ಸಿಗ್ನಲ್ ಆಪ್‌ ಸೇರಿದೆ ಮತ್ತೊಂದು ಹೊಸ ಫೀಚರ್ಸ್‌; ವಿಶೇಷತೆ ಏನು?

|

ವಾಟ್ಸಾಪ್, ಮೆಸೆಂಜರ್, ಟೆಲಿಗ್ರಾಮ್‌ ರೀತಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಂತೆ ಸಿಗ್ನಲ್‌ ಸಹ ಪ್ರಮುಖ ಸ್ಥಾನ ಪಡೆದುಕೊಂಡಿದ್ದು, ವಿವಿಧ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರನ್ನು ಸೆಳೆಯುವಲ್ಲಿ ಹಾಗೂ ಈಗಿರುವ ಬಳಕೆದಾರರಿಗೆ ಸುಧಾರಿತ ಅನುಭವ ನೀಡುವಲ್ಲಿ ಮುಂದಾಗಿದೆ. ಇದರ ನಡುವೆ ಈಗ ವಾಟ್ಸಪ್‌, ಇನ್‌ಸ್ಟಾಗ್ರಾಮ್‌ನಲ್ಲಿರುವಂತೆ 'ಸ್ಟೋರಿ' ಎಂಬ ಹೊಸ ಫೀಚರ್ಸ್ ಪರಿಯಿಸಿದೆ.

ಸಿಗ್ನಲ್‌

ಹೌದು, ಸಿಗ್ನಲ್‌ನ ಹೊಸ ಸ್ಟೋರಿ (Stories) ಫೀಚರ್ಸ್‌ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಡಿವೈಸ್‌ಗಳಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಡೆಸ್ಕ್‌ಟಾಪ್ ಆವೃತ್ತಿಗೂ ತರುವುದಾಗಿ ತಿಳಿಸಿದೆ. ಇನ್‌ಸ್ಟಂಟ್ ಮೆಸೇಜಿಂಗ್ ಆಪ್‌ ಆಗಿರುವ ಸಿಗ್ನಲ್‌ ಈ ರೀತಿಯ ಫೀಚರ್ಸ್‌ ಅನ್ನು ಹೊಂದಿರುವುದರಿಂದ ಇನ್ನಷ್ಟು ಬಳಕೆದಾರರು ಇತ್ತ ಮುಖ ಮಾಡಲು ಕಾರಣವಾಗಿದೆ.

ಬ್ಲಾಗ್‌ಪೋಸ್ಟ್‌

ಈ ಬಗ್ಗೆ ಸಿಗ್ನಲ್‌ ಆಪ್‌ ತನ್ನ ಬ್ಲಾಗ್‌ಪೋಸ್ಟ್‌ ಮೂಲಕ ಮಾಹಿತಿ ನೀಡಿದ್ದು, ಪ್ಲಾಟ್‌ಫಾರ್ಮ್‌ನಲ್ಲಿನ ಸ್ಟೋರಿ ಫೀಚರ್ಸ್‌ ಇನ್‌ಸ್ಟಾಗ್ರಾಮ್‌ ಹಾಗೂ ವಾಟ್ಸಾಪ್‌ ನಲ್ಲಿರುವಂತೆ ಸಾಮಾನ್ಯವಾದ ಫೀಚರ್ಸ್‌ ಆಗಿದೆ. ಆದರೆ, ವಿಶೇಷ ಸಂವಹನ ಪ್ರಕ್ರಿಯೆ ನಡೆಸಲು ಹೊಸ ಮಾರ್ಗವಾಗಿ ಈ ಫೀಚರ್ಸ್‌ ಹೊರಹೊಮ್ಮಿದೆ. ಇದಕ್ಕಾಗಿ ಕೆಲವು ವರ್ಷಗಳಿಂದ ಕೆಲಸ ಮಾಡಲಾಗಿದೆ. ಇನ್‌ಸ್ಟಂಟ್ ಮೆಸೇಜಿಂಗ್ ಆಪ್ ಈ ರೀತಿಯ ಫೀಚರ್ಸ್‌ ಹೊಂದಿರುವುದು ಸಹಜವಾಗಿದ್ದು, ಪ್ರಪಂಚದಾದ್ಯಂತ ಸಿಗ್ನಲ್ ಆಪ್‌ ಪಡೆದ ಫೀಚರ್ಸ್‌ಗಳಲ್ಲಿ ಇದೂ ಒಂದಾಗಿದೆ ಎಂದು ವಿವರಿಸಲಾಗಿದೆ.

ಈ ಹೊಸ ಫೀಚರ್ಸ್ ಕಾರ್ಯ ಹೇಗೆ?

ಈ ಹೊಸ ಫೀಚರ್ಸ್ ಕಾರ್ಯ ಹೇಗೆ?

ಇನ್ನು ಸಿಗ್ನಲ್ ಆಪ್‌ ಬಳಕೆ ಮಾಡುವ ಯಾರೇ ಆದರೂ ಈ ಫೀಚರ್ಸ್‌ ಬಳಸಬಹುದಾಗಿದೆ. ಅದರಂತೆ ಬಳಕೆದಾರರ ಫೋನ್‌ ಸಂಪರ್ಕ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ಸಹ ಸ್ಟೋರಿ ವೀಕ್ಷಣೆ ಮಾಡಬಹುದು. ಅದರಲ್ಲೂ ಸಂಪರ್ಕವನ್ನು ಸೇವ್‌ ಮಾಡಿಕೊಳ್ಳದೆ 1:1 ಸಂಭಾಷಣೆ ನಡೆಸಿದರೂ ಸಹ ಸ್ಟೋರಿ ವೀಕ್ಷಣೆ ಮಾಡಬಹುದಾಗಿದೆ. ಹಾಗೆಯೇ ಸಿಗ್ನಲ್‌ನಲ್ಲಿ ಮೆಸೆಜ್‌ ರಿಕ್ವೆಸ್ಟ್‌ ಸ್ವೀಕರಿಸಿದ ಯಾರಾದರೂ ಸ್ಟೋರಿಗಳನ್ನು ಶೇರ್‌ ಮಾಡಿಕೊಳ್ಳಬಹುದು ಹಾಗೂ ವೀಕ್ಷಿಸಬಹುದು. ಇದೆಲ್ಲಕ್ಕೂ ಮಿಗಿಲಾಗಿ ನಿರ್ದಿಷ್ಟವಾಗಿ ನಿಮಗೆ ಅಗತ್ಯವಿಲ್ಲದ ಜನರಿಗೆ ಸ್ಟೋರಿ ಕಾಣಿಸದ ಹಾಗೆ ಮಾಡಲು ಸಹ ಆಯ್ಕೆ ನೀಡಲಾಗಿದೆ.

ವೀಕ್ಷಣೆ ಬಗ್ಗೆ ಟ್ರ್ಯಾಕ್

ವೀಕ್ಷಣೆ ಬಗ್ಗೆ ಟ್ರ್ಯಾಕ್

ಇದರ ಜೊತೆಗೆ ಸಿಗ್ನಲ್‌ ಆಪ್‌ ಬಳಕೆದಾರರು ಸ್ಟೋರಿಯನ್ನು ಬೇಕಾದ ಜನರು ಅಥವಾ ಗ್ರೂಪ್‌ಗಳ ಸಣ್ಣ ಉಪವಿಭಾಗದೊಂದಿಗೆ ಹಂಚಿಕೊಳ್ಳಬಹುದಾಗಿದೆ. ಹಾಗೆಯೇ ಸ್ಟೋರಿಯನ್ನು ಯಾರು ವೀಕ್ಷಿಸಿದ್ದಾರೆ ಎಂಬುದನ್ನು ಟ್ರ್ಯಾಕ್ ಮಾಡಲು ಅನುಕೂಲ ಮಾಡಿಕೊಡಲಾಗಿದ್ದು, ಇದಕ್ಕೆ ನಿಮ್ಮದೇ ಅದ ಕಸ್ಟಮ್ ಸ್ವರೂಪವನ್ನು ಕ್ರಿಯೇಟ್‌ ಮಾಡಿಕೊಳ್ಳಬಹುದಾದ ಫೀಚರ್ಸ್‌ ನೀಡಲಾಗಿದೆ.

ಗ್ರೂಪ್

ಇದರ ಜೊತೆಗೆ ಸಿಗ್ನಲ್‌ ಬಳಕೆದಾರರು ಮೊದಲೇ ಅಸ್ತಿತ್ವದಲ್ಲಿರುವ ಗ್ರೂಪ್ ಚಾಟ್‌ಗಳೊಂದಿಗೆ ತಮ್ಮ ಸ್ಟೋರಿಯನ್ನು ಹಂಚಿಕೊಂಡಾಗ, ಗ್ರೂಪ್‌ನಲ್ಲಿರುವ ಯಾರಾದರೂ ಸ್ಟೋರಿ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ಸದಸ್ಯರ ಕಾಮೆಂಟ್‌ಗಳನ್ನು ವೀಕ್ಷಿಸಬಹುದಾಗಿದೆ. ಇನ್ನು ಬಳಕೆದಾರರು ತಮ್ಮ ಸ್ಟೋರಿಗಳನ್ನು ಫೋಟೋ, ವಿಡಿಯೋಮತ್ತು ಟೆಕ್ಸ್‌ಮೂಲಕ ಪ್ರಕಟಿಸಿಕೊಳ್ಳಬಹುದಾಗಿದೆ.

24 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಡಿಲೀಟ್‌ ಆಗುತ್ತದೆ

24 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಡಿಲೀಟ್‌ ಆಗುತ್ತದೆ

ಇನ್ನು ಸಿಗ್ನಲ್‌ನಲ್ಲಿ ಹಂಚಿಕೊಳ್ಳುವ ಸ್ಟೋರಿಗಳು 24 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಡಿಲೀಟ್‌ ಆಗಲಿವೆ. ಅಷ್ಟು ಸಮಯ ಬೇಡ, ಬೇಗನೆ ಅ ಸ್ಟೋರಿ ಪ್ಲಾಟ್‌ಫಾರ್ಮ್‌ನಿಂದ ಡಿಲೀಟ್‌ ಆಗಬೇಕು ಎಂದುಕೊಂಡರೆ ಅದಕ್ಕೂ ಸಹ ಅವಕಾಶ ಕಲ್ಪಿಸಲಾಗಿದ್ದು, ಅದನ್ನು ಬೇಕಾದಾಗ ಡಿಲೀಟ್‌ ಮಾಡಬಹುದು. ಅದೆಲ್ಲಕ್ಕೂ ಮಿಗಿಲಾಗಿ ಆಪ್‌ನಲ್ಲಿ ಎಲ್ಲಾ ಫೀಚರ್ಸ್‌ಗೂ ಇರುವಂತೆ ಈ ಸ್ಟೋರಿ ಫೀಚರ್ಸ್‌ಗೂ ಎನ್‌ಕ್ರಿಪ್ಶನ್ ಆಯ್ಕೆ ನೀಡಲಾಗಿದೆ.

ಗೌಪ್ಯತೆ

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಗೌಪ್ಯತೆ ಮತ್ತು ಎನ್‌ಕ್ರಿಪ್ಶನ್ ಮಾನದಂಡಗಳನ್ನು ಸರಿಯಾಗಿ ಅನುಸರಿಸುತ್ತಿರುವ ಆಪ್‌ಗಳಲ್ಲಿ ಇದೂ ಸಹ ಪ್ರಮುಖ ಸ್ಥಾನ ಪಡೆದುಕೊಂಡಿದ್ದು, ಈ ಕಾರಣಕ್ಕಾಗಿಯೇ ಅನೇಕ ಬಳಕೆದಾರರಿಗೆ ಸಿಗ್ನಲ್ ಆಸಕ್ತಿದಾಯಕ ಆಪ್‌ ಆಗಿ ಹೊರಹೊಮ್ಮುತ್ತಿದೆ.

Best Mobiles in India

English summary
Signal has also taken an important place in messaging platforms like WhatsApp, Messenger, Telegram. Meanwhile, story features have now been added to Signal App.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X