Subscribe to Gizbot

ಭೂಮಿಯ ಅಂತ್ಯ: ಭವಿಷ್ಯ ನುಡಿದ ಸ್ಟೀಫನ್ ಹಾಕಿಂಗ್

Written By:

ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ವಿಶ್ವದ ಅಂತ್ಯಕ್ಕೆ ಕಾರಣವಾಗಲಿದೆ ಎಂಬುದಾಗಿ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಭವಿಷ್ಯ ನುಡಿದಿದ್ದಾರೆ. ನಾವು ಆಧುನೀಕತೆಗೆ ಹೆಚ್ಚು ಹತ್ತಿರವಾಗುತ್ತಿದ್ದಂತೆ ವಿನಾಶಕ್ಕೆ ಸಮೀಪವಾಗುತ್ತಿದೆ ಎಂಬ ಸಣ್ಣ ಮುನ್ನೆಚ್ಚರಿಕೆಯನ್ನು ಇವರಿಲ್ಲಿ ನೀಡಿದ್ದಾರೆ.

ಓದಿರಿ: ಡ್ರೋನ್‌ ಯುದ್ಧಕ್ಕೆ ಸಜ್ಜಾದ ಭಾರತ

ಭೂಮಿಯು ಹೆಚ್ಚಿನ ಅನಾಹುತಗಳನ್ನು ಕಾಣಲಿದ್ದು ಭೂಮಿಯ ಅಂತ್ಯಕ್ಕೆ ಹೆಚ್ಚಿನ ಅಭಿವೃದ್ಧಿಯೇ ಕಾರಣವಾಗಬಲ್ಲುದು. ನಾವು ಇಂದು ತಂತ್ರಜ್ಞಾನವೆಂದು ಏನನ್ನು ಕರೆಯುತ್ತೇವೆಯೋ ಅದುವೇ ಕಂಟಕವಾಗಿ ನಮಗೆ ಪರಿಣಮಿಸಲಿದೆ ಎಂಬುದಾಗಿ ಬಿಬಿಸಿಗೆ ಅವರು ಹೇಳಿದ್ದಾರೆ. ಭೂಮಿಯ ಅಂತ್ಯಕ್ಕೆ ಕಾರಣವಾಗಲಿರುವ ಅಂಶಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಳಿವಿಗೆ ಕಾರಣ

ಕ್ಷುದ್ರಗ್ರಹ

ಸಿನಿಮಾಗಳಲ್ಲಿ ಅಳಿವಿಗೆ ಕಾರಣವಾಗುವ ಕ್ಷುದ್ರಗ್ರಹಗಳನ್ನು ನೀವು ಕಂಡಿರುತ್ತೀರಿ. ಆದರೆ ನಿಜ ಜೀವನದಲ್ಲಿ ಕೂಡ ಭೂಮಿಯ ಮೇಲೆ ಈ ಗ್ರಹಗಳು ತಮ್ಮ ಪ್ರತಾಪವನ್ನು ಉಂಟುಮಾಡಲಿವೆ. ಸ್ಪೇಸ್ ರಾಕ್‌ಗಳು ಭೂಮಿಯ ವಿನಾಶಕ್ಕೆ ಕಾರಣವಾಗಲಿವೆ.

ವಾತಾವರಣದ ಬದಲಾವಣೆ

ಗ್ಲೋಬಲ್ ವಾರ್ಮಿಂಗ್

ವಾತಾವರಣದ ಬದಲಾವಣೆ ಕೂಡ ನಮ್ಮ ತಪ್ಪುಗಳಿಂದ ನಡೆಯುವಂತಹ ಪ್ರಕ್ರಿಯೆಯಾಗಿದೆ ಎಂಬುದು ಹಾಕಿಂಗ್ ವಿಚಾರವಾಗಿದೆ. ಪ್ರತೀಕೂಲ ಹವಾಮಾನ ದುಷ್ಪರಿಣಾಮಗಳು ಮಾನವನ ಬದುಕಿಗೆ ಅಂತ್ಯವನ್ನು ಹಾಡಲಿವೆ. ಇಲ್ಲಿಗೆ ಹೊಂದಿಕೊಳ್ಳುವುದು ನಂತರ ನಮಗೆ ಕಷ್ಟವಾಗಬಹುದು.

ಜೀವನಕ್ಕೆ ಅಂತ್ಯ

ಮಾನವ ನಿರ್ಮಿತ ವೈರಸ್‌ಗಳು

ಮಾನವ ನಿರ್ಮಿತ ವೈರಸ್‌ಗಳು ನಮ್ಮ ಜೀವನಕ್ಕೆ ಅಂತ್ಯವನ್ನು ಹಾಡಲಿವೆ ಎಂದು ಹಾಕಿಂಗ್ ಎಚ್ಚರಿಕೆಯನ್ನು ನೀಡಿದ್ದಾರೆ. ಈ ವೈರಸ್‌ಗಳು ಸಂಪೂರ್ಣ ಜನಸಂಖ್ಯೆಯನ್ನೇ ವಿನಾಶದ ಅಂಚಿಗೆ ನೂಕಲಿದೆ ಎಂಬುದಾಗಿ ಅವರು ಹೇಳಿದ್ದಾರೆ.

ಬದುಕಿಗೆ ವಿನಾಶಕಾರಿ

ನ್ಯೂಕ್ಲಿಯರ್ ವಾರ್‌ಫೇರ್

ನ್ಯೂಕ್ಲಿಯರ್ ವಾರ್‌ಫೇರ್ ಬದುಕಿಗೆ ವಿನಾಶಕಾರಿಯಾಗಿ ಪರಿಣಮಿಸಲಿದ್ದು ತಂತ್ರಜ್ಞಾನದ ಈ ಅಭಿವೃದ್ಧಿ ನಮ್ಮನ್ನು ಬಲಿತೆಗೆದುಕೊಳ್ಳುವ ಪ್ರಬಲ ಅಸ್ತ್ರವಾಗಿ ಪರಿಣಮಿಸಲಿದೆ.

ಕೃತಕ ಸುಧಾರಿತ ತಂತ್ರಜ್ಞಾನ

ರೊಬೋಟ್‌ಗಳು

ಕೃತಕ ಸುಧಾರಿತ ತಂತ್ರಜ್ಞಾನಗಳನ್ನು ಆಯುಧಗಳಂತೆ ಇಂದಿನ ಮಾನವ ಯುಗ ಬಳಸುತ್ತಿದ್ದು ತಮ್ಮ ಅಂತ್ಯವನ್ನು ತಾವೇ ಇದರ ಮೂಲಕ ಕಂಡುಕೊಳ್ಳುತ್ತಿದ್ದಾರೆ ಎಂಬುದಾಗಿ ಹಾಕಿಂಗ್ ಎಚ್ಚರಿಸಿದ್ದಾರೆ. ರೊಬೋಟ್‌ಗಳು ನಮ್ಮ ವಿನಾಶಕ್ಕೆ ಕಾರಣವಾಗಲಿದ್ದು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿಕೊಳ್ಳಲಿವೆ.

ಹಕ್ಕಿ ಜ್ವರ, ಇಲಿಜ್ವರ

ಸಾಂಕ್ರಾಮಿಕ ಬೆದರಿಕೆ

ಸಾಂಕ್ರಾಮಿಕ ಕಾಯಿಲೆಗಳೂ ಕೂಡ ಭೂಮಿಯ ಅಂತ್ಯಕ್ಕೆ ಕಾರಣವಾಗಲಿವೆ. ಹಕ್ಕಿ ಜ್ವರ, ಇಲಿಜ್ವರ ಮೊದಲಾದ ಸಾಂಕ್ರಾಮಿಕಗಳು

ವಾತಾವರಣದ ಬದಲಾವಣೆಗಳು

ಸ್ನೋಬಾಲ್ ಪರಿಣಾಮ

ಗ್ಲೋಬಲ್ ವಾರ್ಮಿಂಗ್‌ನಿಂದಾಗಿ ಸ್ನೊಬಾಲ್ ಪರಿಣಾಮಕಾರಿಯಾಗಿ ವಿನಾಶಕ್ಕೆ ಕಾರಣವಾಗಲಿವೆ. ವಾತಾವರಣದಲ್ಲಿ ಉಂಟಾಗುತ್ತಿರುವ ಬದಲಾವಣೆಗಳು ಸ್ನೋಬಾಲ್‌ಗೆ ಕಾರಣವಾಗಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಓದಿರಿ:ಫೇಸ್‌ಬುಕ್‌ ಉದ್ಯೋಗಿಗಳಿಗೆ ಮಾತ್ರ ಅರ್ಥವಾಗುವ ಪದಗಳು ಯಾವುವು ಗೊತ್ತೇ
ಓದಿರಿ:ಚಂದ್ರ ಗ್ರಹದಲ್ಲಿ ಯಾರೋ ಇದ್ದಾರೆ: ನಾಸಾ ಸಿಬ್ಬಂದಿ ಹೇಳಿಕೆ
ಓದಿರಿ:ಅರೇ! ಬರೇ 3 ಸೆಕೆಂಡ್‌ಗಳಲ್ಲಿ 1 ಜಿಬಿ ಫೈಲ್ ಡೌನ್‌ಲೋಡ್
ಓದಿರಿ:ಆಪಲ್‌ ಕಂಪನಿ ಸಂದರ್ಶನದ ಕಷ್ಟಕರ ಪ್ರಶ್ನೆ ಏನು ಗೊತ್ತೇ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are his predictions for the nightmarish scenarios that could end the world (or at least humanity's participation in it).
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot