ಇನ್ಮುಂದೆ ಪೇಟಿಎಂನಿಂದ ತೇಜ್‌ಗೆ ಹಣ ವರ್ಗಾಯಿಸಬಹುದು..! ಏನೇಳುತ್ತೇ ಹೊಸ RBI ನೀತಿ..!

|

ಈ ದಸರಾ ಆಚರಣೆ ಸಮಯದಲ್ಲಿ ಮೊಬೈಲ್‌ ವಾಲೆಟ್‌ ಪ್ರಿಯರಿಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಂತಸದ ಸುದ್ದಿಯನ್ನು ನೀಡಿದೆ. ಹೊಸ ನೀತಿಯಿಂದ ಮೊಬೈಲ್‌ ವಾಲೆಟ್‌ ಕಂಪನಿಗಳು ನಿಟ್ಟುಸಿರು ಬಿಟ್ಟಿದ್ದು, ಡಿಜಿಟಲ್‌ ವಾಲೆಟ್‌, ಬ್ಯಾಂಕ್‌ ಅಕೌಂಟ್‌ಗಳು ಮತ್ತು ಪ್ರಿಪೇಯ್ಡ್‌ ಕಾರ್ಡ್‌ಗಳ ನಡುವೆ ಪರಸ್ಪರ ವಹಿವಾಟು ಮಾಡಲು ಅನುಮತಿ ನೀಡಿದೆ.

ಇನ್ಮುಂದೆ ಪೇಟಿಎಂನಿಂದ ತೇಜ್‌ಗೆ ಹಣ ವರ್ಗಾಯಿಸಬಹುದು..! ಏನೇಳುತ್ತೇ ಹೊಸ RBI ನೀತಿ

ಮಂಗಳವಾರ ಸೆಂಟ್ರಲ್‌ ಬ್ಯಾಂಕ್‌ ಪ್ರಕಟಣೆ ಹೊರಡಿಸಿದ್ದು, ಎಲ್ಲ ಹಂತಗಳಲ್ಲೂ ಉತ್ತಮವಾಗಿ ಡಿಜಿಟಲ್‌ ವಾಲೆಟ್‌ಗಳು ಕಾರ್ಯನಿರ್ವಹಿಸಲು ಸಹಾಯಕವಾಗುವಂತೆ ಹೊಸ ಏಕೀಕೃತ ಮಾರ್ಗಸೂಚಿಗಳನ್ನು ನೀಡಿದೆ. RBI ಹೀಗಾಗಲೇ ಸ್ಪಷ್ಟವಾಗಿ ಹೇಳಿರುವಂತೆ ಎಲ್ಲಾ ವಾಲೆಟ್‌ ವಹಿವಾಟುಗಳು Unified Payments Interface (UPI) ಮತ್ತು ಕಾರ್ಡ್‌ಗಳ ಮೂಲಕ ನಡೆಯಬೇಕು ಎಂದಿದೆ. ಆಗಿದ್ರೇ RBIನ ಹೊಸ ನೀತಿಯಿಂದ ಗ್ರಾಹಕರಿಗೆ ಏನೇನು ಅನುಕೂಲ..? ಮತ್ತು ಕಂಪನಿಗಳು ಯಾವ ರೀತಿ ಹೊಸ ನೀತಿಯನ್ನು ಯಾವ ರೀತಿ ಉಪಯೋಗಿಸುತ್ತವೆ ಎಂಬುದನ್ನು ಮುಂದೆ ನೋಡಿ.

ಏನೀದು ವ್ಯಾಲೆಟ್‌ಗಳ ಪರಸ್ಪರ ವಹಿವಾಟು..?

ಏನೀದು ವ್ಯಾಲೆಟ್‌ಗಳ ಪರಸ್ಪರ ವಹಿವಾಟು..?

ಪೇಟಿಎಂ, ಫೋನ್‌ಪೇ, ಗೂಗಲ್‌ ಪೇನಂತಹ ಡಿಜಿಟಲ್‌ ವ್ಯಾಲೆಟ್‌ಗಳನ್ನು ನೀವು ಬಳಸುತ್ತಿದ್ದರೆ ಇಷ್ಟು ದಿನ ವಿವಿಧ ಬ್ಯಾಂಕ್‌ ಅಕೌಂಟ್‌ಗಳಿಗೆ ಹಣ ವರ್ಗಾವಣೆಯನ್ನು ಮಾಡಬಹುದಾಗಿತ್ತು. ಆದರೆ, ಇನ್ಮುಂದೆ ಪೇಟಿಎಂನಿಂದ ಫೋನ್‌ಪೇಗೆ, ಫೋನ್‌ಪೇನಿಂದ ಗೂಗಲ್‌ ಪೇಗೆ ಹಣವನ್ನು ವರ್ಗಾವಣೆ ಮಾಡುವ ಆಯ್ಕೆ ಲಭ್ಯವಾಗಲಿದ್ದು, ಕಾರ್ಡ್‌ಗಳಿಗೂ ವರ್ಗಾವಣೆ ಮಾಡುವ ಆಯ್ಕೆ ಸಿಗುತ್ತದೆ.

ಗ್ರಾಹಕರ ಭದ್ರತೆಗೆ ಹೆಚ್ಚಿನ ಆದ್ಯತೆ

ಗ್ರಾಹಕರ ಭದ್ರತೆಗೆ ಹೆಚ್ಚಿನ ಆದ್ಯತೆ

ವಾಲೆಟ್‌ಗಳ ಪರಸ್ಪರ ವಹಿವಾಟಿಗೆ ಅಸ್ತು ಎಂದಿರುವ RBI ಗ್ರಾಹಕರ ಹಣಕಾಸಿನ ವ್ಯವಹಾರಗಳ ಸುರಕ್ಷತೆ ಖಾತ್ರಿ ಪಡಿಸಿಕೊಳ್ಳಲು ಪೇಮೆಂಟ್‌ ಪ್ರೊಟೆಕ್ಷನ್‌ ಇನ್ಸೂರೆನ್ಸ್‌ನ್ನು ಕಡ್ಡಾಯಗೊಳಿಸಿದೆ. ಭದ್ರತಾ ನಿಯಮಗಳನ್ನು ಜಾರಿಗೆ ತರಲು ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಹಾಗೂ ಕಾರ್ಡ್‌ ನೆಟ್‌ವರ್ಕ್‌ಗಳನ್ನು ಸ್ಥಾಪಿಸಲಾಗಿದ್ದು, ಯುಪಿಐ ಮತ್ತು ಕಾರ್ಡ್‌ಗಳ ವಹಿವಾಟನ್ನು ನಿಯಂತ್ರಿಸಲಿವೆ.

ಸಂಪೂರ್ಣ KYC ಅಗಿದ್ದರೆ ಹೊಸ ವಹಿವಾಟು

ಸಂಪೂರ್ಣ KYC ಅಗಿದ್ದರೆ ಹೊಸ ವಹಿವಾಟು

RBI ಗ್ರಾಹಕರ ವಹಿವಾಟಿನ ಭದ್ರತೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರು. ಅದರ ಹೊರತಾಗಿ ವಾಲೆಟ್‌ನಿಂದ ಬೇರೆ ವಾಲೆಟ್‌ಗೆ ಹಣ ವರ್ಗಾವಣೆ ಮಾಡಲು ಗ್ರಾಹಕರು KYC ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಿರಬೇಕು ಎಂದು ಹೊಸ ನೀತಿ ಹೇಳುತ್ತದೆ.

ನೆಟ್‌ವರ್ಕ್‌ನಿಂದ ಪೇಮೆಂಟ್‌

ನೆಟ್‌ವರ್ಕ್‌ನಿಂದ ಪೇಮೆಂಟ್‌

ಹೊಸ ನೀತಿಯಿಂದ ಡಿಜಿಟಲ್‌ ವಾಲೆಟ್ ಕಂಪನಿಗಳು ಪೇಮೆಂಟ್‌ಗಳನ್ನು ಕಾರ್ಡ್‌ ನೆಟ್‌ವರ್ಕ್‌ (ರುಪೇ, ವಿಸಾ, ಮಾಸ್ಟರ್‌ ಕಾರ್ಡ್‌) ಮೂಲಕ ಮಾಡಲು ಅನುಮತಿ ನೀಡುತ್ತವೆ. ಇದನ್ನು ವ್ಯಾಪಾರಿಗಳು PoS ಟರ್ಮಿನಲ್‌ನಿಂದ ಮತ್ತು ಭಾರತ್‌ QR ಕೋಡ್‌ ಮೂಲಕ ಸ್ವೀಕರಿಸಬಹುದಾಗಿದ್ದು, ಪ್ರತ್ಯೇಕವಾದ ವೇದಿಕೆಯ ಅಗತ್ಯವಿಲ್ಲ. ಹಾಗೂ BHIM UPI ಮೂಲಕ ವಾಲೆಟ್‌ ಮತ್ತು ಬ್ಯಾಂಕ್‌ ಅಕೌಂಟ್‌ಗಳ ನಡುವೆ ದ್ವಿಮುಖ ಹಣದ ಹರಿವು ಇರುತ್ತದೆ ಎಂದು Oxigen Servicesನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ಕುಲಕರ್ಣಿ ಹೇಳಿದ್ದಾರೆ.

PPI ವ್ಯವಸ್ಥೆಯ ಬಲವರ್ಧನೆ

PPI ವ್ಯವಸ್ಥೆಯ ಬಲವರ್ಧನೆ

ಹೊಸ ಮಾರ್ಗದರ್ಶಿ ಸೂತ್ರ Payment Protection Insurence ವ್ಯವಸ್ಥೆಗೆ ಬಲವರ್ಧನೆ ನೀಡಲಿದೆ ಎಂದು ಪೇಟಿಎಂನ ಮುಖ್ಯ ಕಾರ್ಯವಾಹಕ ಅಧಿಕಾರಿ ಕಿರಣ್‌ ವಾಸಿರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಹೊಸ ನೀತಿಯಿಂದ ವಾಲೆಟ್‌ ಕಂಪನಿಗಳು ತಮ್ಮದೇ ಆದ ಹ್ಯಾಂಡಲ್‌ಗಳನ್ನು ಹೊಂದಲಿದ್ದು, ಗ್ರಾಹಕರು ತಮ್ಮ ಇಚ್ಚೆಯಂತೆ ಉಪಯೋಗಿಸಬಹುದಾಗಿದ್ದು, ವಾಲೆಟ್‌ಗಳ ಪರಸ್ಪರ ವಹಿವಾಟಿನಿಂದ ಬ್ಯಾಂಕ್‌ ಮೂಲಕ ಕೆಲಸ ಮಾಡುವ ಅಗತ್ಯ ಕಡಿಮೆಯಾಗುತ್ತದೆ ಎಂದು ವಿವರಿಸಿದ್ದಾರೆ.

EMV ಚಿಪ್‌ ಮತ್ತು ಪಿನ್‌ ಅಳವಡಿಕೆ

EMV ಚಿಪ್‌ ಮತ್ತು ಪಿನ್‌ ಅಳವಡಿಕೆ

RBIನ ಹೊಸ ನೀತಿಯಲ್ಲಿ ಪ್ರಮುಖವಾಗಿದ್ದು ಎಂದರೆ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳಲ್ಲಿ EMV ಚಿಪ್‌ ಮತ್ತು ಪಿನ್‌ ಅಳವಡಿಸುವಂತೆ ಕಡ್ಡಾಯಗೊಳಿಸಿರುವುದಾಗಿದೆ. ಇದರ ಮೂಲಕ ಮ್ಯಾಗ್ನೆಟಿಕ್‌ ಸ್ಟ್ರೈಪ್‌ ಕಾರ್ಡ್‌ಗಳನ್ನು ಬ್ಯಾಂಕಿಂಗ್‌ ವ್ಯವಹಾರಗಳಿಂದ ಹೊರಹಾಕಲು ಮುಂದಾಗಿದೆ.

ಕಳೆದ ಅಕ್ಟೋಬರ್‌ನಿಂದ ಪ್ರಕ್ರಿಯೆ

ಕಳೆದ ಅಕ್ಟೋಬರ್‌ನಿಂದ ಪ್ರಕ್ರಿಯೆ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ವ್ಯಾಲೆಟ್‌ಗಳ ಪರಸ್ಪರ ವಹಿವಾಟಿಗೆ ಅನುಮತಿ ನೀಡುವ ಕುರಿತು RBI ಮೊದಲು ಮಾತನಾಡಿತ್ತು. ಮತ್ತು 6 ತಿಂಗಳಲ್ಲಿ ಈ ವೈಶಿಷ್ಟ್ಯವನ್ನು ಜಾರಿಗೆ ತರುವ ಭರವಸೇ ನೀಡಿತ್ತು. ಆದರೆ, ಸೆಂಟ್ರಲ್‌ ಬ್ಯಾಂಕ್‌ ಮಾರ್ಗಸೂಚಿಗಳನ್ನು ನೀಡುವುದರಲ್ಲಿ ವಿಳಂಬ ಮಾಡಿತ್ತು. ಇದರಿಂದ, ವಾಲೆಟ್ ಕಂಪನಿಗಳು ಅನೇಕ ನಿಯಂತ್ರಣಾತ್ಮಕ ಮತ್ತು ತಾಂತ್ರಿಕ ಸವಾಲುಗಳನ್ನು ಎದುರಿಸುತ್ತಿದ್ದವು. ಈಗ ಹೊಸ ನೀತಿಯಿಂದ ಕಂಪನಿಗಳು ನಿಟ್ಟುಸಿರು ಬಿಟ್ಟಿವೆ.

Best Mobiles in India

English summary
Soon, you can transfer money from Paytm to other wallets, but there’s a condition. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X