900N Unveiled, Exciting features

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X