ವಿಶ್ವಕ್ಕೇ ತಲೆನೋವು ತಂದಿಟ್ಟ ಇಸ್ರೇಲ್ ತಂತ್ರಜ್ಞಾನ!..ಇದು ಊಹಿಸಲಾಗದ್ದು!

|

ಮೇ ತಿಂಗಳ ಆರಂಭದಲ್ಲಿ ವಾಟ್ಸಾಪ್ ಹ್ಯಾಕ್‌ನ ಹಿಂದಿದ್ದ ಇಸ್ರೇಲಿ ಕಂಪನಿಯು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಅದು ಆಪಲ್, ಗೂಗಲ್, ಫೇಸ್‌ಬುಕ್, ಅಮೆಜಾನ್ ಮತ್ತು ಮೈಕ್ರೋಸಾಫ್ಟ್‌ನಿಂದ ಬಳಕೆದಾರರ ಡೇಟಾವನ್ನು ರಹಸ್ಯವಾಗಿ ಕದಿಯಬಲ್ಲದು ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ದಿ ಫೈನಾನ್ಷಿಯಲ್ ಟೈಮ್ಸ್ ಪ್ರಕಾರ, ಸ್ಮಾರ್ಟ್‌ಫೋನಿನ ಆಚೆಗೆ ಕ್ಲೌಡ್‌ನಲ್ಲಿ ಸಂಗ್ರಹವಾಗಿರುವ ಹೆಚ್ಚಿನ ಮಾಹಿತಿಗಳನ್ನು ಸೆರೆಹಿಡಿಯಲು ಈ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಹೇಳಲಾಗಿದೆ.

ವಿಶ್ವಕ್ಕೇ ತಲೆನೋವು ತಂದಿಟ್ಟ ಇಸ್ರೇಲ್ ತಂತ್ರಜ್ಞಾನ!..ಇದು ಊಹಿಸಲಾಗದ್ದು!

ಹೌದು, ಮೂಲತಃ ಇಸ್ರೇಲ್‌ನ ಎನ್‌ಎಸ್‌ಪಿ ಗ್ರೂಪ್ ಕಂಪನಿ ಅಭಿವೃದ್ಧಿಪಡಿಸಿದ ಪೆಗಸಿಸ್ ಎಂಬ ತಂತ್ರಜ್ಞಾನ ಇಂತಹ ಕೆಲಸ ಮಾಡಲು ಶಕ್ತವಾಗಿದೆ ಎಂದು ಹೇಳಲಾಗಿದೆ. ಈ ಪೆಗಸಿನ್ ಅನ್ನು ಇಸ್ರೇಲ್ ಸರ್ಕಾರದ ಅಡಿಯಲ್ಲಿ ಸೇನೆ ಬಳಸಿಕೊಳ್ಳುತ್ತಿದೆ. ಪೆಗಸಿಸ್‌ನ ಇತ್ತೀಚಿನ ಹೊಸ ಆವೃತ್ತಿ ಅತ್ಯಂತ ಹೆಚ್ಚು ಸಮರ್ಥವಾಗಿದ್ದು, ಗೂಗಲ್, ಫೇಸ್‌ಬುಕ್, ಮೈಕ್ರೋಸಾಫ್ಟ್‌ ಮತ್ತು ಅಮೆಜಾನ್, ಆಪಲ್ ಐಕ್ಲೌಡ್‌ನ ಡಾಟಾ ಕೂಡ ಕದಿಯಬಲ್ಲದು ಎಂದು ನಿರೂಪಿತವಾಗಿದೆ ಎಂದು ವರದಿ ಹೇಳಿದೆ.

ವಿಶ್ವಕ್ಕೇ ತಲೆನೋವು ತಂದಿಟ್ಟ ಇಸ್ರೇಲ್ ತಂತ್ರಜ್ಞಾನ!..ಇದು ಊಹಿಸಲಾಗದ್ದು!

ಪೆಗಸಿಸ್ ತಂತ್ರಜ್ಞಾನವು 'ಸಂಪರ್ಕಿತ' ಸಾಧನದಿಂದ ಸಂದೇಶಗಳು, ಫೋಟೋಗಳು ಮತ್ತು ಸ್ಥಳ ಇತಿಹಾಸ ಸೇರಿದಂತೆ ಎಲ್ಲಾ ಮಾಹಿತಿಯನ್ನು ಸಿಂಕ್ ಮಾಡುತ್ತದೆ ಮತ್ತು ಅವುಗಳನ್ನು ಕಣ್ಗಾವಲು ಆಪರೇಟರ್‌ಗಳಿಗೆ ಹಿಂತಿರುಗಿಸುತ್ತದೆ. ಮಾಲ್ವೇರ್ ಮೂಲಕ ಸ್ಮಾರ್ಟ್‌ಫೋನ್ ಪ್ರವೇಶಿಸಿ, ನಂತರ ಬಳಕೆದಾರರ ಡಾಟಾ ಕದಿಯುತ್ತದೆ. ಅಲ್ಲದೆ ಫೋನ್‌ನ ಸಂಪೂರ್ಣ ನಿಯಂತ್ರಣ ಕೂಡ ಪೆಗಸಿಸ್‌ಗೆ ದೊರೆಯುತ್ತದೆ. ಆದರೆ, ಇದನ್ನು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಮಾರಾಟ ಮಾಡುವುದಿಲ್ಲ ಎಂದು ಹೇಳಲಾಗಿದೆ.

ವಿಶ್ವಕ್ಕೇ ತಲೆನೋವು ತಂದಿಟ್ಟ ಇಸ್ರೇಲ್ ತಂತ್ರಜ್ಞಾನ!..ಇದು ಊಹಿಸಲಾಗದ್ದು!

ಈ ಇತ್ತೀಚಿನ ತಂತ್ರದಿಂದ ಕ್ಲೌಡ್ ಖಾತೆಗಳನ್ನು ಗುರಿಯಾಗಿರಿಸಿಕೊಂಡಿರಬಹುದು. ಕ್ಲೌಡ್ ಸೇವೆಗಳಿಗಾಗಿ ಹ್ಯಾಕಿಂಗ್ ಅಥವಾ ಸಾಮೂಹಿಕ ಕಣ್ಗಾವಲು ಸಾಧನಗಳನ್ನು ಎನ್ಎಸ್ಒ ಗ್ರೂಪ್ ನಿರಾಕರಿಸಿದ್ದರೂ, ಅದು ಹೊಸ ಕಣ್ಗಾವಲು ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಿದೆ ಎಂದು ನಿರ್ದಿಷ್ಟವಾಗಿ ನಿರಾಕರಿಸಲಿಲ್ಲ ಎಂದು ವರದಿ ಹೇಳುತ್ತದೆ. ವರದಿಯಲ್ಲಿ ಉಲ್ಲೇಖಿಸಲಾದ ಕೆಲವು ದೊಡ್ಡ ಟೆಕ್ ಕಂಪನಿಗಳು ಈಗ ಅವುಗಳ ಕೊನೆಯಲ್ಲಿ ಹಕ್ಕುಗಳ ಬಗ್ಗೆ ತನಿಖೆ ನಡೆಸುತ್ತಿವೆ ಎಂದು ಹೇಳಲಾಗಿದೆ.

ಡೇಟಿಂಗ್ ವೆಬ್‌ಸೈಟ್ ನಂಬಿ 62 ಲಕ್ಷ ಕಳೆದುಕೊಂಡ ಭೂಪ!ಡೇಟಿಂಗ್ ವೆಬ್‌ಸೈಟ್ ನಂಬಿ 62 ಲಕ್ಷ ಕಳೆದುಕೊಂಡ ಭೂಪ!

ಪೆಗಸಿಸ್ ಅನ್ನು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಮಾರಾಟ ಮಾಡುವುದಿಲ್ಲ. ಬದಲಾಗಿ ಸರಕಾರಕ್ಕೆ, ಅದರ ಅಧೀನ ಸಂಸ್ಥೆ, ಮಿಲಿಟರಿಗೆ ಮಾತ್ರ ಲಭ್ಯವಾಗುವಂತೆ ಮಾಡಿದ್ದು, ಅತ್ಯಂತ ದುಬಾರಿಯೂ ಆಗಿದೆ. ದುಬಾರಿಯೂ ಆಗಿರುವ ಪೆಗಸಿಸ್ ಟೂಲ್ ಅನ್ನು ಸರಕಾರಗಳು ಮಾತ್ರ ಖರೀದಿಸಬಹುದಾಗಿದ್ದು, ಸ್ಮಾರ್ಟ್‌ಫೋನ್‌ಗಳ ಮೇಲೆ ಕಣ್ಣಿರಿಸಲು ಬಳಸುತ್ತಿವೆ. ಇಸ್ರೇಲ್ ಇಡೀ ವಿಶ್ವದ ಮಾಹಿತಿ ಮೇಲೆ ಕಣ್ಣಿಡಲು ಈ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Best Mobiles in India

English summary
Spyware can now snoop on your Facebook, Google, and iCloud data too. This server then syncs all the information, including messages, photos, and location history, from the ‘connected’ device, and relays them back to the surveillance operators. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X