ಬಿಡುಗಡೆಯಾಗುತ್ತಿದೆ ಸ್ಪೈಡರ್‌ಮ್ಯಾನ್ ಪಿಎಸ್4..! ಅದಕ್ಕೂ ಮುಂಚೆ ಇವುಗಳನ್ನು ನೋಡಿ..!

By GizBot Bureau
|

ಸ್ಪೈಡರ್ ಮ್ಯಾನ್ ಅಂದರೆ ಆತ ವಿಶ್ವದ ಪ್ರಸಿದ್ಧ ಸೂಪರ್ ಹೀರೋ. ಆದರೆ ಮಾರ್ವೆಲ್ ಸಿನಮ್ಯಾಟಿಕ್ ಯೂನಿವರ್ಸ್ಗೆ ಪ್ರವೇಶಿಸಿದಾಗಿನಿಂದ ಈ ಪಾತ್ರವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು.ಆತ ಮುಂದಿನ ಎರಡುಮೂರು ವರ್ಷಗಳಳಲ್ಲಿ ಮೂರು ಚಲಚಿತ್ರಗಳಲ್ಲಿ ಕಾಣಿಸಿಕೊಂಡು, ಅರ್ಧ ಡಜನ್ ಗೂ ಹೆಚ್ಚು ಕಾಮಿಕ್ ಪುಸ್ತಕ ಸರಣಿಗಳಲ್ಲಿ ಅಷ್ಟೇ ಯಾಕೆ ಯುಎಸ್ ನ ಮಕ್ಕಳ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದು ಜನಮನ್ನಣೆ ಗಳಿಸಿದೆ.

ಇನ್ನು ಸೆಪ್ಟೆಂಬರ್ ನಿಂದ ಇದರ ಅಭಿಮಾನಿಗಳು ಪಿಎಸ್4 ನಲ್ಲಿ ಸ್ಪೈಡರ್ ಮ್ಯಾನ್ ಗೇಮ್ ಕೂಡ ಆಡಬಹುದಾಗಿದೆ. ಆದರೆ ಅದಕ್ಕೂ ಮುನ್ನ ನೀವು ನೋಡಬೇಕಾಗಿರುವ ಸ್ಪೈಡರ್ ಮ್ಯಾನ್ ಬಗೆಗಿನ ಕಥೆಗಳು ಮತ್ತು ಚಲನಚಿತ್ರಗಳ ಬಗ್ಗೆ ನಾವು ನಿಮಗೆ ಹೇಳೋಣ ಎಂದೆನಿಸುತ್ತದೆ.

ಬಿಡುಗಡೆಯಾಗುತ್ತಿದೆ ಸ್ಪೈಡರ್‌ಮ್ಯಾನ್ ಪಿಎಸ್4..! ಮುಂಚೆ ಇವುಗಳನ್ನು ನೋಡಿ..!

ಕೆಲವು ಸಮಸ್ಯೆಗಳು ಇವೆ: ದುಃಖಕರವೆಂದರೆ, ಏಕೈಕ ಸ್ಪೈಡರ್-ಮ್ಯಾನ್ ಟಿವಿ ಕಾರ್ಯಕ್ರಮ ಭಾರತದಲ್ಲಿ ಲಭ್ಯವಿಲ್ಲ ಮತ್ತು ಈ ನಿಟ್ಟಿನಲ್ಲಿ ಹಲವು ಪರವಾನಗಿ ಸಮಸ್ಯೆಗಳಿವೆ. ನಾವು ಸೇರಿಸಲು ಬಯಸುವ ಎಲ್ಲಾ ಸ್ಪೈಡರ್-ಮ್ಯಾನ್ ಆಟಗಳ ಡಿಜಿಟಲ್ ವಿತರಣೆಯನ್ನು ನಿಲ್ಲಿಸಲಾಗಿದೆ.

ಹೊಸ ಸ್ಪೈಡರ್ ಮ್ಯಾನ್ ಗೇಮ್ ಬರುವ ಮುನ್ನ ನೀವು ನೋಡಬೇಕಾಗಿರುವ ಸ್ಪೈಡರ್ ಚಲನಚಿತ್ರ ಮತ್ತು ಕಾಮಿಕ್ ಬುಕ್ಸ್ ಗಳ ಬಗ್ಗೆ ಈ ಕೆಳಗೆ ವಿವರಣೆಯನ್ನು ನೀಡಲಾಗಿದೆ.

ಸ್ಪೈಡರ್ ಮ್ಯಾನ್ 2 (2004)

ಸ್ಪೈಡರ್ ಮ್ಯಾನ್ 2 (2004)

ಯಾವುದೇ ಸ್ಪೈಡರ್ ಮ್ಯಾನ್ ಸ್ಟೋರಿ ಕೂಡ ಸ್ಯಾಮಿ ರೈಮಿ ಅವರ ಸ್ಪೈಡರ್ ಮ್ಯಾನ್ ಟ್ರೈಲಾಜಿಯ ಎರಡನೇ ಅಧ್ಯಾಯವಿಲ್ಲದೇ ಪೂರ್ಣಗೊಳ್ಳಲು ಸಾಧ್ಯವೇ ಇಲ್ಲ. ಇದು ಯಾವುದೇ ಚರ್ಚೆಗೆ ಆಸ್ಪದವಿಲ್ಲದ ಎಲ್ಲಾ ಕಾಲಕ್ಕೆ ಬೆಸ್ಟ್ ಅನ್ನಿಸುವ ಸ್ಪೈಡರ್ ಮ್ಯಾನ್ ಚಲನಚಿತ್ರವಾಗಿದೆ. ಚಿತ್ರದ ಕೆಲವು ಭಾಗಗಳಲ್ಲಿ ನಿಮಗೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಸ್ಪೈಡರ್ ಮ್ಯಾನ್ 2 ಮೂಲ ನಿರೂಪಣೆಯನ್ನೇ ಹೊಂದಿದ್ದು, ಅವರ ಎರಡು ಅರೆಕಾಲಿಕ ಉದ್ಯೋಗಗಳು,ಅವನ ವಯಕ್ತಿಕ ಜೀವನ,ಮೇರಿ ಜಾನ್ ಇಲ್ಲದೇ ಇರಲು ಸಾಧ್ಯವಿಲ್ಲ ಎಂದು ಭಾವಿಸುವಿಕೆ, ಆತನ ಬೆಸ್ಟ್ ಫ್ರೆಂಡ್ ಹ್ಯಾರಿ ಆಸ್ಬರ್ನ್, ತನ್ನ ವೇಷಭೂಷಣದ ಬಗ್ಗೆ ತನಗೇ ಅರಿವಿಲ್ಲದಿರುವಿಕೆ, ತಂದೆಯ ಸಾವಿನ ವಿರುದ್ಧ ಸೇಡು ತೀರಿಸಿಕೊಳ್ಳುವಿಕೆ,ಶಕ್ತಿಯನ್ನು ಬಿಟ್ಟು ಜನರನ್ನು ಉಳಿಸುವಿಕೆ ಇತ್ಯಾದಿ ಚಿತ್ರಣ ನೋಡುವಂತಿದೆ.

ಸ್ಪೈಡರ್ ಮ್ಯಾನ್: ಹೋಮ್ ಕಮಿಂಗ್(2017)

ಸ್ಪೈಡರ್ ಮ್ಯಾನ್: ಹೋಮ್ ಕಮಿಂಗ್(2017)

ವಿಭಿನ್ನ ಕಥಾಹಂದರದೊಂದಿಗೆ ಎಲ್ಲರನ್ನು ಸೆಳೆಯುವ ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್ ನ್ನು ಕೂಡ ನೀವು ನೋಡಲೇಬೇಕು.ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್ ನಲ್ಲಿ ಯುವಕ ಪಾರ್ಕರ್ ಹೇಗೆಲ್ಲಾ ವೇಗವಾಗಿ ಬೆಳವಣಿಗೆ ಹೊಂದಿದ ಮತ್ತು ಹೇಗೆ ಕಷ್ಟದ ಸನ್ನಿವೇಶಗಳನ್ನು ಈ ಹಿಂದಿಗಿಂತಲೂ ಎದುರಿಸಬೇಕಾಯಿತು ಎಂಬ ಚಿತ್ರಣವಿದ್ದು ನೋಡುಗರಿಗೆ ಹೆಚ್ಚು ಆಕರ್ಷೀಯವಾಗಿದೆ. ಖಂಡಿತ ನೀವಿದನ್ನು ಮಿಸ್ ಮಾಡಲೇಬಾರದು.

ದಿ ನೈಟ್ ಗ್ವೀನ್ ಸ್ಟ್ಯಾಸಿ ಡೈಡ್ (1973)

ದಿ ನೈಟ್ ಗ್ವೀನ್ ಸ್ಟ್ಯಾಸಿ ಡೈಡ್ (1973)

ಗೆರಿ ಕಾನ್ವೇ ಸಹ-ಕ್ರಿಯೇಟರ್ ಆಗಿದ್ದು ಸ್ಟ್ಯಾನ್ ಲೀನನ್ನು ಸ್ಪೈಡರ್-ಮ್ಯಾನ್ ನ ಸ್ವತಂತ್ರ ಕಾಮಿಕ್ ಪುಸ್ತಕದ ಶೀರ್ಷಿಕೆಯ ಲೇಖಕರಾಗಿದ್ದಾರೆ ಮತ್ತು 1973 ರ ಮಧ್ಯಾವಧಿಯಲ್ಲಿ ಎರಡು ವಿಷಯಗಳಾದ್ಯಂತ ಈ ಕಥಾವಸ್ತುವಿನೊಂದಿಗೆ ಎಲ್ಲರೂ ನೆನಪಿಡುವ ಶೈಲಿಯಲ್ಲಿ ತನ್ನ ಗುರುತನ್ನು ಬಿಟ್ಟರು : ದಿ ಅಮೇಜಿಂಗ್ ಸ್ಪೈಡರ್-ಮ್ಯಾನ್.

ಸ್ಪೈಡರ್-ವರ್ಸ್ (2014-15)

ಸ್ಪೈಡರ್-ವರ್ಸ್ (2014-15)

ಇದು ಬೇರೆಬೇರೆ ಸ್ಪೈಡರ್ ಗಳನ್ನು ಒಟ್ಟಿಗೆ ಕರೆತಂದ ಚಿತ್ರಣ ಸ್ಪೈಡರ್ ಮ್ಯಾನ್, ಸ್ಪೈಡರ್ ವುಮೆನ್, ಸ್ಪೈಡರ್ ಗರ್ಲ್, ಸ್ಪೈಡರ್ ಮ್ಯಾನ್ 2099, ಹೀಗೆ ಇನ್ನು ಅಧ್ಬುತ ಸ್ಪೈಡರ್ ಮ್ಯಾನ್ ಗಳು ಒಟ್ಟಿಗೆ ಸೇರಿದ್ದಾರೆ ಇಲ್ಲಿ.ಮಾರ್ಲುನ್ ಅನ್ನೋ ವಿಲನ್ ಮತ್ತು ಆತನ ಉತ್ತರಾಧಿಕಾರಿಗಳನ್ನು ಎಲ್ಲಾ ಸ್ಪೈಡರ್ ಗಳು ಒಟ್ಟಿಗೆ ಸೇರಿ ಎದುರಿಸುವ ಕಥಾಹಂದರವನ್ನು ಇದು ಹೊಂದಿದೆ. ಸ್ಪೈಡರ್ ಮ್ಯಾನ್ ದಿ ಸ್ಪೈಡರ್ ವರ್ಸ್ ಡಿಸೆಂಬರ್ ಗೆ ವಿಶ್ವದಾದ್ಯಂತ ಬಿಡುಗಡೆಗೊಳ್ಳುತ್ತಿದೆ.

Best Mobiles in India

English summary
Spider-Man Is Out for PS4 on September 7. Here Are 4 Movies and Comics to Check Out Before That. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X