ಸೋನಿಯ ಬೆಸ್ಟ್ ಆಂಡ್ರಾಯ್ಡ್ ಫೋನ್ ಎಕ್ಸ್‌ಪೀರಿಯಾ ಸಿ4 ಡ್ಯುಯಲ್

Posted By:

ಭಾರತದಲ್ಲಿ ಸೋನಿ ಕಂಪೆನಿ ಎಕ್ಸ್‌ಪೀರಿಯಾ ಎಮ್4 ಆಕ್ವಾ ಡ್ಯುಯಲ್ ಅನ್ನು ಲಾಂಚ್ ಮಾಡಿದ ಬೆನ್ನಲ್ಲೇ ಎಕ್ಸ್‌ಪೀರಿಯಾ ಸಿ4 ಡ್ಯುಯಲ್ ಅನ್ನು ದೇಶದಲ್ಲಿ ಪ್ರಸ್ತುತಪಡಿಸಿದೆ. ಕಂಪೆನಿ ಫೋನ್ ಅನ್ನು ಲಾಂಚ್ ಮಾಡಿದ್ದರೂ ಬೆಲೆಯನ್ನು ಇನ್ನೂ ತಿಳಿಸಿಲ್ಲ. ಭಾರತದಲ್ಲಿ ಜೂನ್‌ನ ಮಧ್ಯಭಾಗದಲ್ಲಿ ಫೋನ್ ಲಭ್ಯವಾಗಲಿದೆ. ಬಿಳಿ, ಕಪ್ಪು, ಮತ್ತು ಮಿಂಟ್ ಬಣ್ಣಗಳಲ್ಲಿ ಫೋನ್ ದೊರೆಯಲಿದೆ.

ಸೋನಿಯ ಬೆಸ್ಟ್ ಆಂಡ್ರಾಯ್ಡ್ ಫೋನ್ ಎಕ್ಸ್‌ಪೀರಿಯಾ ಸಿ4 ಡ್ಯುಯಲ್

ಆಂಡ್ರಾಯ್ಡ್ 5.0 ಲಾಲಿಪಪ್ ಆಧಾರಿತ ಸೋನಿ ಎಕ್ಸ್‌ಪೀರಿಯಾ ಸಿ4 ಡ್ಯುಯಲ್, 5.5 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ, ಬ್ರಾವಿಯಾ ಎಂಜಿನಿ 2 ಮತ್ತು ಸೂಪರ್ ವಿವಿದ್ ಮೋಡ್‌ನೊಂದಿಗೆ ಬಂದಿದೆ. ಫೋನ್‌ನಲ್ಲಿ 64 ಬಿಟ್ 1.7GHZ ಓಕ್ಟಾ ಕೋರ್ ಪ್ರೊಸೆಸರ್ ಇದ್ದು ಮೀಡಿಯಾ ಟೆಕ್ MT6752 ಜೊತೆಗೆ 2 ಜಿಬಿ RAM ಅನ್ನು ಡಿವೈಸ್ ಹೊಂದಿದೆ.

ಓದಿರಿ: ವಾಟ್ಸಾಪ್ ವಾಯ್ಸ್ ಕಾಲಿಂಗ್ ದುಬಾರಿ!!!

ಫೋನ್‌ನ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ. ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಡಿವೈಸ್ ಪಡೆದುಕೊಂಡಿದ್ದು ಸೆಲ್ಫಿ ತೆಗೆಯಲು ಅತಿ ಸೂಕ್ತವಾದ ಡಿವೈಸ್ ಎಂದೆನಿಸಿದೆ. ಕಂಪೆನಿಯ ಎಕ್ಸಾಮರ್ ಆರ್ ಸೆನ್ಸಾರ್ ಅನ್ನು ಫೋನ್ ಒಳಗೊಂಡಿದ್ದು ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ.

ಓದಿರಿ: ಐಫೋನ್ ಗೆಲುವಿಗೆ ಬೆನ್ನೆಲುಬಾಗಿರುವ ಟಾಪ್ ಅಂಶಗಳು

ಫೋನ್‌ನಲ್ಲಿ 16 ಜಿಬಿ ಆಂತರಿಕ ಸಂಗ್ರಹಣೆ ಇದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವರ್ಧಿಸಬಹುದು. ಫೋನ್‌ನ ಬ್ಯಾಟರಿ 2600mAh ಆಗಿದ್ದು, 12 ಗಂಟೆಗಳ ಟಾಕ್ ಟೈಮ್ ಅನ್ನು ಬಳಕೆದಾರರಿಗೆ ಒದಗಿಸುತ್ತಿದೆ. ಇನ್ನು ಫೋನ್‌ನ ಸಂಪರ್ಕ ವಿಶೇಷತೆಗಳೆಂದರೆ ವೈಫೈ, 3ಜಿ, 4ಜಿ ಎಲ್‌ಟಿಇ ಮೈಕ್ರೋ ಯುಎಸ್‌ಬಿ ಇದೆ.

English summary
Sony, alongside the launch of the Xperia M4 Aqua Dual in India, has launched the Xperia C4 Dual in the country, but did not reveal the price yet, saying it will be available in mid-June in India. The smartphone will be available in White, Black, and Mint colours.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot