ಸೋನಿ ಲಿಂಕ್‌ಬಡ್ಸ್‌ ಲಾಂಚ್‌; ರಿಂಗ್ ಮಾದರಿಯ ಡಿಸೈನ್‌!..ಬೆಲೆ ಎಷ್ಟು?

|

ಇತ್ತೀಚಿಗೆ ಬಹುತೇಕರು ಮ್ಯೂಸಿಕ್ ಕೇಳಲು ಹಾಗೂ ಮಾತನಾಡಲು ಇಯರ್‌ಬಡ್ಸ್‌ ಡಿವೈಸ್‌ಗಳ ಬಳಕೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ತರಹೇವಾರಿ ಇಯರ್‌ಬಡ್ಸ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ. ಆ ಸಾಲಿಗಿಗ ಸೋನಿ ಸಂಸ್ಥೆಯ ಹೊಸ ಇಯರ್‌ಬಡ್ಸ್‌ ಸಹ ಸೇರ್ಪಡೆ ಆಗಿವೆ. ಸೋನಿಯು ನೂತನವಾಗಿ ಲಿಂಕ್‌ಬಡ್ಸ್‌ ಡಿವೈಸ್‌ ಅನ್ನು ಪರಿಚಯಿಸಿದ್ದು, ಇದರ ಡಿಸೈನ್‌ ಗಮನ ಸೆಳೆದಿದೆ.

ಹೊಸದಾಗಿ

ಹೌದು, ಜನಪ್ರಿಯ ಸೋನಿ ಕಂಪೆನಿ ಹೊಸದಾಗಿ ಸೋನಿ ಲಿಂಕ್‌ಬಡ್ಸ್‌ (Sony Linkbuds) ಇಯರ್‌ಬಡ್‌ ಸಾಧನವನ್ನು ಲಾಂಚ್ ಮಾಡಿದೆ. ಈ ಡಿವೈಸ್‌ ರಿಂಗ್ ಮಾದರಿಯ ರಚನೆಯನ್ನು ಒಳಗೊಂಡಿದ್ದು, ನೋಡಲು ಹೆಚ್ಚು ಆಕರ್ಷಕ ಲುಕ್ ಪಡೆದಿದೆ. ಪ್ರೀಮಿಯಂ ಆಡಿಯೊ ವಿಭಾಗದಲ್ಲಿ ಈ ಸಾಧನ ಸದ್ದು ಮಾಡುವ ಲಕ್ಷಣಗಳನ್ನು ಹೊರಹಾಕಿದೆ. ಇನ್ನು ಈ ಡಿವೈಸ್ 17.5 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.

ಸೋನಿ ಲಿಂಕ್‌ಬಡ್ಸ್ ಫೀಚರ್ಸ್‌:

ಸೋನಿ ಲಿಂಕ್‌ಬಡ್ಸ್ ಫೀಚರ್ಸ್‌:

ಸೋನಿ ಲಿಂಕ್‌ಬಡ್‌ಗಳು ಮಾರುಕಟ್ಟೆಯಲ್ಲಿನ ಇತರೆ TWS ಇಯರ್‌ಬಡ್‌ಗಿಂತ ಭಿನ್ನವಾಗಿ ಕಾಣುತ್ತವೆ. ಕಂಪನಿಯು ತೆರೆದ ರಿಂಗ್ ವಿನ್ಯಾಸವನ್ನು ಆರಿಸಿಕೊಂಡಿದೆ. ಇದು ನೈಸರ್ಗಿಕವಾಗಿ ಸುತ್ತುವರಿದ ಮತ್ತು ಡಿಜಿಟಲ್ ಧ್ವನಿಯನ್ನು ಸಂಯೋಜಿಸುತ್ತದೆ. ಇಯರ್‌ಬಡ್‌ಗಳು ಕೇವಲ 4 ಗ್ರಾಂ ತೂಗುತ್ತವೆ ಮತ್ತು ಅತಿ ಹಗುರವಾಗಿರುತ್ತವೆ. ಹಾಗೆಯೇ ಸೋನಿ ಲಿಂಕ್‌ಬಡ್ಸ್ ಡಿವೈಸ್‌ 12 ಎಂಎಂ ಓಪನ್ ಎಂಡ್ ಡ್ರೈವರ್‌ಗಳೊಂದಿಗೆ ಬರುತ್ತದೆ.

ಇಂಟಿಗ್ರೇಟೆಡ್

ದಿನವಿಡೀ ಧರಿಸಲು ಸಾಕಷ್ಟು ಆರಾಮದಾಯಕ ಮತ್ತು ಪಾರದರ್ಶಕತೆ ಫೀಚರ್ಸ್‌ಗಳನ್ನು ಬೆಂಬಲಿಸುತ್ತದೆ. ಕಿವಿಗಳಿಂದ ಇಯರ್‌ಬಡ್‌ಗಳನ್ನು ತೆಗೆದುಕೊಳ್ಳದೆಯೇ ಸಂಭಾಷಣೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ. ಸೋನಿ ಲಿಂಕ್‌ಬಡ್ಸ್ V1 ಇಂಟಿಗ್ರೇಟೆಡ್ ಪ್ರೊಸೆಸರ್‌ನೊಂದಿಗೆ ಜೋಡಿಯಾಗಿ ರಿಚ್‌ ಆಡಿಯೊ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ. ಅಲ್ಲದೆ, ಇಯರ್‌ಬಡ್‌ಗಳು ಇನ್ನೂ ತಲ್ಲೀನಗೊಳಿಸುವ ಅನುಭವಕ್ಕಾಗಿ 360 ರಿಯಾಲಿಟಿ ಆಡಿಯೊ ಮತ್ತು DSEE (ಡಿಜಿಟಲ್ ಸೌಂಡ್ ಎನ್‌ಹಾನ್ಸ್‌ಮೆಂಟ್ ಎಂಜಿನ್) ನೊಂದಿಗೆ ಬರುತ್ತವೆ.

ವಾಯಿಸ್

ಹೊಸದಾಗಿ ಅಭಿವೃದ್ಧಿಪಡಿಸಲಾದ ರಿಂಗ್ ಡ್ರೈವರ್ ಆಡಿಯೊ ಪಾರದರ್ಶಕತೆಗಾಗಿ ತೆರೆದ ಡಯಾಫ್ರಾಮ್ ಅನ್ನು ಹೊಂದಿದೆ. ಇದು ಬಳಕೆದಾರರಿಗೆ ಸುತ್ತಮುತ್ತಲಿನ ಶಬ್ದಗಳನ್ನು ಮನಬಂದಂತೆ ಕೇಳಲು ಅನುವು ಮಾಡಿಕೊಡುತ್ತದೆ. ಸೋನಿ ಲಿಂಕ್‌ಬಡ್ಸ್ ಹಲವಾರು ಇತರ ಆಕರ್ಷಕ ವೈಶಿಷ್ಟ್ಯಗಳನ್ನು ಸಹ ಬೆಂಬಲಿಸುತ್ತದೆ. ಉದಾಹರಣೆಗೆ ಸ್ವೀಕರಿಸುವವರಿಗೆ ನಿಮ್ಮ ವಾಯಿಸ್ ಅನ್ನು ಸ್ಪಷ್ಟವಾಗಿ ಕೇಳಲು ನಿಖರವಾದ ವಾಯಿಸ್ ಪಿಕಪ್ ತಂತ್ರಜ್ಞಾನವನ್ನು ಸಕ್ರಿಯಗೊಳಿಸುತ್ತದೆ.

ಸಂಗ್ರಹಿಸುತ್ತದೆ

ಸೋನಿ ಲಿಂಕ್‌ಬಡ್ಸ್ ದೀರ್ಘಾವಧಿಯ ಬ್ಯಾಟರಿಯೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ. ಇಯರ್‌ಬಡ್‌ಗಳು ಒಂದೇ ಚಾರ್ಜ್‌ನಲ್ಲಿ 5.5 ಗಂಟೆಗಳನ್ನು ನೀಡುತ್ತವೆ. ಚಾರ್ಜಿಂಗ್ ಕೇಸ್ ಒಟ್ಟು 17.5 ಗಂಟೆಗಳನ್ನು ತಲುಪಿಸಲು ಮತ್ತೊಂದು 12 ಗಂಟೆಗಳನ್ನು ಸಂಗ್ರಹಿಸುತ್ತದೆ, ಇದು ಮಧ್ಯಮ ಬಳಕೆಯೊಂದಿಗೆ ನಿಮಗೆ ಸುಲಭವಾಗಿ ನಾಲ್ಕೈದು ದಿನಗಳವರೆಗೆ ಇರುತ್ತದೆ.

ಕೇಸ್‌ನೊಂದಿಗೆ

ಸೋನಿ ಲಿಂಕ್‌ಬಡ್ಸ್ ಎರಡು ಬಣ್ಣಗಳಲ್ಲಿ ಬರುತ್ತವೆ. ಅಂದರೆ ಕಪ್ಪು ಮತ್ತು ಬೂದು, ಮತ್ತು IPX4 ನೀರಿನ ಪ್ರತಿರೋಧದ ರೇಟಿಂಗ್ ಅನ್ನು ಹೊಂದಿವೆ. ಬ್ಯಾಟರಿ ಬಾಳಿಕೆಗೆ ಸಂಬಂಧಿಸಿದಂತೆ, ಇಯರ್‌ಬಡ್‌ಗಳು ಒಂದೇ ಚಾರ್ಜ್‌ನಲ್ಲಿ 5.5 ಗಂಟೆಗಳವರೆಗೆ ಮತ್ತು ಚಾರ್ಜಿಂಗ್ ಕೇಸ್‌ನೊಂದಿಗೆ 12 ಗಂಟೆಗಳವರೆಗೆ ಆಲಿಸುವ ಸಮಯವನ್ನು ಪಡೆಯುತ್ತವೆ. ಹಾಗೆಯೇ ಸೋನಿ ಲಿಂಕ್‌ಬಡ್ಸ್‌ನ ಒಟ್ಟು ಬ್ಯಾಟರಿ ಅವಧಿಯನ್ನು 17.5 ಗಂಟೆಗಳವರೆಗೆ ತರುತ್ತದೆ. ಮತ್ತು ಸೋನಿ 10 ನಿಮಿಷಗಳ ಚಾರ್ಜ್ 90 ನಿಮಿಷಗಳ ಆಲಿಸುವ ಅವಧಿಯನ್ನು ಒದಗಿಸುತ್ತದೆ ಎಂದು ಹೇಳಿಕೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿ ಲಿಂಕ್‌ಬಡ್ಸ್ ಡಿವೈಸ್‌ ಭಾರತದಲ್ಲಿ ಅನ್ನು 19,990 ರೂ.ಗೆ ಬಿಡುಗಡೆ ಮಾಡಲಾಗಿದೆ. ಆದಾಗ್ಯೂ, ಗ್ರಾಹಕರು ಈಗ ಲಿಂಕ್‌ಬಡ್ಸ್ ಅನ್ನು ವಿಶೇಷ ಬೆಲೆಯಲ್ಲಿ ಖರೀದಿಸಬಹುದು. ಆಯ್ದ ಬ್ಯಾಂಕ್‌ಗಳಿಂದ ಕ್ಯಾಶ್‌ಬ್ಯಾಕ್‌ ಕೊಡುಗೆ ಸಿಗಲಿದೆ.

ಬೋಟ್ ಏರ್‌ಡೋಪ್ಸ್ 402

ಬೋಟ್ ಏರ್‌ಡೋಪ್ಸ್ 402

ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಇಯರ್‌ಬಡ್ಸ್‌ಗಳಲ್ಲಿ ಬೋಟ್ ಏರ್‌ಡೋಪ್ಸ್ 402 ಕೂಡ ಒಂದು. ಇದು ಇನ್-ಇಯರ್ ವಾಯರ್‌ಲೆಸ್ ವಿನ್ಯಾಸವನ್ನು ಹೊಂದಿರುವುದರಿಂದ ಆರಾಮದಾಯಕವಾದ ಅನುಭವವನ್ನು ನೀಡಲಿದೆ. ಇನ್ನು ಈ ಇಯರ್‌ಬಡ್‌ಗಳು 20Hz ನಿಂದ 20kHz ಫ್ರಿಕ್ವೆನ್ಸಿ ರೇಂಜ್‌ ಹೊಂದಿದ್ದು, ಎರಡು 10mm ಡ್ರೈವರ್‌ಗಳನ್ನು ಒಳಗೊಂಡಿದೆ. ಈ ಇಯರ್‌ಬಡ್ಸ್‌ ವಾಟರ್‌ ಪ್ರೂಫ್‌ ಆಗಿದ್ದು, ಬ್ಲೂಟೂತ್ 5.0 ಕನೆಕ್ಟಿವಿಟಿ ಹೊಂದಿದೆ. ಇದು 4 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಸಹ ನೀಡಿದೆ.

ರಿಯಲ್‌ಮಿ ಬಡ್ಸ್ Q2 ನಿಯೋ

ರಿಯಲ್‌ಮಿ ಬಡ್ಸ್ Q2 ನಿಯೋ

ಈ ಬಡ್ಸ್ ಇನ್-ಇಯರ್ ಇಯರ್‌ಬಡ್‌ಗಳೊಂದಿಗೆ ಕೋಬ್ಲೆಸ್ಟೋನ್ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ ನೀವು ಮೂರು ವಿಭಿನ್ನ ಗಾತ್ರಗಳಲ್ಲಿ ಸಿಲಿಕೋನ್ ಇಯರ್‌ ಟಿಪ್ಸ್‌ ಪಡೆಯಬಹುದಾಗಿದೆ. ಇನ್ನು ರಿಯಲ್‌ಮಿನ ಬಡ್ಸ್ Q2 ನಿಯೋ ಇಯರ್‌ಬಡ್ಸ್‌ 10mm ಬಾಸ್ ಬೂಸ್ಟ್ ಡ್ರೈವರ್‌ಗಳನ್ನು ಹೊಂದಿದ್ದು, ಮ್ಯೂಸಿಕ್‌ಗೆ ಉತ್ತಮವಾದ ಬಾಸ್ ನೀಡುತ್ತದೆ. ಜೊತೆಗೆ ಈ ಇಯರ್‌ಬಡ್‌ಗಳು ಗೇಮ್ ಮೋಡ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಇದು ಕಡಿಮೆ ಲೇಟೆನ್ಸಿ ಮೋಡ್ ಹೊಂದಿದ್ದು ಗೇಮರ್‌ಗಳನ್ನು ಹೆಚ್ಚು ಗಮನ ಸೆಳೆದಿದೆ.

ರೆಡ್ಮಿ ಇಯರ್‌ಬಡ್ಸ್ 2C

ರೆಡ್ಮಿ ಇಯರ್‌ಬಡ್ಸ್ 2C

ರೆಡ್ಮಿ ಇಯರ್‌ಬಡ್ಸ್ 2C ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ವಾಯರ್‌ಲೆಸ್ ಇಯರ್‌ಬಡ್ಸ್‌ಗಳಲ್ಲಿ ಒಂದಾಗಿದೆ. ಇದು ಕೂಡ ಇನ್-ಇಯರ್ ವಿನ್ಯಾಸದೊಂದಿಗೆ ಬರುತ್ತದೆ. ಈ ಇಯರ್‌ಬಡ್ಸ್‌ ಚಾರ್ಜಿಂಗ್ ಕೇಸ್‌ನೊಂದಿಗೆ 12 ಗಂಟೆಗಳ ಪ್ಲೇಬ್ಯಾಕ್ ಟೈಂ ನೀಡಲಿದೆ. ಆದರೆ ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ ನಿಮಗೆ ಸರಿಸುಮಾರು 4 ಗಂಟೆಗಳ ಬಾಳಿಕೆ ನೀಡಲಿದೆ. ಈ ಇಯರ್‌ಬಡ್ಸ್‌ ಪಾಪ್-ಒನ್ ಬಟನ್ ವಿನ್ಯಾಸದೊಂದಿಗೆ ಬರುತ್ತದೆ. ಹಾಗೆಯೇ ಇದು ಮ್ಯೂಸಿಕ್‌ ಪ್ಲೇ ಮಾಡುವುದು ಮತ್ತು ವಿರಾಮಗೊಳಿಸುವುದು, ಕರೆಗಳಿಗೆ ಉತ್ತರಿಸುವುದು, ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಆನ್ ಮಾಡುವುದು, ಮ್ಯೂಟ್ ಮಾಡುವುದು ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಲಿದೆ.

ನಾಯ್ಸ್‌ ಏರ್ ಬಡ್ಸ್ ನಾಯ್ಸ್‌

ನಾಯ್ಸ್‌ ಏರ್ ಬಡ್ಸ್ ನಾಯ್ಸ್‌

ಏರ್‌ಬಡ್ಸ್‌ ಏರ್‌ಪಾಡ್‌ಗಳಂತಹ ವಿನ್ಯಾಸದೊಂದಿಗೆ ಬರುತ್ತದೆ. ಆದರೆ ಈ ಇಯರ್‌ಬಡ್‌ಗಳಲ್ಲಿ ನೀವು ಸಿಲಿಕೋನ್ ಇಯರ್ ಟಿಪ್ಸ್ ಅನ್ನು ಪಡೆಯಲಾಗುವುದಿಲ್ಲ. ಈ ಇಯರ್‌ಬಡ್ಸ್‌ 20-ಗಂಟೆಗಳ ಪ್ಲೇಬ್ಯಾಕ್ ಟೈಂ ಹೊಂದಿದೆ. ಜೊತೆಗೆ IPX4 ವಾಟರ್‌ ಆಂಡ್‌ ಡಸ್ಟ್ ಪ್ರೂಫ್‌ ಬೆಂಬಲಿಸಲಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಬ್ಲೂಟೂತ್ 5.0 ಅನ್ನು ಬೆಂಬಲಿಸಲಿದ್ದು, ಯಾವುದೇ ಆಂಡ್ರಾಯ್ಡ್‌ ಫೋನ್, ಐಫೋನ್‌ ಮತ್ತು ಲ್ಯಾಪ್‌ಟಾಪ್‌ನೊಂದಿಗೆ ಸುಲಭವಾಗಿ ಜೋಡಿಸುವುದಕ್ಕೆ ಅವಕಾಶ ನೀಡಲಿದೆ.

Best Mobiles in India

English summary
Sony LinkBuds with Unique Open Ring Design Launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X