ಐಫೋನ್ 13 ಬೆಲೆ 50,000 ರೂ. ಗಿಂತ ಕಡಿಮೆ; ಈ ಆಫರ್‌ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ!

|

ನೀವೇನಾದರೂ ಐಫೋನ್‌ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈ ಸಮಯವನ್ನು ಎಂದಿಗೂ ಮಿಸ್‌ ಮಾಡಿಕೊಳ್ಳಬೇಡಿ. ಯಾಕೆಂದರೆ ಪ್ರಮುಖ ಇ - ಕಾಮರ್ಸ್‌ ತಾಣವಾದ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಫೋನ್‌ ಹಾಗೂ ಇನ್ನಿತರೆ ಸ್ಮಾರ್ಟ್‌ಡಿವೈಸ್‌ಗಳಿಗೆ ಹೆಚ್ಚಿನ ಡಿಸ್ಕೌಂಟ್‌ ಘೋಷಣೆ ಮಾಡಿದಂತೆಯೇ ಆಪಲ್‌ ಐಫೋನ್ 13 ( iPhone 13 ) ಮೇಲೆಯೂ ಆಕರ್ಷಕ ಆಫರ್ ಘೋಷಿಸಿದೆ.

ಫ್ಲಿಪ್‌ಕಾರ್ಟ್‌

ಹೌದು, ಈಗಂತೂ ಬಹುಪಾಲು ನೆಟ್ಟಿಗರು ಆಪಲ್‌ ಡಿವೈಸ್‌ಗಳಿಗೆ ಮುಗಿ ಬೀಳುತ್ತಾರೆ. ಇದರ ನಡುವೆ ಫ್ಲಿಪ್‌ಕಾರ್ಟ್‌ ಈ ಆಫರ್‌ ಘೋಷಣೆ ಮಾಡಿರುವುದು ಆಪಲ್‌ ಫೋನ್‌ ಖರೀದಿ ಮಾಡುವವರಿಗೆ ಇನ್ನಷ್ಟು ಸಂತಸ ಹೆಚ್ಚಾಗುವಂತೆ ಆಗಿದೆ. ಅದರಂತೆ ನೀವು 65,999ರೂ. ಮೌಲ್ಯದ ಐಫೋನ್ 13 ಫೋನ್‌ ಅನ್ನು ಈ ಪ್ಲಾಟ್‌ಫಾರ್ಮ್‌ ಮೂಲಕ 50,000 ರೂ. ಗಳಿಗಿಂತಲೂ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅರೇ.. ಅದೇಗೆ ಸಾಧ್ಯ ಎಂದುಕೊಂಡರೆ ಈ ಲೇಖನದಲ್ಲಿ ಮಾಹಿತಿ ನೀಡಿದ್ದೇವೆ ಓದಿರಿ.

65,999 ರೂ. ಬೆಲೆಯ ಫೋನ್‌ಗೆ 50,000 ರೂ. ಗಳು

65,999 ರೂ. ಬೆಲೆಯ ಫೋನ್‌ಗೆ 50,000 ರೂ. ಗಳು

ಆಪಲ್‌ ಐ ಫೋನ್‌ ಐಫೋನ್ 13 ಮೂಲ ದರ 69,999ರೂ. ಗಳಿಗೆ ಅಧಿಕವಿದ್ದು, ಆಪಲ್‌ ಪ್ರಿಯರಿಗಾಗಿ ಪ್ಲಿಫ್‌ಕಾರ್ಟ್‌ ಈ ಆಫರ್‌ ಘೋಷಣೆ ಮಾಡಿದೆ. ಅದರಂತೆ ಈ ವೆಬ್‌ಸೈಟ್‌ ಈಗಾಗಲೇ 4,000 ರೂ. ಗಳ ಡಿಸ್ಕೌಂಟ್‌ ನೀಡಿದ್ದು, ಇದಿಷ್ಟೇ ಅಲ್ಲದೆ, ವಿನಿಯಮ ಆಫರ್‌ ಹಾಗೂ ಬ್ಯಾಂಕ್‌ ಕಾರ್ಡ್‌ಗಳ ಮೇಲೂ ಇನ್ನೂ ಹೆಚ್ಚಿನ ರಿಯಾಯಿತಿಯನ್ನು ಫ್ಲಿಪ್‌ಕಾರ್ಟ್‌ ನೀಡುತ್ತಿದೆ.

ಆಫರ್‌ ವಿವರ

ಆಫರ್‌ ವಿವರ

ಇನ್ನು ಐಫೋನ್ 13 ಫ್ಲಿಪ್‌ಕಾರ್ಟ್‌ನಲ್ಲಿ 4,000 ರೂ. ಗಳ ರಿಯಾಯಿತಿ ನಂತರ 65,999 ಇದ್ದು, ಇದರ ಜೊತೆಗೆ ಫೆಡರಲ್ ಬ್ಯಾಂಕ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳ ಮೇಲೆ 10% ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದಿಷ್ಟೇ ಅಲ್ಲದೆ, ನಿಮ್ಮ ಬಳಿ ಹಳೆಯ ಐಫೋನ್ 11 (iPhone 11) ಇದ್ದರೆ ಹೊಸ ಫೋನ್‌ ಅನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಅಂದರೆ ನಿಮ್ಮ ಹಳೆಯ ಫೋನ್‌ ಸುಸ್ಥಿತಿಯಲ್ಲಿದ್ದರೆ 15,000 ರೂ. ಗಳಿಗೂ ಹೆಚ್ಚು ಖಡಿತವಾಗಲಿದ್ದು, ಈ ಮೂಲಕ ಐಫೋನ್ 13 ಅನ್ನು 50,000 ರೂ. ಗಳಿಗೆ ಖರೀದಿ ಮಾಡಬಹುದಾದ ಆಯ್ಕೆಯನ್ನು ಫ್ಲಿಪ್‌ಕಾರ್ಟ್‌ ಒದಗಿಸಿದೆ. ಹಾಗಿದ್ರೆ ಈ ಫೋನ್‌ ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸೋಣ

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಐಫೋನ್‌13 ಫೋನ್ 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಹೊಂದಿದ್ದು, 457 PPI ಪಿಕ್ಸೆಲ್‌ ಸಾಂದ್ರತೆ ಇದರಲ್ಲಿದೆ. ಹಾಗೆಯೇ 60 Hz ರಿಫ್ರೆಶ್ ರೇಟ್‌ ಆಯ್ಕೆಯನ್ನು ಈ ಫೋನ್‌ ಪಡೆದುಕೊಂಡಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಈ ಐಫೋನ್ 13 A15 ಬಯೋನಿಕ್ 5nm ಹೆಕ್ಸಾ ಕೋರ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, iOS 15 ನಲ್ಲಿ ರನ್‌ ಆಗಲಿದೆ. ಇನ್ನು 128GB, 256GB ಮತ್ತು 512GB ನ ಮೂರು ಸ್ಟೋರೇಜ್‌ ವೇರಿಯಂಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯವಿದೆ.

ಕ್ಯಾಮೆರಾ ಫೀಚರ್ಸ್‌

ಕ್ಯಾಮೆರಾ ಫೀಚರ್ಸ್‌

ಐಫೋನ್ 13 ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಜೊತೆಗೆ 12 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಸೆಲ್ಫಿಗಾಗಿ 12 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ ಸೌಲಭ್ಯ

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ ಸೌಲಭ್ಯ

ಈ ಫೋನ್ 3240mAh ಸಾಮರ್ಥ್ಯ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದು 20W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇನ್ನುಳಿದಂತೆ ಈ ಫೋನ್ ವೈ-ಫೈ ಕರೆ ಸೌಲಭ್ಯ, ವಾಯರ್‌ಲೆಸ್‌ ಚಾರ್ಜಿಂಗ್, 5G ಬೆಂಬಲ ಸೇರಿದಂತೆ ಇನ್ನಿತರೆ ಫೀಚರ್ಸ್‌ ಪಡೆದುಕೊಂಡಿದೆ.

Best Mobiles in India

Read more about:
English summary
Surprise offer on Flipkart, you can buy iphone 13 at just Rs 50,000

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X