ಯಾವುದೇ ಕೇಬಲ್‌ ಕನೆಕ್ಟ್‌ ಇಲ್ಲದೆ ಇದರಲ್ಲಿ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಲು ಸಾಧ್ಯ!

|

ಇಂದಿನ ಟೆಕ್ನಾಲಜಿ ಜಮಾನದಲ್ಲಿ ಹಲವು ಡಿವೈಸ್‌ಗಳು ಅತ್ಯಗತ್ಯ ಎನಿಸಿಬಿಟ್ಟಿವೆ. ಇದರಲ್ಲಿ ಪವರ್‌ ಬ್ಯಾಂಕ್‌ ಕೂಡ ಒಂದು. ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಡಿವೈಸ್‌ಗಳ ವಿದ್ಯುತ್‌ ದಾಹ ನೀಗಿಸುವುದಕ್ಕೆ ಪವರ್‌ ಬ್ಯಾಂಕ್‌ ಅತಿ ಅವಶ್ಯಕವಾಗಿದೆ. ಇದಕ್ಕೆ ತಕ್ಕಂತೆ ಹಲವು ಬ್ರ್ಯಾಂಡ್‌ಗಳು ವಿವಿಧ ಪವರ್‌ ಸಾಮರ್ಥ್ಯದ ಪವರ್‌ ಬ್ಯಾಂಕ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಸ್ಟಫ್‌ಕೂಲ್‌ ಕಂಪೆನಿ ಕೂಡ ಒಂದು. ಇದೀಗ ಸ್ಟಫ್‌ಕೂಲ್‌ ಕಂಪೆನಿ ಭಾರತದಲ್ಲಿ ಹೊಸ ಮಾದರಿಯ ವಾಯರ್‌ಲೆಸ್‌ ಪವರ್‌ ಬ್ಯಾಂಕ್‌ ಅನ್ನು ಪರಿಚಯಿಸಿದೆ.

ಸ್ಟಫ್‌ಕೂಲ್‌

ಹೌದು, ಸ್ಟಫ್‌ಕೂಲ್‌ ಕಂಪೆನಿ ಭಾರತದಲ್ಲಿ ಸ್ಟಫ್‌ಕೂಲ್‌ PB9063W 5,000mAh ಮ್ಯಾಗ್ನೆಟಿಕ್ ವಾಯರ್‌ಲೆಸ್ ಪವರ್ ಬ್ಯಾಂಕ್ ಬಿಡುಗಡೆ ಮಾಡಿದೆ. ಇದರಲ್ಲಿ ನಿಮ್ಮ ಡಿವೈಸ್‌ ಅನ್ನು ಚಾರ್ಜ್‌ ಮಾಡಬೆಕಾದರೆ ಯಾವುದೇ ಕೇಬಲ ಕನೆಕ್ಟ್ ಮಾಡಬೇಕಾದ ಅನಿವಾರ್ಯತೆಯಿಲ್ಲ. ಇದು ಪ್ರಾರಂಭಿಕವಾಗಿ ಆಪಲ್‌ನ ಸ್ಮಾರ್ಟ್‌ವಾಚ್‌, ಡಿವೈಸ್‌ಗಳನ್ನು ಕೂಡ ಚಾರ್ಜ್‌ ಮಾಡುವುದಕ್ಕೆ ಸೂಕ್ತವಾದ ವಿನ್ಯಾಸವನ್ನು ಪಡೆದುಕೊಂಡಿದೆ. ಹಾಗಾದ್ರೆ ಈ ಹೊಸ ವಾಯರ್‌ಲೆಸ್‌ ಪವರ್‌ ಬ್ಯಾಂಕ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮ್ಯಾಗ್‌ಸೇಫ್

ಸ್ಟಫ್‌ಕೂಲ್‌ PB9063W 5,000mAh ಮ್ಯಾಗ್ನೆಟಿಕ್ ವಾಯರ್‌ಲೆಸ್ ಪವರ್ ಬ್ಯಾಂಕ್ ಪ್ರಾರಂಭಿಕವಾಗಿ ಮ್ಯಾಗ್‌ಸೇಫ್ ಮತ್ತು ಆಪಲ್ ವಾಚ್ ಮಾನದಂಡಗಳಿಗೆ ಬೆಂಬಲಿಸುವ ರೀತಿಯ ವಿನ್ಯಾಸವನ್ನು ಪಡೆದಿದೆ. ಐಫೋನ್, ಏರ್‌ಪಾಡ್‌ಗಳು ಮತ್ತು ವಾಚ್ ಮಾದರಿಗಳು, ಅಂತರ್ನಿರ್ಮಿತ ಆಪಲ್ ವಾಚ್ ಚಾರ್ಜಿಂಗ್ ಬೆಂಬಲಿಸಲಿದೆ. ಅಲ್ಲದೆ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಇತರ ಉತ್ಪನ್ನಗಳು ಕೂಡ ಈ ಪವರ್ ಬ್ಯಾಂಕ್‌ನಿಂದ ಪ್ರಯೋಜನ ಪಡೆಯಬಹುದು.

ಪವರ್‌

ಈ ಪವರ್‌ ಬ್ಯಾಂಕ್‌ ಜನಪ್ರಿಯ Qi ವೈರ್‌ಲೆಸ್ ಚಾರ್ಜಿಂಗ್ ಮಾನದಂಡವನ್ನು ಬೆಂಬಲಿಸುತ್ತದೆ. ಇದರಲ್ಲಿ ವಿವಿಧ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಮತ್ತು ಇಯರ್‌ಫೋನ್‌ಗಳು ಸೇರಿದಂತೆ ವಾಯರ್‌ಲೆಸ್‌ ಚಾರ್ಜ್‌ ಬೆಂಬಲಿಸುವ ಡಿವೈಸ್‌ಗಳನ್ನು ಚಾರ್ಜ್‌ ಮಾಡಬಹುದು. ಆದರೆ ಪ್ರಾರಂಭದಲ್ಲಿ ಆಪಲ್ ಡಿವೈಸ್‌ಗಳನ್ನು ಚಾರ್ಜ್‌ ಮಾಡುವುದಕ್ಕೆ ಸೂಕ್ತವಾಗುವ ರೀತಿಯ ವಿನ್ಯಾಸ ಪಡೆದಿದೆ. ಯಾಕೆಂದರೆ ಆಪಲ್‌ನ ಮ್ಯಾಗ್‌ಸೇಫ್ ಮಾನದಂಡಕ್ಕೆ ಹೊಂದಿಕೆಯಾಗುವ ಮ್ಯಾಗ್ನೆಟಿಕ್ ಲ್ಯಾಚಿಂಗ್ ಫಂಕ್ಷನ್‌ ಅನ್ನು ಇದರಲ್ಲಿ ಬಳಸಲಾಗಿದೆ.

ಸ್ಟ್ಯಾಂಡ್‌

ಇದರಲ್ಲಿ ಸ್ಟ್ಯಾಂಡ್‌ ಕೂಡ ನೀಡಲಾಗಿದ್ದು, ಡಿವೈಸ್‌ ಚಾರ್ಜ್ ಆಗುತ್ತಿರುವಾಗ ಸುಲಭವಾಗಿ ಬಳಸಲು PB9063W ಅನ್ನು ನೇರವಾಗಿ ಜೋಡಿಸಲು ಅನುಮತಿಸುತ್ತದೆ. ಅಲ್ಲದೆ ಇನ್‌ಪುಟ್ ಮತ್ತು ಔಟ್‌ಪುಟ್‌ಗಾಗಿ USB ಟೈಪ್-ಸಿ ಪೋರ್ಟ್ ಅನ್ನು ಕೂಡ ಪಡೆದಿದೆ.ಜೊತೆಗೆ ಇನ್‌ಪುಟ್‌ಗಾಗಿ ಲೈಟ್ನಿಂಗ್ ಪೋರ್ಟ್, ಟೈಪ್-ಸಿ ಪೋರ್ಟ್ ಮೂಲಕ 20W USB PD ಚಾರ್ಜಿಂಗ್ ಬೆಂಬಲಿತವಾಗಿದೆ. ಈ ಪವರ್‌ ಬ್ಯಾಂಕ್‌ 5,000mAh ಸಾಮರ್ಥ್ಯವನ್ನು ಪಡೆದಿದೆ.

ಮ್ಯಾಗ್ನೆಟಿಕ್

ಇನ್ನು ಮ್ಯಾಗ್ನೆಟಿಕ್ ಲಾಚಿಂಗ್ ಕಾರ್ಯವಿಧಾನ ಹೊಸ ಏರ್‌ಪಾಡ್ಸ್‌ ಪ್ರೊ (2 ನೇ Gen) ಸೇರಿದಂತೆ ಆಯ್ದ ಐಫೋನ್‌ ಮತ್ತು ಏರ್‌ಪಾಡ್ಸ್‌ ಮಾದರಿಗಳಲ್ಲಿ ಕಾರ್ಯನಿರ್ವಹಿಸಲಿದೆ. ಆದರೆ ಮೀಸಲಾದ ಆಪಲ್‌ ವಾಚ್‌ ಚಾರ್ಜಿಂಗ್ ಮಾಡ್ಯೂಲ್ ಅನ್ನು ಆಪಲ್‌ ವಾಚ್ ಅಥವಾ ಏರ್‌ಪಾಡ್ಸ್‌ ಅನ್ನು ಏಕಕಾಲದಲ್ಲಿ ಚಾರ್ಜ್ ಮಾಡಲು ಬಳಸಬಹುದಾಗಿದೆ. ಅಲ್ಲದೆ ಇದರಲ್ಲಿ ವಾಯರ್‌ಲೆಸ್‌ ಚಾರ್ಜಿಂಗ್ ಅನ್ನು ಬಳಸುವಾಗ ಆಪಲ್‌ ಐಫೋನ್‌ 14 ಪ್ರೊ (ವಿಮರ್ಶೆ) ಅನ್ನು 80%ವರೆಗೆ ಮತ್ತು ವೈರ್ಡ್ ಚಾರ್ಜಿಂಗ್‌ನೊಂದಿಗೆ 100% ಚಾರ್ಜ್‌ ಮಾಡಲಿದೆ ಎಂದು ಆಪಲ್‌ ಕಂಪೆನಿ ಹೇಳಿಕೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಟಫ್‌ಕೂಲ್‌ PB9063W 5,000mAh ಮ್ಯಾಗ್ನೆಟಿಕ್‌ ವಾಯರ್‌ಲೆಸ್‌ ಪವರ್ ಬ್ಯಾಂಕ್ ಭಾರತದಲ್ಲಿ 3,999ರೂ. ಬೆಲೆ ಹೊಂದಿದೆ. ಇದು ಕಂಪನಿಯ ಆನ್‌ಲೈನ್ ಸ್ಟೋರ್ ಮತ್ತು ಅಮೆಜಾನ್‌ ಮೂಲಕ ಖರೀದಿಗೆ ಲಭ್ಯವಿದೆ. ಜೊತೆಗೆ ರಿಟೇಲ್‌ ಸ್ಟೋರ್‌ಗಳಲ್ಲಿಯೂ ಕೂಡ ಲಭ್ಯವಾಗಲಿದೆ.

Best Mobiles in India

English summary
Stuffcool 5,000mAh Magnetic Wireless Power Bank Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X