ಇನ್‌ಕಮಿಂಗ್ ಕರೆಗಳಿಗೆ ದರವನ್ನು ವಿಧಿಸುವುದು ಬಹುತೇಕ ಖಚಿತ!

|

ಜಿಯೋಯಿಂದಾಗಿ ನೆಲಕಚ್ಚುವ ಭೀತಿ ಎದುರಿಸುತ್ತಿರುವ ಪ್ರತಿಸ್ಪರ್ಧಿ ಟೆಲಿಕಾಂ ಕಂಪೆನಿಗಳು ಇನ್‌ಕಮಿಂಗ್ ಕರೆಗಳಿಗೆ ದರವನ್ನು ವಿಧಿಸುವುದು ಬಹುತೇಕ ಖಚಿತವಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಹೊರಬಿದ್ದಿದ್ದ ಶಾಕಿಂಗ್ ಸುದ್ದಿಗೆ ಪುಷ್ಠಿ ನೀಡುವಂತೆ, ಬಳಕೆದಾರರು ನಿರ್ದಿಷ್ಟ ಸಮಯಕ್ಕೆ ರೀಚಾರ್ಜ್ ಒಂದನ್ನು ಮಾಡಿಸಿಕೊಳ್ಳಲೇಬೇಕು ಎಂದು ಇದೀಗ ಹೇಳಲಾಗಿದೆ.

ಇನ್​ಕಮಿಂಗ್ ಕಾಲ್​ಗಳ ಮೇಲೆ ದರ ವಿಧಿಸಲು ಚಿಂತನೆ ನಡೆಸಿರುವ ಕೆಲವು ಟೆಲಿಕಾಂ ಕಂಪೆನಿಗಳು ಇದಕ್ಕಾಗಿ ಪ್ಲಾನ್ ಒಂದನ್ನು ರೂಪಿಸಿಕೊಂಡಿವೆ ಎನ್ನಲಾಗಿದೆ. ಆದರೆ, ಇನ್‌ಕಮಿಂಗ್ ಕರೆಗಳಿಗೆ ಪ್ರತಿ ನಿಮಿಷಕ್ಕೆ ದರ ವಿಧಿಸುವ ಬದಲಾಗಿ, ಬಳಕೆದಾರರು ನಿರ್ದಿಷ್ಟ ಸಮಯಕ್ಕೆ(ತಿಂಗಳಿಗೆ) ಕನಿಷ್ಟ ಪ್ಲಾನ್ ಒಂದನ್ನು ರಿಚಾರ್ಜ್​ ಮಾಡಿಸಿಕೊಳ್ಳಲೇಬೇಕು ಎಂದು ಹೇಳಲಾಗಿದೆ.

ಇನ್‌ಕಮಿಂಗ್ ಕರೆಗಳಿಗೆ ದರವನ್ನು ವಿಧಿಸುವುದು ಬಹುತೇಕ ಖಚಿತ!

ಜಿಯೋ ಬಂದ ನಂತರ ಇತರೆ ಟೆಲಿಕಾಂ ಕಂಪೆನಿಗಳ ಸಿಮ್‌ಗಳು ಬಳಕೆಯಾಗುತ್ತಿದ್ದರೂ ಸಹ ರೀಚಾರ್ಜ್ ಮಾಡಿಸಿಕೊಳ್ಳುವವರ ಪ್ರಮಾಣ ಕಡಿಮೆಯಿತ್ತು. ಇದರಿಂದ ಬೇಸತ್ತಿರುವ ಟೆಲಿಕಾಂ ಕಂಪೆನಿಗಳು ಕನಿಷ್ಟ ರಿಚಾರ್ಜ್​ ಮಾಡಿಸಿಕೊಳ್ಳಲೇಬೇಕು ಎನ್ನುವ ನಿಯಮ ಜಾರಿಗೆ ತರಲು ಮುಂದಾಗಿದ್ದು, ಕನಿಷ್ಟ ಆದಾಯ ಪಡೆಯುವ ಯೋಜನೆಯನ್ನು ಮಾಡಿಕೊಂಡಿವೆ ಎನ್ನಲಾಗಿದೆ.

ಇನ್ನು ಹೀಗೆ ಮಾಡುವುದರಿಂದ ಗ್ರಾಹಕರನ್ನು ಕಳೆದುಕೊಳ್ಳುವ ಬಗ್ಗೆ ಕೂಡ ಆಲೋಚಿಸಿರುವ ಕಂಪೆನಿಗಳು ಇದು ಸಧ್ಯದಲ್ಲಿ ಆಗದ ಮಾತು ಎಂದುಕೊಂಡಿರುವ ಹಾಗಿದೆ. ಹಾಗಾದರೆ, ಏನಿದು ಶಾಕಿಂಗ್ ವರದಿ? ಟೆಲಿಕಾಂನಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆಗಳು ಯಾವುವು? ಜಿಯೋ ವಿರುದ್ಧ ಟೆಲಿಕಾಂ ಒಗ್ಗಟ್ಟಾಗಿರುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಜಿಯೋ ವಿರುದ್ಧ ಒಗ್ಗಟ್ಟು!

ಜಿಯೋ ವಿರುದ್ಧ ಒಗ್ಗಟ್ಟು!

ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆನೆ ತುಳಿದ ದಾರಿಯಂತೆ ಮುನ್ನೆಡೆಯುತ್ತಿರುವ ಅಂಬಾನಿ ಒಡೆತನದ ಜಿಯೋ ಕಂಪೆನಿಯನ್ನು ಕಟ್ಟಿಹಾಕುವ ಪ್ರಯತ್ನ ನಡೆಯುತ್ತಿದೆ. ಜಿಯೋ ವಿರುದ್ಧವಾಗಿ ದೇಶದ ಬಹುಪಾಲು ಟೆಲಿಕಾಂ ಕಂಪೆನಿಗಳು ಸೇರಿ ಕತ್ತಿ ಮಸೆಯುತ್ತಿವೆ. ಇದಕ್ಕಾಗಿ ಒಗ್ಗೂಡಿರುವ ಬಹುತೇಕ ಕಂಪೆನಿಗಳು ಹಲವು ಪ್ಲಾನ್ ಮಾಡಿಕೊಂಡಿವೆ ಎಂದು ಹೇಳಲಾಗಿದೆ.

ಜಿಯೋಗೆ ತಿರುಗೇಟು ನೀಡಲು ಸಜ್ಜು!

ಜಿಯೋಗೆ ತಿರುಗೇಟು ನೀಡಲು ಸಜ್ಜು!

ಜಿಯೋಯಿಂದ ಕಳೆದುಕೊಂಡಿರುವ ಮಾರುಕಟ್ಟೆಯನ್ನು ವಾಪಸ್ ಪಡೆಯಲು ಟೆಲಿಕಾಂ ಸಂಸ್ಥೆಗಳು ಮಾಸ್ಟರ್ ಪ್ಲಾನ್ ರೂಪಿಸುತ್ತಿವೆ ಎನ್ನಲಾಗಿದೆ. ಉಚಿತ ಇನ್ ಕಮಿಂಗ್ ಕಾಲ್ ಗಳ ಸೇವೆ ಸ್ಥಗಿತಗೊಳಿಸಿ ಇನ್ ಕಮಿಂಗ್ ಕಾಲ್ ಗಳಿಗೂ ನಿಗದಿತ ದರ ವಿಧಿಸಲು ಮುಂದಾಗಿವೆ. ಇದಕ್ಕೆ ಪ್ರಖ್ಯಾತ ಟೆಲಿಕಾಂ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್ ಮುಂದಡಿ ಇಟ್ಟಿದೆ ಎಂದು ಹೇಳಲಾಗಿದೆ.

ಜಿಯೋ ಉಚಿತ ಕರೆಗೆ ಎದುರೇಟು?

ಜಿಯೋ ಉಚಿತ ಕರೆಗೆ ಎದುರೇಟು?

ಭಾರತದ ಗ್ರಾಮೀಣ ಗ್ರಾಹಕರು ಉಚಿತ ಔಟ್‌ಗೋಯಿಂದ ಸೇವೆಗಳಿಗಾಗಿಯೇ ಜಿಯೋ ಮೊಬೈಲ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಜಿಯೋವಿನ ಮೂರು ತಿಂಗಳ ಉಚಿತ ಕರೆಗಳನ್ನು ಇಷ್ಟಪಡುತ್ತಿದ್ದಾರೆ. ಇದರಿಂದ ಇನ್‌ಕಮಿಂಗ್ ಕರೆಗಳಿಗೆ ದರವನ್ನು ವಿಧಿಸಿ ಜಿಯೋಗೆ ಟಾಂಗ್ ನೀಡುವ ಯೋಚನೆಯನ್ನು ಕೆಲ ಟೆಲಿಕಾಂ ಕಂಪೆನಿಗಳು ಹೊಂದಿವೆ ಎಂದು ಹೇಳಲಾಗಿದೆ.

ಉಚಿತ ಸಿಮ್ ಕಾರ್ಡ್ ಕ್ಯಾನ್ಸಲ್?

ಉಚಿತ ಸಿಮ್ ಕಾರ್ಡ್ ಕ್ಯಾನ್ಸಲ್?

ಮೊಬೈಲ್‌ ರಿಚಾರ್ಜ್‌ಗಿಂತಲೂ ಸುಲಭವಾಗಿ ಹಾಗೂ ಉಚಿತವಾಗಿ ಸಿಮ್‌ಕಾರ್ಡ್ಗಳು ದೊರೆಯುತ್ತಿರುವುದರಿಂದ ಗ್ರಾಹಕರು ರಿಚಾರ್ಜ್ಗಿಂತ ಹೊಸ ಸಿಮ್ ಕಾರ್ಡ್‌ಗಳನ್ನೇ ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಇದಕ್ಕೆ ಫುಲ್‌ಸ್ಟಾಪ್ ಹಾಕಿ ಸಿಮ್‌ಗಳ ಮೇಲೆ ಹೆಚ್ಚು ದರವನ್ನು ನಿಗದಿಪಡಿಸುವ ಆಲೋಚನೆಯನ್ನು ಒಗ್ಗೂಡಿರುವ ಟೆಲಿಕಾಂ ಕಂಪೆನಿಗಳಿಗೆ ಇದೆಯಂತೆ.

ರಿಚಾರ್ಜ್ ಮಾಡಿಸಿದರೆ ಮಾತ್ರ ಚಾಲನೆ?

ರಿಚಾರ್ಜ್ ಮಾಡಿಸಿದರೆ ಮಾತ್ರ ಚಾಲನೆ?

ಯಾವುದೇ ಗ್ರಾಹಕರ ರೀಚಾರ್ಜ್ ಮಾಡಿಸಿದ ವ್ಯಾಲಿಡಿಟಿ ಒಳಗಾಗಿ ರಿಚಾರ್ಜ್ ಮಾಡಿಸಿದರೆ ಮಾತ್ರ ಆ ಮೊಬೈಲ್ ಸಂಖ್ಯೆ ಚಾಲನೆಯಲ್ಲಿರುವಂತೆ ಮಾಡಲು ಟೆಲಿಕಾಂ ಕಂಪೆನಿಗಳು ಮುಂದಾಗಿವೆಯಂತೆ. ಇದರಿಂದ ತನ್ನ ಸೇವೆಯನ್ನು ಬಳಸುತ್ತಿರುವ ಗ್ರಾಹಕರು ಕೇವಲ ಇನ್‌ಕಮಿಂಗ್ ಕರೆಗಳಿಗೆ ಮಾತ್ರ ಬಳಸುವುದು ತಪ್ಪುತ್ತದೆ ಎಂದು ಕಂಪೆನಿಗಳ ಪ್ಲಾನ್ ಆಗಿದೆಯಂತೆ.

ನಷ್ಟದ ಬಗ್ಗೆ ಯೋಚನೆ ಇಲ್ಲ!

ನಷ್ಟದ ಬಗ್ಗೆ ಯೋಚನೆ ಇಲ್ಲ!

ನಿರ್ದಿಷ್ಟ ಸಮಯಕ್ಕೆ ಕನಿಷ್ಟ ರೀಚಾರ್ಜ್ ಒಂದನ್ನು ಮಾಡಿಸಿಕೊಳ್ಳಲೇಬೇಕು ಎಂಬ ನಿಯಮದಿಂದ ಗ್ರಾಹಕರನ್ನು ಕಳೆದುಕೊಳ್ಳುವ ಬಗ್ಗೆ ಕೂಡ ಇತರೆ ಟೆಲಿಕಾಂ ಕಂಪೆನಿಗಳು ಆಲೋಚಿಸಿವೆ. ಆದರೆ, ಪೂರ್ತಿ ನೆಲಕಚ್ಚುವ ಬದಲು ಕನಿಷ್ಟ ಆದಾಯ ಪಡೆಯಲೇಬೇಕು ಎಂದು ಪಣತೊಟ್ಟಿವೆ. ಸ್ವಲ್ಪವೇ ಗ್ರಾಹಕರನ್ನು ಮಾತ್ರ ಕಳೆದುಕೊಳ್ಳಬಹುದು ಎಂಬ ಆಲೋಚನೆಯನ್ನು ಹೊಂದಿವೆ.

ಟ್ರಾಯ್‌ ಹಣಿಯಲು ಪ್ಲಾನ್!

ಟ್ರಾಯ್‌ ಹಣಿಯಲು ಪ್ಲಾನ್!

ಜಿಯೋಗೆ ಪೂರಕವಾಗಿರುವ ವ್ಯವಸ್ಥೆಗೆ ಸಹಾಯಕವಾಗಿರುವ ಭಾರತದ ಟೆಲಿಕಾಂ ನಿಯಂತ್ರಣ ಮಂಡಳಿಯನ್ನು ನಿಯಂತ್ರಿಸಲು ಈ ಒಕ್ಕೂಟ ಟೆಲಿಕಾಂ ಕಂಪೆನಿಗಳು ಯೋಚಿಸಿವೆಯಂತೆ. ನಿಯಮಗಳಂತೆಯೇ ಜಿಯೋವನ್ನು ಕಟ್ಟಿಹಾಕುವ ಸಲುವಾಗಿ ಕನಿಷ್ಟ ರಿಚಾರ್ಜ್, ಉಚಿತ ಸಿಮ್ ಕಾರ್ಡ್, ಇನ್‌ಕಮಿಂಗ್ ಕಾಲ್‌ಗಳಿಗೆ ಬ್ರೇಕ್ ಹಾಕಲು ಮುಂದಾಗಿವೆ ಎಂದು ಹೇಳಲಾಗಿದೆ.

ಜಿಯೋ ಹಣಿಯಲು ಸಾಧ್ಯವೇ?

ಜಿಯೋ ಹಣಿಯಲು ಸಾಧ್ಯವೇ?

ಒಂದು ವೇಳೆ ಟೆಲಿಕಾಂ ಕಂಪೆನಿಗಳ ಈ ಯೋಜನೆಗಳು ಎಲ್ಲವೂ ಜಾರಿಯಾದರೆ ಜಿಯೋಗೆ ಹೊಡೆತ ಬೀಳುವುದು ಖಂಡಿತ ಎನ್ನುತ್ತಿವೆ ವರದಿಗಳು. ಕೇವಲ ದೇಶದ 20 ರಷ್ಟು ಮಾರುಕಟ್ಟೆಯನ್ನು ಹೊಂದಿರುವ ಜಿಯೋ ಮೇಲೆ ಶೇ.80 ರಷ್ಟು ಮಾರುಕಟ್ಟೆಯನ್ನು ಹೊಂದಿರುವ ಕಂಪೆನಿಗಳು ಸುಲಭವಾಗಿ ಸವಾರಿ ಮಾಡಬಹುದು ಎನ್ನುವುದು ತಜ್ಞರ ಲೆಕ್ಕಾಚಾರ.!

 ಜಿಯೋಗೇ ಒಳ್ಳೆಯದು!

ಜಿಯೋಗೇ ಒಳ್ಳೆಯದು!

ಟೆಲಿಕಾಂ ಕಂಪೆನಿಗಳ ಈ ಖತರ್ನಾಕ್ ಆಟ ಜಿಯೋಗೂ ಒಳ್ಳೆಯದಾಗುವ ಸಾಧ್ಯತೆಗಳು ಸಹ ಇವೆ. ಒಂದು ವೇಳೆ ಈ ಒಕ್ಕೂಟ ಕಂಪೆನಿಗಳ ಪ್ಲಾನ್ ತಲೆಕೆಳಗಾದರೆ, ಜಿಯೋಗೆ ಸಹಕಾರಿಯಾಗಲಿದೆ. ಏಕೆಂದರೆ, ಇತರೆ ಟೆಲಿಕಾಂ ಕಂಪೆನಿಗಳ ಗ್ರಾಹಕರು ಜಿಯೋ ಡಿವೈಸ್ ಹಾಗೂ ಸಿಮ್‌ಗಳನ್ನೇ ಖರೀದಿಸಲು ಮುಂದಾದರೆ ಜಿಯೋ ಮಾರುಕಟ್ಟೆಯೇ ಹೆಚ್ಚಲಿದೆ.

Best Mobiles in India

English summary
Telecom operators Airtel and Vodafone-Idea may soon do away with life-time free incoming plans by charging a minimum amount from subscribers to keep their number in use. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X