ಶೀಘ್ರದಲ್ಲೇ ಸೆಟ್ ಟಾಪ್ ಬಾಕ್ಸ್‌ಗಳಿಲ್ಲದೆ ಚಾನಲ್‌ ವೀಕ್ಷಿಸಬಹುದು; ಹೇಗೆ?

|

ಹಲವಾರು ಚಾನಲ್‌ಗಳು ಟಿವಿ ಮೂಲಕ ದಿನನಿತ್ಯದ ಆಗು ಹೋಗುಗಳ ಬಗ್ಗೆ ಮಾಹಿತಿ ನೀಡುತ್ತಿದ್ದು, ಈಗಂತೂ ಮಾಹಿತಿಯ ಜೊತೆಗೆ ಅಗಾದವಾದ ಮನರಂಜನೆಯನ್ನು ಸಹ ವೀಕ್ಷಣೆ ಮಾಡಬಹುದು. ಅದರಲ್ಲೂ ಸುಧಾರಿತ ತಂತ್ರಜ್ಞಾನ ಇರುವ ಸ್ಮಾರ್ಟ್‌ಟಿವಿಗಳಂತೂ ಈಗ ಭಾರೀ ಸದ್ದು ಮಾಡುತ್ತಿವೆ. ಆದರೂ ಸಹ ಸೆಟ್ ಟಾಪ್ ಬಾಕ್ಸ್‌ಗಳಿಲ್ಲದೆ ಟಿವಿಗಳನ್ನು ವೀಕ್ಷಣೆ ಮಾಡುವುದು ಕಷ್ಟ. ಆದರೆ, ಇನ್ಮುಂದೆ ಈ ಚಾನಲ್‌ಗಳನ್ನು ಯಾವುದೇ ಸೆಟ್ ಟಾಪ್ ಬಾಕ್ಸ್‌ ಇಲ್ಲದೆ ವೀಕ್ಷಣೆ ಮಾಡಬಹುದು.

ಶೀಘ್ರದಲ್ಲೇ ಸೆಟ್ ಟಾಪ್ ಬಾಕ್ಸ್‌ಗಳಿಲ್ಲದೆ ಚಾನಲ್‌ ವೀಕ್ಷಿಸಬಹುದು; ಹೇಗೆ?

ಹೌದು, ಶೀಘ್ರದಲ್ಲೇ ಸೆಟ್ ಟಾಪ್ ಬಾಕ್ಸ್‌ಗಳಿಲ್ಲದೆ ಇನ್‌ಬಿಲ್ಟ್‌ ಉಪಗ್ರಹ ಟ್ಯೂನರ್‌ಗಳೊಂದಿಗೆ ಡಿಜಿಟಲ್ ಟೆಲಿವಿಷನ್ ರಿಸೀವರ್‌ಗಳ ಸಹಾಯದಿಂದ ಚಾನಲ್‌ಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಹಾಗಿದ್ರೆ, ಇದು ಹೇಗೆ ಕೆಲಸ ಮಾಡಲಿದೆ?, ಯಾವೆಲ್ಲಾ ಚಾನಲ್‌ ಲಭ್ಯ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಇದು ಹೇಗೆ ಕೆಲಸ ಮಾಡುತ್ತದೆ?
ಇನ್ನು ಹೊಸದಾಗಿ ಪರಿಚಯಿಸುತ್ತಿರುವ ಈ ಟ್ಯೂನರ್‌ಗಳು ಕಟ್ಟಡದ ಮೇಲ್ಛಾವಣಿ ಅಥವಾ ಗೋಡೆಯ ಮೇಲೆ ಅಳವಡಿಸಲಾಗಿರುವ ಎಲ್‌ಎನ್‌ಬಿಯೊಂದಿಗೆ ಡಿಶ್ ಆಂಟೆನಾವನ್ನು ಸಂಪರ್ಕಿಸುವ ಮೂಲಕ ಟಿವಿ ಹಾಗೂ ರೇಡಿಯೋ ಚಾನಲ್‌ಗಳನ್ನು ವೀಕ್ಷಣೆ ಮಾಡಲು ಅನುವು ಮಾಡಿಕೊಡುತ್ತದೆ.

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಇನ್‌ಬಿಲ್ಟ್‌ ಉಪಗ್ರಹ ಟ್ಯೂನರ್‌ಗಳೊಂದಿಗೆ ಡಿಜಿಟಲ್ ಟೆಲಿವಿಷನ್ ರಿಸೀವರ್‌ಗಳಿಗೆ ಹೊಸ ಸಾಧನ ಪರಿಚಯಿಸಲಾಗುತ್ತಿದ್ದು, ಇನ್ಮುಂದೆ ಟಿವಿ ಸೆಟ್‌ಗಳನ್ನು ತಯಾರಿಸುವಾಗ ಟಿವಿ ತಯಾರಕರು ಈ ಸಾಧನವನ್ನು ಅನ್ನು ಪ್ರತಿ ಟಿವಿಗಳಿಗೂ ಅಳವಡಿಸಬೇಕಾಗುತ್ತದೆ.

ಶೀಘ್ರದಲ್ಲೇ ಸೆಟ್ ಟಾಪ್ ಬಾಕ್ಸ್‌ಗಳಿಲ್ಲದೆ ಚಾನಲ್‌ ವೀಕ್ಷಿಸಬಹುದು; ಹೇಗೆ?

ಟಿವಿ ಇದ್ದ ಮೇಲೆ ಸೆಟ್-ಟಾಪ್ ಬಾಕ್ಸ್ ಅವಶ್ಯಕ!
ಪ್ರಸ್ತುತ ಟಿವಿ ವೀಕ್ಷಕರು ವಿವಿಧ ಪಾವತಿಸಿದ ಮತ್ತು ಉಚಿತ ಚಾನಲ್‌ಗಳನ್ನು ವೀಕ್ಷಣೆ ಮಾಡಬೇಕು ಎಂದರೆ ಸೆಟ್ ಟಾಪ್ ಬಾಕ್ಸ್‌ಗಳನ್ನು ಖರೀದಿಸಬೇಕಾಗಿರುವುದು ಅನಿವಾರ್ಯವಾದ ಸಂಗತಿಯಾಗಿದೆ. ಅದರಲ್ಲೂ ದೂರದರ್ಶನದಿಂದ ಪ್ರಸಾರವಾಗುವ ಉಚಿತ ಏರ್‌ ಚಾನೆಲ್‌ಗಳ (ಎನ್‌ಕ್ರಿಪ್ಟ್ ಮಾಡದ) ವೀಕ್ಷಣೆಗೂ ಸಹ ಸೆಟ್-ಟಾಪ್ ಬಾಕ್ಸ್ ಅನ್ನು ಬಳಸಬೇಕಾಗಿದೆ. ಆದರೆ ಇನ್ಮುಂದೆ ಈ ನಿಯಮ ಬದಲಾಗಲಿದೆ.

ಸದ್ಯಕ್ಕೆ ದೂರದರ್ಶನ ಅನಲಾಗ್ ಟ್ರಾನ್ಸ್ಮಿಷನ್ ಅನ್ನು ಹಂತಹಂತವಾಗಿ ರಿಮೂವ್‌ ಮಾಡುವ ಪ್ರಕ್ರಿಯೆಯಲ್ಲಿದೆ. ದೂರದರ್ಶನದಿಂದ ಡಿಜಿಟಲ್ ಉಪಗ್ರಹ ಪ್ರಸರಣವನ್ನು ಬಳಸಿಕೊಂಡು ಉಚಿತ-ವಾಯು ಚಾನೆಲ್‌ಗಳನ್ನು ಪ್ರಸಾರ ಮಾಡುವುದನ್ನು ಈ ಮೂಲಕ ಮುಂದುವರಿಸಲಾಗುತ್ತದೆ. ಇದರ ನಡುವೆ ಸಾಮಾನ್ಯ ಚಾರ್ಜರ್‌ಗಳು ಮತ್ತು ವಿಡಿಯೋ ಕಣ್ಗಾವಲು ವ್ಯವಸ್ಥೆಗಳಿಗಾಗಿ ಬಿಐಎಸ್‌ ಇನ್ನೂ ಎರಡು ಮಾನದಂಡಗಳನ್ನು ಪ್ರಕಟಿಸಿದೆ.

ಸಾಮಾನ್ಯ ಚಾರ್ಜರ್‌ ಬಳಕೆಗೂ ನಿಯಮ ಜಾರಿ
ಬಿಐಎಸ್ ಪ್ರಕಟಿಸಿದ ಎರಡನೇ ಮಾನದಂಡವೆಂದರೆ ಟೈಪ್ - ಸಿ ರೆಸೆಪ್ಟಾಕಲ್‌ಗಳು, ಪ್ಲಗ್ ಮತ್ತು ಕೇಬಲ್‌ಗಳು ಅಥವಾ ಸರಳವಾಗಿ ಹೇಳುವುದಾದರೆ, ಸಾಮಾನ್ಯ ಚಾರ್ಜರ್‌ಗಳು. ಮೊಬೈಲ್ ಫೋನ್, ಲ್ಯಾಪ್‌ಟಾಪ್, ನೋಟ್‌ಬುಕ್ ಮುಂತಾದ ವಿವಿಧ ಎಲೆಕ್ಟ್ರಾನಿಕ್ ಡಿವೈಸ್‌ ಬಳಸಲು ಯುಎಸ್‌ಬಿ ಟೈಪ್-ಸಿ ಪೋರ್ಟ್, ಪ್ಲಗ್ ಮತ್ತು ಕೇಬಲ್‌ಗಳ ಅವಶ್ಯಕತೆಗಳನ್ನು ಒತ್ತಿ ಹೇಳಿದೆ.

ಶೀಘ್ರದಲ್ಲೇ ಸೆಟ್ ಟಾಪ್ ಬಾಕ್ಸ್‌ಗಳಿಲ್ಲದೆ ಚಾನಲ್‌ ವೀಕ್ಷಿಸಬಹುದು; ಹೇಗೆ?

ಈ ಮಾನದಂಡದ ಪ್ರಕಾರ ದೇಶದಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಸಾಮಾನ್ಯ ಚಾರ್ಜಿಂಗ್ ಪರಿಹಾರಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಹೊಸ ಡಿವೈಸ್‌ ಅನ್ನು ಖರೀದಿಸಿದಾಗ ಪ್ರತಿ ಬಾರಿ ವಿಭಿನ್ನ ಚಾರ್ಜರ್‌ಗಳನ್ನು ಖರೀದಿ ಮಾಡುವ ಅಗತ್ಯವಿಲ್ಲ. ಬದಲಾಗಿ ಒಂದೇ ಚಾರ್ಜರ್‌ನಲ್ಲಿ ಎಲ್ಲಾ ಡಿವೈಸ್‌ಗಳನ್ನು ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಅನವಶ್ಯಕ ಚಾರ್ಜರ್‌ಗಳ ಬಳಕೆ ಕಡಿಮೆ ಮಾಡಿ ಪರಿಸರ ರಕ್ಷಣೆಗೆ ಒತ್ತು ನೀಡಲಾಗಿದೆ.

ಈ ಹಿಂದೆ ಗ್ರಾಹಕರು ತಮ್ಮಲ್ಲಿರುವ ವಿವಿಧ ಎಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ವಿಭಿನ್ನ ಚಾರ್ಜರ್‌ಗಳನ್ನು ಬಳಕೆ ಮಾಡುವುದು ಅನಿವಾರ್ಯವಾಗಿತ್ತು.ಅದರಲ್ಲೂ ಇದರಿಂದ ಹೆಚ್ಚುವರಿ ಖರ್ಚು, ಇ-ತ್ಯಾಜ್ಯ ಹೆಚ್ಚಳ ಮತ್ತು ಬಹಳಷ್ಟು ಅನಾನುಕೂಲತೆ ಸಹ ಉಂಟಾಗುತ್ತಿತ್ತು. ಹೀಗಾಗಿ ಬಳಕೆದಾರರಿಗೆ ಅನುಕೂಲ ಆಗುವ ಜೊತೆಗೆ ಪರಿಸರ ರಕ್ಷಣೆಗೆ ಈ ಕ್ರಮ ತೆಗೆದುಕೊಳ್ಳುತ್ತಿರುವುದು ಸ್ವಾಗತಾರ್ಹ ವಿಷಯವಾಗಿದೆ. ಇದು ಕೇವಲ ಭಾರತಕ್ಕಷ್ಟೇ ಸೀಮಿತವಾಗದೇ ಇಡೀ ಪ್ರಪಂಚದಾದ್ಯಂತ ಈ ಪ್ಲ್ಯಾನ್‌ ಅನ್ನು ಪರಿಚಯಿಸಲಾಗಿದೆ.

Best Mobiles in India

English summary
Soon watch channels without set top boxes.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X