ನೀವು ವೀಕ್ಷಿಸುವ ವೀಡಿಯೊಗಳನ್ನು ಯೂಟ್ಯೂಬ್‌ ಟ್ರ್ಯಾಕ್‌ ಮಾಡದಂತೆ ಮಾಡುವುದು ಹೇಗೆ?

|

ಯೂಟ್ಯೂಬ್ ಜಾಗತಿಕವಾಗಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ವೀಡಿಯೊ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ ಆಗಿದೆ. ಯುಟ್ಯೂಬ್‌ನಲ್ಲಿ ಮ್ಯೂಸಿಕ್‌ ಮತ್ತು ವೀಡಿಯೊ ಎರಡು ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇದೇ ಕಾರಣಕ್ಕೆ ಮನರಂಜನೆ ಬಯಸುವವರ ನೆಚ್ಚಿನ ತಾಣವಾಗಿ ಯೂಟ್ಯೂಬ್‌ ಗುರುತಿಸಿಕೊಂಡಿದೆ. ಇದಲ್ಲದೆ ಯೂಟ್ಯೂಬ್‌ನಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ವಲಯ ಸೇರಿದಂತೆ ಎಲ್ಲಾ ಮಾದರಿಯ ವಿಚಾರಗಳನ್ನು ಸಹ ನಾವು ತಿಳಿದುಕೊಳ್ಳಬಹುದಾಗಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ಇಂದು ಜನಪ್ರಿಯ ವೀಡಿಯೊ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಗೂಗಲ್‌ನಂತೆ ಇದನ್ನು ಮಾತೃ ಸಂಸ್ಥೆ ಆಲ್ಫಾಬೆಟ್ ನಿರ್ವಹಿಸುತ್ತದೆ. ಯುಟ್ಯೂಬ್‌ನ ಸೇವೆಗಳು ನಿಮ್ಮ Google ಖಾತೆಗೆ ಸಂಬಂಧಿಸಿವೆ. ಇನ್ನು ಯೂಟ್ಯೂಬ್‌ ಬಳಕೆದಾರರ ಆಸಕ್ತಿ ತಕ್ಕಂತೆ ಕೆಲವು ಉದ್ದೇಶಿತ ಜಾಹೀರಾತುಗಳನ್ನು ತೋರಿಸುತ್ತಿರುತ್ತದೆ. ಇದಕ್ಕಾಗಿ ಯೂಟ್ಯೂಬ್ ನಿಮ್ಮ ಡೇಟಾವನ್ನು ಟ್ರ್ಯಾಕ್‌ ಮಾಡುತ್ತಿರುತ್ತದೆ. ಈ ರೀತಿ ಯುಟ್ಯೂಬ್‌ ನಿಮ್ಮ ಡೇಟಾವನ್ನು ಟ್ರ್ಯಾಕ್‌ ಮಾಡುವುದನ್ನು ಸ್ಟಾಪ್‌ ಮಾಡುವುದಕ್ಕೆ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯೂಟ್ಯೂಬ್‌

ಯೂಟ್ಯೂಬ್‌ ನಿಮ್ಮ ಆಸಕ್ತಿಯನ್ನು ಟ್ರ್ಯಾಕ್‌ ಮಾಡುತ್ತಿರುತ್ತದೆ. ಈ ಡೇಟಾವನ್ನು ಗೂಗಲ್‌ ಖಾತೆಗೆ ಜೋಡಿಸಬಹುದಾಗಿರುವುದರಿಂದ, ಬಳಕೆದಾರರು ಆನ್‌ಲೈನ್‌ನಲ್ಲಿ ಏನು ಮಾಡುತ್ತಾರೆ ಎಂಬುದರ ಬಗ್ಗೆ ಇದು ಬಹಳ ವಿಶಾಲವಾದ ಚಿತ್ರವನ್ನು ಒದಗಿಸುತ್ತದೆ. ಇದು ನಿಮ್ಮ ಗೌಪ್ಯತೆಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ನೀವು ನಿಮ್ಮ ಯೂಟ್ಯೂಬ್ ಹಿಸ್ಟರಿ ಗೂಗಲ್‌ಗೆ ಎಷ್ಟು ಗೋಚರಿಸುತ್ತದೆ ಎಂಬುದನ್ನು ನೀವು ಪರಿಶೀಲಿಸಲು ಬಯಸಿದರೆ, ನೀವು Google ನ ಡೇಟಾ ಮತ್ತು ಗೌಪ್ಯತೆ ಪುಟಕ್ಕೆ ಭೇಟಿ ನೀಡಬಹುದು. ಇದು ನಿಮ್ಮ ಗೂಗಲ್‌ ಸರ್ಚ್‌ ಹಿಸ್ಟರಿ, ಗೂಗಲ್‌ ಅಸಿಸ್ಟೆಂಟ್‌ ಹಿಸ್ಟರಿ ಮತ್ತು ಇತರ ಗೌಪ್ಯತೆ ನಿಯಂತ್ರಣಗಳನ್ನು ಒಳಗೊಂಡಿರುವ ನಿಮ್ಮ ಗೂಗಲ್‌ ಖಾತೆಯ ಎಲ್ಲಾ ಚಟುವಟಿಕೆಯನ್ನು ಇದರಲ್ಲಿ ಕಾಣಬಹುದಾಗಿದೆ, ಅಷ್ಟೇ ಅಲ್ಲ ಯೂಟ್ಯೂಬ್‌ಗೆ ಲಾಗಿನ್ ಆಗಿರುವಾಗ ನೀವು ವೀಕ್ಷಿಸಿದ ಎಲ್ಲಾ ವೀಡಿಯೊಗಳನ್ನು ಇಲ್ಲಿ ನೋಡಬಹುದಾಗಿದೆ.

ವೈಯಕ್ತೀಕರಿಸಿದ ಜಾಹೀರಾತುಗಳಿಗಾಗಿ ಯೂಟ್ಯೂಬ್ ನಿಮ್ಮನ್ನು ಟ್ರ್ಯಾಕ್ ಮಾಡುವುದನ್ನು ನಿಲ್ಲಿಸುವುದು ಹೇಗೆ?

ವೈಯಕ್ತೀಕರಿಸಿದ ಜಾಹೀರಾತುಗಳಿಗಾಗಿ ಯೂಟ್ಯೂಬ್ ನಿಮ್ಮನ್ನು ಟ್ರ್ಯಾಕ್ ಮಾಡುವುದನ್ನು ನಿಲ್ಲಿಸುವುದು ಹೇಗೆ?

ಗೂಗಲ್‌ನ ಪ್ರೈವೆಸಿ ಡ್ಯಾಶ್‌ಬೋರ್ಡ್‌ನಿಂದ, ಬಳಕೆದಾರರು ತಮ್ಮ ಯೂಟ್ಯೂಬ್ ವೀಕ್ಷಣೆಯ ಹಿಸ್ಟರಿಯನ್ನು ಪರಿಶೀಲಿಸಬಹುದು. ತದನಂತರ ಯೂಟ್ಯೂಬ್ ತಮ್ಮ ಹಿಸ್ಟರಿಯನ್ನು ಮುಂದುವರಿಸುವುದನ್ನು ಅವರು ಬಯಸುತ್ತಾರೆಯೇ ಎಂದು ನಿರ್ಧರಿಸಬಹುದು. ಇದರರ್ಥ ನೀವು ವೀಕ್ಷಿಸಿದ ಎಲ್ಲಾ ವೀಡಿಯೊಗಳ ಲಾಗ್ ಅನ್ನು ರೆಕಾರ್ಡ್ ಮಾಡುವುದನ್ನು ನಿಲ್ಲಿಸಲು ನೀವು ಸೇವೆಯನ್ನು ಸೂಚಿಸಬಹುದು. ನೀವು ವೀಕ್ಷಿಸಿದ ವೀಡಿಯೊಗಳನ್ನು ಟ್ರ್ಯಾಕ್ ಮಾಡುವ ಸೇವೆಯನ್ನು ನಿಲ್ಲಿಸುವ "ಸ್ಟಾಪ್‌" ಆಯ್ಕೆಯನ್ನು ಬಳಕೆದಾರರು ಆಯ್ಕೆ ಮಾಡಬೇಕು.

ಯೂಟ್ಯೂಬ್‌

ಯೂಟ್ಯೂಬ್‌ನಲ್ಲಿ ತಮ್ಮ ವೀಕ್ಷಣೆಯ ಇತಿಹಾಸವನ್ನು ಆಫ್ ಮಾಡಲು ಇಚ್ಛಿಸದವರು ಮೂರು ತಿಂಗಳು, 1.5 ವರ್ಷ ಮತ್ತು 3 ವರ್ಷಗಳ ನಂತರ ನಿಮ್ಮ ವೀಕ್ಷಣೆಯ ಇತಿಹಾಸವನ್ನು ಸ್ವಯಂಚಾಲಿತವಾಗಿ ಅಳಿಸುವಂತೆ ಕಂಪನಿಗೆ ಸೂಚಿಸಲು ಡ್ಯಾಶ್‌ಬೋರ್ಡ್ ಬಳಸಬಹುದು. ಅಂತಿಮವಾಗಿ, ನಿಮ್ಮ ವೈಯಕ್ತಿಕ ಮಾಹಿತಿಯ ಆಧಾರದ ಮೇಲೆ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ತೋರಿಸದಂತೆ ಕಂಪನಿಗೆ ಸೂಚಿಸಲು ನಿಮ್ಮ ಅಸ್ತಿತ್ವದಲ್ಲಿರುವ ವೀಕ್ಷಣೆ ಇತಿಹಾಸವನ್ನು ನೀವು ಡಿಲೀಟ್‌ ಮಾಡಬಹುದಾಗಿದೆ. ಇದಕ್ಕಾಗಿ ನಿಮ್ಮ ಗೂಗಲ್‌ ಖಾತೆ ಸೆಟ್ಟಿಂಗ್‌ಗಳಲ್ಲಿ ಗೂಗಲ್‌ನ ಜಾಹೀರಾತು ವೈಯಕ್ತೀಕರಣ ಪುಟಕ್ಕೆ ಭೇಟಿ ನೀಡಬಹುದು.

Best Mobiles in India

English summary
YouTube tracking: Google knows lot about you and if you are on YouTube, check these settings to quickly stop the company in its tracks.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X