ಏಸರ್‌ ಸ್ವಿಫ್ಟ್ 3 OLED ಲ್ಯಾಪ್‌ಟಾಪ್ ಲಾಂಚ್‌: ಬೆಲೆ ಎಷ್ಟು ಗೊತ್ತಾ!?

|

ಏಸರ್ ಕಂಪೆನಿಯು ಬಜೆಟ್‌ ಬೆಲೆಯಿಂದ ಹಿಡಿದು ಹೈಎಂಡ್‌ ಲ್ಯಾಪ್‌ಟಾಪ್‌ಗಳನ್ನು ಈಗಾಗಲೇ ಪರಿಚಯಿಸಿದೆ. ಅದರಲ್ಲೂ ಇತರೆ ಕಂಪೆನಿಗಳಂತೆ ವೃತ್ತಿಪರರಿಗೆ ಹೆಚ್ಚು ದಕ್ಷತೆ ಇರುವ ಲ್ಯಾಪ್‌ಟಾಪ್‌ಗಳನ್ನು ಒದಗಿಸಿ ಜನಪ್ರಿಯಗೊಂಡಿದೆ. ಈಗ ಏಸರ್‌ ಸ್ವಿಫ್ಟ್ 3 OLED (Acer Swift 3 OLED) ಎಂಬ ಹೆಸರಿನ ಹೊಸ ಲ್ಯಾಪ್‌ಟಾಪ್‌ನ್ನು ಅನಾವರಣಗೊಳಿಸಿದ್ದು, ಈ ಲ್ಯಾಪ್‌ಟಾಪ್‌ 12 ನೇ ಜನ್ ಇಂಟೆಲ್ ಕೋರ್ i7 ಪ್ರೊಸೆಸರ್‌ನ ಬಲ ಪಡೆದುಕೊಂಡಿದೆ.

ಸ್ವಿಫ್ಟ್

ಹೌದು, ಏಸರ್‌ ಈಗ ಸ್ವಿಫ್ಟ್ 3 OLED (Acer Swift 3 OLED ) ಲ್ಯಾಪ್‌ಟಾಪ್‌ನ್ನು ಲಾಂಚ್‌ ಮಾಡಿದ್ದು, ಇದು 2560×1600 ಪಿಕ್ಸೆಲ್‌ ರೆಸಲ್ಯೂಶನ್‌ನ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ತ್ವರಿತ ಚಾರ್ಜಿಂಗ್‌ ಆಯ್ಕೆಯನ್ನು ಈ ಲ್ಯಾಪ್‌ಟಾಪ್‌ ಪಡೆದಿದ್ದು, 30 ನಿಮಿಷಗಳ ಚಾರ್ಜ್‌ನಲ್ಲಿ 4 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆಯಬಹುದಾಗಿದೆ. ಇದರೊಂದಿಗೆ ಲ್ಯಾಪ್‌ಟಾಪ್‌ ಅನ್ನು ತಣ್ಣಗೆ ಇರಿಸಲು ಇದರಲ್ಲಿ ವಿಶೇಷ ಹೀಟ್‌ ಪೈಪ್‌ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ನೀವು Fn + F ಕೀ ಯನ್ನು ಒತ್ತುವ ಮೂಲಕ ಪ್ರಸೆಸರ್‌ನ ಸಾಮರ್ಥ್ಯವನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಇದರ ಮತ್ತಷ್ಟು ಫೀಚರ್ಸ್‌ಗಳೇನು, ಈ ಲ್ಯಾಪ್‌ಟಾಪ್‌ ಎಲ್ಲಿ ಲಭ್ಯವಾಗುತ್ತದೆ ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಡಿಸ್‌ಪ್ಲೇ ವಿಶೇಷತೆ

ಡಿಸ್‌ಪ್ಲೇ ವಿಶೇಷತೆ

ಈ ಹೊಸ ಸ್ವಿಫ್ಟ್ 3 ಲ್ಯಾಪ್‌ಟಾಪ್ 2.8K OLED ಪ್ಯಾನೆಲ್ ಮತ್ತು 90Hz ರಿಫ್ರೆಶ್ ರೇಟ್‌ ಜೊತೆಗೆ 14 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು 2560×1600 ಪಿಕ್ಸೆಲ್‌ ರೆಸಲ್ಯೂಶನ್‌ನಿಂದ ಕೂಡಿದ್ದು, ನಿಖರವಾದ ಬಣ್ಣ, ಕಾಂಟ್ರಾಸ್ಟ್ ರಿಪ್ರೊಡಕ್ಷನ್‌ ನೀಡಲಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಈ ಲ್ಯಾಪ್‌ಟಾಪ್‌ಗೆ ಇತ್ತೀಚಿನ 12 ನೇ ಜನ್ ಇಂಟೆಲ್ ಕೋರ್ i7 ಪ್ರೊಸೆಸರ್‌1 (Alder Lake P28 W) ಶಕ್ತಿ ತುಂಬಿದ್ದು, ಇದು H-Series ನ ಪ್ರೊಸೆಸರ್‌ ಆಗಿದೆ. ಇನ್ನು ಲ್ಯಾಪ್‌ಟಾಪ್‌ನ ಒಳಭಾಗವನ್ನು ತಂಪಾಗಿರಿಸಲು ಎರಡು ಹೀಟ್‌ ಪೈಪ್‌ಗಳು ಮತ್ತು ಏರ್ ಇನ್‌ಲೆಟ್ ಕೀಬೋರ್ಡ್ ಆಯ್ಕೆ ನೀಡಲಾಗಿದೆ. ಹಾಗೆಯೇ ಲ್ಯಾಪ್‌ಟಾಪ್‌ನಿಂದ ಸುಧಾರಿತ ಕಾರ್ಯಕ್ಷಮತೆಯನ್ನು ಪಡೆಯಲು ಬಳಕೆದಾರರು Fn + F ಕೀಯನ್ನು ಉಪಯೋಗಿಸಬಹುದಾಗಿದೆ. ಜೊತೆಗೆ ಇದು 16 GB ಹಾಗೂ 512 GB ಇಂಟರ್‌ಸ್ಟೋರೇಜ್‌ ಆಯ್ಕೆ ಹೊಂದಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಲ್ಯಾಪ್‌ಟಾಪ್‌ನಲ್ಲಿ 57 Wh ಬ್ಯಾಟರಿ ಸಾಮರ್ಥ್ಯ ಇದ್ದು, ಇದು ಯುಎಸ್‌ಬಿ Sort-C 100 W PD AC ಅಡಾಪ್ಟರ್ ಆಯ್ಕೆ ಪಡೆದಿದೆ. ಅಂತೆಯೇ ಈ ಲ್ಯಾಪ್‌ಟಾಪ್‌ 30 ನಿಮಿಷದ ಚಾರ್ಜ್‌ನಲ್ಲಿ 4 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆಯಲಿದೆ. ಈ ಕಾರಣಕ್ಕೆ ಲ್ಯಾಪ್‌ಟಾಪ್‌ ಮೂಲಕ ಉದ್ಯೋಗ ಮಾಡುವವರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಕನೆಕ್ಟಿವಿಟಿ ಹಾಗೂ ಇತರೆ ಫೀಚರ್ಸ್‌

ಕನೆಕ್ಟಿವಿಟಿ ಹಾಗೂ ಇತರೆ ಫೀಚರ್ಸ್‌

ಸ್ವಿಫ್ಟ್ 3 OLED ಲ್ಯಾಪ್‌ಟಾಪ್‌ ವೈ-ಫೈ 6E ಜೊತೆಗೆ ಥಂಡರ್‌ಬೋಲ್ಟ್ 4, ಹೆಚ್‌ಡಿಎಂಐ 2.1, ಯುಎಸ್‌ಬಿ 4, ಬ್ಲೂಟೂತ್ 5.2 ಬೆಂಬಲ ಪಡೆದಿದೆ. ಹಾಗೆಯೇ ಮೈಕ್ರೊಫೋನ್, 2 x ಆಡಿಯೋ ಸಿಸ್ಟಮ್, ಸ್ಟಿರಿಯೊ ಮೋಡ್, ಓಷನ್ ಗ್ಲಾಸ್ ಟಚ್‌ಪ್ಯಾಡ್, ಫಿಂಗರ್‌ಪ್ರಿಂಟ್ ರೀಡರ್ ವಿಶೇಷತೆ ಈ ಲ್ಯಾಪ್‌ಟಾಪ್‌ನಲ್ಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಈ ಲ್ಯಾಪ್‌ಟಾಪ್‌ ಗೋಲ್ಡ್‌ ಹಾಗೂ ಸಿಲ್ವರ್‌ ಕಲರ್‌ನಲ್ಲಿ ಲಭ್ಯವಿದೆ. ಹಾಗೆಯೇ ಇದನ್ನು ಏಸರ್‌ ಸ್ಟೋರ್‌, ಅಮೆಜಾನ್‌, ಕ್ರೊಮಾ ಹಾಗೂ ವಿಜಯ್‌ಸೇಲ್ಸ್‌ನಲ್ಲಿ ಕೊಂಡುಕೊಳ್ಳಬಹುದು. ಈ ಲ್ಯಾಪ್‌ಟಾಪ್‌ ಆರಂಭಿಕ ದರ 89,999ರೂ. ಗಳಿಂದ ಆರಂಭವಾಗಲಿದೆ.

Best Mobiles in India

English summary
Acer company has already introduced laptops ranging from budget price to high end. Now Acer has launched Swift 3 OLED Acer laptop in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X