ನೆಟ್‌ಪ್ಲಿಕ್ಸ್‌ ಸೇರಿದ ಈ ಫೀಚರ್ಸ್‌ ನಿಮಗೆ 360 ಡಿಗ್ರಿ ಸೌಂಡ್‌ ಅನುಭವ ನೀಡಲಿದೆ!

|

ಇಂದಿನ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಸಿನಿಮಾ ಮಂದಿಗಳಲ್ಲಿ ಸಿನಿಮಾ ನೋಡುವ ಹವ್ಯಾಸವನ್ನೇ ಬದಲಾಯಿಸುವ ಮಟ್ಟಿಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಬದಲಾಗಿವೆ. ಮನರಂಜನೆಯ ಹೊಸ ಆಯಾಮವಾಗಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಇದೇ ಕಾರಣಕ್ಕೆ ಇಂದು ಅನೇಕ ಪ್ಲಾಟ್‌ಫಾರ್ಮ್‌ಗಳು ತಮ್ಮ ವೈವಿಧ್ಯಮಯ ಕಂಟೆಂಟ್‌ ಹಾಗೂ ಸ್ಟ್ರೀಮಿಂಗ್‌ ಸೇವೆಗಳ ಮೂಲಕ ಗುರುತಿಸಿಕೊಂಡಿವೆ. ಇದರಲ್ಲಿ ನೆಟ್‌ಫ್ಲಿಕ್ಸ್‌ ಪ್ಲಾಟ್‌ಫಾರ್ಮ್‌ ಕೂಡ ಒಂದಾಗಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ತನ್ನ ವಿವಿಧ ಚಂದಾದಾರಿಕೆ ಪ್ಲಾನ್‌ಗಳ ಮೂಲಕ ಬಳಕೆದಾರರಿಗೆ ಸ್ಟ್ರಿಮಿಂಗ್‌ ಸೇವೆಗಳನ್ನು ನೀಡುತ್ತಾ ಬಂದಿದೆ. ಅಲ್ಲದೆ ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಿದೆ. ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಪಟಿಲ್‌(spatial ) ಆಡಿಯೋ ಅನ್ನು ಪರಿಚಯಿಸಿದೆ. ಸೆನೆಹೈಸರ್‌ ಸಹಭಾಗಿತ್ವದಲ್ಲಿ spatial ಆಡಿಯೋವನ್ನು ಘೋಷಣೆ ಮಾಡಿದೆ. ಇದರಿಂದ ನಿಮಗೆ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ವೀಕ್ಷಿಸಿದ ಅನುಭವ ದೊರೆಯಲಿದೆ.

ನೆಟ್‌ಫ್ಲಿಕ್ಸ್‌

ಆಪಲ್‌ ಟಿವಿ ಪ್ಲಸ್‌ ಮಾದರಿಯಲ್ಲಿಯೇ ನೆಟ್‌ಫ್ಲಿಕ್ಸ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಪ್ರದರ್ಶನಗಳು, ಚಲನಚಿತ್ರಗಳಿಗಾಗಿ ಸೆನ್‌ಹೈಸರ್ ಸಹಭಾಗಿತ್ವದಲ್ಲಿ spatial ಆಡಿಯೋವನ್ನು ಘೋಷಿಸಿದೆ. ಇದು ಸಾಮಾನ್ಯ ಆಡಿಯೊವನ್ನು ಮೂರು-ಆಯಾಮದ ಸೌಂಡ್‌ಗೆ ಪರಿವರ್ತನೆ ಮಾಡಲಿದೆ. ಅಂದರೆ ಸಿನಿಮಾ ಮಂದಿರದಲ್ಲಿ ದೊರೆಯುವ ಸೌಂಡ್‌ ಸಿಸ್ಟಂ ಅನುಭವ ನಿಮಗೆ ಸಿಗಲಿದೆ. ಥೇಟ್‌ ಸಿನಿಮಾದಲ್ಲಿನ ವಿಷಯವನ್ನು ನೀವು ವೀಕ್ಷಿಸುತ್ತಿರುವಂತೆ ಅನುಭವವಾಗಲಿದೆ. ಹಾಗಾದ್ರೆ ನೆಟ್‌ಫ್ಲಿಕ್ಸ್‌ ಪರಿಚಯಿಸಿರುವ ಹೊಸ spatial ಆಡಿಯೋ ವಿಶೇಷತೆ ಏನು? spatial ಆಡಿಯೋ ಎಂದರೇನು? ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಪಟಿಲ್‌ ಆಡಿಯೋ ಎಂದರೇನು?

ಸ್ಪಟಿಲ್‌ ಆಡಿಯೋ ಎಂದರೇನು?

ಸ್ಪಟಿಲ್‌ ಆಡಿಯೋ ಎಂದರೆ ಡಿಜಿಟಲ್ ಸರೌಂಡ್ ಸೌಂಡ್‌ನ ಒಂದು ರೂಪವಾಗಿದೆ. ಅಂದರೆ 360 ಡಿಗ್ರಿಯಲ್ಲೂ ಕೂಡ ಸೌಂಡ್‌ ನಿಮ್ಮನ್ನು ಆವರಿಸಲಿದೆ. ಇದರಿಂದ ನೀವು ಕೊಠಡಿಯಲ್ಲಿ ಕುಳಿತು ಸಿನಿಮಾ ವೀಕ್ಷಣೆ ಮಾಡುತ್ತಿದ್ದರೆ ಚಿತ್ರಮಂದಿರದ ಅನುಭವ ದೊರೆಯಲಿದೆ. ವಿಭಿನ್ನ ಶಬ್ದಗಳ ಮೂಲ ಬಿಂದುಗಳು ನಿಮ್ಮನ್ನು ಎಲ್ಲಾ ದಿಕ್ಕುಗಳಿಂದ ಆವರಿಸಲಿದೆ. ಈ ಮಾದರಿಯ ಟೆಕ್ನಾಲಜಿಯನ್ನು ಈಗಾಗಲೇ ಆಪಲ್‌ ಕಂಪೆನಿ ತನ್ನ ಆಫಲ್‌ ಟಿವಿ ಪ್ಲಸ್‌ ನೀಡುತ್ತಿದೆ. ಇದೀಗ ನೆಟ್‌ಫ್ಲಿಕ್ಸ್‌ ಸೆನ್‌ಹೈಸರ್‌ ಜೊತೆಗೂಡಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಪಟಿಲ್‌ ಆಡಿಯೋ ಅನುಭವ ನೀಡಲು ಮುಂದಾಗಿದೆ.

ನೆಟ್‌ಫ್ಲಿಕ್ಸ್‌

ಇನ್ನು ನೆಟ್‌ಫ್ಲಿಕ್ಸ್‌ ಸ್ಟ್ರೇಂಜರ್ ಥಿಂಗ್ಸ್, ರೆಡ್ ನೋಟಿಸ್ ನಂತಹ ಸರಣಿಗಳನ್ನು ವೀಕ್ಷಣೆ ಮಾಡುವುದಕ್ಕಾಗಿ ಸ್ಪಟಿಲ್‌ ಆಡಿಯೋ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದರಿಂದ ರಿಯಾಲಿಟಿಯ ಅನುಭವ ನಿಮಗೆ ದೊರೆಯಲಿದೆ. ಇನ್ನು ಸ್ಪಟಿಲ್‌ ಆಡಿಯೋ ಫೀಚರ್ಸ್‌ಗೆ ನೀವು ಪ್ರವೇಶ ಪಡೆಯುವುದಕ್ಕೆ ಹೋಮ್ ಥಿಯೇಟರ್ ಅವಶ್ಯಕತೆಯಿಲ್ಲ. ಅಲ್ಲದೆ ಸರೌಂಡ್ ಸೌಂಡ್ ಸ್ಪೀಕರ್ ಅಥವಾ ಯಾವುದೇ ವಿಶೇಷ ಸ್ಟ್ರೀಮಿಂಗ್ ಪ್ಲಾನ್‌ನಂತಹ ವಿಶೇಷ ಟೂಲ್ಸ್‌ ಕೂಡ ಬೇಕಾಗಿಲ್ಲ ಎಂದು ನೆಟ್‌ಫ್ಲಿಕ್ಸ್‌ ಹೇಳಿಕೊಂಡಿದೆ.

ಆಡಿಯೋ

ಸ್ಪಟಿಲ್‌ ಆಡಿಯೋ ಫೀಚರ್ಸ್‌ ಅನ್ನು ರಯಾನ್ ರೆನಾಲ್ಡ್ಸ್ ಅವರ ದಿ ಆಡಮ್ ಪ್ರಾಜೆಕ್ಟ್, ದಿ ಸ್ಟ್ರೇಂಜರ್ ಥಿಂಗ್ಸ್ ಸೀಸನ್ 4, ದಿ ವಿಚರ್, ಇಂಟರ್‌ಸೆಪ್ಟರ್, ಲಾಕ್ ಮತ್ತು ಕೀ ಯಂತ ಸರಣಿಗಳನ್ನು ವೀಕ್ಷಿಸುವುದಕ್ಕೆ ಬಳಸಬಹುದು. ಇದನ್ನು ಮೇನ್‌ಪೇಜ್‌ನಲ್ಲಿ ಸರ್ಚ್‌ಬಾಕ್ಸ್‌ನಲ್ಲಿ ಸ್ಪಟಿಲ್‌ ಆಡಿಯೋ ಎಂದು ಟೈಪ್ ಮಾಡುವ ಮೂಲಕ ಬಳಕೆದಾರರು ಸ್ಪಟಿಲ್‌ ಆಡಿಯೋ ಫೀಚರ್ಸ್‌ ಆಯ್ಕೆ ಮಾಡಬಹುದು. ನಂತರ ಈ ಫೀಚರ್ಸ್‌ ಮೂಲಕ ನೀವು ವೀಕ್ಷಿಸಲು ಬಯಸುವ ಆದ್ಯತೆಯ ಚಲನಚಿತ್ರ ಅಥವಾ ಸರಣಿಯನ್ನು ಆಯ್ಕೆಮಾಡಬೇಕಾಗುತ್ತದೆ.

ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ ಪ್ರಕಾರ, ಸ್ಪಟಿಲ್‌ ಆಡಿಯೋ ತಲ್ಲೀನಗೊಳಿಸುವ ಆಡಿಯೊದ ಸಿನಿಮೀಯ ಅನುಭವವನ್ನು ಯಾವುದೇ ಸ್ಟಿರಿಯೊಗೆ ಪರಿವರ್ತಿಸಲು ಸಹಾಯ ಮಾಡಲಿದೆ. ಆದ್ದರಿಂದ ನೀವು ನೆಟ್‌ಫ್ಲಿಕ್ಸ್ ವೀಕ್ಷಿಸಲು ಯಾವ ಡಿವೈಸ್‌ ಅನ್ನು ಬಳಸಿದರೂ ಸ್ಟೋರಿಯೊಳಗೆ ನಿಮ್ಮನ್ನು ತೊಡಗಿಸಿಕೊಳ್ಳಲಿದೆ ಎಂದು ಹೇಳಿದೆ. ಇನ್ನು ನೀವು ಸರೌಂಡ್ ಸೌಂಡ್ ಸ್ಪೀಕರ್ ಹೊಂದಿಲ್ಲದಿದ್ದರೆ, ಸ್ಟ್ರೀಮಿಂಗ್ ಮಾಡುವಾಗ ಸ್ಪಟಿಲ್‌ ಆಡಿಯೋ ಫೀಚರ್ಸ್‌ ಅನ್ನು ಆಟೋಮ್ಯಾಟಿಕ್‌ ಆಗಿ ಆಕ್ಟಿವ್‌ ಮಾಡಲಾಗುತ್ತದೆ. ಒಂದು ವೇಳೆ ನೀವು ಸರೌಂಡ್ ಸೌಂಡ್ ಸ್ಪೀಕರ್‌ಗಳನ್ನು ಹೊಂದಿದ್ದರೆ, 5.1 ಸರೌಂಡ್ ಸೌಂಡ್ ಅಥವಾ ಡಾಲ್ಬಿ ಅಟ್ಮಾಸ್‌ನಲ್ಲಿ ಟಿವಿ ಶೋಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ.

ಸ್ಪಟಿಲ್‌ ಆಡಿಯೋವನ್ನು ಯಾವೆಲ್ಲಾ ಡಿವೈಸ್‌ಗಳು ಬೆಂಬಲಿಸಲಿವೆ?

ಸ್ಪಟಿಲ್‌ ಆಡಿಯೋವನ್ನು ಯಾವೆಲ್ಲಾ ಡಿವೈಸ್‌ಗಳು ಬೆಂಬಲಿಸಲಿವೆ?

ಐಫೋನ್‌ 7
ಐಪ್ಯಾಡ್‌ ಏರ್‌ 3
ಐಪ್ಯಾಡ್‌ ಮಿನಿ 5
ಐಪ್ಯಾಡ್‌ ಪ್ರೊ 3
ಆಪಲ್‌ ಟಿವಿ 4K

ನೆಟ್‌ಫ್ಲಿಕ್ಸ್‌

ಇನ್ನು ನೆಟ್‌ಫ್ಲಿಕ್ಸ್‌ ಕಂಪೆನಿ ಇತ್ತೀಚಿಗೆ ತನ್ನ ಚಂದಾದಾರರ ಕುಸಿತವನ್ನು ಅನುಭವಿಸುತ್ತಿದೆ. ಸದ್ಯ ಹೊಸದಾಗಿ ಚಂದಾದಾರರನ್ನು ಪಡೆದುಕೊಳ್ಳುವ ಅವಶ್ಯಕತೆ ನೆಟ್‌ಫ್ಲಿಕ್ಸ್‌ಗೆ ತುಂಬಾ ಅಗತ್ಯವಾಗಿದೆ. ಇದಕ್ಕಾಗಿ ಹೊಸ ಗ್ರಾಹಕರನ್ನು ಸೆಳೆಯಲು ಹೊಸ ಟ್ರಿಕ್ಸ್‌ಗಳನ್ನು ಪಾಲಿಸುತ್ತಿದೆ. ಅದರಂತೆ ಕಡಿಮೆ ಬೆಲೆಯಲ್ಲಿ ಜಾಹಿರಾತು ಬೆಂಬಲಿತ ಚಂದಾದಾರಿಕೆಯನ್ನು ಪರಿಚಯಿಸಲು ಮುಂದಾಗಿದೆ. ಕಡಿಮೆ ಬೆಲೆಯ ಚಂದಾದಾರಿಕೆ ಪ್ಲಾನ್‌ಗಳಿಂದ ಗ್ರಾಹಕರು ಸುಲಭವಾಗಿ ನೆಟ್‌ಫ್ಲಿಕ್ಸ್‌ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ನೆಟ್‌ಫ್ಲಿಕ್ಸ್‌ನ ಪ್ಲಾನ್‌ ಆಗಿದೆ.

ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ ಜಾಹಿರಾತು ಬೆಂಬಲಿತ ಚಂದಾದಾರಿಕೆ ಪ್ಲಾನ್‌ಗಳನ್ನು ಶೀಘ್ರದಲ್ಲೇ ಪರಿಚಯಿಸುವುದಾಗಿ ಈಗಾಗಲೇ ಘೋಷಣೆ ಮಾಡಿದೆ. ಕಳೆದ ತಿಂಗಳು ನಡೆದ ಲಯನ್ಸ್ ಜಾಹೀರಾತು ಉತ್ಸವದಲ್ಲಿ ನೆಟ್‌ಫ್ಲಿಕ್ಸ್‌ ಕಂಪನಿಯ ಸಿಇಒ ಟೆಡ್ ಸರಂಡೋಸ್ ಅವರು ಕೇನ್ಸ್ ಹೊಸ ಜಾಹಿರಾತು ಬೆಂಬಲಿತ ಪ್ಲಾನ್‌ ಬಗ್ಗೆ ವಿವರಣೆ ನೀಡಿದ್ದಾರೆ. ಇದರಿಂದ, ಜಾಹಿರಾತು ನಡುವೆಯು ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್‌ ಬಯಸುವವರಿಗೆ ಈ ಪ್ಲಾನ್‌ಗಳು ಸೂಕ್ತವಾಗಲಿವೆ. ಏಕೆಂದರೆ ನೆಟ್‌ಫ್ಲಿಕ್ಸ್‌ನ ಪ್ಲಾನ್‌ಗಳು ದುಬಾರಿಯಾಗಿವೆ ಎನ್ನುವ ವಾದವು ಕೂಡ ಇದೆ.

ಬಂದರೂ

ಜಾಹಿರಾತುಗಳ ಬಂದರೂ ಸರಿ ಕಡಿಮೆ ಬೆಲೆಯ ಪ್ಲಾನ್‌ಗಳನ್ನು ಆಯ್ಕೆ ಮಾಡುವ ಬಳಕೆದಾರರು ಇದ್ದಾರೆ ಎನ್ನುವ ಅಶಾಭಾವ ನೆಟ್‌ಫ್ಲಿಕ್ಸ್‌ ಹೊಂದಿದೆ. ನೆಟ್‌ಫ್ಲಿಕ್ಸ್ ಪ್ರಸ್ತುತ 222 ಮಿಲಿಯನ್ ಚಂದಾದಾರರನ್ನು ಹೊಂದಿರುವ ಅತಿದೊಡ್ಡ ಸ್ಟ್ರೀಮಿಂಗ್ ದೈತ್ಯವಾಗಿದೆ. ಆದರೆ 2022 ರ ಮೊದಲ ತ್ರೈಮಾಸಿಕದಲ್ಲಿ ಉಂಟಾಗಿರುವ ಪಾವತಿಸಿದ ಚಂದಾದಾರರ ಕುಸಿತವು ನೆಟ್‌ಫ್ಲಿಕ್ಸ್‌ ಆದಾಯದ ಮೇಲೆ ಭಾರಿ ಪರಿಣಾಮ ಬೀರಿದೆ.

Best Mobiles in India

Read more about:
English summary
Stranger Things, The Witcher, And More On Netflix Gets Spatial Audio Support

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X