ಸ್ಪಾಟಿಫೈನಿಂದ ಮ್ಯೂಸಿಕ್ ಪ್ರಿಯರಿಗೆ ಭರ್ಜರಿ ಕೊಡುಗೆ; 4 ತಿಂಗಳು ಉಚಿತ ಸೇವೆ!

|

ಜಾಗತಿಕವಾಗಿ ಲಭ್ಯ ಇರುವ ಮ್ಯೂಸಿಕ್‌ ಸ್ಟ್ರೀಮಿಂಗ್‌ ಆಪ್‌ಗಳಲ್ಲಿ ಸ್ಪಾಟಿಫೈ (Spotify) ಪ್ರಮುಖ ಸ್ಥಾನ ಪಡೆದಿದೆ. ಅದರಲ್ಲೂ ಸ್ಪಾಟಿಫೈ ಭಾರತದಲ್ಲಿನ ಸಂಗೀತ ಪ್ರಿಯರಿಗೆ ಆಕರ್ಷಕ ಕೊಡುಗೆಯನ್ನು ಪರಿಚಯಿಸಿದೆ. ಇದನ್ನು ಹಬ್ಬದ ಹಿನ್ನೆಲೆ ನೀಡಲಾಗುತ್ತಿದ್ದು, ಈ ಅಫರ್‌ನಲ್ಲಿ ಉಚಿತ ಸಂಗೀತ ಆಲಿಸಬಹುದಾಗಿದೆ. ಇದರ ನಡುವೆ ಆಪಲ್ ಮ್ಯೂಸಿಕ್ ಭಾರತದಲ್ಲಿ ಹೊಸ ಬಳಕೆದಾರರಿಗೆ ಎರಡು ತಿಂಗಳ ಉಚಿತ ಮ್ಯೂಸಿಕ್‌ ಅನ್ನು ನೀಡುತ್ತಿದ್ದು, ಇದರ ನಡುವೆ ಸ್ಪಾಟಿಫೈ ಸೀಮಿತ ಅವಧಿಯ ಕೊಡುಗೆಯಲ್ಲಿ ಅದನ್ನೂ ಮೀರಿಸುವ ಆಫರ್‌ಅನ್ನು ನೀಡಿದೆ.

ಸ್ಪಾಟಿಫೈ

ಹೌದು, ಸ್ಪಾಟಿಫೈ ತನ್ನ ಪ್ರೀಮಿಯಂ ಪ್ಲ್ಯಾನ್‌ನಲ್ಲಿ ಸಂಗೀತ ಪ್ರಿಯರನ್ನು ಹೆಚ್ಚಿಗೆ ಮಾಡಿಕೊಳ್ಳಲು ಆಕರ್ಷಕ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಈ ಆಫರ್‌ನಲ್ಲಿ ನೀವು 4 ತಿಂಗಳುಗಳ ಕಾಲ ಸ್ಪಾಟಿಫೈ ಪ್ರೀಮಿಯಂ ಅನ್ನು ಉಚಿತವಾಗಿ ಪಡೆದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಈ ಕೊಡುಗೆಯು ಅಕ್ಟೋಬರ್ 24 ರವರೆಗೆ ಅಂದರೆ ದೀಪಾವಳಿಯವರೆಗೆ ಇರಲಿದೆ. ಹಾಗಿದ್ರೆ ಮತ್ಯಾಕೆ ತಡ ಈ ಯೋಜನೆಯನ್ನು ಅನ್ನು ನಿಮ್ಮ ಮೊಬೈಲ್‌ ನಲ್ಲಿ ಬಳಸುವುದು ಹೇಗೆ? ಹೈಡಿಂಗ್‌ ಚಾರ್ಜಸ್‌ಗಳೇನಾದರೂ ಇವೆಯಾ ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಆಫರ್‌ನ ಪ್ರಯೋಜವನ್ನು ಹೇಗೆ ಪಡೆಯುವುದು?

ಆಫರ್‌ನ ಪ್ರಯೋಜವನ್ನು ಹೇಗೆ ಪಡೆಯುವುದು?

ಸ್ಪಾಟಿಫೈ ಪ್ರೀಮಿಯಂ ಕೊಡುಗೆಯು ಸೀಮಿತ ಅವಧಿಗೆ ಲಭ್ಯವಿದ್ದು, ಅದರಲ್ಲೂ ಇದನ್ನು ಭಾರತದಲ್ಲಿನ ಹೊಸ ಬಳಕೆದಾರರಿಗೆ ಸೀಮಿತಗೊಳಿಸಲಾಗಿದೆ. ಪ್ರಮುಖ ವಿಷಯ ಎಂದರೆ ಈಗಾಗಲೇ ಸ್ಪಾಟಿಫೈ ಬಳಕೆ ಮಾಡುತ್ತಿರುವ ಬಳಕೆದಾರರಿಗೆ ಈ ಆಫರ್‌ ಅನ್ವಯ ಆಗುವುದಿಲ್ಲ. ಹಾಗೆಯೇ ಈ ಮೊದಲು ಯಾವುದಾದರೂ ಆಫರ್‌ಗಳನ್ನು ಪಡೆದಿದ್ದರೆ ಈ ನೂತನ ಅಫರ್‌ ಲಭ್ಯವಾಗುವುದಿಲ್ಲ.

ಸ್ಪಾಟಿಫೈ ಚಂದಾದಾರಿಕೆ ಪಡೆಯಲು ಈ ಕ್ರಮ ಅನುಸರಿಸಿ

ಸ್ಪಾಟಿಫೈ ಚಂದಾದಾರಿಕೆ ಪಡೆಯಲು ಈ ಕ್ರಮ ಅನುಸರಿಸಿ

ಮೊದಲು ಸ್ಪಾಟಿಫೈನ ಚಂದಾದಾರಿಕೆ ಪೇಜ್‌ ತೆರೆಯಿರಿ ನಂತರ 'ಗೆಟ್ ಸ್ಟಾರ್ಟ್' ಐಕಾನ್ ಮೇಲೆ ಕ್ಲಿಕ್ ಮಾಡಿ ಹಾಗೆಯೇ ಸೈನ್ ಮಾಡುವ ಪುಟ ಲೋಡ್ ಆಗುವವರೆಗೆ ಸ್ವಲ್ಪಕಾಯಿರಿ. ಇದಾದ ನಂತರ ನಿಮಗೆ ಸುಲಭವಾಗಿ ಲಾಗ್‌ ಇನ್‌ ಆಯ್ಕೆ ಮಾಡುವ ಫೀಚರ್ಸ್‌ ನೀಡಲಾಗಿದೆ. ಇದರಲ್ಲಿ ಫೇಸ್‌ಬುಕ್‌, ಆಪಲ್‌ ಹಾಗೂ ಗೂಗಲ್‌ ಅಕೌಂಟ್‌ ಇದ್ದರೆ ಅದನ್ನು ಸಿಂಕ್‌ ಮಾಡಿ, ಇದ್ಯಾವುದೂ ಇಲ್ಲವಾದರೆ ನಿಮ್ಮ ಫೋನ್ ನಂಬರ್ ಹಾಗೂ ಇ- ಮೇಲ್‌ ಐಡಿ ಮೂಲಕವೂ ಲಾಗ್‌ ಇನ್‌ ಮಾಡಬಹುದಾದ ಆಯ್ಕೆಯನ್ನು ನೀಡಲಾಗಿದೆ.

ಆನ್‌ಲೈನ್

ಇದಾದ ನಂತರ ನೀವು ಆನ್‌ಲೈನ್ ಪಾವತಿ ಮೋಡ್ ಅಥವಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪ್ಲ್ಯಾನ್‌ ಖರೀದಿ ಮಾಡಬಹುದು. ಇದು ಆರಂಭಿಕವಾಗಿ ಉಚಿತವಾಗಿರಿದೆ. 4 ತಿಂಗಳ ಅವಧಿ ಮುಗಿದ ನಂತರ ಚಂದಾದಾರಿಕೆ ಶುಲ್ಕವಾಗಿ ತಿಂಗಳಿಗೆ 119ರೂ. ಗಳನ್ನು ಪಾವತಿ ಮಾಡಬೇಕಿರುತ್ತದೆ. ನಿಮಗೆ ಇದು ಇಷ್ಟ ಇಲ್ಲ ಎಂದರೆ ಯಾವುದೇ ಸಮಯದಲ್ಲೂ ಪ್ರೀಮಿಯಂ ಪ್ಲ್ಯಾನ್‌ ಅನ್ನು ಕ್ಯಾನ್ಸಲ್‌ ಮಾಡುವ ಅವಕಾಶವನ್ನೂ ಕಲ್ಪಿಸಿಕೊಡಲಾಗಿದೆ.

ಪ್ಲ್ಯಾನ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ

ಪ್ಲ್ಯಾನ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ

  • * ಈ ಆಫರ್‌ ವೈಯಕ್ತಿಕ ಖಾತೆಗಳಿಗೆ ಮಾತ್ರ ಅನ್ವಯ ಆಗುತ್ತದೆ. ಉದಾಹರಣೆಗೆ ಕೇವಲ ಒಂದು ಸಾಧನದಲ್ಲಿ ಮಾತ್ರ ಏಕಕಾಲದಲ್ಲಿ ಹಾಡುಗಳನ್ನು ಪ್ಲೇ ಮಾಡಬಹುದು
  • * ಉಚಿತ ಅವಧಿಯ ನಂತರ ಯೋಜನೆಯ ಚಂದಾದಾರಿಕೆಯಾಗಿ ಪ್ರತಿ ತಿಂಗಳು 119ರೂ. ಪಾವತಿ ಮಾಡಬೇಕಿದೆ.
  • * ನೀವು ಹಣ ಪಾವತಿ ಮಾಡುವ ಮುನ್ನ ಕೆಲವು ನಿಬಂಧನೆಗಳು ಇರುತ್ತವೆ, ಅವುಗಳನ್ನು ಕಡ್ಡಾಯವಾಗಿ ಓದಿಕೊಳ್ಳಿ.
  • * ಈ ಪ್ರೀಮಿಯಂ ಚಂದಾದಾರಿಕೆಗೆ ಹೊಸ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ.
  • ಈ ಆಫರ್‌ನ  ಪ್ರಯೋಜನ ಏನು?

    ಈ ಆಫರ್‌ನ ಪ್ರಯೋಜನ ಏನು?

    ಉಚಿತವಾಗಿ ಕಂಪೆನಿಗಳು ಏನಾದರೂ ಪ್ಲ್ಯಾನ್‌ ನೀಡುತ್ತವೆ ಎಂದರೆ ಅದರಲ್ಲಿ ಹೆಚ್ಚಿನ ಜಾಹೀರಾತು ನೀಡಲಾಗುತ್ತದೆ ಎನ್ನುವುದು ಸಹಜ ಅನುಮಾನ. ಆದರೆ, ಇದರಲ್ಲಿ ಆ ಕಿರಿಕಿರಿ ಅನುಭವ ನಿಮಗೆ ಆಗುವುದಿಲ್ಲ. ಜಾಹೀರಾತು ಮುಕ್ತ ಹಾಡುಗಳನ್ನು ಆಲಿಸಬಹುದಾಗಿದೆ. ಹಾಗೆಯೇ 10,000 ಹಾಡುಗಳನ್ನು ಡೌನ್‌ಲೋಡ್ ಮಾಡುವ ಅವಕಾಶವನ್ನೂ ನೀಡಲಾಗಿದೆ. ಜೊತೆಗೆ ಉತ್ತಮ ಧ್ವನಿ ಕ್ವಾಲಿಟಿಯಲ್ಲಿ ಹಾಡುಗಳು ಪ್ಲೇ ಆಗುವ ಆಯ್ಕೆ ಸಹ ನೀಡಲಾಗಿದೆ.

    ಇತರೆ ಮ್ಯೂಸಿಕ್‌ ಸ್ಟ್ರೀಮಿಂಗ್‌ ಪ್ಲ್ಯಾನ್‌ ದರ ಎಷ್ಟು?

    ಇತರೆ ಮ್ಯೂಸಿಕ್‌ ಸ್ಟ್ರೀಮಿಂಗ್‌ ಪ್ಲ್ಯಾನ್‌ ದರ ಎಷ್ಟು?

    ಸ್ಪಾಟಿಫೈ ನ ಈ ಪ್ರೀಮಿಯಂ ಪ್ಲ್ಯಾನ್‌ ಇತರೆ ಮ್ಯೂಸಿಕ್‌ ಸ್ಕ್ರೀಮಿಂಗ್ ಆಪ್‌ಗಳಿಗೆ ಪೈಪೋಟಿ ನೀಡುತ್ತದೆ. ಈಗಾಗಲೇ ಸಾಮಾನ್ಯವಾಗಿ ಸ್ಪಾಟಿಫೈ ಚಂದಾದಾರಿಕೆಗಾಗಿ ಭಾರತದಲ್ಲಿ 119ರೂ. ಗಳನ್ನು ಪಾವತಿ ಮಾಡಬೇಕು. ಹಾಗೆಯೇ ವಾರ್ಷಿಕ ಯೋಜನೆಯಲ್ಲಿ 1,189ರೂ. ಗಳನ್ನು ಪಾವತಿ ಮಾಡಬೇಕಿದೆ.

    ಜಿಯೋ ಸಾವನ್
    ಜಿಯೋ ಸಾವನ್ ಪ್ರೀಮಿಯಂ ಪ್ಲ್ಯಾನ್‌ ಶುಲ್ಕವು ತಿಂಗಳಿಗೆ 99ರೂ. ಆಗಿದೆ. ಆದರೆ, ಇದಕ್ಕೆ ವಾರ್ಷಿಕವಾಗಿ ಚಂದಾದಾರಿಕೆ ಪಡೆದರೆ 399ರೂ. ಗಳನ್ನು ಮಾತ್ರ ಪಾವತಿ ಮಾಡಬಹುದು. ಇದರಲ್ಲಿ ಜಾಹೀರಾತು ಮುಕ್ತ ಸಂಗೀತ, ಹೆಚ್ಚಿನ ಆಡಿಯೊ ಗುಣಮಟ್ಟ, ಅನಿಯಮಿತ ಮ್ಯೂಸಿಕ್ ಡೌನ್‌ಲೋಡ್ ಮಾಡುವ ಆಯ್ಕೆಯನ್ನು ನೀಡಲಾಗಿದೆ.

    ಗಾನ
    ಗಾನದ ಗಾನ ಪ್ಲಸ್‌ನ ಮಾಸಿಕ ಶುಲ್ಕ ತಿಂಗಳಿಗೆ 99 ರೂ. ಗಳಾಗಿದೆ. ಹಾಗೆಯೇ ವಾರ್ಷಿಕವಾಗಿ ಇದಕ್ಕೆ 299ರೂ. ಗಳನ್ನು ಪಾವತಿ ಮಾಡಬೇಕಿದೆ. ಇದರಲ್ಲೂ ಸಹ ಜಾಹೀರಾತು ಮುಕ್ತ ಸಂಗೀತ, ಅನಿಯಮಿತ ಡೌನ್‌ಲೋಡ್‌ಗಳು ಮತ್ತು ಹೆಚ್‌ಡಿ ಗುಣಮಟ್ಟದ ಆಡಿಯೋಗಳನ್ನು ಆಲಿಸಬಹುದಾಗಿದೆ.

    ಆಪಲ್ ಮ್ಯೂಸಿಕ್
    ಆಪಲ್ ಮ್ಯೂಸಿಕ್‌ನ ಮಾಸಿಕ ದರ 99ರೂ. ಗಳಾಗಿದೆ. ಹಾಗೆಯೇ ವಾರ್ಷಿಕವಾಗಿ 999ರೂ. ಗಳನ್ನು ಪಾವತಿಸಿ ಸಂಗೀತ ಆಲಿಸಬಹುದಾಗಿದೆ. ಇದರಲ್ಲೂ ಸಹ ಹಾಡುಗಳನ್ನು ಡೌನ್‌ಲೋಡ್‌ ಮಾಡುವ ಹಾಗೂ ಉತ್ತಮ ಗುಣಮಟ್ಟದಲ್ಲಿ ಸಂಗೀತ ಕೇಳುವ ಅವಕಾಶ ಕಲ್ಪಿಸಲಾಗಿದೆ.

Best Mobiles in India

English summary
Spotify is one of the leading music streaming apps. Meanwhile, Spotify is now offering the premium offer to Indians for free.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X