ನಕ್ಷತ್ರಗಳು ಸ್ಪೋಟವಾಗುವ ಸನ್ನಿವೇಶದ ಫೋಟೋ ಸೆರೆಹಿಡಿದ ಸೂಪರ್‌ ಕಂಪ್ಯೂಟರ್‌!

|

ಬಾಹ್ಯಕಾಶದಲ್ಲಿ ನಕ್ಷತ್ರಗಳು ಸ್ಪೋಟಗೊಳ್ಳುವ ಸನ್ನಿವೇಶ ಹೇಗಿರಲಿದೆ ಅನ್ನೊದು ಕುತೂಹಲಕಾರಿಯಾದ ವಿಚಾರ. ಇಂತಹದೊಂದು ಕುತೂಹಲಕಾರಿ ವಿಚಾರಕ್ಕೆ ಆಸ್ಟ್ರೇಲಿಯನ್‌ ಸೂಪರ್‌ ಕಪ್ಯೂಟರ್‌ ಉತ್ತರವನ್ನು ನೀಡಿದೆ. ಬಾಹ್ಯಕಾಶದಲ್ಲಿ ನಡೆಯುವ ಈ ರೋಮಾಂಚನಕಾರಿ ಸನ್ನಿವೇಶದ ಫೋಟೋವನ್ನು ಸೆರೆಹಿಡಿದೆ. ಈ ಫೋಟೋದಲ್ಲಿ ನಕ್ಷತ್ರವು ಸ್ಟೋಟಗೊಳ್ಳುವ ಕೆಲವೇ ನಿಮಿಷಗಳ ಮೊದಲು ಏನಾಗಲಿದೆ ಅನ್ನೊದನ್ನ ಬಹಿರಂಗಪಡಿಸಿದೆ. 10,000-15,000 ಜ್ಯೋತಿವರ್ಷ ದೂರದಲ್ಲಿ ನಡೆಯುವ ವಿದ್ಯಮಾನ ಈ ಫೋಟೋದಲ್ಲಿ ಸೆರೆಯಾಗಿದೆ.

ಸೂಪರ್‌

ಹೌದು, ಆಸ್ಟ್ರೇಲಿಯಾದ ಹೊಸ ಸೂಪರ್‌ ಕಂಪ್ಯೂಟರ್‌ ಒಂದು ಸೂಪರ್‌ನೋವಾದ ದೃಶ್ಯವನ್ನು ಸೆರೆಹಿಡಿದಿದೆ. ನಕ್ಷತ್ರವೊಂದು ಸ್ಪೋಟವಾಗುವ ಅಂತಿಮ ಕ್ಷಣಗಳಿಗೂ ಕೆಲವೇ ನಿಮಿಷಗಳಲ್ಲಿ ಹೇಗಿರಲಿದೆ ಎನ್ನುವ ವಿವರವನ್ನು ಈ ಫೋಟೋದಲ್ಲಿ ಕಾಣಬಹುದಾಗಿದೆ. ಸೂಪರ್‌ನೋವಾದ ಬಗ್ಗೆ ಮೊದಲಿನಿಂದಲೂ ಕುತೂಹಲಕಾರಿ ವಿಚಾರಗಳು ಹೊರಬೀಳುತ್ತಲೇ ಇದೆ. ಇದೀಗ ಲಭ್ಯವಿರುವ ಸೂಪರ್‌ನೋವಾದ ಫೋಟೋ ಇದರ ಬಗ್ಗೆ ಇನ್ನಷ್ಟು ಕೌತುಕ ಹೆಚ್ಚಾಗುವಂತೆ ಮಾಡಿದೆ. ಹಾಗಾದ್ರೆ ಆಸ್ಟ್ರೇಲಿಯಾದ ಸೂಪರ್‌ ಕಂಪ್ಯೂಟರ್‌ ಸೆರೆಹಿಡಿದ ಫೋಟೋದಲ್ಲಿರುವ ವಿವರಗಳಲ್ಲಿ ಏನಿದೆ ಅನ್ನೊದನ್ನ ಈ ಲೇಖದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೂಪರ್‌ನೋವಾ

ಸೂಪರ್‌ನೋವಾ ಅನ್ನೊದು ಬಾಹ್ಯಕಾಶದಲ್ಲಿ ನಡೆಯುವ ಅತಿದೊಡ್ಡ ಸ್ಫೋಟವಾಗಿದೆ. ನಕ್ಷತ್ರಗಳು ಸ್ಪೋಟಗೊಳ್ಳುವ ಅಂತಿಮ ಕ್ಷಣವನ್ನು ಸೂಪರ್‌ನೋವಾ ಎನ್ನಲಾಗುತ್ತದೆ. ನಕ್ಷತ್ರವು ನಮ್ಮ ಸೂರ್ಯನ ದ್ರವ್ಯರಾಶಿಯ ಕನಿಷ್ಠ ಐದು ಪಟ್ಟು ಹೊರಗೆ ಹೋದಾಗ ಈ ಘಟನೆಗಳು ಸಂಭವಿಸುತ್ತದೆ. ಅಂದರೆ ನಕ್ಷತ್ರಗಳು ತಮ್ಮ ಕೋರ್ ಅಥವಾ ಕೇಂದ್ರಗಳಲ್ಲಿ ಅಪಾರ ಪ್ರಮಾಣದ ಪರಮಾಣು ಇಂಧನವನ್ನು ಸುಡುತ್ತವೆ ಎಂದು ನಾಸಾ ಹೇಳುತ್ತದೆ

ಕಂಪ್ಯೂಟರ್‌

ಸದ್ಯ ಆಸ್ಟ್ರೇಕಿಯಾದ ಸೂಪರ್‌ ಕಂಪ್ಯೂಟರ್‌ ಸೆರೆ ಹಿಡಿದಿರುವ ಸೂಪರ್‌ನೋವಾದ ಫೋಟೋವೊಂದು ಭಾರಿ ಸದ್ದು ಮಾಡ್ತಿದೆ. ಪಶ್ಚಿಮ ಆಸ್ಟ್ರೇಲಿಯಾದ ವಜಾರಿ ಯಮತ್ಜಿ ಪ್ರಾಂತ್ಯದಲ್ಲಿರುವ ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಏಜೆನ್ಸಿಯ ಮಾಲೀಕತ್ವದ ಮತ್ತು ನಿರ್ವಹಿಸುವ ಆಸ್ಟ್ರೇಲಿಯನ್ ಸ್ಕ್ವೇರ್ ಕಿಲೋಮೀಟರ್ ಅರೇ ಪಾತ್‌ಫೈಂಡರ್ (ASKAP) ರೇಡಿಯೋ ಟೆಲಿಸ್ಕೋಪ್‌ನಿಂದ ಚಿತ್ರವನ್ನು ಮಾಡಲು ಡೇಟಾವನ್ನು ಒದಗಿಸಲಾಗಿದೆ. ಡೇಟಾವನ್ನು ಪರ್ತ್‌ನಲ್ಲಿರುವ ಪಾವ್ಸೆ ಸೂಪರ್‌ಕಂಪ್ಯೂಟಿಂಗ್ ಸಂಶೋಧನಾ ಕೇಂದ್ರಕ್ಕೆ ವರ್ಗಾಯಿಸಲಾಯಿತು. ಇದರ ಮೂಲಕ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ.

ಕಾಸ್ಮಿಕ್

ಸದ್ಯ ಸೆರೆ ಹಿಡಿದಿರು ಸೂಪರ್‌ನೋವಾದ ಅವಶೇಷ G261.9+5.5 ಎಂದು ಕರೆಯಲ್ಪಡುವ ಕಾಸ್ಮಿಕ್ ವಸ್ತುವಿನ ಅದ್ಭುತ ಚಿತ್ರವಾಗಿದೆ. ಇದು ಒಂದು ಮಿಲಿಯನ್ ವರ್ಷಗಳಿಗಿಂತಲೂ ಹಳೆಯದಾಗಿದೆ ಎಂದು ಅಂದಾಜಿಸಲಾಗಿದೆ. ಈ ಸೂಪರ್‌ನೋವಾ ನಮ್ಮಿಂದ 10,000-15,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ನಮ್ಮ ನಕ್ಷತ್ರಪುಂಜದಲ್ಲಿ ನಡೆಯುವ ಈ ಸೂಪರ್‌ನೋವಾವನ್ನು CSIRO ರೇಡಿಯೊ ಖಗೋಳಶಾಸ್ತ್ರಜ್ಞ ಎರಿಕ್ R. ಹಿಲ್ 1967 ರಲ್ಲಿ CSIRO ನ ಪಾರ್ಕ್ಸ್‌ನಿಂದ ಅವಲೋಕನಗಳನ್ನು ಬಳಸಿಕೊಂಡು ಸೂಪರ್‌ನೋವಾ ಅವಶೇಷ ಎಂದು ವರ್ಗೀಕರಿಸಿದರು ಅನ್ನೊದನ್ನ ಗಮನಿಸಬಹುದಾಗಿದೆ.

ಕಂಪ್ಯೂಟರ್‌

ಇನ್ನು ಸೂಪರ್‌ನೊವಾದ ಚಿತ್ರ ತೆಗೆದಿರುವ ಈ ಸೂಪರ್‌ ಕಂಪ್ಯೂಟರ್‌ ಅನ್ನು ಸೆಟೋನಿಕ್ಸ್ ಎಂದು ಹೆಸರಿಸಲಾಗಿದೆ. ಇದು ಪಾಶ್ಚಿಮಾತ್ಯ ಆಸ್ಟ್ರೇಲಿಯಾದ ಪ್ರಾಣಿಯಾದ ಕ್ವೋಕಾ (ಸೆಟೋನಿಕ್ಸ್ ಬ್ರಾಚಿಯುರಸ್) ಮತ್ತು ಪಾವ್ಸೆ ಸೆಂಟರ್‌ನ $70 ಮಿಲಿಯನ್ ಬಂಡವಾಳದ ನವೀಕರಣದ ಭಾಗವಾಗಿ ಹೆಸರಿಸಲಾಗಿದೆ. ASKAP ನ ಖಗೋಳಶಾಸ್ತ್ರದ ಸಮೀಕ್ಷೆಗಳಿಂದ ಡೇಟಾವನ್ನು ಪ್ರಕ್ರಿಯೆಗೊಳಿಸುವುದು ಸೆಟೋನಿಕ್ಸ್ ಸಿಸ್ಟಮ್ ಕಾರ್ಯವಾಗಿದೆ. ನಾವು ಸೆಟೋನಿಕ್ಸ್‌ನ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅವುಗಳನ್ನು ಸುಧಾರಿಸಲು ಮತ್ತು ಅತ್ಯುತ್ತಮವಾಗಿಸಲು ನೋಡುತ್ತೇವೆ ಎಂದು ಸಿಎಸ್‌ಐಆರ್‌ಒನ ASKAP ತಂಡದ ಸಂಶೋಧಕ ಡಾ. ವಾಸಿಂ ರಾಜಾ ಹೇಳಿದ್ದಾರೆ.

ಸೂಪರ್‌ನೋವಾ

ಇದಲ್ಲದೆ ಸೂಪರ್‌ನೋವಾದ ಅವಶೇಷಗಳ ಡೇಟಾಸೆಟ್‌ ಅನ್ನು ಸೆಟೋನಿಕ್ಸ್‌ನಲ್ಲಿ ಸಂಸ್ಕರಣಾ ಸಾಫ್ಟ್‌ವೇರ್ ಅನ್ನು ಪರೀಕ್ಷಿಸಲು ಆಯ್ಕೆಮಾಡಲಾಗಿದೆ. ಇದರಿಂದ ಸೂಪರ್‌ನೋವಾ ಸಂಭವಿಸಿದ ನಂತರ ಏನೆಲ್ಲಾ ನಡೆಯಲಿದೆ ಅನ್ನೊದನ್ನ ತಿಳಿಯಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಭವಿಷ್ಯದಲ್ಲಿ ಈ ಡೇಟಾದಿಂದ ಅವಶೇಷದ ವಯಸ್ಸು, ಗಾತ್ರ ಮತ್ತು ಪ್ರಕಾರದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು ಎನ್ನಲಾಗಿದೆ. ಅದರಲ್ಲೂ ಪಾವ್ಸೆ ಪ್ರಕಾರ, ಸಂಪೂರ್ಣವಾಗಿ ಕಾರ್ಯನಿರ್ವಹಿಸಿದಾಗ, Setonix ಪಾವ್ಸಿಯ ಹಿಂದಿನ ಗ್ಯಾಲಕ್ಸಿ ಮತ್ತು ಮ್ಯಾಗ್ನಸ್ ಸಿಸ್ಟಮ್‌ಗಳಿಗಿಂತ 30 ಪಟ್ಟು ಹೆಚ್ಚು ಶಕ್ತಿಯುತವಾಗಿರುತ್ತದೆ ಎನ್ನಲಾಗಿದೆ.

Best Mobiles in India

English summary
Supercomputer delivers minute details exploding star captured in image

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X