Subscribe to Gizbot

ಸೋನಿಯಿಂದ ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಲಾಂಚ್ ಗೆ ಸಿದ್ಧತೆ

Written By: Lekhaka

ಸೋನಿ ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಮತ್ತೆ ಲಯ ಕಂಡುಕೊಳ್ಳು ಮುಂದಾಗಿದೆ ಇದಕ್ಕಾಗಿ ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಹುಟ್ಟು ಹಾಕಿರುವ ಹೊಸ ಡಿಸೈನ್ ನಲ್ಲಿಯೇ ಟಾಪ್ ಎಂಡ್ ಸ್ಮಾರ್ಟ್ ಫೋನ್ ನಿರ್ಮಾಣಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸದ್ದು ಆರಂಭಿಸಲಿದೆ.

ಸೋನಿಯಿಂದ ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಲಾಂಚ್ ಗೆ ಸಿದ್ಧತೆ

ಜಪಾನ್ ಮೂಲದ ಸೋನಿ ಸದ್ಯ ಮಾರುಕಟ್ಟೆಯಲ್ಲಿ ರನ್ ಆಗುತ್ತಿರುವ ಬ್ರಿಜಲ್ ಲೈಸ್ ಡಿಸ್ ಪ್ಲೇ ವಿನ್ಯಾಸದ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದೆ ಎಂಬ ಮಾಹಿತಿಯೂ ಲೀಕ್ ಆಗಿದೆ. ಅಲ್ಲದೇ ಹೊಸ ಹೊಸ ಆಯ್ಕೆಗಳನ್ನು ನೀಡಲು ಸೋನಿ ಮುಂದಾಗಿದೆ ಎನ್ನಲಾಗಿದೆ.

ಈ ಕುರಿತು ಆನ್ ಲೈನಿನಲ್ಲಿ ಮಾಹಿತಿಯೂ ಲೀಕ್ ಆಗಿದ್ದು, ಸೋನಿ ಲಾಂಚ್ ಮಾಡಲು ಸಿದ್ಧತೆ ನಡೆಸಿರುವ ಸ್ಮಾರ್ಟ್ ಫೋನಿನಲ್ಲಿ 5.7 ಇಂಚಿನ 4K HDR ಡಿಸ್ ಪ್ಲೇಯನ್ನು ಕಾಣಬಹುದಾಗಿದೆ ಎನ್ನಲಾಗಿದೆ. ಅಲ್ಲದೇ ಇದಕ್ಕೆ ಗೊರಿಲ್ಲ ಗ್ಲಾಸ್ 5 ಸುಕ್ಷತೆಯನ್ನು ಸಹ ಒದಗಿಸಲಾಗಿದೆ.

ಶೀಘ್ರವೆ ಜಿಯೋ, ಏರ್‌ಟೆಲ್ ಎಲ್ಲವನ್ನು ಹಿಂದಿಕ್ಕಲಿದೆ ನಮ್ಮ BSNL ನೆಟ್‌ವರ್ಕ್!!..ಏಕೆ ಗೊತ್ತಾ?

ಇದಲ್ಲದೇ ಈ ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಜೊತೆಗೆ 4GB RAM ಅನ್ನು ಸಹ ಸೋನಿ ನೀಡಲಿದೆ ಎನ್ನಲಾಗಿದೆ. ಇದಲ್ಲದೇ 64GB ಇಂಟರ್ನಲ್ ಮೆಮೊರಿಯನ್ನು ಈ ಫೋನಿನಲ್ಲಿ ಕಾಣಬಹುದಾಗಿದೆ. ಇದಲ್ಲದೇ 3420mAh ಬ್ಯಾಟರಿಯನ್ನು ಹಾಗೂ ಕ್ವಾಲಕಮ್ ಕ್ವೀಕ್ ಚಾರ್ಜ್ ನೀಡಲಾಗಿದೆ.

ಇದಲ್ಲದೇ ಈ ಸ್ಮಾರ್ಟ್ ಫೋನ್ ಸದ್ಯ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಿಗೆ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ. ಇದಲ್ಲದೇ ಟಾಪ್ ಎಂಡ್ ಫೋನಿನಲ್ಲಿರುವ ಎಲ್ಲಾ ಆಯ್ಕೆಗಳನ್ನು ಈ ಸ್ಮಾರ್ಟ್ ಫೋನಿನಲ್ಲಿ ನಾವು ಕಾಣಬಹುದು. ನೂತನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ.

Read more about:
English summary
According to a new leak, Sony's upcoming flagship will finally come with a different design.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot