ಅಶ್ಲೀಲ ವಿಷಯ ಕಳುಹಿಸಲು ವಿದ್ಯಾರ್ಥಿಯಿಂದ ಟೀಚರ್‌ ಇಮೇಲ್‌ ಹ್ಯಾಕ್

Written By:

ಅಮೇರಿಕದ 'ಗಿಲ್ಬರ್ಟ್‌ ಜೂನಿಯರ್‌ ಪ್ರೌಢಶಾಲೆ"ಯ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕರ ಇಮೇಲ್‌ ಖಾತೆ ಹ್ಯಾಕ್‌ ಮಾಡಿದ್ದಾನೆ. ಇಮೇಲ್‌ ಖಾತೆ ಹ್ಯಾಕ್ ಮಾಡಿದ ನಂತರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಅಶ್ಲೀಲ ವಿಷಯಗಳನ್ನು ಇಮೇಲ್‌ ಮೂಲಕ ಕಳುಹಿಸಿದ್ದಾನೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ಆಂಡ್ರಾಯ್ಡ್ ಫೋನ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡಲೇಬಾರದು: 4 ಕಾರಣಗಳು

ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೈಸ್ಕೂಲ್‌ ವಿದ್ಯಾರ್ಥಿಯಿಂದ ಇಮೇಲ್‌ ಹ್ಯಾಕ್‌

ಹೈಸ್ಕೂಲ್‌ ವಿದ್ಯಾರ್ಥಿಯಿಂದ ಇಮೇಲ್‌ ಹ್ಯಾಕ್‌

1

ಅಮೇರಿಕದ ಅರಿಜೋನಾ ಪ್ರದೇಶದ ಮೆಸಾದಲ್ಲಿನ 'ಹೈಲ್ಯಾಂಡ್‌ ಜೂನಿಯರ್‌ ಪ್ರೌಢಶಾಲೆ'ಯ ವಿದ್ಯಾರ್ಥಿ ಶಾಲೆಯ ಇಮೇಲ್‌ ವ್ಯವಸ್ಥೆಯನ್ನೇ ಹ್ಯಾಕ್‌ ಮಾಡಿದ್ದಾನೆ.

ಶಾಲೆಯ ಶಿಕ್ಷಕಿ ಇಮೇಳ್‌ ಖಾತೆ ಹ್ಯಾಕ್‌

ಶಾಲೆಯ ಶಿಕ್ಷಕಿ ಇಮೇಳ್‌ ಖಾತೆ ಹ್ಯಾಕ್‌

2

ವಿದ್ಯಾರ್ಥಿ ಶಾಲೆಯ ಇಮೇಲ್‌ ವ್ಯವಸ್ಥೆ ಜೊತೆಗೆ ತನ್ನ ಶಿಕ್ಷಕಿಯ ಇಮೇಲ್‌ ಖಾತೆ ಹ್ಯಾಕ್‌ ಮಾಡಿ ಅದನ್ನು ಇತರರಿಗೆ ಅಶ್ಲೀಲ ವಿಷಯಗಳನ್ನು ಕಳುಹಿಸಲು ಬಳಸಿಕೊಂಡಿದ್ದಾನೆ, ಅಲ್ಲದೇ ತನ್ನ ಶಿಕ್ಷಕಿಗೂ ಅಶ್ಲೀಲ ವಿಷಯಗಳನ್ನು ಕಳುಹಿಸಿದ್ದಾನೆ.

ಗಿಲ್ಬರ್ಟ್‌ ಹೈಸ್ಕೂಲ್‌

ಗಿಲ್ಬರ್ಟ್‌ ಹೈಸ್ಕೂಲ್‌

3

ಪ್ರಸ್ತುತದಲ್ಲಿ ಗಿಲ್ಬರ್ಟ್‌ ಹೈಸ್ಕೂಲ್‌ನ ಐಟಿ ವಿಭಾಗ ಶಿಕ್ಷಕಿಯ ಇಮೇಲ್‌ ಖಾತೆಯನ್ನು ಡಿಸೇಬಲ್‌ ಮಾಡಿದೆ ಎಂದು ಹೇಳಿದೆ.

23 ವರ್ಷದ ಮಾಜಿ ವಿದ್ಯಾರ್ಥಿ ಹೇಳಿದ್ದೇನು?

23 ವರ್ಷದ ಮಾಜಿ ವಿದ್ಯಾರ್ಥಿ ಹೇಳಿದ್ದೇನು?

4

" ನನಗೀಗ 23 ವರ್ಷ, ಆದರೆ ನನಗೆ ಕಂಪ್ಯೂಟರ್‌, ಮತ್ತು ಇಮೇಲ್‌ ಹ್ಯಾಕ್‌ ಮಾಡುವ ಯಾವುದೇ ಚಟುವಟಿಕೆಗಳು ತಿಳಿದಿಲ್ಲ. ಆದರೆ ಗಿಲ್ಬರ್ಟ್‌ ಹೈಸ್ಕೂಲ್‌ನ ವಿದ್ಯಾರ್ಥಿಯೊಬ್ಬ ಇಮೇಲ್‌ ಖಾತೆ ಹ್ಯಾಕ್‌ ಮಾಡುತ್ತಾನೆ. ಅದು ಹೇಗೆ ಸಾಧ್ಯ ಅಂತ ನನಗೆ ಗೊತ್ತಿಲ್ಲ" ಎಂದು ಗಿಲ್ಬರ್ಟ್‌ ಹೈಸ್ಕೂಲ್‌ನ ಮಾಜಿ ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.

ಮುಜುಗರಕ್ಕೀಡಾದ ಶಿಕ್ಷಕಿ

ಮುಜುಗರಕ್ಕೀಡಾದ ಶಿಕ್ಷಕಿ

5

"ಗಿಲ್ಬರ್ಟ್‌ ಹೈಸ್ಕೂಲ್‌ ವಿದ್ಯಾರ್ಥಿ ಶಿಕ್ಷಕಿಯನ್ನು ಮುಜುಗರಕ್ಕೆ ಒಳಪಡಿಸಲು ಹೀಗೆ ಮಾಡಿದ್ದಾನೆ ಎಂದು ಹೇಳಬಹುದು" ಎಂದು ಶಾಲೆಯ ಬೋರ್ಡ್ ಸದಸ್ಯ 'ಡಾರಿಲ್‌ ಕಾಲ್ವಿನ್'ರವರು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಕ್ರೋಮ್‌ಬುಕ್‌

ವಿದ್ಯಾರ್ಥಿಗಳಿಗೆ ಕ್ರೋಮ್‌ಬುಕ್‌

6

ಗಿಲ್ಬರ್ಟ್‌ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಕ್ರೋಮ್‌ಬುಕ್‌ ನೀಡಿ, ಟೆಕ್ನಾಲಜಿ ಬಳಸುವ ಬಗ್ಗೆ ಕಠಿಣ ನೀತಿಗಳನ್ನು ಹೇರಿತ್ತು. ಶಾಲೆ ಕಂಪ್ಯೂಟರ್‌ಗಳಲ್ಲಿ ಕಂಟೆಂಟ್‌ ಫಿಲ್ಟರ್‌ ಮಾನಿಟರಿಂಗ್‌ ವ್ಯವಸ್ಥೆಯನ್ನು ಮಾಡಿತ್ತು.

ಆರೋಪಿ ವಿದ್ಯಾರ್ಥಿ ಚಿಕ್ಕವನು

ಆರೋಪಿ ವಿದ್ಯಾರ್ಥಿ ಚಿಕ್ಕವನು

7

ಆರೋಪಿ ವಿದ್ಯಾರ್ಥಿ ಚಿಕ್ಕ ಹುಡುಗನಾಗಿದ್ದು, ಈತನ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಶಾಲೆಯ ಆಡಳಿತ ವಿಭಾಗ ಈ ಘಟನೆಯನ್ನು 'ದಿ ಫೆಡರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್" ಮತ್ತು ಮೆಸಾ ಪೊಲೀಸರಿಗೆ ತನಿಖೆಗಾಗಿ ದೂರು ನೀಡಿದೆ.

ಸೂಚನೆ ನೀಡಿದ್ದರು ನಡೆದಿರುವ ಘಟನೆ

ಸೂಚನೆ ನೀಡಿದ್ದರು ನಡೆದಿರುವ ಘಟನೆ

8

'ಫಿಲ್ಟರಿಂಗ್‌ ಮತ್ತು ಕಂಪ್ಯೂಟರ್‌ ಮಾನಿಟರಿಂಗ್‌ ನೋಡಿದಾಗ ತಪ್ಪು ಮಾಡಬಹುದಾದ ಅವಕಾಶ ಇತ್ತು. ಶಿಕ್ಷಕರು ಮತ್ತು ಸಿಬ್ಬಂದಿಗಳು ವಿದ್ಯಾರ್ಥಿಗಳು ಕಂಪ್ಯೂಟರ್‌ ಬಳಸುವುದನ್ನು ಗಮನಿಸುತ್ತಿರುತ್ತಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಉತ್ತಮ ಸೂಚನೆಗಳನ್ನು ವೆಬ್‌ಸೈಟ್‌ಗಳ ಬಗ್ಗೆ ನೀಡಲಾಗಿದೆ. ಆದರೂ ಸಹ ಈ ವಿದ್ಯಾರ್ಥಿ ಇಮೇಲ್‌ ಹ್ಯಾಕ್‌ ಮಾಡಿರುವುದು ಅಚ್ಚರಿ ಘಟನೆಯಾಗಿದೆ", ಎಂದು ಶಾಲೆ ಹೇಳಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲರು ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಎಚ್ಚರಿಕೆ ಮತ್ತು ಸೂಚನೆಯ ಬಗ್ಗೆ ಪತ್ರ ಕಳುಹಿಸಿದ್ದಾರೆ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
Student Hacks Email Account of His Teacher To Send Obscene Content. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot