ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್‌ಮ್ಯಾನ್‌ ಲಾಂಚ್‌!..ಜಬರ್ದಸ್ತ್‌ ಫೀಚರ್ಸ್‌!

|

ಒಂದು ಕಾಲದಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್‌ ಆಗಿ ಗುರುತಿಸಿಕೊಂಡಿದ್ದ ಸೋನಿ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ಸ್‌ ಡಿವೈಸ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಸ್ಮಾರ್ಟ್‌ಟಿವಿ, ಸ್ಮಾರ್ಟ್‌ ಸ್ಪೀಕರ್‌ ಸೇರಿದಂತೆ ಅನೇಕ ಸ್ಮಾರ್ಟ್‌ ಡಿವೈಸ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಗಟ್ಟಿ ಮಾಡಿಕೊಂಡಿದೆ. ಜೊತೆಗೆ ಮ್ಯೂಸಿಕ್‌ ಆಕ್ಸಿಸರೀಸ್‌ ಮಾರುಕಟ್ಟೆಯಲ್ಲೂ ಕೂಡ ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಿದೆ. ಅದರಂತೆ ಇದೀಗ ಭಾರತದಲ್ಲಿ ಸೋನಿ ಹೊಸ ವಾಕ್‌ಮ್ಯಾನ್‌ NW-ZX707 ಅನ್ನು ಅನಾವರಣಗೊಳಿಸಿದೆ.

ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್‌ಮ್ಯಾನ್‌ ಲಾಂಚ್‌!..ಜಬರ್ದಸ್ತ್‌ ಫೀಚರ್ಸ್‌!

ಹೌದು, ಸೋನಿ ಕಂಪೆನಿಯ ಹೊಸ ವಾಕ್‌ಮ್ಯಾನ್‌ NW-ZX707 ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇಂದಿನ ಯುವಜನತೆಯನ್ನು ಆಕರ್ಷಿಸುವ ವಿನ್ಯಾಸ ಪಡೆದಿರುವ ಈ ವಾಕ್‌ಮ್ಯಾನ್‌ DSD ರೀಮಾಸ್ಟರಿಂಗ್ ಎಂಜಿನ್‌ ಅನ್ನು ಒಳಗೊಂಡಿದೆ. ಇದು ಆಡಿಯೊಫೈಲ್ಸ್ ಮತ್ತು ಹೈ-ಫೈ ಉತ್ಸಾಹಿಗಳಿಗೆ ಸೂಕ್ತವಾದ ಡಿಸೈನ್‌ ಹೊಂದಿದೆ. ಜೊತೆಗೆ ಈ ವಾಕ್‌ಮ್ಯಾನ್‌ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನುಳಿದಂತೆ ಈ ಹೊಸ ವಾಕ್‌ಮ್ಯಾನ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೋನಿ ವಾಕ್‌ಮ್ಯಾನ್ NW-ZX707 ಡಿಸೈನ್‌ ಹೇಗಿದೆ?

ಸೋನಿ ವಾಕ್‌ಮ್ಯಾನ್ NW-ZX707 5 ಇಂಚಿನ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ಹೊಂದಿದ್ದು, ಅಲ್ಯೂಮಿನಿಯಂ ಫ್ರೇಮ್‌ ಪಡೆದುಕೊಂಡಿದೆ. ಇನ್ನು ಈ ವಾಕ್‌ಮ್ಯಾನ್‌ ವೈಫೈ ಕನೆಕ್ಟಿವಿಟಿಯನ್ನು ನೀಡಲಿದ್ದು, ಪ್ರಯಾಣ ಮಾಡುವಾಗಲೂ ಮ್ಯೂಸಿಕ್‌ ಅನ್ನು ಸ್ಟ್ರೀಮಿಂಗ್‌ ಮಾಡಲು ಅವಕಾಶ ಸಿಗಲಿದೆ. ಇದರಲ್ಲಿ ಹಾಡುಗಳನ್ನು ಡೌನ್‌ಲೋಡ್‌ ಮಾಡುವುದಕ್ಕೆ ಅವಕಾಶ ನೀಡಲಾಗಿದ್ದು, ಆಫ್‌ಲೈನ್‌ನಲ್ಲಿಯೂ ಸಹ ಮ್ಯೂಸಿಕ್‌ ಆಲಿಸಬಹುದಾಗಿದೆ. ಇನ್ನು ಇದರಲ್ಲಿರುವ DSD ರೀಮಾಸ್ಟರಿಂಗ್ ಇಂಜಿನ್ ಆಡಿಯೋವನ್ನು 11.2MHz DSD ಗೆ ರಿ ಸ್ಯಾಂಪಲ್ಸ್‌ ಮಾಡಲಿದೆ. ಇದರಿಂದ ಹಾಡುಗಳನ್ನು ಕೇಳುವವರಿಗೆ ಇದು ಹೆಚ್ಚು ಪರಿಷ್ಕೃತ ಅನುಭವವನ್ನು ನೀಡಲಿದೆ.

ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್‌ಮ್ಯಾನ್‌ ಲಾಂಚ್‌!..ಜಬರ್ದಸ್ತ್‌ ಫೀಚರ್ಸ್‌!

ಸೋನಿ ವಾಕ್‌ಮ್ಯಾನ್ NW-ZX707 ಫೀಚರ್ಸ್‌ ಏನು?

ಸೋನಿ ವಾಕ್‌ಮ್ಯಾನ್‌ NW-ZX707 ಎಸ್‌-ಮಾಸ್ಟರ್‌ HX ಡಿಜಿಟಲ್ amp ಮತ್ತು AI-ಚಾಲಿತ ಸೌಂಡ್ ಎಂಜಿನ್ ಡಿಜಿಟಲ್ ಸೌಂಡ್ ಎನ್‌ಹಾನ್ಸ್‌ಮೆಂಟ್ ಎಂಜಿನ್ ಅಲ್ಟಿಮೇಟ್‌ನೊಂದಿಗೆ ಬರಲಿದೆ. ಇದರಿಂದ ರಿಯಲ್‌ ಟೈಂನಲ್ಲಿ ಮ್ಯೂಸಿಕ್‌ ಅನ್ನು ಹೈ ಎಂಡ್‌ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಇದರಲ್ಲಿರುವ CD ಗುಣಮಟ್ಟ 16-ಬಿಟ್ ಯಾವುದೇ ನಷ್ಟವಿಲ್ಲದ ಕೊಡೆಕ್ ಆಡಿಯೊವನ್ನು ಹೆಚ್ಚಿಸುವುದಕ್ಕೆ ಅವಕಾಶ ಕಲ್ಪಿಸಲಿದೆ. ಇನ್ನು ಈ ಡಿವೈಸ್‌ ಲಾಂಗ್‌ ಬ್ಯಾಟರಿ ಬ್ಯಾಕ್‌ ಅಪ್‌ ಅನ್ನು ನೀಡಲಿದೆ. ಸಿಂಗಲ್‌ ಚಾರ್ಜ್‌ನಲ್ಲಿ 23 ಗಂಟೆಗಳ ಬಾಳಿಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ.

ಸೋನಿ ವಾಕ್‌ಮ್ಯಾನ್ NW-ZX707 ಬೆಲೆ ಎಷ್ಟು?

ಸೋನಿ ವಾಕ್‌ಮ್ಯಾನ್ NW-ZX707 ಭಾರತದಲ್ಲಿ 69,990ರೂ.ಬೆಲೆಯಲ್ಲಿ ಲಭ್ಯವಾಗಲಿದೆ.

ಇನ್ನು ಸೋನಿ ಕಂಪೆನಿ ಇತ್ತೀಚಿಗೆ ವಾಕ್‌ಮ್ಯಾನ್ NW-A 105 ಬಿಡುಗಡೆ ಮಾಡಿದ್ದು, ಇದು 3.6 ಇಂಚಿನ ಎಚ್‌ಡಿ ಡಿಸ್ಪ್ಲೇಯನ್ನು ಹೊಂದಿದ್ದು, ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಮ್ಯೂಸಿಕ್ ಪ್ಲೇಯರ್ ಹೆಚ್ಚಿನ ರೆಸಲ್ಯೂಶನ್ ಆಡಿಯೊವನ್ನು ಬೆಂಬಲಿಸಲಿದೆ. ಇದು ಸಿಡಿ-ಗುಣಮಟ್ಟದ ಸಂಗೀತಕ್ಕಿಂತ ಉತ್ತಮವಾದ ಸಂಗೀತದ ಅನುಭವವನ್ನ ನೀಡಲಿದೆ ಎಂದು ಸೋನಿ ಕಂಪೆನಿ ಹೇಳಿಕೊಂಡಿದೆ.

ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್‌ಮ್ಯಾನ್‌ ಲಾಂಚ್‌!..ಜಬರ್ದಸ್ತ್‌ ಫೀಚರ್ಸ್‌!

ಈ ಹೊಸ ವಾಕ್‌ಮ್ಯಾನ್‌ ಉತ್ತಮ ಗುಣಮಟ್ಟದ ಪಿಸಿಎಂ ಪರಿವರ್ತನೆ ಪ್ರಾಡಕ್ಟ್‌ ಅನ್ನ ಹೊಂದಿದ್ದ, ಡಿಎಸ್‌ಡಿ ಮತ್ತು ಎಫ್‌ಎಎಲ್‍ಸಿ ಪ್ಲೇಬ್ಯಾಕ್ ಅನ್ನು 11.2Mhz ವರೆಗೂ ಬೆಂಬಲಿಸುತ್ತದೆ. ಅಲ್ಲದೆ ಎಚ್‌ಎಕ್ಸ್ ಡಿಜಿಟಲ್ ಆಂಪ್ಲಿಫೈಯರ್ ಅನ್ನು ಸಹ ಒಳಗೊಂಡಿದೆ. ಇನ್ನು ಈ ವಾಕ್‌ಮ್ಯಾನ್‌ Wi-Fi ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದ್ದು, ಯಾವಾಗಲೂ ಹೊಸ ಸಂಗೀತವನ್ನ ಆಲಿಸಲು ಸ್ಟ್ರೀಮಿಂಗ್ ಸೇವೆಗಳನ್ನ ನೀಡುತ್ತದೆ. ವೈ-ಫೈ ಸಂಪರ್ಕವಿಲ್ಲದಿದ್ದಾಗ, ಟ್ರ್ಯಾಕ್‌ಗಳನ್ನು ಆಫ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು.

ಇದಲ್ಲದೆ ಈ ವಾಕ್‌ಮ್ಯಾನ್‌ 4GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದ್ದು, ಮೆಮೊರಿ ಕಾರ್ಡ್‌ ಮೂಲಕ 128GB ವರೆಗೆ ವಿಸ್ತರಿಸಬಹುದಾಗಿದೆ. ಇದಲ್ಲದೆ, ಒಂದೇ ಚಾರ್ಜ್‌ನಲ್ಲಿ ವಾಕ್‌ಮ್ಯಾನ್‌ನಲ್ಲಿ 26 ಗಂಟೆಗಳ ಬ್ಯಾಟರಿ ಬಾಳಿಕೆ ಅವಧಿಯನ್ನು ಹೊಂದಿದ್ದು, ಇದನ್ನ ಯುಎಸ್ಬಿ ಟೈಪ್-ಸಿ ಸ್ಲಾಟ್‌ನೊಂದಿಗೆ ಚಾರ್ಜ್ ಮಾಡಬಹುದಾಗಿದೆ. ಸದ್ಯ ಈ ವಾಕ್‌ಮ್ಯಾನ್‌ನ ಬೆಲೆ 23,990 ರೂ. ಆಗಿದ್ದು, ಸೋನಿ ಸ್ಟೋರ್‌ನಲ್ಲಿ ಬ್ಲ್ಯಾಕ್‌ ಕಲರ್‌ನಲ್ಲಿ ಮಾತ್ರ ಲಭ್ಯವಿದೆ.

Best Mobiles in India

English summary
Sony Walkman NW-ZX707 features a large 5-inch touchscreen display with an aluminium frame and offers Wi-Fi connectivity.know more details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X