Just In
- 2 hrs ago
WhatsApp: ವಾಟ್ಸಾಪ್ ಮ್ಯಾಕ್ಒಎಸ್ (MacOS) ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- 2 hrs ago
ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?
- 4 hrs ago
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- 5 hrs ago
ಕೈಗೆಟಕುವ ಬೆಲೆಯಲ್ಲಿ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 12i! ಸ್ಟೈಲಿಶ್ ಲುಕ್!
Don't Miss
- Movies
Lakshana Serial: ಆಫೀಸ್ಗೆ ಎಂಟ್ರಿ ಕೊಟ್ಟ ಲಕ್ಷಣ:ಶ್ವೇತಾಗೆ ಶಾಕ್
- News
ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರಿಂದ ಚುನಾಯಿತ ಸರ್ಕಾರಗಳಿಗೆ ತೊಂದರೆ : ಅರವಿಂದ್ ಕೇಜ್ರಿವಾಲ್
- Sports
ಕೆಎಲ್ ರಾಹುಲ್ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ; ಧೋನಿಯಿಂದಲೂ ದುಬಾರಿ ಉಡುಗೊರೆ!
- Lifestyle
ಆರೋಗ್ಯಕರ ಸ್ತನದ ಲಕ್ಷಣಗಳೇನು? ಸ್ತನಗಳು ಹೇಗಿದ್ದರೆ ನಿರ್ಲಕ್ಷ್ಯ ಮಾಡಲೇಬಾರದು?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ SonyLIV ನೀಡುವ ಚಂದಾದಾರಿಕೆ ಪ್ಲಾನ್‌ಗಳ ವಿವರ!
ಇಂದಿನ ದಿನಗಳಲ್ಲಿ ಸ್ಟ್ರೀಮಿಂಗ್ ಸೇವೆ ನೀಡುವ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದರಲ್ಲಿ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಒಡೆತನದ ಸೋನಿಲೈವ್ (SonyLIV) ಅಪ್ಲಿಕೇಶನ್ ಕೂಡ ಒಂದಾಗಿದೆ. ಭಾರತದಲ್ಲಿ ಸೋನಿ ಲೈವ್ ಬಳಕೆದಾರರ ನೆಚ್ಚಿನ ಸ್ಟ್ರೀಮಿಂಗ್ ಅಪ್ಲಿಕೇಶನ್ ಆಗಿ ಗುರುತಿಸಿಕೊಳ್ಳುತ್ತಿದೆ. ಸೋನಿಲೈವ್ ಅಪ್ಲಿಕೇಶನ್ ಕೂಡ ಸ್ಟ್ರೀಮಿಂಗ್ ಸೇವೆಗೆ ಪ್ರವೇಶ ಪಡೆಯುವುದಕ್ಕೆ ಚಂದಾದಾರಿಕೆ ಪ್ಲಾನ್‌ಗಳನ್ನು ಒಳಗೊಂಡಿದೆ. ಇದಕ್ಕಾಗಿ ವಿಶೇಷ ಚಂದಾದಾರಿಕೆ ಪ್ಲಾನ್‌ಗಳನ್ನು ನೀಡುತ್ತಿದೆ.

ಹೌದು, ಸೋನಿ ಲೈವ್ ಅಪ್ಲಿಕೇಶನ್ ಭಾರತದಲ್ಲಿ ಜನಪ್ರಿಯ ವೀಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್ ಎನಿಸಿಕೊಂಡಿದೆ. ಮನರಂಜನೆಯನ್ನು ಬಯಸುವ ಬಳಕೆದಾರರಿಗೆ ಸಿನಿಮಾ, ವೆಬ್ ಸಿರೀಸ್, ಕ್ರೀಡೆ ಸೇರಿದಂತೆ ಅನೇಕ ಸ್ಟ್ರಿಮಿಂಗ್ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಅದರಲ್ಲೂ ಸೋನಿ ಲೈವ್ ಅಪ್ಲಿಕೇಶನ್ ಲೈವ್ ಸ್ಪೋರ್ಟ್ಸ್ ನಿಂದಾಗಿ ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡಿದೆ. ಕ್ರಿಕೆಟ್, WWE, UFC, UEFA ಚಾಂಪಿಯನ್ಸ್ ಲೀಗ್ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ರೀಡಾ ವಿಷಯವನ್ನು ಸಹ ನೀಡುತ್ತದೆ.

ಇನ್ನು ಸೋನಿ ಲೈವ್ ಅಪ್ಲಿಕೇಶನ್‌ನಲ್ಲಿ ನೀವು ನಿಮ್ಮ ನೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಬಹುದು. ಅಲ್ಲದೆ ವಿಭಿನ್ನ ವೆಬ್ ಸಿರೀಸ್‌ಗಳನ್ನು ನೋಡಬಹುದು. ಇದರ ಜೊತೆಗೆ, ಸೋನಿ LIV ಯ ಕ್ಯಾಟಲಾಗ್ ಕಪಿಲ್ ಶರ್ಮಾ ಶೋ, ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ಸಹ ಒಳಗೊಂಡಿದೆ. ಇದರೊಂದಿಗೆ ಹಾಲಿವುಡ್ ಚಲನಚಿತ್ರಗಳು, ವೆಬ್ ಸರಣಿಗಳು, ಲೈವ್ ಕ್ರೀಡಾಕೂಟಗಳು ಕೂಡ ಸೇರಿವೆ. ಹಾಗಾದ್ರೆ ಸೋನಿ ಲೈವ್ ಭಾರತದಲ್ಲಿ ನೀಡುತ್ತಿರುವ ಚಂದಾದಾರಿಕೆ ಪ್ಲಾನ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

SonyLIV ಪ್ರೀಮಿಯಂ ಪ್ಲಾನ್
ಸೋನಿ LIV ಸ್ಟ್ರೀಮಿಂಗ್ ಅಪ್ಲಿಕೇಶನ್ ನೀಡುವ ಚಂದಾದಾರಿಕೆ ಪ್ಲಾನ್‌ಗಳಲ್ಲಿ ಪ್ರೀಮಿಯಂ ಪ್ಲಾನ್ ಕೂಡ ಒಂದು. ಸೋನಿಲೈವ್ ಪ್ರೀಮಿಯಂ ಪ್ಲಾನ್ ಮೂರು ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇವುಗಳನ್ನು ಮಾಸಿಕ, ಅರೆ ವಾರ್ಷಿಕ ಮತ್ತು ವಾರ್ಷಿಕ ಪ್ಲಾನ್ ಎಂದು ಗುರುತಿಸಲಾಗಿದೆ. ಈ ಮೂರು ಪ್ಲಾನ್‌ಗಳು ವಿಭಿನ್ನ ಬೆಲೆಗಳು ಹಾಗೂ ಮಾನ್ಯತೆಯ ಅವಧಿಯನ್ನು ಹೊಂದಿವೆ. ಆದರೆ ಪ್ರಯೋಜನಗಳ ದೃಷ್ಟಿಯಲ್ಲಿ ಮಾತ್ರ ಮೂರು ಪ್ಲಾನ್‌ಗಳು ಕೂಡ ಒಂದೇ ರೀತಿಯ ಲಕ್ಷಣವನ್ನು ಹೊಂದಿವೆ.

*ಮಾಸಿಕ ಪ್ರೀಮಿಯಂ ಪ್ಲಾನ್
ಮಾಸಿಕ ಪ್ರೀಮಿಯಂ ಪ್ಲಾನ್ 299ರೂ.ಬೆಲೆಯಲ್ಲಿ ದೊರೆಯಲಿದೆ. ಈ ಪ್ಲಾನ್‌ನಲ್ಲಿ ನೀವು ಲೈವ್ ಸ್ಪೋರ್ಟ್ಸ್, ಟಿವಿ ಚಾನೆಲ್‌ಗಳು, SonyLIV ಮೂಲ ವಿಷಯ ಮತ್ತು ಹಾಲಿವುಡ್ ಚಲನಚಿತ್ರಗಳಿಗೆ ಪ್ರವೇಶವನ್ನು ಪ್ರಡುಕೊಳ್ಳಬಹುದು.
* ಅರೆ ವಾರ್ಷಿಕ/ಆರು ತಿಂಗಳ ಪ್ರೀಮಿಯಂ ಪ್ಲಾನ್
ಸೋನಿ ಲೈವ್ ನೀಡುವ ಆರು ತಿಂಗಳ ಪ್ರೀಮಿಯಂ ಪ್ಲಾನ್ ಬಳಕೆದಾರರಿಗೆ ಏಕಕಾಲದಲ್ಲಿ ಎರಡು ಸ್ಕ್ರೀನ್‌ಗಳನ್ನು ಬಳಸುವುದಕ್ಕೆ ಅವಕಾಶ ನೀಡಲಿದೆ. ನಿಮಗೆ ಈ ಪ್ಲಾನ್ 699ರೂ.ಬೆಲೆಯಲ್ಲಿ ದೊರೆಯಲಿದೆ.
* ವಾರ್ಷಿಕ ಪ್ಲಾನ್
ಸೋನಿ ಲೈವ್ ಸ್ಟ್ರೀಮಿಂಗ್ ಅಪ್ಲಿಕೇಶನ್ ನೀಡುವ ವಾರ್ಷಿಕ ಪ್ಲಾನ್ 999ರೂ. ನಲ್ಲಿ ಲಭ್ಯವಿದೆ. ಈ ಪ್ಲಾನ್‌ನಲ್ಲಿ ಕೂಡ ನೀವು ಏಕಕಾಲದಲ್ಲಿ ಎರಡು ಪರದೆಗಳನ್ನು ಬಳಸುವುದಕ್ಕೆ ಅವಕಾಶವಿದೆ. ಆದರೆ ಮಾಸಿಕ ಯೋಜನೆಯು ಈ ಪ್ರಯೋಜನವನ್ನು ಹೊಂದಿಲ್ಲ.

SonyLIV WWE ನೆಟ್‌ವರ್ಕ್ ಪ್ಲಾನ್
ಸೋನಿ ಲೈವ್ ನೀಡುವ ಎರಡನೇ ಚಂದಾದಾರಿಕೆ ಪ್ಲಾನ್ ಇದಾಗಿದೆ. ಈ ಪ್ಲಾನ್ ಹೆಸರೇ ಸೂಚಿಸುವಂತೆ, WWE ಸ್ಪೋರ್ಟ್ಸ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಪ್ರವೇಶವನ್ನು ನೀಡಲಿದೆ. ಅಂದರೆ ಲೈವ್ WWE ಈವೆಂಟ್‌ಗಳು, NXT ಮತ್ತು PPV ಗಳಿಗೆ ಪ್ರವೇಶವನ್ನು ನೀಡುತ್ತದೆ. ಸಂಪೂರ್ಣ WWE ಆರ್ಕೈವ್‌ಗಳಿಗೆ ಅನಿಯಂತ್ರಿತ ಪ್ರವೇಶ, ಮತ್ತು ವಿಶೇಷವಾದ WWE ಸರಣಿಗಳು, RAW ಮತ್ತು ಸ್ಮ್ಯಾಕ್‌ಡೌನ್ ಸಂಚಿಕೆಗಳನ್ನು ವೀಕ್ಷಿಸಬಹುದು. ಇದು 299ರೂ ಬೆಲೆಯನ್ನು ಹೊಂದಿದ್ದು, ವಾರ್ಷಿಕ ಅವಧಿಯನ್ನು ನೀಡಲಿದೆ.

SonyLIV ಮೊಬೈಲ್-ಓನ್ಲಿ ಪ್ಲಾನ್
ಸೋನಿ ಲೈವ್‌ನ ಮೊಬೈಲ್-ಓನ್ಲಿ ಪ್ಲಾನ್ 299ರೂ.ಬೆಲೆಯಲ್ಲಿ ಬರಲಿದೆ. ಈ ಪ್ಲಾನ್‌ನಲ್ಲಿ ನೀವು ಕಂಟೆಂಟ್ ಸ್ಟ್ರೀಮಿಂಗ್ ಅನ್ನು ಒಂದು ಸ್ಕ್ರೀನ್‌ನಲ್ಲಿ ಮಾತ್ರ ಮಾಡಬಹುದು. ಅಲ್ಲದೆ 5 ಪ್ರೊಫೈಲ್‌ಗಳವರೆಗೆ ಬಳಸಲು ಸಾಧ್ಯವಾಗುತ್ತದೆ. ಆದರೆ ಈ ಪ್ಲಾನ್ ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್ ಟಿವಿಗಳಿಗೆ ಕಾರ್ಯನಿರ್ವಹಿಸುವುದಿಲ್ಲ.

ಇನ್ನು ಭಾರತದಲ್ಲಿ ಸೋನಿಲೈವ್ ಮಾತ್ರವಲ್ಲ ಇತರೆ ಒಟಿಟಿ ಅಪ್ಲಿಕೇಶನ್‌ಗಳು ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಮನರಂಜನೆಯನ್ನು ಬಯಸುವವರಿಗೆ ಹೊಸ ತಾಣವಾಗಿ ಪರಿವರ್ತನೆ ಗೊಂಡಿವೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳ ಜನಪ್ರಿಯತೆ ಸಿನಿಮಾ ವೀಕ್ಷಣೆಯ ವ್ಯಾಖ್ಯಾನವನ್ನೇ ಬದಲಾಯಿಸಬಿಟ್ಟಿವೆ. ಇದೇ ಕಾರಣಕ್ಕೆ ದೇಶದಲ್ಲಿ ಅನೇಕ ಅಪ್ಲಿಕೇಶನ್‌ಗಳು ತಮ್ಮದೇ ಆದ ಬಳಕೆದಾರರನ್ನು ಗಳಿಸಿಕೊಂಡಿವೆ. ಇವುಗಳಲ್ಲಿ ಅಮೆಜಾನ್ ಪ್ರೈಮ್ ವೀಡಿಯೊ, ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ಗಳು ಸೇರಿವೆ.

ಅಮೆಜಾನ್ ಪ್ರೈಮ್ ವಿಡಿಯೋ
ಅಮೆಜಾನ್ ಪ್ರೈಮ್ ವೀಡಿಯೋ ಪ್ಲಾಟ್‌ಫಾರ್ಮ್‌ಗೆ ಪ್ರವೇಶ ಪಡೆಯಬೇಕಾದರೆ ಚಂದಾದಾರಿಕೆಯನ್ನು ಹೊಂದಿರಬೇಕಾಗುತ್ತದೆ. ಇದಕ್ಕಾಗಿ ಅಮೆಜಾನ್ ಪ್ರೈಮ್ ಹಲವು ಪ್ಲಾನ್‌ಗಳನ್ನು ಪರಿಚಯಿಸಿದೆ. ಇನ್ನು ಅಮೆಜಾನ್ ಪ್ರೈಮ್ ಸದಸ್ಯರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಉಚಿತ ಮತ್ತು ಸ್ಪೀಡ್ ಡೆಲಿವರಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ನೆಟ್‌ಫ್ಲಿಕ್ಸ್
ನೆಟ್ಫ್ಲಿಕ್ಸ್ ಅತ್ಯಂತ ಜನಪ್ರಿಯ ವಿಡಿಯೋ-ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋಗೆ ಹೋಲಿಸಿದರೆ ಉತ್ತಮ ವಿಷಯವನ್ನು ನೀಡುತ್ತದೆ. ನೆಟ್‌ಫ್ಲಿಕ್ಸ್ ಪ್ರವೇಶಿಸುವುದಕ್ಕೂ ಕೂಡ ನೀವು ಚಂದಾದಾರಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಆಯ್ಕೆಗೆ ಅನುಗುಣವಾದ ವಿಶೇಷ ಚಂದಾದಾರಿಕೆಗಳು ಇದರಲ್ಲಿ ಲಭ್ಯವಿದೆ.

ಡಿಸ್ನಿ + ಹಾಟ್‌ಸ್ಟಾರ್
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ವಿಶೇಷವಾಗಿ ಸ್ಪೋರ್ಟ್ಸ್ ಕಂಟೆಂಟ್‌ನಿಂದಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇದರಲ್ಲಿರುವ ಚಂದಾದಾರಿಕೆ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನೀವು ನಿಮ್ಮ ಆಯ್ಕೆಯ ವಿಷಯವನ್ನು ಪ್ರವೇಶಿಸಬಹುದು. ಇನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್, ಸೂಪರ್, ಪ್ರೀಮಿಯಂ ಎನ್ನುವ ಮೂರು ಚಂದಾದಾರಿಕೆ ಪ್ಲಾನ್‌ಗಳನ್ನು ಹೊಂದಿದೆ. ಇದರಲ್ಲಿ ಮೂರು ಪ್ಲಾನ್‌ಗಳು ಕೂಡ ಒಂದು ವರ್ಷದ ಮಾನ್ಯತೆಯನ್ನು ಹೊಂದಿವೆ. ಆದರೆ ಪ್ರಯೋಜನಗಳ ವಿಚಾರದಲ್ಲಿ ವಿಭಿನ್ನತೆಯನ್ನು ಪಡೆದುಕೊಂಡಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470